ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ನೇತೃತ್ವದ ಜಂಟಿ ಕ್ರಿಯಾ ಸಮಿತಿಯು ಲೋಕಸಭಾ ಕ್ಷೇತ್ರಗಳ ಪುನರ್ರಚಿಸುವ ಉದ್ದೇಶಿತ ಪುನರ್ವಿಂಗಡಣೆ ಪ್ರಕ್ರಿಯೆಯ ವಿರುದ್ಧ ನಿರ್ಣಯವನ್ನು ಶನಿವಾರ ಅಂಗೀಕರಿಸಿದೆ ಎಂದು ವರದಿಯಾಗಿದೆ. 1971 ರ ಜನಗಣತಿಯ ಆಧಾರದ ಮೇಲೆ ರಚಿಸಲಾದ ಕ್ಷೇತ್ರಗಳನ್ನು ಇನ್ನೂ 25 ವರ್ಷಗಳ ಕಾಲ ವಿಸ್ತರಿಸುವಂತೆ ಈ ನಿರ್ಣಯವು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದು, ಜೊತೆಗೆ ಕ್ಷೇತ್ರ ಪುನರ್ವಿಂಗಡನೆಯ ಬಗ್ಗೆ ಪಾರದರ್ಶಕತೆಯನ್ನು ಕೋರಿದೆ. ಸಂಸದೀಯ ಕ್ಷೇತ್ರದ
ಕೇರಳ, ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ, ಪಶ್ಚಿಮ ಬಂಗಾಳ, ಒಡಿಶಾ ಮತ್ತು ಪಂಜಾಬ್ ಮುಖ್ಯಮಂತ್ರಿಗಳಿಗೆ ಮಾರ್ಚ್ 7 ರಂದು ಪತ್ರ ಬರೆದಿದ್ದ ಸ್ಟಾಲಿನ್, ಈ ಪ್ರಕ್ರಿಯೆಯ ವಿರುದ್ಧ ಜಂಟಿ ಕ್ರಿಯಾ ಸಮಿತಿಯನ್ನು ರಚಿಸುವಂತೆ ಕರೆ ನೀಡಿದ್ದರು. ಸಮಿತಿಯ ಮೊದಲ ಸಭೆ ಶನಿವಾರ ಚೆನ್ನೈನಲ್ಲಿ ನಡೆಯಿತು.
ಪ್ರಸ್ತುತ ಲೋಕಸಭೆಯ ಸಂಯೋಜನೆಯು 1971 ರ ಜನಗಣತಿಯನ್ನು ಆಧರಿಸಿದೆ. 2001 ರ 84 ನೇ ತಿದ್ದುಪಡಿ ಕಾಯ್ದೆಯ ಪ್ರಕಾರ, 2026 ರ ನಂತರದ ಮೊದಲ ಜನಗಣತಿ, ಅಂದರೆ 2031 ರಲ್ಲಿ ನಡೆಯಲಿರುವವರೆಗೆ ಕ್ಷೇತ್ರದ ಗಡಿಗಳನ್ನು ಸ್ಥಗಿತಗೊಳಿಸಲಾಗಿತ್ತು. ಆದಾಗ್ಯೂ, ಜನಸಂಖ್ಯೆ ಆಧಾರಿತ ಕ್ಷೇತ್ರ ಪುನರ್ವಿಂಗಡಣೆಯು ಲೋಕಸಭೆಯಲ್ಲಿ ಉತ್ತರ ಮತ್ತು ಮಧ್ಯ ಭಾರತದ ರಾಜ್ಯಗಳಿಗೆ ಅನಗತ್ಯ ಪ್ರಯೋಜನವನ್ನು ನೀಡಲಿದೆ ಎಂದು ದಕ್ಷಿಣ ಭಾರತದ ರಾಜ್ಯಗಳು ಕಳವಳ ವ್ಯಕ್ತಪಡಿಸಿವೆ. ಸಂಸದೀಯ ಕ್ಷೇತ್ರದ
ಶನಿವಾರ ಅಂಗೀಕರಿಸಿದ ತನ್ನ ನಿರ್ಣಯದಲ್ಲಿ, ಜನಸಂಖ್ಯಾ ನಿಯಂತ್ರಣ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದ ರಾಜ್ಯಗಳನ್ನು “ದಂಡನೆ ವಿಧಿಸಬಾರದು” ಎಂದು ಜಂಟಿ ಕ್ರಿಯಾ ಸಮಿತಿಯು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ ಎಂದು ವರದಿಯಾಗಿದೆ. “ಕೇಂದ್ರ ಸರ್ಕಾರವು ಈ ಉದ್ದೇಶಕ್ಕಾಗಿ ಅಗತ್ಯವಾದ ಸಾಂವಿಧಾನಿಕ ತಿದ್ದುಪಡಿಗಳನ್ನು ಜಾರಿಗೆ ತರಬೇಕು” ಎಂದು ನಿರ್ಣಯದಲ್ಲಿ ಹೇಳಲಾಗಿದೆ.
ಸಭೆಯಲ್ಲಿ ಭಾಗವಹಿಸುವ ವಿವಿಧ ರಾಜ್ಯಗಳ ರಾಜಕೀಯ ಪಕ್ಷಗಳು ತಮ್ಮ ಶಾಸಕಾಂಗ ಸಭೆಗಳಲ್ಲಿ ಕ್ಷೇತ್ರ ಪುನರ್ವಿಂಗಡಣೆಯ ಕುರಿತು ಸೂಕ್ತ ನಿರ್ಣಯಗಳನ್ನು ತರುತ್ತವೆ ಎಂದು ಸಮಿತಿ ಹೇಳಿದೆ. “ಜೆಎಸಿ [ಜಂಟಿ ಕ್ರಿಯಾ ಸಮಿತಿ] ಹಿಂದಿನ ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆಗಳ ಇತಿಹಾಸ ಮತ್ತು ಸಂದರ್ಭ ಮತ್ತು ಪ್ರಸ್ತಾವಿತ ಕ್ಷೇತ್ರ ಪುನರ್ವಿಂಗಡಣೆಯ ಪರಿಣಾಮಗಳ ಕುರಿತು ಮಾಹಿತಿಯನ್ನು ಸಂಘಟಿತ ಸಾರ್ವಜನಿಕ ಅಭಿಪ್ರಾಯ ಕ್ರೋಢೀಕರಣ ತಂತ್ರದ ಮೂಲಕ ಆಯಾ ರಾಜ್ಯಗಳ ನಾಗರಿಕರಲ್ಲಿ ಪ್ರಸಾರ ಮಾಡಲು ಅಗತ್ಯ ಪ್ರಯತ್ನಗಳನ್ನು ಕೈಗೊಳ್ಳುತ್ತದೆ” ಎಂದು ನಿರ್ಣಯದಲ್ಲಿ ತಿಳಿಸಲಾಗಿದೆ.
ಪ್ರತಿನಿಧಿಸುವ ರಾಜ್ಯಗಳ ಸಂಸದರನ್ನು ಒಳಗೊಂಡ ಕ್ರಿಯಾ ಸಮಿತಿಯು, “ಮೇಲೆ ತಿಳಿಸಿದ ತತ್ವಗಳಿಗೆ ವಿರುದ್ಧವಾಗಿ ಕೇಂದ್ರ ಸರ್ಕಾರವು ಯಾವುದೇ ಗಡಿ ನಿರ್ಣಯ ಪ್ರಕ್ರಿಯೆಯನ್ನು ಕೈಗೊಳ್ಳುವ ಯಾವುದೇ ಪ್ರಯತ್ನಗಳನ್ನು ಎದುರಿಸಲು ಸಂಸದೀಯ ಕಾರ್ಯತಂತ್ರಗಳನ್ನು ಸಂಘಟಿಸುತ್ತದೆ” ಎಂದು ಅದು ಹೇಳಿದೆ. ಪ್ರಸ್ತಾವಿತ ಪ್ರಕ್ರಿಯೆಯ ಕುರಿತು ನಡೆಯುತ್ತಿರುವ ಸಂಸತ್ತಿನ ಅಧಿವೇಶನದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಕೋರ್ ಸಮಿತಿಯು ಜಂಟಿ ಮನವಿಯನ್ನು ಸಲ್ಲಿಸುತ್ತದೆ ಎಂದು ನಿರ್ಣಯವು ಹೇಳಿದೆ.
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಮತ್ತು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಸೇರಿದಂತೆ ದೇಶಾದ್ಯಂತ ಕನಿಷ್ಠ ಐದು ರಾಜ್ಯಗಳ ಹದಿನಾಲ್ಕು ನಾಯಕರು ಸಭೆಯಲ್ಲಿ ಹಾಜರಿದ್ದರು.
ಫೆಬ್ರವರಿ 25 ರಂದು, ಕ್ಷೇತ್ರ ಪುನರ್‌ವಿಂಗಡನೆಯು ತಮ್ಮ ರಾಜ್ಯದ ಎಂಟು ಲೋಕಸಭಾ ಸ್ಥಾನಗಳನ್ನು ಕಳೆದುಕೊಳ್ಳಲಿದೆ ಎಂದು ಸ್ಟಾಲಿನ್ ಹೇಳಿಕೊಂಡಿದ್ದರು. ಒಂದು ದಿನದ ನಂತರ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪ್ರತಿಕ್ರಿಯಿಸಿ, ಕ್ಷೇತ್ರ ಪುನರ್‌ವಿಂಗಡನೆಯಿಂದ ದಕ್ಷಿಣ ರಾಜ್ಯಗಳು ಒಂದೇ ಒಂದು ಲೋಕಸಭಾ ಸ್ಥಾನವನ್ನು ಕಳೆದುಕೊಳ್ಳುವುದಿಲ್ಲ ಎಂದು ಹೇಳಿದ್ದರು. ಅದಾಗ್ಯೂ, ಅವರ ಹೇಳಿಕೆಯನ್ನು ಸಿಎಂದ ಸ್ಟಾಲಿನ್ ನಿರಾಕರಿಸಿದ್ದರು.
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಗೌಪ್ಯ ದಾಖಲೆ ಪ್ರಕರಣದಲ್ಲಿ ಪತ್ರಕರ್ತ ಮಹೇಶ್ ಲಾಂಗಾಗೆ ಗುಜರಾತ್ ಹೈಕೋರ್ಟ್ ನಿರೀಕ್ಷಣಾ ಜಾಮೀನು
ಗೌಪ್ಯ ದಾಖಲೆ ಪ್ರಕರಣದಲ್ಲಿ ಪತ್ರಕರ್ತ ಮಹೇಶ್ ಲಾಂಗಾಗೆ ಗುಜರಾತ್ ಹೈಕೋರ್ಟ್ ನಿರೀಕ್ಷಣಾ ಜಾಮೀನು

