ಕೇರಳದ ಪಾಲಕ್ಕಾಡ್ ವಿಧಾನಸಭಾ ಕ್ಷೇತ್ರದ ಮುಂಬರುವ ಉಪಚುನಾವಣೆಯಲ್ಲಿ ಅಭ್ಯರ್ಥಿ ಆಯ್ಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕತ್ವವನ್ನು ಸಾರ್ವಜನಿಕವಾಗಿ ಟೀಕಿಸಿದ್ದಕ್ಕಾಗಿ ಪಕ್ಷದ ಡಿಜಿಟಲ್ ಮೀಡಿಯಾ ಸೆಲ್ ಸಂಚಾಲಕ ಪಿ ಸರಿನ್ ಅವರನ್ನು ಉಚ್ಚಾಟಿಸಿದೆ. ಪಕ್ಷದಿಂದ ಉಚ್ಷಾಟಿಸಲ್ಪಟ್ಟ ಸರಿನ್ ಈಗ ರಾಜ್ಯದ ಆಡಳಿತಾರೂಢ ಎಲ್‌ಡಿಎಫ್ ಬೆಂಬಲಿತ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ ಎಂಬ ಊಹಾಪೋಹಗಳಿವೆ.ಪಕ್ಷದ ಬಹಿರಂಗ ಟೀಕೆ
“ನನಗೆ ಅವಕಾಶ ಸಿಕ್ಕರೆ, ನಾನು ಎಡ ಪಂಥೀಯರೊಂದಿಗೆ ನಿಂತು ಜನರ ಸೇವೆ ಮಾಡಲು ಸಿದ್ಧನಿದ್ದೇನೆ. ನನಗೆ ಜಾಗವಿದೆಯೇ ಎಂದು ನಾನು ಎಲ್‌ಡಿಎಫ್‌ಗೆ ಕೇಳಿದ್ದೇನೆ. ಅವರ ಪ್ರತಿಕ್ರಿಯೆಗಾಗಿ ನಾನು ಕಾಯುತ್ತಿದ್ದೇನೆ” ಎಂದು ಸರಿನ್ ಗುರುವಾರ ಮಾಧ್ಯಮಗಳಿಗೆ ಹೇಳಿದ್ದಾರೆ.ಪಕ್ಷದ ಬಹಿರಂಗ ಟೀಕೆ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಕೇರಳದ ಪ್ರತಿಪಕ್ಷದ ನಾಯಕ ವಿಡಿ ಸತೀಶನ್ ಟೀಕಿಸಿದ ಅವರು, “ಕೇರಳದಲ್ಲಿ ಕಾಂಗ್ರೆಸ್ ಅವನತಿಗೆ ಅವರೇ ಜವಾಬ್ದಾರರು. ಸತೀಶನ್ ಅವರು ಪಕ್ಷವನ್ನು ಹೈಜಾಕ್ ಮಾಡಿದ್ದು, ಪಕ್ಷದ ಕಾರ್ಯಕರ್ತರನ್ನು ವಂಚಿಸಿದ್ದಾರೆ” ಎಂದು ಆರೋಪಿಸಿದ್ದಾರೆ.
ಬುಧವಾರದಂದು ಸರಿನ್ ಅವರು ಪತ್ರಿಕಾಗೋಷ್ಠಿ ನಡೆಸಿ ಪಕ್ಷದ ನಾಯಕತ್ವವನ್ನು ಕಟುವಾಗಿ ಟೀಕಿಸಿದ್ದರು. ಅದರಲ್ಲೂ ಮುಖ್ಯವಾಗಿ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ರಾಹುಲ್ ಮಂಕೂಟತಿಲ್ ಅವರನ್ನು ಪಾಲಕ್ಕಾಡ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಪಕ್ಷದ ನಿರ್ಧಾರವನ್ನು ಅವರು ಖಂಡಿಸಿದ್ದರು.
ಪಕ್ಷದ ಅಭ್ಯರ್ಥಿ ರಾಹುಲ್‌ಗಿಂತ ಉಪಚುನಾವಣೆಯಲ್ಲಿ ಗೆಲ್ಲುವ ಉತ್ತಮ ಅವಕಾಶ ನನಗಿದೆ ಎಂದು ಪ್ರತಿಪಾದಿಸಿದ ಅವರು, ಕಾಂಗ್ರೆಸ್ ತನ್ನ ಅಭ್ಯರ್ಥಿ ಆಯ್ಕೆಯನ್ನು ಮರುಪರಿಶೀಲಿಸದಿದ್ದರೆ ಹರಿಯಾಣದಂತೆಯೇ ಇಲ್ಲಿಯೂ ಭವಿಷ್ಯದಲ್ಲಿ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಗುರುವಾರ ಅಧಿಕೃತ ಉಚ್ಚಾಟನೆ ಪತ್ರವನ್ನು ಹೊರಡಿಸುವ ಮೂಲಕ ಸರಿನ್ ಅವರ ಭಿನ್ನಾಭಿಪ್ರಾಯಕ್ಕೆ ಕಾಂಗ್ರೆಸ್ ಪ್ರತಿಕ್ರಿಯಿಸಿದೆ. “ಗಂಭೀರ ಪಕ್ಷ ವಿರೋಧಿ ಚಟುವಟಿಕೆಗಳು ಮತ್ತು ಅಶಿಸ್ತಿನ ಕಾರಣದಿಂದ ಸರಿನ್ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ತೆಗೆದುಹಾಕಲಾಗಿದೆ” ಕೆಪಿಸಿಸಿ ಅಧ್ಯಕ್ಷ ಕೆ ಸುಧಾಕರನ್ ಅವರು ಹೇಳಿದ್ದಾರೆ.
ಆದಾಗ್ಯೂ, ಸರಿನ್ ಅವರು ತಮ್ಮ ರಾಜಕೀಯ ಭವಿಷ್ಯದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದು, “ಕಾಂಗ್ರೆಸ್‌ಗೆ ಕೇರಳದಲ್ಲಿ ಬಿಜೆಪಿಯನ್ನು ಎದುರಿಸಲು ಸಾಧ್ಯವಿಲ್ಲ. ಅದನ್ನು ಎಡಪಕ್ಷಗಳು ಮಾಡಬಲ್ಲುದು” ಎಂದು ಪ್ರತಿಪಾದಿಸಿದ್ದಾರೆ.
ರಾಹುಲ್ ಮಂಕೂಟತಿಲ್ ಅವರನ್ನು ಟೀಕಿಸಿದ ಅವರು, “ಕೇವಲ ಸಾಮಾಜಿಕ ಮಾಧ್ಯಮದ ರೀಲ್‌ಗಳನ್ನು ಪೋಸ್ಟ್ ಮಾಡುವುದು ಮತ್ತು ಜೈಲಿಗೆ ಹೋಗುವುದು ಒಬ್ಬ ವ್ಯಕ್ತಿ ಚುನಾವಣೆಯಲ್ಲಿ ಸ್ಪರ್ಧಿಸುವ ಮಾನದಂಡವಲ್ಲ” ಎಂದು ಹೇಳಿದ್ದಾರೆ. ಅಷ್ಟೆ ಅಲ್ಲದೆ, ಎಲ್‌ಡಿಎಫ್‌ನ ಭಿನ್ನಮತೀಯ ಶಾಸಕ ಪಿವಿ ಅನ್ವರ್ ಮತ್ತು ಬಿಜೆಪಿಯ ಸದಸ್ಯರು ಕೂಡಾ ತಮ್ಮನ್ನು ಅವರೊಂದಿಗೆ ಸೇರಲು ಸಂಪರ್ಕಿಸಿದ್ದಾರೆ ಎಂದು ಸರಿನ್ ಹೇಳಿದ್ದಾರೆ.
ಇದನ್ನೂ ಓದಿ: FACT CHECK : ವ್ಯಕ್ತಿಯೊಬ್ಬರು ಕೇಸರಿ ಬಟ್ಟೆ ಹೊದ್ದು ಮಲಗಿದ್ದಕ್ಕೆ ಮುಸ್ಲಿಮರು ಥಳಿಸಿದ್ದಾರೆ ಎಂಬುವುದು ಸುಳ್ಳು
FACT CHECK : ವ್ಯಕ್ತಿಯೊಬ್ಬರು ಕೇಸರಿ ಬಟ್ಟೆ ಹೊದ್ದು ಮಲಗಿದ್ದಕ್ಕೆ ಮುಸ್ಲಿಮರು ಥಳಿಸಿದ್ದಾರೆ ಎಂಬುವುದು ಸುಳ್ಳು


