Homeಮುಖಪುಟ’ನೀತಿಗೆಟ್ಟವರು, ದ್ರೋಹಿಗಳ ಗುಂಪು ಪಕ್ಷ ನಡೆಸುತ್ತಿದೆ’: ಕೊಲ್ಕತ್ತಾ ಪಾಲಿಕೆ ಚುನಾವಣೆ ಸೋಲಿನ ಬಳಿಕ ಸ್ವಪಕ್ಷದ...

’ನೀತಿಗೆಟ್ಟವರು, ದ್ರೋಹಿಗಳ ಗುಂಪು ಪಕ್ಷ ನಡೆಸುತ್ತಿದೆ’: ಕೊಲ್ಕತ್ತಾ ಪಾಲಿಕೆ ಚುನಾವಣೆ ಸೋಲಿನ ಬಳಿಕ ಸ್ವಪಕ್ಷದ ವಿರುದ್ಧ ಬಿಜೆಪಿ ಹಿರಿಯ ನಾಯಕನ ಆಕ್ರೋಶ

- Advertisement -
- Advertisement -

ಪಶ್ಚಿಮ ಬಂಗಾಳದ ಕೊಲ್ಕತ್ತಾ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಯ ಹೀನಾಯ ಸೋಲಿನ ಬಳಿಕ ತಮ್ಮ ಸ್ವ ಪಕ್ಷದ ವಿರುದ್ಧವೇ ಹಿರಿಯ ಬಿಜೆಪಿ ನಾಯಕ ತಥಾಗತ ರಾಯ್ ಅವರು ರಾಜ್ಯ ನಾಯಕತ್ವವನ್ನು ಟೀಕಿಸಿದ್ದಾರೆ. ’ಪಕ್ಷವನ್ನು ಕೊಳೆತ ದುರಾಚಾರದ ಮತ್ತು ದ್ರೋಹಿಗಳ ಗುಂಪು ನಡೆಸುತ್ತಿದೆ’ ಎಂದು ಆಕ್ರೋಶ ಹೊರಹಾಕಿದ್ದಾರೆ.

ಮಂಗಳವಾರ, ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲವು 144 ಸದಸ್ಯರ ಕೋಲ್ಕತ್ತಾ ಮುನ್ಸಿಪಲ್ ಕಾರ್ಪೊರೇಶನ್‌ ಚುನಾವಣೆಯ,ಲ್ಲಿ ಭರ್ಜರಿ ಜಯ ಗಳಿಸಿದೆ. ಒಟ್ಟು 134 ಸ್ಥಾನಗಳನ್ನು ಗೆದ್ದುಕೊಂಡಿದೆ. ಕಳೆದ ಏಳು ತಿಂಗಳ ಹಿಂದೆ ನಡೆಸಿದ್ದ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿಯೂ ಟಿಎಂಸಿ ಪ್ರಚಂಡ ವಿಜಯ ಗಳಿಸಿತ್ತು.

ವಿಧಾನಸಭಾ ಚುನಾವಣೆಯ ಸೋಲಿನ ನಂತರ ತನ್ನ ಶಕ್ತಿ ಕಳೆದುಕೊಂಡಿದ್ದ ಬಿಜೆಪಿ ಪಾಲಿಕೆ ಚುನಾವಣೆಯಲ್ಲಿ ಕೇವಲ ಮೂರು ವಾರ್ಡ್‌ಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಕಾಂಗ್ರೆಸ್ ಮತ್ತು ಸಿಪಿಐ (ಎಂ) ನೇತೃತ್ವದ ಎಡರಂಗ ತಲಾ ಎರಡು ಮತ್ತು ಸ್ವತಂತ್ರರು ಮೂರು ಸ್ಥಾನಗಳನ್ನು ಗೆದ್ದಿವೆ.

ಇದನ್ನೂ ಓದಿ: ಕೊಲ್ಕತ್ತಾ ಮುನ್ಸಿಪಲ್‌‌ನಲ್ಲಿ ಟಿಎಂಸಿ ಅಭೂತಪೂರ್ವ ಜಯ; BJP ಹೀನಾಯ ಸೋಲು

ಬಿಜೆಪಿ ಸೋಲಿಗೆ ಆಕ್ರೋಶ ವ್ಯಕ್ತಪಡಿಸಿರುವ ತಥಾಗತ ರಾಯ್, “ಹಿಂದೂ ಬೆಂಗಾಲಿಗಳು ವಿನಾಶ ಮತ್ತು ಅಳಿವಿನತ್ತ ಸಾಗುತ್ತಿರುವಂತೆ ತೋರುತ್ತಿದೆ. ಅವರ ಪ್ರಮುಖ ವಾಸಸ್ಥಾನವಾದ ಪಶ್ಚಿಮ ಬಂಗಾಳ ಕಳೆದ 44 ವರ್ಷಗಳಿಂದ ಆತ್ಮ ವಿನಾಶಕಾರಿಗಳ ಗುಂಪಿನಿಂದ ಆಳಲ್ಪಟ್ಟಿದೆ. ಅತ್ಯಂತ ಕೆಟ್ಟ ವ್ಯಕ್ತಿಗಳು ಅಧಿಕಾರದಲ್ಲಿರುವ ಸರ್ಕಾರದ ಒಂದು ರೂಪ” ಎಂದು ತ್ರಿಪುರಾ ಮತ್ತು ಮೇಘಾಲಯದ ಮಾಜಿ ಗವರ್ನರ್ ತಥಾಗತ ರಾಯ್ ಟ್ವೀಟ್ ಮಾಡಿದ್ದಾರೆ.

ಮತ್ತೊಂದು ಟ್ವೀಟ್‌ನಲ್ಲಿ “ಅದನ್ನು ಪುನರುತ್ಥಾನಗೊಳಿಸಬಹುದಾಗಿದ್ದ ಬಿಜೆಪಿಯನ್ನು ಸಂಪೂರ್ಣವಾಗಿ ಕೊಳೆತ ಭ್ರಷ್ಟ-ದ್ರೋಹಿಗಳ ಗುಂಪು ನಡೆಸುತ್ತಿದೆ. ಇದರ ಫಲಿತಾಂಶವೇ 2021 ರ ವಿಧಾನಸಭಾ ಚುನಾವಣೆಯ ಸೋಲು. ಅದಾದ ನಂತರ ಗಂಭೀರವಾದ ಯಾವುದೇ ತಿದ್ದುಪಡಿಯಾಗದ ಕಾರಣ, ಪುರಸಭೆ ಚುನಾವಣೆಯಲ್ಲಿ ಸೋತಿದೆ” ಎಂದು ತಮ್ಮ ಪಕ್ಷದ ವಿರುದ್ಧ ಕಿಡಿ ಕಾರಿದ್ದಾರೆ.

ರಾಜ್ಯ ನಾಯಕತ್ವದ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ರಾಯ್, ಹಲವು ಸಂದರ್ಭಗಳಲ್ಲಿ ಪಕ್ಷದ ವೇದಿಕೆಗಳಲ್ಲಿಯೇ ಲೋಪದೋಷಗಳನ್ನು ಎತ್ತಿ ತೋರಿಸಿದ್ದರೂ, ತಪ್ಪುಗಳನ್ನು ಸರಿಪಡಿಸಲು ಏನನ್ನೂ ಮಾಡಿಲ್ಲ ಎಂದು ಆರೋಪಿಸಿದ್ದಾರೆ.

“ಬಿಜೆಪಿ ವಿರುದ್ಧ ಸಾರ್ವಜನಿಕವಾಗಿ ನಾನು ಮಾಡಿದ ಹೇಳಿಕೆಗಳ ಬಗ್ಗೆ ಕೆಲವರು ಅಸಮಾಧಾನ ಹೊಂದಿದ್ದಾರೆ. ನನಗೂ ಅಸಮಾಧಾನವಿದೆ. ಆದರೆ ಬೇರೆ ದಾರಿಯಿಲ್ಲ, ನಾನು ಪಕ್ಷದ ವೇದಿಕೆಗಳಲ್ಲಿ ಗುಟ್ಟಾಗಿ ಆ ವಿಷಯಗಳನ್ನು ಹೇಳಿದ್ದೇನೆ, ಆದರೆ ಅದು ಯಾವುದೇ ಫಲಿತಾಂಶವನ್ನು ನೀಡಲಿಲ್ಲ. ನಾನು ಬದುಕಿದ್ದೇನೆಯೇ ಅಥವಾ ಸತ್ತಿದ್ದೇನೆಯೇ ಎಂಬುದು ಮುಖ್ಯವಲ್ಲ, ಹಿಂದೂ ಬೆಂಗಾಲಿಗಳ ಸೋಲು ಸನ್ನಿಹಿತವಾಗಿದೆ ಎಂಬುದು ಮುಖ್ಯ” ಎಂದು ಬರೆದಿದ್ದಾರೆ.

ಬಿಜೆಪಿಯ ಕೈಲಾಶ್ ವಿಜಯವರ್ಗಿಯಾ, ಈಗ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ದಿಲೀಪ್ ಘೋಷ್ ಮತ್ತು ಹಿರಿಯ ನಾಯಕರಾದ ಅರವಿಂದ್ ಮೆನನ್ ಮತ್ತು ಶಿವಪ್ರಕಾಶ್ ಅವರು ತೆಗೆದುಕೊಂಡ ನಿರ್ಧಾರಗಳನ್ನು, ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಕಳಪೆ ಪ್ರದರ್ಶನವನ್ನು ತಥಾಗತ ರಾಯ್ ಈ ಹಿಂದೆಯೂ ಟೀಕಿಸಿದ್ದರು.


ಇದನ್ನೂ ಓದಿ: ನ್ಯಾಯಾಂಗದ ನೇಮಕಾತಿಯನ್ನು ನೋಡಿ ಅಂಬೇಡ್ಕರ್‌ ಆತ್ಮ ಕೊರಗುತ್ತಿರಬಹುದು: ಸಿಪಿಐ(ಎಂ) ರಾಜ್ಯಸಭಾ ಸದಸ್ಯ ಜಾನ್ ಬ್ರಿಟ್ಟಾಸ್‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ರಾಜಸ್ಥಾನ: ಬಿಜೆಪಿ ಸರ್ಕಾರದ ಯೋಜನೆಯಲ್ಲಿ 1,140 ಕೋಟಿ ರೂ.ನಷ್ಟ: ತಮ್ಮದೇ ಸರಕಾರದ ವಿರುದ್ಧ ಆರೋಪಿಸಿದ...

0
ರಾಜಸ್ಥಾನದ ಬಿಜೆಪಿ ಸರಕಾರ ಅಧಿಕಾರಕ್ಕೇರಿದ ಆರು ತಿಂಗಳಲ್ಲೇ ಬಿಕ್ಕಟ್ಟನ್ನು ಎದುರಿಸುತ್ತಿದ್ದು, ಮುಖ್ಯಮಂತ್ರಿಯ ಅಧೀನದ ಇಲಾಖೆಯಲ್ಲಿನ ವಸತಿ ಯೋಜನೆಯಲ್ಲಿನ ಲೋಪದೋಷವನ್ನು ಕ್ಯಾಬಿನೆಟ್ ಸಚಿವರೋರ್ವರು ಬಹಿರಂಗಪಡಿಸಿದ್ದು, ಇದರಿಂದ ಸರಕಾರದ ಬೊಕ್ಕಸಕ್ಕೆ 1,146 ಕೋಟಿ ರೂ. ನಷ್ಟವಾಗಿದೆ...