Homeಕರೋನಾ ತಲ್ಲಣಲಸಿಕೆ ಮೇಲಿನ ಪೇಟೆಂಟ್ ರದ್ದು: ಜೋ ಬೈಡನ್ ಯಾವ ನಿಲುವು ತೆಗೆದುಕೊಳ್ಳಲಿದ್ದಾರೆ?

ಲಸಿಕೆ ಮೇಲಿನ ಪೇಟೆಂಟ್ ರದ್ದು: ಜೋ ಬೈಡನ್ ಯಾವ ನಿಲುವು ತೆಗೆದುಕೊಳ್ಳಲಿದ್ದಾರೆ?

ನಾಳೆ ಡಬ್ಲ್ಯುಟಿಒ ಕೌನ್ಸಿಲ್ ಸಭೆ ಸೇರಲಿದೆ. ಆ ಸಮಯದಲ್ಲಿ ಟ್ರಿಪ್ಸ್ ನಿರ್ಬಂಧಗಳ ರದ್ಧು ಮಾಡಬೇಕೆಂಬ ಮನವಿಯನ್ನು ಕುರಿತು ಚರ್ಚೆ ನಡೆಯಲಿದೆ. ಬೈಡೆನ್ ಅಭಿವೃದ್ಧಿಶೀಲ ರಾಷ್ಟ್ರಗಳನ್ನು ಬೆಂಬಲಿಸುತ್ತಾರಾ ಅಥವಾ ಬಹುರಾಷ್ಟ್ರೀಯ ಶ್ರೀಮಂತ ಔಷಧಿ ಕಂಪೆನಿಗಳನ್ನು ಬೆಂಬಲಿಸುತ್ತಾರಾ ನೋಡಬೇಕು.

- Advertisement -
- Advertisement -

ಕೋವಿಡ್ ಲಸಿಕೆಯ ಮೊದಲ ಡೋಸ್ ತೆಗದುಕೊಂಡೆ. ಲಸಿಕೆಗಳ ಪೂರೈಕೆ ತುಂಬಾ ಕಡಿಮೆ ಇತ್ತು. ಕೆಲವೇ ಜನರಿಗೆ ಲಸಿಕೆ ಸಿಕ್ಕಿದೆ. ಆಸ್ಟ್ರಜೆನೆಕಾ ಲಸಿಕೆಗಳು ಅಭಿವೃದ್ದಿಶೀಲ ರಾಷ್ಟ್ರಗಳಿಗೆ ಕಾಲಿಡಲು ಪ್ರಾರಂಭಿಸಿವೆ. ನಾನೊಬ್ಬ ಹಿರಿಯ ನಾಗರಿಕ. ಹಾಗಾಗಿ ನನಗೆ ಆದ್ಯತೆಯಿತ್ತು. ಅಮೇರಿಕೆಯಲ್ಲಿ ಶೇಕಡ 32ರಷ್ಟು ಜನ ಪೂರ್ಣ ಲಸಿಕೆ ಪಡೆದಿದ್ದಾರೆ. ಫಿಲಿಫೈನ್ಸನಲ್ಲಿ ಹೆಚ್ಚೆಂದರೆ ಶೇಕಡ 0.3 ಜನರಿಗೆ ಲಸಿಕೆಯಾಗಿದೆ. ಆ ಅದೃಷ್ಟವಂತರಲ್ಲಿ ನಾನು ಒಬ್ಬ.

ಸೋಮವಾರದ ವೇಳೆಗೆ 1.16 ಮಿಲಿಯನಿಗಿಂತ ಹೆಚ್ಚು ಜನರಿಗೆ ಕೋವಿಡ್ ಲಸಿಕೆ ನೀಡಲಾಗಿದೆ. ಅವರಲ್ಲಿ ಬಹುಪಾಲು ಜನ, ಅಂದರೆ ಶೇಕಡ 80ಕ್ಕಿಂತ ಹೆಚ್ಚು ಜನ ಮಧ್ಯಮ ಅಥವಾ ಶ್ರೀಮಂತ ದೇಶಗಳಿಗೆ ಸೇರಿದವರು. ಫಿಲಿಫೈನ್ಸ್ ಅಂತಹ ಬಡದೇಶಗಳಿಗೆ ಲಸಿಕೆಗಳು ತಲುಪಿರುವುದು ಕೇವಲ ಶೇಕಡ 0.2ರಷ್ಟು. ಭಾರತದಲ್ಲಿ ಈಗ ಕೋವಿಡ್ ಸೋಂಕು ಭೀಕರವಾಗಿ ಹರಡುತ್ತಿದೆ. ಈಚಿಗಿನ ಕೆಲವು ದಿನಗಳಲ್ಲಿ ದಿನಕ್ಕೆ 3,50,000 ಸೋಂಕುಗಳು, 3000 ಸಾವುಗಳು ದಾಖಲಾಗಿವೆ. ಭಾರತದಲ್ಲಿ ಕೇವಲ ಶೇಕಡ 2ರಷ್ಟು ಜನಕ್ಕೆ ಮಾತ್ರ ಲಸಿಕೆಗಳನ್ನು ನೀಡಲಾಗಿದೆ. ಅಮೇರಿಕೆಯ ಅಧ್ಯಕ್ಷ ಬೈಡೆನ್ ಇತ್ತೀಚೆಗೆ ಭಾರತಕ್ಕೆ ನೆರವು ನೀಡುವುದಾಗಿ ಹೇಳಿರುವುದು ಸ್ವಾಗತಾರ್ಹ. ಆದರೆ ಅದು ಸಮಸ್ಯೆಯನ್ನು ಪರಿಹರಿಸುವುದಿಲ್ಲ.

ಏಪ್ರಿಲ್ 23ರಂದು ಸಿಟಿಜನ್ ಟ್ರೇಡ್ ಕ್ಯಾಂಪೈನ್ ಮತ್ತು ಅಸೋಸಿಯೇಷನ್ ಆಫ್ ಫ್ಲೈಟ್ ಅಟೆಂಡೆಂಟ್ ಸೇರಿದಂತೆ 24 ಎನ್‌ಜಿಒಗಳು ಬೈಡೆನ್‌ಗೆ ಒಂದು ಮನವಿಯನ್ನು ಸಲ್ಲಿಸಿವೆ. ಸಮಸ್ಯೆಗೆ ನಿಜವಾದ ಪರಿಹಾರ ದೊರಕಿಸಿಕೊಡಬೇಕೆಂದು ಅವು ಮನವಿ ಮಾಡಿವೆ. ಪಾಶ್ವಿಮಾತ್ಯ ದೇಶಗಳಲ್ಲಿ ತಯಾರಾಗುತ್ತಿರುವ ಕೋವಿಡ್ ಲಸಿಕೆಗಳ ಮಾದರಿಯ ಲಸಿಕೆಗಳನ್ನು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲೇ ತಯಾರಾಗುವುದಕ್ಕೆ ಸಾಧ್ಯವಾಗಬೇಕು. ಅದಕ್ಕೆ ಬೇಕಾದ ತಂತ್ರಜ್ಞಾನ ಆ ದೇಶಗಳಿಗೆ ಸಿಗಬೇಕು. ಅದನ್ನು ಪಡೆದುಕೊಳ್ಳಲು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಇರುವ ಅಡ್ಡಿ ನಿವಾರಣೆಯಾಗಬೇಕು. ಈಗ ಚಾಲ್ತಿಯಿರುವ ಕೆಲವು ಭೌತಿಕ ಆಸ್ತಿಗಳ ಕಾಯ್ದೆಗಳು ಹೇರಿರುವ ನಿರ್ಬಂಧಗಳಿಂದ ಅದು ಸಾಧ್ಯವಾಗುತ್ತಿಲ್ಲ. ಈ ನಿರ್ಬಂಧಗಳನ್ನು ತಾತ್ಕಲಿಕವಾಗಿ ರದ್ದುಗೊಳಿಸಬೇಕೆಂಬ ಮನವಿಯನ್ನು ಅಮೇರಿಕೆ ಬೆಂಬಲಿಸಬೇಕೆಂದು ಅವು ಕೋರಿಕೊಂಡಿವೆ. ಹೀಗೆ ಮಾಡುವುದರಿಂದ ಅಭಿವೃದ್ಧಶೀಲ ರಾಷ್ಟ್ರಗಳಿಗೇ ಅವಶ್ಯಕ ಲಸಿಕೆಗಳನ್ನು ತ್ವರಿತವಾಗಿ ತಯಾರಿಸಿಕೊಳ್ಳಲು ಸಾಧ್ಯವಾಗುತ್ತದೆ.

ಟ್ರಿಪ್ಸ್ ಅಂದರೆ ವ್ಯಾಪಾರೀ ಸಂಬಂಧಿ ಭೌತಿಕ ಆಸ್ತಿ ಹಕ್ಕಿಗೆ ಸಂಬಂಧಿಸಿ ಕಾಯ್ದೆಯಲ್ಲಿ ಈ ನಿರ್ಬಂಧಗಳು ಅಡಕವಾಗಿವೆ. ಇದು ಡಬ್ಲ್ಯುಟಿಒ -ಜಾಗತಿಕ ವ್ಯಾಪಾರೀ ಸಂಘಟನೆಯ ಒಪ್ಪಂದದ ಭಾಗವಾಗಿದೆ. ಅದರ ಪ್ರಕಾರ ಪೇಟೆಂಟ್ ಆದ ವಸ್ತುಗಳಿಗೆ ಕನಿಷ್ಠ 20 ವರ್ಷಗಳು ಏಕಸ್ವಾಮ್ಯ ಇರುತ್ತದೆ. ಇದನ್ನು ಡಬ್ಲ್ಯುಟಿಒ ಕಟ್ಟುನಿಟ್ಟಾಗಿ ಪಾಲಿಸುತ್ತದೆ. ಈ ಬದಲಾವಣೆ ಒಂದು ತಾಂತ್ರಿಕ ಪಾರಿಭಾಷೆಯಾಗಿ ಕಾಣಬಹುದು. ಆದರೆ ಅದರ ಪರಿಣಾಮ ನೇರ. ತಾತ್ಕಾಲಿಕವಾಗಿ ಟ್ರಿಪ್ಸ್ ಏಕಸ್ವಾಮ್ಯವನ್ನು ರದ್ದುಗೊಳಿಸಿದರೆ, ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಲಸಿಕೆ ಉತ್ಪಾದನೆಯನ್ನು ತ್ವರಿತವಾಗಿ ಹೆಚ್ಚಿಸಬಹುದು. ಬಡವರ ಜೀವವನ್ನು ಉಳಿಸಬಹುದು ಅದೂ ಕಡಿಮೆ ಖರ್ಚಿನಲ್ಲಿ.

ಈ ಮನವಿಗೆ ಡೆಮಾಕ್ರೆಟಿಕ್ ಸೆನೆಟರ್ ಬರ್ನಿ ಸ್ಯಾಂಡರ್ಸ್ ಮತ್ತು ಟಾಮಿ ಬಾಲ್ಡಿವಿನ್ ಸೇರಿದಂತೆ 2 ಮಿಲಿಯನ್ ಜನ ಸಹಿ ಹಾಕಿದ್ದಾರೆ. ಟ್ರಿಪ್ಸ್ ನಿರ್ಭಂಧವನ್ನು ಸಡಿಲಿಸುವುದನ್ನು ವಿರೋಧಿಸುವವರ ತಂಡ ತುಂಬಾ ಪ್ರಬಲವಾಗಿದೆ. ದೊಡ್ಡ ಔಷಧ ತಯಾರಕ ಕಂಪೆನಿಗಳು ಆ ತಂಡದ ಮುಂಚೂಣಿಯಲ್ಲಿವೆ. ಅವರ ಬೆಂಬಲಕ್ಕೆ ಅಮೇರಿಕೆಯ ಛೇಂಬರ್ ಆಫ್ ಕಾಮರ್ಸ್ ಮತ್ತು ಟೆಲಿ ಕಮ್ಯನಿಕೇಷನ್ ಇಂಡಸ್ಟ್ರಿ ಅಸೋಸಿಯೇಷನ್ ಮೊದಲಾದ ಕೈಗಾರಿಕಾ ಗುಂಪುಗಳಿವೆ. ಬೌದ್ಧಿಕ ಆಸ್ತಿ ಹಕ್ಕುಗಳ ಕಾನೂನನ್ನು ಸ್ವಲ್ಪ ಸಡಿಲಿಸಿದರೂ ಮುಂದೆ ಎಲ್ಲಾ ತುರ್ತು ಸ್ಥಿತಿಯಲ್ಲೂ ಇದನ್ನೇ ಉದಾಹರಣೆಯನ್ನಾಗಿ ಮಾಡಿಕೊಳ್ಳಬಹುದು ಎನ್ನುವ ಆತಂಕ ಅವರದ್ದು. ಟ್ರಿಪ್ಸ್‌ಗೆ ಏನಾದರೂ ತೊಂದರೆ ಆಗಿಬಿಟ್ಟರೆ, ತಮ್ಮ ಭವಿಷ್ಯದ ಶ್ರೀಮಂತಿಕೆಗೇ ಅಪಾಯ ಎಂದು ಅವರು ಭಾವಿಸಿಕೊಂಡಿದ್ದಾರೆ.

ಜಾಗತಿಕ ವ್ಯಾಪಾರೀ ಸಂಘಟನೆಯ ಸಾರ್ವತ್ರಿಕ ಕೌನ್ಸಿಲ್ ಬುಧವಾರ ಸಭೆ ಸೇರುತ್ತಿದೆ. ಆ ಸಮಯದಲ್ಲಿ ಬೈಡೆನ್ ಅವರ ಆಸೆಗೆ ಈಡಾಗಿಬಿಡಬಾರದು. ಅವರಿಗೆ ಸಂಘಟನೆಯ ಮೇಲೆ ತುಂಬಾ ಪ್ರಭಾವವಿದೆ. ಅದನ್ನು ಬಳಸಿಕೊಂಡು ಉಳಿದ ಶ್ರೀಮಂತ ದೇಶಗಳನ್ನು ಟ್ರಿಪ್ಸ್ನ ವಿನಾಯಿತಿಗೆ ಬೆಂಬಲಿಸುವಂತೆ ಮನವೊಲಿಸಬೇಕು.

ಭಾರತ ಮತ್ತು ಸೌತ್ ಆಫ್ರಿಕಾ ಕಳೆದ ಅಕ್ಟೋಬರಿನಲ್ಲಿ ಟ್ರಿಪ್ಸ್ ನಿರ್ಬಂಧವನ್ನು ಸಡಿಲಿಸುವ ಸಲಹೆಯನ್ನು ಮುಂದಿಟ್ಟಾಗ ಅದನ್ನು ಔಷಧಿ ಕೈಗಾರಿಕೆಗಳು ವಿರೋಧಿಸಿದವು. ಮಾರ್ಚ್ 31ರಂದು ಫೈಜರ್ ಕಂಪೆನಿಯ ಆಲ್ಬರ್ಟ್ ಬೌರಿಯಾ ಹಾಗೂ ಆಸ್ಟ್ರಜೆನಿಕಾ ಕಂಪೆನಿಯ ಪ್ಯಾಸ್ಕಲ್ ಸೋರಿಯಟ್ ಸೇರಿದಂತೆ ಔಷಧಿ ಕೈಗಾರಿಕೆಗಳ ನಿರ್ವಹಣಾ ಅಧಿಕಾರಿಗಳು ಬೈಡೆನ್‌ಗೆ ಪತ್ರ ಬರೆದು ಅದನ್ನು ವಿರೋಧಿಸುವಂತೆ ಕೇಳಿಕೊಂಡಿದ್ದಾರೆ. ಟ್ರಂಪ್ ಆಡಳಿತದಲ್ಲಿ ಟ್ರಿಪ್ಸ್ ರಿಯಾಯಿತಿ ನೀಡುವುದನ್ನು ವಿರೋಧಿಸಲಾಗಿತ್ತು.ಬೈಡೆನ್ ಕೂಡ ಅದೇ ನಿಲುವನ್ನು ಮುಂದುವರಿಸಬೇಕೆಂದು ಅವರು ಮನವಿ ಮಾಡಿಕೊಂಡಿದ್ದಾರೆ. ಅವರ ಪ್ರಕಾರ ಈ ವರ್ಷದ ಕೊನೆಯ ವೇಳೆಗೆ 10 ಬಿಲಿಯನ್ ಕೋವಿಡ್-19 ಲಸಿಕೆಗಳು ತಯಾರಾಗುತ್ತವೆ. ಅದು “ಜಗತ್ತಿನಲ್ಲಿ ಲಸಿಕೆ ಬೇಕಾಗಿರುವ ಎಲ್ಲರಿಗೂ ಸಾಕಾಗುತ್ತದೆ”.

ಕೈಗಾರಿಕೆಗಳ ನಿಲುವಿನ ವಿರೋಧಿಗಳಾದ ಜೋಸೆಫ್ ಸ್ಟಿಗ್ಲಿಟ್ಜ್ ಮತ್ತು ಜಯತಿ ಘೋಷ್ ಇದನ್ನು ಒಪ್ಪುವುದಿಲ್ಲ. ಪಾಶ್ಚಿಮಾತ್ಯ ಕಂಪೆನಿಗಳು ತಯಾರಿಸುತ್ತಿರುವ ಲಸಿಕೆಗಳು ತುಂಬಾ ಕಡಿಮೆ. ಜಾಗತಿಕ ಮಟ್ಟದಲ್ಲಿ ಎಲ್ಲರಿಗೂ ಲಸಿಕೆಗಳನ್ನು ನೀಡಲಾಗದಿರುವುದಕ್ಕೆ ಅದೇ ನಿಜವಾದ ಕಾರಣ.
ಇಂದಿಗೂ ಆಸ್ಟ್ರಜೆನೆಕಾ, ಫೈಜರ್, ಮಾಡರ್ನ್ ಮೊದಲಾದ ಕಂಪೆನಿಗಳು ಅಮೇರಿಕೆಯಂತಹ ಶ್ರೀಮಂತ ರಾಷ್ಟ್ರಗ ಳಿಗೆ ತಾವು ಮಾಡಿಕೊಂಡಿರುವ ಒಪ್ಪಂದವನ್ನು ಪೂರೈಸಲು ಹೆಣಗಾಡುತ್ತಿವೆ. ಆ ದೇಶಗಳು ತಮಗೆ ಬೇಕಾದಕ್ಕಿಂತ ಹೆಚ್ಚಿನ ಪ್ರಮಾಣದ ಲಸಿಕೆಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳಲು ಬಯಸುತ್ತಿವೆ. ಇದೇ ಪರಿಸ್ಥಿತಿ ಮುಂದುವರಿದರೆ ಅಭೀವೃದ್ಧಿಶೀಲ ರಾಷ್ಟ್ರಗಳಿಗೆ 2024ರ ಕೊನೆಯ ವೇಳೆಗಷ್ಟೇ ಲಸಿಕೆಗಳು ಸಿಗುವುದಕ್ಕೆ ಸಾಧ್ಯ. ಪ್ರಕ್ರಿಯೆ ಹೀಗೆ ನಿಧಾನವಾಗಿಯೇ ಮುಂದುವರಿದರೆ ಇನ್ನೊಂದಿಷ್ಟು ಮಿಲಿಯನ್ ಜನ ಸೋಂಕಿಗೆ ಒಳಗಾಗುತ್ತಾರೆ ಹಾಗೂ ಸಾಯುತ್ತಾರೆ. ಈಗಾಗಲೇ 152 ಮಿಲಿಯನ್ ಜನ ಸೋಂಕಿಗೆ ಒಳಗಾಗಿದ್ದಾರೆ, 3.2 ಮಿಲಿಯನ್ ಜನ ಸತ್ತಿದ್ದಾರೆ.

ಈಗ ಟ್ರಿಪ್ಸ್ ಅನ್ನುವುದು ಬೃಹತ್ ಔಷಧಿ ಕಂಪನಿಗಳು ಹಾಗೂ ಜಾಗತಿಕ ಸಾರ್ವಜನಿಕ ಆರೋಗ್ಯ ಪ್ರತಿಪಾದಕರ ನಡುವಿನ ಯುದ್ಧಭೂಮಿಯಾಗಿದೆ. ಅದರಲ್ಲಿ ಆಶ್ಚರ್ಯವೇನಿಲ್ಲ. ಡಬ್ಲ್ಯುಟಿಒ 1995ರಲ್ಲಿ ಅಸ್ತಿತ್ವಕ್ಕೆ ಬಂದಾಗ ಅದರ ಒಪ್ಪಂದಗಳನ್ನು ರೂಪಿಸುವುದರಲ್ಲಿ ಈ ಬೃಹತ್ ಕೈಗಾರಿಕೆಗಳ ಪಾತ್ರ ಪ್ರಧಾನವಾಗಿತ್ತು. ಯಾವುದೇ ದೇಶ ಡಬ್ಲ್ಯುಟಿಒ ಸದಸ್ಯರಾಗುವುದಕ್ಕೆ 60 ಪ್ರತ್ಯೇಕ ಒಪ್ಪಂದಗಳಿಗೆ ಸಹಿ ಮಾಡಬೇಕಿತ್ತು. ಹಲವು ದೇಶಗಳು ಟ್ರಿಪ್ಸ್ ಬಗ್ಗೆ ಅನುಮಾನವಿದ್ದಾಗಲೂ ಬೇರೆ ದಾರಿ ಇಲ್ಲದೆ ಒಪ್ಪಿಗೆ ನೀಡಿದ್ದವು.

ರುವಾಂಡ ಅಥವಾ ಇಂಡೋನೆಷಿಯಾ ಅಂತಹ ದೇಶಗಳಿಗೆ ಡಬ್ಲ್ಯುಟಿಒನ ರಕ್ಷಣೆ ಬೇಕಿತ್ತು. ಅಂತರರಾಷ್ಟ್ರೀಯ ವ್ಯಾಪಾರದಲ್ಲಿ ಸಂದರ್ಭದಲ್ಲಿ ವಿವಾದವಾದಾಗ ಉಳಿದ ದೇಶಗಳು ಈ ದೇಶಗಳ ಮೇಲೆ ಸಿಕ್ಕಾಪಟ್ಟೆ ಸುಂಕ ಹೇರುವ, ವ್ಯಾಪಾರ ಬಹಿಷ್ಕರಿಸುವ ಇತ್ಯಾದಿ ದಂಡನಾ ಕ್ರಮಗಳನ್ನು ವಿಧಿಸುವ ಸಾಧ್ಯತೆಯಿತ್ತು.

ಡಬ್ಲ್ಯುಟಿಒ ಹಾಗೂ ಟ್ರ‍್ರಿಪ್ಸ್ ಅಸ್ತಿತ್ವಕ್ಕೆ ಬರುವ ಫೈಜರ್ ಮತ್ತು ಜಾನ್ಸನ್ ಅಂಡ್ ಜಾನ್ಸನ್ ಅಂತಹ ಕಂಪೆನಿಗಳಿಗೆ ನಿರ್ಬಂಧಕ ಬೌದ್ಧಿಕ ಆಸ್ತಿ ಹಕ್ಕುಗಳ ಕಾಯ್ದೆಯ ರಕ್ಷಣೆಯಿತ್ತು. ಟ್ರಿಪ್ಸ್ ಮೂಲಕ ಅವರು ಅದೇ ಮಾದರಿಯ ಮಿತಿಗಳನ್ನು ಅಭಿವೃದ್ಧೀಶೀಲ ರಾಷ್ಟ್ರಗಳ ಮೇಲೂ ವಿಧಿಸುವ ಪ್ರಯತ್ನ ಮಾಡಿದ್ದಾರೆ. ಆ ದೇಶಗಳಲ್ಲಿ ಕಾನೂನು ಹೆಚ್ಚು ಉದಾರವಾಗಿತ್ತು. ಈ ಬೃಹತ್ ಕಂಪೆನಿಗಳು ತಯಾರಿಸುವ ಔಷಧಿಗಳ ಮಾದರಿಯ ಔಷಧಿಗಳನ್ನು ತಾವೇ ತಯಾರಿಸಿಕೊಳ್ಳುವುದಕ್ಕೆ ಕಾನೂನಿನಲ್ಲಿ ಅವಕಾಶವಿತ್ತು. ಆಗ ಅದು ಹೆಚ್ಚು ಅಗ್ಗವಾಗಿ ಸಿಗುತ್ತಿತ್ತು.

ಟ್ರಿಪ್ಸ್ ಪರಿಸ್ಥಿತಿಯನ್ನು ತಿರುಗುಮುರುಗು ಮಾಡಿತು. ಅಭಿವೃದ್ಧೀಶೀಲ ರಾಷ್ಟ್ರಗಳಲ್ಲಿ ಈ ಕಂಪೆನಿಗಳ ಔಷಧಿಗಳ ತಯಾರಿಕೆ ವಿಧಾನ ಸಿಗುವ ಪ್ರಕ್ರಿಯೆ ನಿಧಾನವಾಯಿತು. ಈ ದೇಶಗಳಲ್ಲಿ ಅನ್ವೇಷಣೆ ನಿಂತಿತು. ಔಷಧಿಗಳ ಬೆಲೆ ಏರಿತು.

ಡಬ್ಲ್ಯುಟಿಒ ಸಭೆ ಸೇರುವ ದಿನ ಹತ್ತಿರವಾಗುತ್ತಿದ್ದಂತೆ, ಈ ಕೈಗಾರಿಕೆಗಳು ತಮ್ಮ ನಿಲುವನ್ನು ಹೆಚ್ಚು ತೀವ್ರಗೊಳಿಸಿವೆ. ಟ್ರಿಪ್ಸ್ ಕಾನೂನನ್ನು ಸಡಿಲಗೊಳಿಸುವುದನ್ನು ಬಲವಾಗಿ ವಿರೋಧಿಸುತ್ತಿವೆ. ಪ್ರಮುಖ ವ್ಯಾಪಾರೀ ಸಂಘಗಳಾದ ಬಯೋಟಕ್ನಾಲಜಿ ಇನ್ನೊವೇಷನ್ ಸಂಘಟನೆಯ ಅಧ್ಯಕ್ಷ ದಿ ಎಕಾನಮಿಸ್ಟ್ ಪತ್ರಿಕೆಯಲ್ಲಿ ಮೈಕೆಲ್ ಮಿಷೆಲ್ ಮ್ಯಾಕ್‌ಮರಿ ಹೀತ್, ಕಾನೂನನ್ನು ಸಡಿಲಗೊಳಿಸಿದರೆ, ಮುಂದೆ ಆರೋಗ್ಯಕ್ಕೆ ಸಂಬಂಧಿಸಿದಂತೆ ತುರ್ತುಪರಿಸ್ಥಿತಿ ಬಂದಾಗ ಪರಿಹಾರಗಳನ್ನು ಕಂಡುಕೊಳ್ಳುವುದಕ್ಕೆ ಯಾವುದೇ ಉತ್ತೇಜನವೂ ಇರುವುದಿಲ್ಲ ಎಂದಿದ್ದಾರೆ. ‘ಸ್ವ ಹಿತಾಸಕ್ತಿಯ’ ದೇಶಗಳು ಈ ಪಿಡುಗಿನ ಸಂದರ್ಭವನ್ನು ಬಳಸಿಕೊಂಡು ಅಮೇರಿಕ ಹಾಗೂ ಐರೋಪ್ಯ ದೇಶಗಳು ಕಂಡುಹಿಡಿದಿರುವ ತಂತ್ರಜ್ಞಾನವನ್ನು ಕಬಳಿಸಲು ಪ್ರಯತ್ನಿಸುತ್ತಿವೆ ಎಂಬುದು ಆಕೆಯ ಆರೋಪ. ಫೈಜರ್ ಹಾಗೂ ಮಾಡರ್ನ್ ಕಂಪೆನಿಗಳ ಎಂಆರ್‌ಎನ್‌ಎ ಆಧಾರಿತ ಲಸಿಕೆಗಳ ಜೈವಿಕ ಆಯುಧಗಳ ಸಾಧ್ಯತೆಯನ್ನು ಈ ದೇಶಗಳು ಬಳಸಿಕೊಳ್ಳಬಹುದು ಎಂದು ಸೂಚಿಸಿದ್ದಾರೆ. ಆದರೆ ಇವೆಲ್ಲಾ ಪೊಳ್ಳು ಹೇಳಿಕೆಗಳು ಎಂದು ಪರಿಣಿತರುಗಳು ಹೇಳಿದ್ದಾರೆ.

ದಾರಿತಪ್ಪಿಸುವ ಈ ವಾದಗಳು ಕೈಗಾರಿಕೆಯ ನಿಲುವನ್ನು ಸ್ಪಷ್ಟಪಡಿಸುತ್ತವೆ. ಈ ಕಂಪೆನಿಗಳಿಗೆ ದೀರ್ಘಕಾಲದಿಂದ ಪೇಟೆಂಟ್ ರಕ್ಷಣೆ ಸಿಕ್ಕಿದೆ. ಹೆಚ್ಚಿನ ಬೆಲೆಗೆ ಉತ್ಪನ್ನಗಳನ್ನು ಮಾರಿಕೊಂಡು ಬಹು ದೀರ್ಘಕಾಲದಿಂದ ಲಾಭ ಮಾಡಿಕೊಂಡು ಬಂದಿದ್ದಾರೆ. ಇದರಿಂದ ಅವರಿಗೆ ಪ್ರಬಲವಾದ ಏಕಸ್ವಾಮ್ಯ ಸಾಧ್ಯವಾಗಿದೆ. ಈ ಪ್ರವೃತ್ತಿ ಅನ್ವೇಷಣೆಯನ್ನು ಉತ್ತೇಜಿಸುವುದಿಲ್ಲ. ಹತ್ತಿಕ್ಕುತ್ತದೆ. ಮೊಟಕುಗೊಳಿಸುತ್ತವೆ.

ಒಂದೇ ಒಂದು ಉತ್ಪನ್ನಕ್ಕೆ ಅದೂ ತಾತ್ಕಾಲಿಕವಾಗಿ ಕಾನೂನನ್ನು ರದ್ದುಗೊಳಿಸುವುದರಿಂದ ದೊಡ್ಡ ಹಾನಿಯೇನೂ ಆಗುವುದಿಲ್ಲ ಅನ್ನುವುದನ್ನು ಒಪ್ಪಿಕೊಳ್ಳವುದಕ್ಕೆ ಔಷಧ ಕಂಪೆನಿಗಳು ತಯಾರಿಲ್ಲ. ಈ ವರ್ಷ ಫೈಜರ್ 15 ಬಿಲಿಯನ್ ಡಾಲರುಗಳ ಮೌಲ್ಯದ ಲಸಿಕೆಗಳನ್ನು ಮಾರುವ ನಿರೀಕ್ಷೆಯಿದೆ. ಅದರಿಂದ ಶೇಕಡ 25ರಿಂದ ಶೇಕಡ 30ರವರೆಗೆ ಲಾಭ ಸಿಗುತ್ತದೆ ಎಂದು ಅಂದಾಜು ಮಾಡಲಾಗಿದೆ. ಕೋವಿಡ್-19 ಲಸಿಕೆಯೊಂದರಿಂದಲೇ 4 ಬಿಲಿಯನ್ ಡಾಲರ್ ಲಾಭವಾಗಬಹುದು. ಅಷ್ಟೊಂದು ಬೇಗ ಲಸಿಕೆಗಳನ್ನು ತಯಾರಿಸಿದ್ದಕ್ಕೆ ಕಂಪೆನಿಗಳನ್ನು ಶ್ಲಾಘಿಸಬೇಕು. ಆದರೆ ಸರ್ಕಾರಗಳು ಉದಾರವಾಗಿ ಸಬ್ಸಿಡಿ ನೀಡದಿದ್ದರೆ ಅದು ಸಾಧ್ಯವಾಗುತ್ತಿರಲಿಲ್ಲ. ಅಮೇರಿಕೆಯೊಂದೇ 6 ಪ್ರಮುಖ ವ್ಯಾಕ್ಸಿನ್ ತಯಾರಕ ಕಂಪೆನಿಗಳಿಗೆ ಇದೇ ಉದ್ದೇಶಕ್ಕಾಗಿ 12 ಬಿಲಿಯನ್ ಡಾಲರುಗಳನ್ನು ನೀಡಿದೆ.

ಡಬ್ಲ್ಯುಟಿಒನಲ್ಲಿ ಒಮ್ಮತಕ್ಕೆ ಬರುವುದಕ್ಕೆ ಸಾಧ್ಯವಾಗದೆ ಹೋದರೆ, ನಿಯಮಗಳ ರದ್ದತಿಗೆ ಡಬ್ಲ್ಯುಟಿಒನ 164 ಸದಸ್ಯರಲ್ಲಿ ದೊಡ್ಡ ಬಹುಮತ ಬೇಕಾಗುತ್ತದೆ.
ಈಗ ಸಧ್ಯಕ್ಕೆ 100 ಜನ ಸದಸ್ಯರು ಮನವಿಯನ್ನು ಬೆಂಬಲಿಸುತ್ತಿದ್ದಾರೆ. ಅದರಲ್ಲಿ 60 ದೇಶಗಳು ಮನವಿಯ ಅಧಿಕೃತ ಪ್ರಾಯೋಜಕರು. ಸಂಸ್ಥೆಯ ಮೇಲೆ ವಾಷಿಂಗ್ಟನಿಗೆ ವಿಟೋ ಮಾಡುವ ಅಧಿಕಾರ ಇದೆ. ಹಾಗಾಗಿ ಬೈಡೆನ್ ಮನವಿಯನ್ನು ಬೆಂಬಲಿಸಿದರೆ ಅದರ ಶಕ್ತಿ ತುಂಬಾ ಹೆಚ್ಚುತ್ತದೆ.

ಮನವಿಯನ್ನು ಬೆಂಬಲಿಸಿದರೆ ರಾಜಕೀಯವಾಗಿ ತೊಂದರೆಯಾಗುತ್ತದೆ ಎಂದು ಬೈಡೆನ್ ಆತಂಕಪಡಬೇಕಾಗಿಲ್ಲ. ಇತ್ತೀಚಿನ ಸಮೀಕ್ಷೆಯ ಪ್ರಕಾರ ಅಮೇರಿಕೆಯ ಶೇಕಡ 60ರಷ್ಟು ಮತದಾರರು ಟ್ರಿಪ್ಸ್ ಕಾಯ್ದೆಯನ್ನು ರದ್ದುಮಾಡುವುದರ ಪರವಾಗಿದ್ದಾರೆ. ಕೇವಲ ಶೇಕಡ 28ರಷ್ಟು ಜನ ಮಾತ್ರ ಅದನ್ನು ವಿರೋಧಿಸಿದ್ದಾರೆ. ಜೊತೆಗೆ ಬೆಲೆ ಯಾವಾಗಲೂ ಹೆಚ್ಚಿಗೆ ಇರಬೇಕೆಂದು ಬಯಸುವ ಔಷಧಿ ಕಂಪೆನಿಗಳ ವಿಶ್ವಾಸಾರ್ಹತೆ ತುಂಬಾ ಕಡಿಮೆ. ಅದು ಅಮೇರಿಕೆಯ ಕೈಗಾರಿಕೆಗಳಲ್ಲಿ ಅತ್ಯಂತ ಕನಿಷ್ಠ ವಿಶ್ವಾಸಾರ್ಹ ವಲಯ. ಇದನ್ನು ಬೈಡೆನ್ ನೆನಪಿಟ್ಟುಕೊಳ್ಳಬೇಕು.

ಬೈಡೆನ್ ಮುಂದಿರುವ ಆಯ್ಕೆ ಸ್ಪಷ್ಟ. ಪ್ರಬಲವಾದ ಬಹುರಾಷ್ಟ್ರೀಯ ಕಾರ್ಪೋರೇಷನ್ನುಗಳ ಹಿತಾಸಕ್ತಿಯನ್ನು ಕಾಪಾಡುವ ಪೇಟೆಂಟ್ ರಾಜ್ಯವನ್ನು ರಕ್ಷಿಸುವುದು ಅಥವಾ ತಮ್ಮನ್ನು ರಕ್ಷಿಸಿಕೊಳ್ಳುವುದಕ್ಕೆ ಸಾಧ್ಯವಾಗುವಂತೆ ಅಭಿವೃದ್ಧಿಶೀಲ ರಾಷ್ಟ್ರಗಳನ್ನು ಸಬಲಗೊಳಿಸುವುದು. ಬುಧವಾರ ಬೈಡೆನ್ನಿಗೆ ಸೂಕ್ತ ನಿಲುವನ್ನು ತೆಗೆದುಕೊಳ್ಳುವ ಸಾಮರ್ಥ್ಯ ಇದೆಯೋ ಇಲ್ಲವೋ ಎನ್ನುವುದು ಜಗತ್ತಿಗೆ ತಿಳಿಯಲಿದೆ.

* ವಾಲ್ಡನ್ ಬೆಲ್ಲೊ

ಕೃಪೆ: ಇಂಟರ್‌ನ್ಯಾಷನಲ್ ನ್ಯೂಯಾರ್ಕ್ ಟೈಮ್ಸ್

ಕನ್ನಡಕ್ಕೆ: ವೇಣುಗೋಪಾಲ್ ಟಿ.ಎಸ್


ಇದನ್ನೂ ಓದಿ: ನೀವು ಹೂಗಳನ್ನು ಕತ್ತರಿಸಬಹುದು, ವಸಂತವನ್ನು ತಡೆಯಲಾಗದು..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...