Homeಕರೋನಾ ತಲ್ಲಣ44 ದೇಶಗಳಲ್ಲಿ ಕಾಣಿಸಿಕೊಂಡ ಭಾರತೀಯ ಕೋವಿಡ್ ರೂಪಾಂತರ: WHO

44 ದೇಶಗಳಲ್ಲಿ ಕಾಣಿಸಿಕೊಂಡ ಭಾರತೀಯ ಕೋವಿಡ್ ರೂಪಾಂತರ: WHO

- Advertisement -
- Advertisement -

ಭಾರತದ ಸ್ಫೋಟಕ, ಏಕಾಏಕಿ ವೇಗವರ್ಧನೆಯ ಕೋವಿಡ್ ರೂಪಾಂತರವು ವಿಶ್ವದಾದ್ಯಂತದ ಹಲವಾರು ದೇಶಗಳಲ್ಲಿ ಕಂಡುಬಂದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಬುಧವಾರ ತಿಳಿಸಿದೆ.
ಅಕ್ಟೋಬರ್‌ನಲ್ಲಿ ಭಾರತದಲ್ಲಿ ಮೊದಲ ಬಾರಿಗೆ ಕಂಡುಬಂದ ಕೋವಿಡ್ -19 ರ ಬಿ.1.617 ರೂಪಾಂತರವು “ಎಲ್ಲಾ ಆರು ಡಬ್ಲ್ಯುಎಚ್‌ಒ (ವಿಶ್ವ ಆರೋಗ್ಯ ಸಂಸ್ಥೆಯ ವಲಯಗಳು) ಪ್ರದೇಶಗಳಲ್ಲಿನ 44 ದೇಶಗಳಲ್ಲಿ ಪತ್ತೆಯಾಗಿದೆ ಎಂದು WHO ತಿಳಿಸಿದೆ.

ಭಾರತದ ಹೊರಗೆ, ರೂಪಾಂತರದಿಂದ ಉಂಟಾದ ಹೆಚ್ಚಿನ ಸಂಖ್ಯೆಯ ಕೋವಿಡ್ ಪ್ರಕರಣಗಳನ್ನು ಬ್ರಿಟನ್ ವರದಿ ಮಾಡಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಈ ವಾರದ ಆರಂಭದಲ್ಲಿ, ವಿಶ್ವ ಆರೋಗ್ಯ ಸಂಸ್ಥೆಯು, ಭಾರತದ ರೂಪಾಂತರಿ ತಳಿ ಬಿ.1.617 ಅನ್ನು ಘೋಷಿಸಿತು. ಇದು ಮೂರು ವಿಭಿನ್ನ ಉಪ-ವಂಶಾವಳಿಗಳನ್ನು ಮತ್ತು ಗುಣಲಕ್ಷಣಗಳನ್ನು ಹೊಂದಿದೆ ಎಂದು ಘೋಷಿಸಿ, ಇದು ಆತಂಕದ ವಿಷಯ ಎಂದು ತಿಳಿಸಿತು.
ಆದ್ದರಿಂದ ಇದನ್ನು ಕೋವಿಡ್-19ರ ಇತರ ಮೂರು ರೂಪಾಂತರಗಳನ್ನು ಒಳಗೊಂಡಿರುವ ಪಟ್ಟಿಗೆ ಸೇರಿಸಲಾಗಿದೆ. ಬ್ರಿಟನ್, ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾದ ರೂಪಾಂತರಿ ವೈರಸ್‌ಗಳ ಪಟ್ಟಿಯಲ್ಲಿ ಈಗ ಭಾರತದ ರಾಪಾಂತರಿ ವೈರಸ್ ಸೇರಿದೆ.

ರೂಪಾಂತರಗಳು ವೈರಸ್‌ನ ಮೂಲ ಆವೃತ್ತಿಗೆ ಹೋಲಿಸಿದರೆ ಹೆಚ್ಚು ಅಪಾಯಕಾರಿ ಎಂದು ಪರಿಗಣಿಸಲಾಗುತ್ತದೆ. ಏಕೆಂದರೆ ಅವುಗಳು ಹೆಚ್ಚು ಹರಡಲ್ಪಡುವ ವೈರಸ್‌ಗಳಾಗಿದ್ದು, ಕೆಲವು ಲಸಿಕೆ ರಕ್ಷಣೆಗಳನ್ನು ಭೇದಿಸಿಯೂ ಮನುಷ್ಯ ದೇಹವನ್ನು ಸೇರುವ ಸಾಮರ್ಥ್ಯ ಹೊಂದಿವೆ.
ಹೊಸ ಪ್ರಕರಣಗಳು ಮತ್ತು ಸಾವುಗಳಲ್ಲಿ ಭಾರತದಲ್ಲಿ ದಿಢೀರ್ ಉಲ್ಬಣಕ್ಕೆ ಉತ್ತೇಜನ ನೀಡುವ ಹಲವಾರು ಅಂಶಗಳಲ್ಲಿ ಬಿ.1.617 ರ ಹರಡುವಿಕೆ, ಇತರ ಹೆಚ್ಚು ಹರಡುವ ರೂಪಾಂತರಗಳ ಜೊತೆಗೆ ಕಂಡುಬರುತ್ತದೆ ಎಂದು ಡಬ್ಲ್ಯುಎಚ್‌ಒ ಹೇಳಿದೆ.


ಇದನ್ನೂ ಓದಿ: ಲಸಿಕೆ ಮೇಲಿನ ಪೇಟೆಂಟ್ ರದ್ದು: ಜೋ ಬೈಡನ್ ಯಾವ ನಿಲುವು ತೆಗೆದುಕೊಳ್ಳಲಿದ್ದಾರೆ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಪೆನ್‌ಡ್ರೈವ್ ಪ್ರಕರಣ: ಎಸ್‌ಐಟಿ ರಚಿಸಲು ಕೋರಿ ಮಹಿಳಾ ಆಯೋಗದಿಂದ ಸಿಎಂಗೆ ಪತ್ರ

0
ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ವಿಶೇಷ ತಂಡ ರಚನೆ ಮಾಡುವಂತೆ ಕೋರಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಅವರು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ...