ತುಮಕೂರು ಜಿಲ್ಲೆಯ ಪಾವಗಡ ಕ್ಷೇತ್ರದ ಕಾಂಗ್ರೆಸ್ ಶಾಸಕ ವೆಂಕಟರಮಣಪ್ಪ ಅವರು, ‘ತನ್ನ ಹಳ್ಳಿಗೆ ಉತ್ತಮ ರಸ್ತೆ ಯಾಕೆ ಇಲ್ಲ’ ಎಂದು ಪ್ರಶ್ನಿಸಿದ ಯುವಕನಿಗೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಘಟನೆಯ ವಿಡಿಯೊ ಸಾಮಾಜಿಕ ಜಾತಲತಾಣದಲ್ಲಿ ವೈರಲ್ ಆಗಿದ್ದು, ಆಕ್ರೋಶ ವ್ಯಕ್ತವಾಗಿದೆ.
ತುಮಕೂರಿನ ತಮ್ಮ ಗ್ರಾಮದಲ್ಲಿ ರಸ್ತೆಗಳ ಕಳಪೆ ಗುಣಮಟ್ಟದ ಬಗ್ಗೆ ಯುವಕ ಶಾಸಕನಿಗೆ ಪ್ರಶ್ನಿಸಿದ್ದರು. ಇದರಿಂದ ಕೋಪಗೊಂಡ ವೆಂಕಟರಮಣಪ್ಪ ಅವರು ಯುವಕನಿಗೆ ಕಪಾಳಮೋಕ್ಷ ಮಾಡಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಶಾಸಕ ವೆಂಕಟರಮಣಪ್ಪ ಅವರು ಮೊದಲಿಗೆ ಇಂತಹ ಘಟನೆ ನಡೆದೆ ಇಲ್ಲ ಎಂದು ಕೃತ್ಯದ ಬಗ್ಗೆ ಕ್ಷಮೆಯಾಚಿಸಲು ಕೂಡಾ ನಿರಾಕರಿಸಿದ್ದಾರೆ ಎಂದು ಪತ್ರಕರ್ತರು ವರದಿ ಮಾಡಿದ್ದಾರೆ. ಇದರ ನಂತರ ಘಟನೆಯ ಘಟನೆಯ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ ಎಂದು ತಿಳಿಸಿದ ನಂತರ ಯುವಕನೂ ಮಾನಸಿಕ ಅಸ್ವಸ್ಥ ಎಂದು ಹೇಳಿಕೊಂಡಿದ್ದಾರೆ ಎಂದು ವರದಿಯಾಗಿದೆ.
In #Karnataka, #Congress MLA (Pavagada) Venkataramanappa slaps a youth who asked him: “Why is my village not getting a good road?”#Bengaluru @TOIBengaluru @NammaBengaluroo @BLRrocKS @ShyamSPrasad @surnell @Rajeev_GoI pic.twitter.com/rWUhJdn0DE
— Rakesh Prakash (@rakeshprakash1) April 20, 2022
ಘಟನೆಯ ಬಗ್ಗೆ ಪ್ರತಿಕ್ರಿಯೆಗಾಗಿ ನಾನುಗೌರಿ.ಕಾಂ ಶಾಸಕ ವೆಂಕಟರಮಣಪ್ಪ ಅವರಿಗೆ ಕರೆಮಾಡಿತ್ತಾದರೂ ಅವರು ಸಂಪರ್ಕಕ್ಕೆ ಲಭ್ಯವಾಗಿಲ್ಲ. ಅವರ ಪ್ರತಿಕ್ರಿಯೆ ಸಿಕ್ಕ ಕೂಡಲೇ ಹೇಳಿಕೆಯನ್ನು ಇಲ್ಲಿ ಅಪ್‌ಡೇಟ್ ಮಾಡಲಾಗುವುದು.


