HomeUncategorizedಪಾವಗಡದ ಮೇಲೆ ಸಂಸದ ನಾರಾಯಣಸ್ವಾಮಿಯ ದಿಢೀರ್ ಮಮಕಾರದ ಮರ್ಮವೇನು ಗೊತ್ತಾ?

ಪಾವಗಡದ ಮೇಲೆ ಸಂಸದ ನಾರಾಯಣಸ್ವಾಮಿಯ ದಿಢೀರ್ ಮಮಕಾರದ ಮರ್ಮವೇನು ಗೊತ್ತಾ?

- Advertisement -
- Advertisement -

ತಿಂಗಳಿಗೆ ಕನಿಷ್ಟ ನಾಲ್ಕೈದು ಬಾರಿ ಪಾವಗಡಕ್ಕೆ ಬಂದುಹೋಗುತ್ತಿರುವ ಸಂಸದ ನಾರಾಯಣಸ್ವಾಮಿ ಅವರಿಗೆ ಪಾವಗಡದ ಮೇಲೆ ದಿಢೀರ್ ಅಂತ ಪ್ರೀತಿ ಉಕ್ಕಿ ಬರಲು ಕಾರಣವೇನಿರಬಹುದು..

 

 

 

 

ಪಾವಗಡ ವಿಧಾನಸಭಾ ಕ್ಷೇತ್ರ ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಕ್ಷೇತ್ರ. ಇಲ್ಲಿ ದಲಿತರದ್ದೇ ಮೇಲುಗೈ, ಅಂದ್ರೆ ಜನಸಂಖ್ಯೆ ಯಲ್ಲಿ ಮಾತ್ರವೇ ಹೊರತು ಅಧಿಕಾರ ಅನುಭವಿಸಲು ಅಲ್ಲ. ದಲಿತ ಸಮುದಾಯದ ಅಭ್ಯರ್ಥಿಯೇ ಶಾಸಕರಾಗಿ ಆಯ್ಕೆಯಾಗಿ ಬಂದರೂ ಪರೋಕ್ಷವಾಗಿ ಆಡಳಿತ ನಡೆಸುವವರು ಬೇರೆಯವರು. ಶಾಸಕರು ಮತ್ತು ಪಕ್ಷದ ಸಂಪೂರ್ಣ ಹಿಡಿತ ರೆಡ್ಡಿಗಳು ಮತ್ತು ಲಿಂಗಾಯತರ ಕೈಯಲ್ಲಿರುತ್ತದೆ. ಶಾಸಕರು ರಬ್ಬರ್ ಸ್ಟಾಂಪ್. ಮೇಲ್ಜಾತಿ ಮುಖಂಡರ ಮಾತು ಕೇಳದ ಶಾಸಕರು ಮುಂದಿನ ಚುನಾವಣೆಯಲ್ಲಿ ಆಯ್ಕೆಯಾಗುವುದಿಲ್ಲ ಅಥವ ಪಕ್ಷದ ಹೈಕಮಾಂಡ್‍ಗೆ ಚಾಡಿ ಹೇಳಿ ವ್ಯವಸ್ಥಿತವಾಗಿ ಟಿಕೆಟ್ ತಪ್ಪಿಸುವ ಪಿತೂರಿಯೂ ನಡೆಯುತ್ತದೆ. ಆದ್ದರಿಂದ ಇಲ್ಲಿನ ಶಾಸಕರು ಮೇಲ್ವರ್ಗದ ಮುಖಂಡರ ಜೊತೆ ಹೊಂದಿಕೊಂಡೇ ಹೋಗಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

ಪಾವಗಡ ತಾಲೂಕಿನಲ್ಲಿ ಮೊದಲ ಸ್ಥಾನದಲ್ಲಿ ಎಡಗೈ ಸಮುದಾಯ, ಬೋವಿ, ಲಂಬಾಣಿ ಸಮುದಾಯ, ಗೊಲ್ಲರು ಮತ್ತು ನಾಯಕರು ಹೆಚ್ಚು ಸಂಖ್ಯೆಯಲ್ಲಿದ್ದಾರೆ. ಇವರ ಮತಗಳೇ ನಿರ್ಣಾಯಕ. ಯಾವ ಅಭ್ಯರ್ಥಿ ಮೂರು ಜನಾಂಗದ ಮತ ಪಡೆಯುತ್ತಾರೋ ಅವರು ಶಾಸಕರಾಗಿ ಆಯ್ಕೆಯಾಗುವುದು ಖಚಿತ. ಹೀಗಾಗಿ ಇದುವರೆಗೆ ಎಡಗೈ ಸಮುದಾಯದವರು, ಲಂಬಾಣಿ ಮತ್ತು ಬೋವಿ ಸಮುದಾಯದಿಂದ ಶಾಸಕರಾಗಿದ್ದಾರೆ. ಹಿಂದಿನಿಂದಲೂ ಒಮ್ಮೆ ಜೆಡಿಎಸ್ ಮತ್ತೊಮ್ಮೆ ಕಾಂಗ್ರೆಸ್ ಅಭ್ಯರ್ಥಿಗಳು ಆಯ್ಕೆಯಾಗಿ ವಿಧಾನಸಭೆ ಪ್ರವೇಶಿಸುತ್ತಾ ಬಂದಿದ್ದಾರೆ.

ಆದರೆ ಈಗ ಪಾವಗಡ ತಾಲೂಕು ಭಿನ್ನರಾಜಕೀಯ ಚಟುವಟಿಕೆಗಳಿಗೆ ವೇದಿಕೆ ಒದಗಿಸಿದಂತೆ ಕಂಡುಬರುತ್ತಿದೆ. 2019ರ ಮೇ ತಿಂಗಳಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಚಿತ್ರದುರ್ಗ ಕ್ಷೇತ್ರದಿಂದ ಎ.ನಾರಾಯಣಸ್ವಾಮಿ ಸಂಸದರಾಗಿ ಆಯ್ಕೆಯಾಗಿದ್ದು ಕ್ಷೇತ್ರದಲ್ಲಿ ತಿರುಗಾಟ ಹೆಚ್ಚಾಗಿದೆ. ಪ್ರತಿ ತಿಂಗಳು ಕನಿಷ್ಟ ನಾಲ್ಕೈದು ಬಾರಿ ಪಾವಗಡಕ್ಕೆ ಬಂದು ಹೋಗುತ್ತಿರುವುದು ಸಂದೇಹಕ್ಕೆ ಕಾರಣವಾಗಿದೆ. ದಿಢೀರ್ ಪಾವಗಡ ತಾಲೂಕಿನ ಮೇಲೆ ಸಂಸದ ನಾರಾಯಣಸ್ವಾಮಿ ಅವರಿಗೆ ಪ್ರೀತಿ ಉಕ್ಕಿ ಬರಲು ಕಾರಣವೇನು? ಪದೇಪದೇ ಭೇಟಿ ಮಾಡುತ್ತಿರುವ ಉದ್ದೇಶವೇನು ಎಂಬ ಮಾತುಗಳ ಪತ್ರಕರ್ತವಲಯದಿಂದ ಕೇಳಿಬರತೊಡಗಿವೆ.

ಕಳೆದ ಆಗಸ್ಟ್‍ನಲ್ಲಿ ಪಾವಗಡದ ಹಳ್ಳಿಗಳಿಗೆ ಭೇಟಿ ನೀಡಿದ ನಾರಾಯಣಸ್ವಾಮಿ ಗಣೇಶ ಹಬ್ಬದಲ್ಲಿ ಯುವಕರಿಗೆ ಹಣ ಹಂಚಿ ಹೋಗಿರುವುದು ಗುಟ್ಟಾಗಿ ಉಳಿದಿಲ್ಲ. ಇದರಿಂದ ನಾರಾಯಣಸ್ವಾಮಿ ಬಗ್ಗೆ ಯುವಪೀಳಿಗೆ ಪ್ರೀತಿ ಬೆಳೆಸಿಕೊಂಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಬಂಧುವೊಬ್ಬರನ್ನು ಪಾವಗಡ ಮೀಸಲು ಕ್ಷೇತ್ರದಲ್ಲಿ ಸ್ಪರ್ಧೆಗಿಳಿಸಿ ಗೆಲ್ಲಿಸಿಕೊಳ್ಳುವ ತಯಾರಿ ನಡೆಸಿದ್ದಾರೆ. ಇದಕ್ಕೆ ಪೂರಕವೆಂಬ ಪ್ರಚಾರದ ತಂತ್ರಗಳನ್ನು ಬಳಕೆ ಮಾಡಿಕೊಳ್ಳುತ್ತಿರುವುದು ಎನ್ನುತ್ತವೆ ಸ್ಥಳೀಯ ಮೂಲಗಳು.

 

 

 

 

ಬೆಂಗಳೂರಿನ ಆನೇಕಲ್ ಮುನಿವೆಂಕಟಪ್ಪ ಲೇಔಟ್‍ನಲ್ಲಿ ವಾಸವಾಗಿರುವ ನಾರಾಯಣಸ್ವಾಮಿ ಕೋಟ್ಯಂತರ ರೂಪಾಯಿ ಒಡೆಯ. 2019ರ ಚುನಾವಣೆಯಲ್ಲಿ ಅವರೇ ಘೋಷಿಸಿಕೊಂಡಂತೆ ಒಂದು ಕೆ.ಜಿ. ಚಿನ್ನ, 5 ಕೆ.ಜಿ. ಬೆಳ್ಳಿ ಸೇರಿದಂತೆ 99,96,842 ರೂ ಮೌಲ್ಯದ ಚರಾಸ್ತಿ ಇದೆ. ರಿಲಯನ್ಸ್ ಇನ್ಸೂರೆನ್ಸ್‍ನಲ್ಲಿ ಇಟ್ಟಿರುವ ಮೊತ್ತವೂ ಇದರಲ್ಲಿ ಸೇರಿದೆ. ಸ್ಥಿರಾಸ್ತಿ ಮೌಲ್ಯ 8 ಕೋಟಿ, 65 ಲಕ್ಷದ 40 ಸಾವಿರ 842 ರೂಪಾಯಿ. ಹತ್ತಿರತ್ತಿರ ಒಂಬತ್ತು ಕೋಟಿಯ ಕುಳ. ಈ ಕಾರಣಕ್ಕಾಗಿಯೆ ನೀರಿನಂತೆ ಹಣ ಖರ್ಚು ಮಾಡುತ್ತಾರೆಂಬ ಹೆಸರೂ ಇದೆ.

ಪಾವಗಡದಲ್ಲಿ ನಡೆಯುವ ಪ್ರತಿ ಮೀಟಿಂಗ್‍ಗೂ ಬರುತ್ತಾರೆ. ಅತ್ಯಂತ ಕ್ರಿಯಾಶೀಲವಾಗಿ ತೊಡಗಿಸಿಕೊಳ್ಳುತ್ತಾರೆ. ಇವರು ಹೀಗೆ ಚಟುವಟಿಕೆಯಿಂದ ಓಡಾಡುವುದು ನೋಡಿದರೆ ಮುಂದಿನ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎನ್ನುತ್ತಾರೆ ಸ್ಥಳೀಯ ಪತ್ರಕರ್ತರು. ನಾರಾಯಣಸ್ವಾಮಿ ಯುವಕರನ್ನು ಸಂಘಟಿಸುತ್ತಿರುವುದು ಕಾಂಗ್ರೆಸ್ ಮುಖಂಡ ಹಾಲಿ ಶಾಸಕ ವೆಂಕಟರವಣಪ್ಪ ಮತ್ತು ಜೆಡಿಎಸ್ ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ಅವರಲ್ಲಿ ತಳಮಳ ಶುರುವಾಗಿದೆ.

ಪ್ರಯೋಗಗಳ ಮೇಲೆ ಪ್ರಯೋಗ ನಡೆಸುತ್ತಿರುವ ಬಿಜೆಪಿ ಇಲ್ಲಿ ಖಾತೆ ತೆರೆಯಲು ಕಸರತ್ತು ನಡೆಸುತ್ತಿದೆ. ಮೊದಲ ಬಾರಿಗೆ ಬಿಜೆಪಿ ಲಂಬಾಣಿ ಸಮುದಾಯದ ಸೋಮ್ಲಾನಾಯಕ್ ಅವರನ್ನು ಕಣಕ್ಕೆ ಇಳಿಸಿತು. ಆದರೆ ಸೋಲು ಕಂಡಿತು. ಮತ್ತೆ ಕೃಷ್ಣಾನಾಯಕ್ ಅವರನ್ನು ಕಣಕ್ಕಿಳಿಸಿದಾಗಲೂ ಸೋತುಸುಣ್ಣವಾಯಿತು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬೋವಿ ಸಮುದಾಯದ ಬಲರಾಂ ಅವರನ್ನು ಕಣಕ್ಕಿಳಿಸಿದರೂ ಪ್ರಯೋಜನವಾಗಲಿಲ್ಲ. ಆದರೆ ಓಟಿನ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚಾಗಿರುವುದು ಕಂಡುಬಂದಿದೆ.

ಮತ ಪ್ರಮಾಣ ಹೆಚ್ಚಾಗಲು ಕಾರಣವೂ ಇದೆ. ಆರ್.ಎಸ್.ಎಸ್. ಭಜರಂಗದಳ ಸಂಘಟನೆಗಳು ಒಳಗೊಳಗೆ ಕೆಲಸ ಮಾಡುತ್ತಿವೆ. ಈಗ ನಾರಾಯಣಸ್ವಾಮಿ ಪಾವಗಡಕ್ಕೆ ಬಂದಿರುವುದು ಬಿಜೆಪಿ ಬಲಗೊಳ್ಳಲು ಕಾರಣವಾಗಲಿದೆ. ಪರಿಶಿಷ್ಟ ಸಮುದಾಯದ ಮತಗಳನ್ನು ಹಿಡಿಗಂಟಾಗಿ ಇಟ್ಟುಕೊಂಡರೆ ಕಮಲ ಅರಳುವುದು ಖಚಿತ ಎಂದು ಭಾವಿಸಿರುವ ಸಂಸದರು ಪಾವಗಡ ಕ್ಷೇತ್ರಕ್ಕೆ ಪದೇಪದೇ ಭೇಟಿ ನೀಡುವುದು ಮಾಡುತ್ತಿದ್ದಾರೆ.
ಈ ಹಿಂದೆ ಸದ್ದುಗದ್ದಲವಿಲ್ಲದೆ ಯಾವುದೇ ಪ್ರಚಾರ ಇಲ್ಲದೇ ಕೆಲಸದಲ್ಲಿ ತೊಡಗಿದ್ದ ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಮಾಜಿ ಸಚಿವ ವೆಂಕಟರವಣಪ್ಪ, ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ, ಹಾಲಿ ಸಂಸದರ ಅಬ್ಬರದ ಪ್ರಚಾರವನ್ನು ನೋಡಿ ತಳಮಳಗೊಂಡಿರುವುದಂತೂ ಸತ್ಯ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....

ಪಿಟಿಸಿಎಲ್‌ ಕಾಯ್ದೆ ತಿದ್ದುಪಡಿ- ಕೋರ್ಟ್‌ಗಳಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆ

ಪಿಟಿಸಿಎಲ್‌ ಕಾಯ್ದೆ, 1978ರ 2023ರ ತಿದ್ದುಪಡಿ ಕಾಯ್ದೆಯ ವಿರೋಧಿಸಿ ಹಾಗೂ ಕಂದಾಯ ಇಲಾಖೆಯ ಎಸಿ, ಡಿಸಿ ನ್ಯಾಯಾಲಯಗಳು ಹಾಗೂ ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳಲ್ಲಿ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ...

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್‌ಗೆ ಜಾಮೀನು

ಪತ್ತನಂತಿಟ್ಟ: ಈ ತಿಂಗಳ ಆರಂಭದಲ್ಲಿ ಬಂಧಿಸಲ್ಪಟ್ಟ ಮೂರನೇ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್ ಅವರಿಗೆ ಕೇರಳ ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ. ಶಾಸಕರು ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಗಣಿಸಿದ್ದ ಪತ್ತನಂತಿಟ್ಟ...