ಬಿಜೆಪಿ ಜೊತೆಗಿನ ಮೈತ್ರಿ ನಂತರ ಕಟ್ಟರ್ ಹಿಂದುತ್ವವಾದಿಯಾಗಿ ಬದಲಾಗಿರುವ ಆಂದ್ರಪ್ರದೇಶ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್, ಸನಾತನ ಧರ್ಮವನ್ನು ರಕ್ಷಿಸಲು ಪಕ್ಷದೊಳಗೆ ‘ನರಸಿಂಹ ವಾರಾಹಿ ಗಣಂ’ ಎಂಬ ಹೊಸ ವಿಭಾಗವನ್ನು ಸ್ಥಾಪಿಸಿರುವುದಾಗಿ ಘೋಷಿಸಿದ್ದಾರೆ.
ಈ ಬಗ್ಗೆ ಶನಿವಾರ ಮಾತನಾಡಿರುವ ಪವನ್ ಕಲ್ಯಾಣ್, “ಸನಾತನ ಧರ್ಮ ರಕ್ಷಣೆಗಾಗಿ ನಾನು ಜನಸೇನೆಯಲ್ಲಿ ಪ್ರತ್ಯೇಕ ವಿಭಾಗವನ್ನು ಪ್ರಾರಂಭಿಸುತ್ತಿದ್ದೇನೆ. ಅದಕ್ಕೆ ನರಸಿಂಹ ವಾರಾಹಿ ಗಣಂ ಎಂದು ಹೆಸರಿಸುತ್ತಿದ್ದೇನೆ”ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಾವು ಎಲ್ಲ ಧರ್ಮಗಳನ್ನು ಗೌರವಿಸುತ್ತೇವೆ, ತಮ್ಮದೇ ಆದ ಹಿಂದೂ ಧರ್ಮವನ್ನು ಅನುಸರಿಸುತ್ತೇನೆ ಎಂದು ಪವನ್ ಪ್ರತಿಪಾದಿಸಿದರು.
ಆಂಧ್ರಪ್ರದೇಶದ ಉಪಮುಖ್ಯಮಂತ್ರಿಯೂ ಆಗಿರುವ ಪವನ್ ಕಲ್ಯಾಣ್ ಅವರು ಇತ್ತೀಚೆಗೆ ಎಲೂರು ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಹೊಸ ವಿಭಾಗವನ್ನು ರಚಿಸುವುದಾಗಿ ಘೋಷಿಸಿದರು.
ಇದನ್ನೂ ಓದಿ; ಯೂಟ್ಯೂಬ್ ವೀಡಿಯೋ ನೋಡಿ ಹೃದಯ ಪರೀಕ್ಷೆ ನಡೆಸಿದ ವಾರ್ಡ್ ಬಾಯ್; ಜೋಧ್‌ಪುರ ಆಸ್ಪತ್ರೆಯಲ್ಲಿ ನಡೆದ ಘಟನೆಯ ವಿಡಿಯೊ ವೈರಲ್


