‘ಪೇಸಿಎಂ’ ಪೋಸ್ಟರ್ ಮೂಲಕ ರಾಜಕೀಯದಲ್ಲಿ ಸಂಚಲನ ಮೂಡಿಸಿರುವ ಕಾಂಗ್ರೆಸ್, ಮತ್ತೊಂದು ಸೃಜನಶೀಲ ಪ್ರಯೋಗವನ್ನು ಮಾಡಿದೆ. ‘ಪೇಸಿಎಂ ಆಕ್ಷನ್ ಕಮಿಟಿ’ (PayCM Action Committee) ಎಂಬ ವಾಟ್ಸ್‌ಅಪ್ ಗ್ರೂಪ್‌ನಲ್ಲಿ ಬಿಜೆಪಿ ನಾಯಕರು ಚರ್ಚಿಸುತ್ತಿರುವಂತೆ ವಿಡಿಯೊ ರಚಿಸಲಾಗಿದೆ.
ಈ ವಿಡಿಯೊವನ್ನು ‘40% ಸರ್ಕಾರ’ ಎಂಬ ಫೇಸ್‌ಬುಕ್ ಪೇಜ್‌ನಲ್ಲಿ ಹಂಚಿಕೊಳ್ಳಲಾಗಿದ್ದು, ಈ ಗ್ರೂಪ್‌ನಲ್ಲಿ ಆಗುವ ಚರ್ಚೆಗಳು ಸ್ವಾರಸ್ಯಕರವಾಗಿವೆ. ಬಿಜೆಪಿಯವರು ಹೀಗೆ ಚರ್ಚೆ ಮಾಡುತ್ತಿದ್ದಾರೆಂದು ಕಾಂಗ್ರೆಸ್ ಅಣಕ ಮಾಡಿದೆ.
ಕಾಂಗ್ರೆಸ್ ಸೃಷ್ಟಿಸಿರುವ ಕಾಲ್ಪನಿಕ ವಾಟ್ಸ್‌ಅಪ್ ಗ್ರೂಪ್ ಹೀಗಿದೆ…
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಗ್ರೂಪ್ ರಚಿಸಿದ್ದಾರೆ. ಅದರಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಡಾ.ಕೆ.ಸುಧಾಕರ್, ಅಶ್ವತ್ಥ್ ನಾರಾಯಣ್, ವಿಜಯೇಂದ್ರ, ಕೆ.ಎಸ್.ಈಶ್ವರಪ್ಪ, ಆರಗ ಜ್ಞಾನೇಂದ್ರ, ಸಿ.ಟಿ.ರವಿ, ಜೆ.ಸಿ.ಮಾಧುಸ್ವಾಮಿ ಇದ್ದಾರೆ.

ಬೊಮ್ಮಾಯಿ ಮಾತು ಆರಂಭಿಸುತ್ತಾರೆ.
ಬೊಮ್ಮಾಯಿ: ಎಲ್ಲಿಗೆ ಬಂತಪ್ಪ? ಅಪ್‌ಡೇಟ್ ಏನು?
ಆರಗ: ತನಿಖೆ ನಡೆಯುತ್ತಿದೆ.
ಕಟೀಲ್: ನಾವು ಹೊಸ ಅಭಿಯಾನ ಮಾಡುತ್ತಿದ್ದೇವೆ.
ಬೊಮ್ಮಾಯಿ: ಟಾಬ್ಲೇಟ್ ತಗೊಂಡ್ರು ನಿದ್ದೆ ಬರುತ್ತಿಲ್ಲ.
ಕಟೀಲ್: ನಾವು ಹೊಸ ಅಭಿಯಾನ ಮಾಡುತ್ತಿದ್ದೇವೆ.
ಬೊಮ್ಮಾಯಿ: ಜನ ಬಿಜೆಪಿಯವರು ಪೇಸಿಎಂ ಕಾಪಿ ಮಾಡಿರೋದು ಮಜಾ ಬರುತ್ತಿಲ್ಲ ಅಂತಿದ್ದಾರೆ.
ಸುಧಾಕರ್: ಲೆಸ್ಟ್ ಬ್ರಿಂಗ್ ಔಟ್ ಲಿಂಗಾಯತ್ ಕಾರ್ಡ್ (ಲಿಂಗಾಯತ ಕಾರ್ಡ್ ಹಾಕೋಣ)
ಬೊಮ್ಮಾಯಿ: ಮಾಸ್ಟರ್ ಸ್ಟ್ರೋಕ್ ಸುಧಾಕರ್, ಯೂ ಡು ಇಟ್
ಸುಧಾಕರ್: ಓಕೆ (ಇಮೋಜಿ ಬಳಸಿದ್ದಾರೆ.)
(ವಿಜಯೇಂದ್ರ ಲೆಫ್ಟ್)
ಬೊಮ್ಮಾಯಿ: ಛೇ ಇವ್ನು ಇರೋದು ಮರೆತುಬಿಟ್ಟೆ.
ಬೊಮ್ಮಾಯಿ: (‘ಸುಧಾಕರ್ ಮೋಸ್ಟ್‌ಲಿ ಮೂರ್ಖ ಅನಿಸುತ್ತೆ: ಸಿದ್ದರಾಮಯ್ಯ’ ಎಂದಿರುವ ಸುದ್ದಿ ಶೇರ್ ಮಾಡುತ್ತಾರೆ)
ಬೊಮ್ಮಾಯಿ: ಇವಾಗ ಏನ್ ಮಾಡೋಣ.
ಈಶ್ವರಪ್ಪ: ನನಗೆ ಮಂತ್ರಿ ಸ್ಥಾನ ಕೊಟ್ಟರೆ ಐಡಿಯಾ ಕೊಡ್ತೀನಿ.
(ಬೊಮ್ಮಾರಿ ರಿಮೂವ್ಡ್ ಈಶ್ವರಪ್ಪ)
ಬೊಮ್ಮಾಯಿ: ಕಟೀಲ್ ಮೋದೀಜಿ ಹತ್ತಿರ ಮಾತಾಡಿ, ಏನಾದರೂ ಐಡಿಯಾ ಕೊಡ್ತಾರೆ.
ಕಟೀಲ್: ಮೋದೀಜಿ ನವಿಲಿನೊಟ್ಟಿಗೆ ಫೋಟೋಶೂಟ್ ಮಾಡ್ತಾ ಇದ್ದಾರಂತೆ. ಮೆಸೇಜ್ ಮಾಡಿದ್ದೇನೆ.
ಬೊಮ್ಮಾಯಿ: ಓಕೆ, ಅಶ್ವತ್ಥ್ ಎನಿ ಐಡಿಯಾ?
ಅಶ್ವತ್ಥ್: ವೀ ಕೆನ್ ಮೇಕ್ ಎ ಮೂವಿ. ಯೂವರ್ ಬಯೋಗ್ರಫಿ.
ಮಾಧುಸ್ವಾಮಿ: ಪೂರ್ತಿ ಮೂವಿ ಟ್ರೇಲರ್‌ರಷ್ಟು ಉದ್ದ ಕೂಡ ಬರಲ್ಲ.
ಬೊಮ್ಮಾಯಿ: ಕಟೀಲ್, ಸಮ್‌ಥಿಂಗ್ ಬಿಗ್ ವೀ ಶುಡ್ ಡೂ.
ನಳೀನ್: ಹಿಂದುತ್ವ ತರೋಣ.
ಬೊಮ್ಮಾಯಿ: ಹೌ? (ಹೇಗೆ)
ನಳೀನ್: ಸೇಮ್ ಆಸ್ ಆಲ್ವೇಸ್ (ನಗುವ ಇಮೋಜಿ.)
ಆರಗ: ನೋ. ಆಮೇಲೆ ನಾನು ತನಿಖೆ ಮಾಡಿಸಬೇಕು.
ಇದನ್ನೂ ಓದಿರಿ: ವಿಶ್ಲೇಷಣೆ: ರಾಜ್ಯ ಕಾಂಗ್ರೆಸ್ ರಾಜಕೀಯ ತಂತ್ರಗಾರಿಕೆ ಬದಲಾಗಿದೆಯೇ?
ಸಿ.ಟಿ.ರವಿ: ಯೆಸ್ ಟಿಪ್ಪು ಸುಲ್ತಾನ್ ತರೋಣ.
ಬೊಮ್ಮಾಯಿ: (ಹಣೆಚಚ್ಚಿಕೊಳ್ಳುತ್ತಿರುವ ಇಮೋಜಿ ಹಾಕಿದ್ದಾರೆ.)
ಕಟೀಲ್: ಮೋದೀಜಿ ಮೆಸೇಜ್ ಮಾಡಿದ್ದಾರೆ. (ಬ್ಯುಸಿ ಎಂಬ ಆಡಿಯೋ ಸಂದೇಶ ಬಂದಿದೆ.)
ಸಿಟಿ ರವಿ: ಪಿಎಫ್‌ಐನವರು ದೇವಸ್ಥಾನದಲ್ಲಿ ಪಾಕಿಸ್ತಾನ್ ಬಾವುಟ ಹಾರಿಸಲಿ. ಬೊಮ್ಮಾಯಿ ಸರ್ ಅದಕ್ಕೆ ಬೆಂಗಳೂರಿಂದ ಪಾದಯಾತ್ರೆ ಹೋಗಿ ಹಿಂದುತ್ವ ಫ್ಲಾಗ್ ಹಾರಿಸಬೇಕು.
ಕಟೀಲ್: ಗುಡ್ ಐಡಿಯಾ
ಬೊಮ್ಮಾಯಿ: ನೋ. ನನಗೆ ಪಾದೆಯಾತ್ರೆ ಆಗಲ್ಲ, ಕಾಲ್ ನೋವು.
ಕಟೀಲ್: ಶಾ ಟೆಕ್ಸ್ಟ್ ಮಾಡಿದ್ದಾರೆ.
ಬೊಮ್ಮಾಯಿ: ವಾಟ್ ಡಿಡ್ ಶಾ ಟೆಲ್?
(ನಳೀನ್ ಕುಮಾರ್ ಕಟೀಲ್ ಬೊಮ್ಮಾಯಿಯವರನ್ನು ರಿಮೂವ್ ಮಾಡುತ್ತಾರೆ.)
– ಈ ರೀತಿಯಲ್ಲಿ ಸಂಭಾಷಣೆ ನಡೆದಿರುವಂತೆ ಟ್ರೋಲ್ ಮಾಡಲಾಗಿದೆ.
ಪೋಸ್ಟರ್ ಅಭಿಯಾನದ ಬಳಿಕ @INCKarnataka ಮತ್ತೊಂದು ವಿನೂತನ ಪ್ರಯೋಗ ಮಾಡಿದೆ. #PayCM action committee ವಾಟ್ಸ್ ಅಪ್ ಗ್ರೂಪ್ ನಲ್ಲಿ @BJP4Karnataka ನಾಯಕರು ಚರ್ಚೆ ಮಾಡಿದ್ದು ಹೀಗೆ… (ಕಾಲ್ಪನಿಕ ವಿಡಿಯೊ) pic.twitter.com/gGrfhGzRw2
— Yathiraj Byalahalli (@YathirajByalah1) September 30, 2022
40 % ಕಮಿಷನ್ ಸರ್ಕಾರ ಎಂಬ ಅಸ್ತ್ರವನ್ನು ಕಾಂಗ್ರೆಸ್ ಬಲವಾಗಿ ಪ್ರಯೋಗಿಸುತ್ತಿದೆ.


