ಲಾಕ್‌ಡೌನ್ ಮೇ 03ರವರೆಗೂ ಮುಂದುವರೆದಿದೆ. ಹಾಗಾಗಿ ಏಪ್ರಿಲ್ 14 ರವರೆಗೆ ತಾಳ್ಮೆಯಿಂದ ಕಾಯುತ್ತಿದ್ದ ಜನರೀಗ ಕಟ್ಟುನಿಟ್ಟಿನ ನಿರ್ಬಂಧಗಳಿಗೆ ರೊಚ್ಚಿಗೇಳುವ ಸಾಧ್ಯತೆಯಿದೆ. ಹಾಗಾಗಿ ಜನರೊಂದಿಗೆ ವರ್ತಿಸುವಾಗ ಪೊಲೀಸರು ಸೂಕ್ಷ್ಮವಾಗಿ ವರ್ತಿಸಬೇಕು ಎಂದು ಪೊಲೀಸ್ ಮಹಾನಿರ್ದೇಶಕರಾದ ಪ್ರವೀಣ್ ಸೂದ್ ಮುನ್ನೆಚ್ಚರಿಕೆಯ ನೋಟಿಸ್ ಕಳಿಸಿದ್ದಾರೆ.
ಪೊಲೀಸ್ ಕಮಿಷನರ್ ಕಚೇರಿಯಿಂದ ಹೊರಡಿಸಲಾದ ಎಲೆಕ್ಟ್ರಾನಿಕ್ ಅಥವಾ ಮುದ್ರಿತ ಎಲ್ಲಾ ಕರ್ಫ್ಯೂ ಪಾಸ್‌ಗಳು ಯಾವುದೇ ತಿದ್ದುಪಡಿ ಇಲ್ಲದೆ ಏಪ್ರಿಲ್ 20 ರವರೆಗೆ ಮಾನ್ಯವಾಗಿರುತ್ತವೆ. ಈ ಕುರಿತು ಕಾರ್ಯನಿರತ ಪೊಲೀಸರಿಗೆ ತಕ್ಷಣವೇ ಮಾಹಿತಿ ಮತ್ತು ಸಂವೇದನೆ ಅಗತ್ಯವಾಗಿದೆ. ಎಲೆಕ್ಟ್ರಾನಿಕ್ ಪಾಸ್‌ಗಳು ಏಪ್ರಿಲ್ 14 ರಂತೆ ಸಿಂಧುತ್ವವನ್ನು ತೋರಿಸುತ್ತವೆ ಆದರೂ ಅದನ್ನು ಸ್ವಯಂಚಾಲಿತವಾಗಿ ಏಪ್ರಿಲ್ 20 ಎಂದು ಪರಿಗಣಿಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ತುರ್ತು ಪರಿಸ್ಥಿತಿಗಾಗಿ ನೀಡಲಾದ ಎಲೆಕ್ಟ್ರಾನಿಕ್ ಅಥವಾ ಮುದ್ರಿತ ಎಲ್ಲಾ ಕರ್ಫ್ಯೂ ಪಾಸ್‌ಗಳನ್ನು (ಪ್ರತಿ ಪೊಲೀಸ್ ಠಾಣೆ ನೀಡಿರುವ) ನಿಕಟವಾಗಿ ಮೇಲ್ವಿಚಾರಣೆ ಮಾಡಬೇಕಾಗಿರುತ್ತದೆ. ಏಕೆಂದರೆ ಏಪ್ರಿಲ್ 14 ರವರೆಗೆ ತಾಳ್ಮೆಯಿಂದ ಕಾಯುತ್ತಿದ್ದ ನಾಗರಿಕರನ್ನು ಸ್ವಲ್ಪ ತೊಂದರೆಯಾದರೂ ಮೊದಲಿಗಿಂತ ಹೆಚ್ಚು ಆಕ್ರೋಶಗೊಳ್ಳುತ್ತಾರೆ. ಈಗಾಗಲೇ ಚಾಲ್ತಿಯಲ್ಲಿರುವ ವ್ಯವಸ್ಥೆಯ ಪ್ರಕಾರ ಈ ಪಾಸ್‌ಗಳನ್ನು ನೀಡುವುದನ್ನು ಮುಂದುವರಿಸಬೇಕು. ಏಪ್ರಿಲ್ 20 ರ ನಂತರ ಮತ್ತೆ ಈ ವಿಷಯವನ್ನು ಪರಿಶೀಲಿಸಲಾಗುವುದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಅಂದರೆ ಈಗಿರುವ ಪಾಸ್‌ಗಳು ಏ. 14 ಕ್ಕೆ ಮುಕ್ತಾಯವಾಗಿದ್ದರೂ ಸಹ ಏ.20ರವರೆಗೆ ಮಾನ್ಯಗೊಳ್ಳಲ್ಲಿವೆ. ಏಪ್ರಿಲ್ 20 ರ ನಂತರದ ಸ್ಥಿತಿಯ ಬಗ್ಗೆ ಪೊಲೀಸ್ ಮಹಾನಿರ್ದೇಶಕರು ಅಷ್ಟರಲ್ಲಿ ತೀರ್ಮಾನ ತೆಗೆದುಕೊಳ್ಳಲಿದ್ದಾರೆ.


