ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕೃಷಿ ಕಾಯ್ದೆಗಳನ್ನು ಹಿಂತೆಗೆದುಕೊಳ್ಳದ ‘ಬಿಜೆಪಿಗೆ ಮತ ನೀಡಬೇಡಿ’ ಎಂಬ ರೈತ ಹೋರಾಟಗಾರರು ನೀಡಿರುವ ಕರೆಗೆ ಭಾರೀ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಪಶ್ಚಿಮ ಬಂಗಾಳದಲ್ಲಿ ಚುನಾವಣೆ ತಾರಕಕ್ಕೇರುತ್ತಿರುವ ಸಮಯದಲ್ಲಿ ಈ ಅಭಿಯಾನ ಹೆಚ್ಚು ಸದ್ದು ಮಾಡುತ್ತಿದ್ದು, ಮದುವೆ ಮನೆಗಳಲ್ಲಿಯೂ ಬಿಜೆಪಿಗೆ ಮತ ನೀಡಬೇಡಿ ಎಂಬ ಕರೆ ವೈರಲ್ ಆಗುತ್ತಿದೆ.
No Vote To BJP ಎಂಬ ಹೆಸರಿನಲ್ಲಿ ಟ್ವಿಟರ್ ಖಾತೆಯೊಂದನ್ನು ತೆರಯಲಾಗಿದ್ದು ಬಿಜೆಪಿ ವಿರುದ್ಧ ನಿರಂತರವಾಗಿ ಪ್ರಚಾರ ನಡೆಸುತ್ತಿದೆ. ಅದು ಮದುವೆ ಸಮಾರಂಭವೊಂದರಲ್ಲಿ ಅತಿಥಿಗಳು ಸೇರಿ ವದು ವರದು ಬಿಜೆಪಿಗೆ ಮತ ನೀಡಬೇಡಿ ಎಂದು ಫ್ಲಕಾರ್ಡುಗಳನ್ನು ಹಿಡಿದಿರುವ ಫೋಟೊವೊಂದನ್ನು ಪ್ರಕಟಿಸಿದೆ.
All our PM Cares for is Votes.. Hit where it Hurts ? #NoVoteToBJP pic.twitter.com/OjmuYs7yF3
— Aarti (@aartic02) March 12, 2021
ಇನ್ನು ಟ್ವಿಟರ್‌ನಲ್ಲಿ ಕಳೆದ ಮೂರು ದಿನಗಳಿಂದಲೂ NoVoteToBJP ಹ್ಯಾಷ್‌ಟ್ಯಾಗ್ ಟ್ರೆಂಡ್ ಆಗುತ್ತಿದೆ. ದೆಹಲಿ ರೈತ ಹೋರಾಟ ಮುನ್ನಡೆಸುತ್ತಿರುವ ಸಂಯುಕ್ತಾ ಕಿಸಾನ್ ಮೋರ್ಚಾದ ಮುಖವಾಣಿಯಾದ ಕಿಸಾನ್ ಏಕ್ತಾ ಮೋರ್ಚಾ ಟ್ವೀಟ್ ಮಾಡಿ “ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ NoVoteToBJP ಘೋಷಣೆಯಡಿ ನಮ್ಮ ರೈತನಾಯಕರು ಪ್ರಚಾರ ಮಾಡಲು ನಿರ್ಧರಿಸಿದ್ದಾರೆ. ರೈತ ವಿರೋಧಿ ಕಾನೂನುಗಳನ್ನು ಜಾರಿಗೆ ತಂದ ಬಿಜೆಪಿ ಪಕ್ಷದ ವಿರುದ್ಧ ಮತ ಚಲಾಯಿಸುವಂತೆ ಜನರನ್ನು ಒತ್ತಾಯಿಸುತ್ತೇವೆ” ಎಂದಿದೆ. ಅಲ್ಲದು ಅದು ಎರಡು ನಿಮಿಷದ ವಿಡಿಯೋವೊಂದನ್ನು ಸಹ ಟ್ವೀಟ್ ಮಾಡಿದೆ.
Our Farm Leaders to Start Campaigning Under the Slogan 'No Vote To BJP' for the appraoching Assembly Elections in West Bengal.
We urge people to stand against the party who brought in the Anti-Farmer Laws. #NoVoteToBJP pic.twitter.com/5YzByW4TK3— Kisan Ekta Morcha (@Kisanektamorcha) March 12, 2021
ನೀವು ಸಾಮಾಜಿಕ ಜಾಲತಾಣಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕಿದೆ. ನಕರಾತ್ಮಕತೆ, ಔದಾರ್ಯದ ಕೊರತೆ ಮತ್ತು ಸತ್ಯ ನೋಡಲು ಇಷ್ಟಪಡದಿರುವ ಸೋಂಕು ತಗುಲಿರುವ ಜನರಿಂದ ದೂರಿವಿರಿ ಎಂದು ಬಿಜೆಪಿ ವಿರುದ್ಧ ಕಿಡಿಕಾರಲಾಗಿದೆ.
Social distancing on social media #NoVoteToBJP pic.twitter.com/H66e6OrvBq
— Kim_Grewal (@KimGrewal29) March 12, 2021
ಇನ್ನು ನಿನ್ನೆ ಕೋಲ್ಕತ್ತದಲ್ಲಿ ಬಿಜೆಪಿಗೆ ಮತ ನೀಡಬೇಡಿ ಹೆಸರಿನಲ್ಲಿ ಬೃಹತ್ ರ್ಯಾಲಿ ನಡೆಸಲಾಗಿದೆ. “ಈ ಅಭಿಯಾನ ಕೇವಲ ಚುನಾವಣೆಗೆ ಮಾತ್ರ ಸೀಮಿತವಾಗದೇ, ದೇಶದಲ್ಲಿ ನಡೆಯುತ್ತಿರುವ ಇಡೀ ಫ್ಯಾಸಿಸ್ಟ್ ಧೋರಣೆಯ ವಿರುದ್ಧ ಕಾರ್ಯನಿರ್ವಹಿಸುತ್ತದೆ” ಎಂದು ಘೋಷಿಸಲಾಗಿದೆ. ಇಂದು ರೈತ ಮುಖಂಡ ರಾಕೇಶ್ ಟಿಕಾಯತ್ ಕೋಲ್ಕತ್ತಾದಲ್ಲಿ ಬಿಜೆಪಿಗೆ ಮತ ನೀಡಬೇಡಿ ಅಭಿಯಾನದಲ್ಲಿ ಪಾಲ್ಗೊಳ್ಳಲಿದ್ದಾರೆ.
Video of "No Vote To BJP" mega rally held in Kolkata.#NoVoteToBJP pic.twitter.com/03sZWe5KFN
— No Vote To BJP (@No_Vote_To_BJP) March 12, 2021
“ಪಟ್ರೋಲ್ ಬೆಲೆ 100 ರೂ ಆಗಿದೆ. ಸಿಲಿಂಡರ್ ಬೆಲೆ 1000 ರೂ ಆಗಿದೆ. ರಾಷ್ಟ್ರೀಯ ಸಂಪತ್ತುಗಳನ್ನು ಮಾರುವುದರಲ್ಲಿ ಸರ್ಕಾರ ನಿರತವಾಗಿದೆ. ಇಡೀ ವಿಶ್ವವೇ ಭಾರತವನ್ನು ಚುನಾವಣಾ ನಿರಂಕುಶಾಧಿಕಾರತ್ವದತ್ತ ಹೊರಳುತ್ತಿದೆ ಎಂದು ಹೇಳುತ್ತಿದೆ. ಈ ದುರಂತವನ್ನು ತಡೆಯಲು ನಿಮ್ಮ ಮತವನ್ನು ಬಳಸಿ. ಸ್ಪಷ್ಟವಾಗಿ ಮತ್ತು ಜೋರಾಗಿ ಬಿಜೆಪಿಗೆ ಮತವಿಲ್ಲ ಎಂದು ಹೇಳಿ” ಎಂದು ದೀಪಂಕರ್ ಟ್ವೀಟ್ ಮಾಡಿದ್ದಾರೆ.
Petrol sells for Rs 100 a litre,
LPG nearly 1000 per cylinder!
The government is busy selling national assets, thugs are busy tearing the social fabric. The world now calls India an 'electoral autocracy'. Use your vote to stop this disaster. Say it loud and clear: #NoVoteToBJP— Dipankar (@Dipankar_cpiml) March 12, 2021
3 ರೈತ ವಿರೋಧಿ ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳಬೇಕೆಂದು ಒತ್ತಾಯಿಸಿ 106 ದಿನಗಳಿಂದ ಲಕ್ಷಾಂತರ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ತೀವ್ರ ಚಳಿ ಮತ್ತು ತೀವ್ರ ಬಿಸಿಲನ್ನು ಅವರು ಎದುರಿಸಿದ್ದಾರೆ. ಹಲವಾರು ರೈತರು ಪ್ರಾಣ ಕಳೆದುಕೊಂಡಿದ್ದಾರೆ. ಇದಕ್ಕೆಲ್ಲ ಕಾರಣವಾದ ಬಿಜೆಪಿಗೆ ಮತ ಹಾಕಬಾರದು ಎಂದು ಬಿಕೆಯು ಏಕ್ತಾ ಉಗ್ರಾಣ್ ಟ್ವೀಟ್ ಮಾಡಿದೆ.
ಇದನ್ನೂ ಓದಿ: ಪಶ್ಚಿಮ ಬಂಗಾಳ: ʼಬಿಜೆಪಿಗೆ ಮತ ನೀಡಬೇಡಿʼ ಅಭಿಯಾನ ಆರಂಭ


