Homeಮುಖಪುಟಪಶ್ಚಿಮ ಬಂಗಾಳ: ʼಬಿಜೆಪಿಗೆ ಮತ ನೀಡಬೇಡಿʼ ಅಭಿಯಾನ ಆರಂಭ

ಪಶ್ಚಿಮ ಬಂಗಾಳ: ʼಬಿಜೆಪಿಗೆ ಮತ ನೀಡಬೇಡಿʼ ಅಭಿಯಾನ ಆರಂಭ

"ಈ ಅಭಿಯಾನ ಕೇವಲ ಚುನಾವಣೆಗೆ ಸೀಮಿತವಾಗದೇ, ದೇಶದಲ್ಲಿ ನಡೆಯುತ್ತಿರವ ಇಡೀ ಫ್ಯಾಸಿಸ್ಟ್ ಧೋರಣೆಯ‌ ವಿರುದ್ಧ ಕಾರ್ಯನಿರ್ವಹಿಸುತ್ತದೆ"

- Advertisement -
- Advertisement -

ಪಶ್ಚಿಮ ಬಂಗಾಳದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯ ಪ್ರಯುಕ್ತ ವಿವಿಧ ಚಳುವಳಿಗಳ ಕಾರ್ಯಕರ್ತರು ಮತ್ತು ಜಾತ್ಯಾತೀತ ಪ್ರಗತಿಪರರು ಒಂದುಗೂಡಿ ವೇದಿಕೆಯೊಂದನ್ನು ಸಿದ್ದಪಡಿಸಿಕೊಂಡು, ರಾಜ್ಯದಲ್ಲಿ “ಬಿಜೆಪಿಗೆ ಮತ ನೀಡಬೇಡಿ” ಎನ್ನುವ ಫ್ಯಾಸಿಸ್ಟ್‌ ವಿರೋಧಿ ಅಭಿಯಾನವನ್ನು ಆರಂಭಿಸಿದ್ದಾರೆ.

ಕೊಲ್ಕೊತ್ತಾದಲ್ಲಿ ನಡೆದ ಪತ್ರಿಕಾ ಗೋಷ್ಟಿಯಲ್ಲಿ ಬಿಜೆಪಿ-ಆರ್‌ಎಸ್‌ಎಸ್‌ನ ಅಜೆಂಡಾವನ್ನು ಬಹಿರಂಗಪಡಿಸುವುದರೊಂದಿಗೆ, “ಜನರು ಸ್ವಹಿತಾಸಕ್ತಿಯಿಂದ ಪರಿಣಾಮಕಾರಿ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ. ಮತ್ತು ಈ ಚುನಾವಣೆಯಲ್ಲಿ ಬಿಜೆಪಿಯನ್ನು ತಿರಸ್ಕರಿಸುತ್ತಾರೆ. ಈ ಅಭಿಯಾನ ಕೇವಲ ಚುನಾವಣೆಗೆ ಮಾತ್ರ ಸೀಮಿತವಾಗದೇ, ದೇಶದಲ್ಲಿ ನಡೆಯುತ್ತಿರುವ ಇಡೀ ಫ್ಯಾಸಿಸ್ಟ್ ಧೋರಣೆಯ‌ ವಿರುದ್ಧ ಕಾರ್ಯನಿರ್ವಹಿಸುತ್ತದೆ” ಎಂದು ವೇದಿಕೆಯ ಮುಖಂಡರು ಹೇಳಿದರು ಎಂದು ಗೌರಿ ಲಂಕೇಶ್‌ ನ್ಯೂಸ್ ವೆಬ್‌ ಪೋರ್ಟಲ್‌ ವರದಿ ಮಾಡಿದೆ.

“ನರೇಂದ್ರ ಮೋದಿ-ಅಮಿತ್ ಶಾ ಆಡಳಿತದ ಕೋಮುವಾದಿ ಅಜೆಂಡಾವಾದ ಪೌರತ್ವ ಕಾಯ್ದೆಗಳಾದ ಸಿಎಎ-ಎನ್‌ಆರ್‌ಸಿ-ಎನ್‌ಪಿಆರ್‌ ವಿರುದ್ಧ ಲಾಕ್‌ಡೌನ್‌ ಪೂರ್ವದಲ್ಲಿ ನಡೆದ ಆಂದೋಲನದಂತೆ ವಿಧಾನಸಭಾ ಚುನಾವಣೆಯಲ್ಲೂ ಫ್ಯಾಸಿಸ್ಟ್‌ ವಿರೋಧಿ ಆಂದೋಲನ ನಡೆಸಬೇಕು. ಇದು ತಡವಾಗಬಾರದು. ಬಿಜೆಪಿಯು ಈಗಾಗಲೇ ಪಶ್ಚಿಮ ಬಂಗಾಳದಲ್ಲಿ ಕೋಮು ಧೃವೀಕರಣದ ಆಧಾರದ ಮೇಲೆ ಮತವಿಭಜನೆಗೆ ಮುಂದಾಗಿದೆ” ಎಂದು ಹೇಳಿದರು.

ಇದನ್ನೂ ಓದಿ: ‘ನೀವು ಕಾಯ್ದೆ ವಾಪ್ಸಿ ಮಾಡಿದರೆ ಮಾತ್ರ ನಾವು ಘರ್ ವಾಪ್ಸಿ ಮಾಡುತ್ತೇವೆ’: ರೈತರ ಖಡಕ್…

ಇಂದಿನ (ಜ.9) ಪತ್ರಿಕಾಗೋಷ್ಠಿಗೆ ಮುಂಚಿತವಾಗಿ, ಜನವರಿ 4 ರಂದು, ಕೋಲ್ಕತಾ ಮತ್ತು ಪಶ್ಚಿಮ ಬಂಗಾಳದ ವಿವಿಧ ಜಿಲ್ಲೆಗಳ ಕಾರ್ಯಕರ್ತರು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲು ಮಧ್ಯ ಕೋಲ್ಕತ್ತಾದ ʼಭಾರತ್ ಸಭಾʼ ಸಭಾಂಗಣದಲ್ಲಿ ಸಾರ್ವಜನಿಕ ಸಮಾವೇಶವನ್ನು ನಡೆಸಿದ್ದರು. ಅಲ್ಲಿ ಈ ವೇದಿಕೆ ರಚನೆಯ ಕುರಿತು ವಿಷಯ ಪ್ರಸ್ತಾಪಿಸಿದ್ದರು.

ತಮ್ಮ ಈ ಅಭಿಯಾನವನ್ನು ರಾಜ್ಯದ ಉದ್ದಗಲಕ್ಕೂ ಹರಡುವ ಸಲುವಾಗಿ, ʼನೋ ವೋಟ್ ಟು ಬಿಜೆಪಿʼ ಎನ್ನುವ ಘೋಷಣೆಯೊಂದಿಗೆ ಫ್ಯಾಸಿಸ್ಟ್ ವಿರೋಧಿ ಜಾಲಗಳನ್ನು ನಿರ್ಮಿಸಲು ಯೋಜಿಸಲಾಗಿದೆ. ಇದರ ಭಾಗವಾಗಿ ಮಾರ್ಚ್ 10 ರಂದು ಕೋಲ್ಕತ್ತಾದಲ್ಲಿ ಬೃಹತ್ ರ್ಯಾಲಿ ನಡೆಯಲಿದೆ. ‌

ಜನವರಿ 13 ರಂದು ರೈತರಿಗೆ ಬೆಂಬಲ ಸೂಚಿಸಿ ಮತ್ತೊಂದು ಧರಣಿಯನ್ನು ವೇದಿಕೆಯ ವತಿಯಿಂದ ಹಮ್ಮಿಕೊಳ್ಳಲಾಗಿದೆ.


ಇದನ್ನೂ ಓದಿ: ನಮ್ಮೆಲ್ಲರ ಶತ್ರು ಒಬ್ಬನೇ ಎಂದರಿತು ಹೋರಾಡೋಣ: ಸುರೀಂದರ್‌ ಸಿಂಘ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ವಿವರಿಸಲು ಸಮಯಾವಕಾಶ ಕೋರಿ ಪ್ರಧಾನಿಗೆ ಖರ್ಗೆ ಪತ್ರ

0
ಲೋಕಸಭೆ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆ 'ನ್ಯಾಯಪತ್ರ'ದ ಕುರಿತು ಪ್ರಧಾನಿ ಮೋದಿ ಸರಣಿ ಹೇಳಿಕೆಗಳನ್ನು ಕೊಡುತ್ತಿದ್ದು, ಈ ಹಿನ್ನೆಲೆ ಪ್ರಣಾಳಿಕೆಯ ಕುರಿತು ವಿವರಿಸಲು ಸಮಯ ಕೋರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದಾರೆ. ಖರ್ಗೆ...