ಅರವಿಂದ್ ಕೇಜ್ರಿವಾಲ್ ಅವರ ಆಪ್ತ ಬಿಭವ್ ಕುಮಾರ್ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿರುವ ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ಅವರು, ‘ಧೃವ್ ರಾಠಿ ವಿಡಿಯೊ ನಂತರ ತಮ್ಮ ಮೇಲೆ ಅತ್ಯಾಚಾರ ಮತ್ತು ಕೊಲೆ ಬೆದರಿಕೆಗಳು ಬರುತ್ತಿವೆ’ ಇತ್ತೀಚೆಗೆ ಆರೋಪ ಮಾಡಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜನಪ್ರಿಯ ಯೂಟ್ಯೂಬರ್ ರಾಠಿ, ತನ್ನ ವಿರುದ್ಧದ ಆರೋಪಗಳು ನಕಲಿ ಎಂದು ಹೇಳಿದ್ದಾರೆ.
ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಯಾರ ಹೆಸರನ್ನೂ ನೇರವಾಗಿ ಪ್ರಸ್ತಾಪಿಸದೆ, “ತನಗೆ ಮಾನಹಾನಿ ಮಾಡಲು ಪ್ರಯತ್ನಿಸಲಾಗಿದೆ ಮತ್ತು ದುಷ್ಕರ್ಮಿಗಳು ಬಲಿಪಶುಗಳಂತೆ ನಟಿಸುತ್ತಿದ್ದಾರೆ” ಎಂದು ಬರೆದಿದ್ದಾರೆ.
“ನನ್ನ ವಿರುದ್ಧದ ಸುಳ್ಳು ಆರೋಪಗಳು, ದೈನಂದಿನ ಕೊಲೆ ಬೆದರಿಕೆಗಳು, ಅಮಾನವೀಯ ಅವಮಾನಗಳು, ನನ್ನ ಮಾನಹಾನಿಗಾಗಿ ಸಂಘಟಿತ ಪ್ರಚಾರಗಳನ್ನೆಲ್ಲಾ ನಾನು ಈಗ ಅಭ್ಯಾಸ ಮಾಡಿಕೊಂಡಿದ್ದೇನೆ” ಎಂದು ಧ್ರುವ್ ರಾಠಿ ಹೇಳಿದರು.
Fake allegations against me, daily death threats, dehumanizing insults, coordinated campaigns to defame me … I’m used to it by now.
The irony is that perpetrators are pretending to be victims. Everyone knows who is behind all this. They want to silence me.
But that’s not…
— Dhruv Rathee (@dhruv_rathee) May 27, 2024
“ವಿಪರ್ಯಾಸವೆಂದರೆ, ದುಷ್ಕರ್ಮಿಗಳು ಬಲಿಪಶುಗಳಂತೆ ನಟಿಸುತ್ತಿದ್ದಾರೆ. ಇದೆಲ್ಲದರ ಹಿಂದೆ ಯಾರಿದ್ದಾರೆ ಎಂಬುದು ಎಲ್ಲರಿಗೂ ಗೊತ್ತು. ಅವರು ನನ್ನನ್ನು ಮೌನಗೊಳಿಸಲು ಬಯಸುತ್ತಾರೆ. ಆದರೆ, ಅದು ಆಗುವುದಿಲ್ಲ. ನೀವು ಒಬ್ಬ ಧ್ರುವ್ ರಾಠಿಯನ್ನು ಮೌನಗೊಳಿಸಿದರೆ, 1000 ಹೊಸಬರು ಹುಟ್ಟಿಕೊಳ್ಳುತ್ತವೆ; ಜೈ ಹಿಂದ್” ಎಂದು ಯೂಟ್ಯೂಬರ್ ಸ್ವಾತಿ ಮಲಿವಾಲ್‌ಗೆ ತಿರುಗೇಟು ಕೊಟ್ಟಿದ್ದಾರೆ.
ಈ ಹಿಂದೆ, ಆಮ್ ಆದ್ಮಿ ಪಕ್ಷ ಮತ್ತು ಅದರ ಕಾರ್ಯಕರ್ತರು ತನ್ನ ವಿರುದ್ಧ ಅಭಿಯಾನ ನಡೆಯುತ್ತಿದೆ ಎಂದು ಸ್ವಾತಿ ಮಲಿವಾಲ್ ಆರೋಪಿಸಿದ್ದರು. ಧ್ರುವ್ ರಾಠಿ ತನ್ನ ವಿರುದ್ಧ ಏಕಪಕ್ಷೀಯ ವೀಡಿಯೊವನ್ನು ಪೋಸ್ಟ್ ಮಾಡಿದ ನಂತರ ಪರಿಸ್ಥಿತಿ ಉಲ್ಬಣಗೊಂಡಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ; ಯಡಿಯೂರಪ್ಪ ವಿರುದ್ಧ ಪೋಕ್ಸೋ ದೂರು ದಾಖಲಿಸಿದ್ದ ಮಹಿಳೆ ಖಾಸಗಿ ಆಸ್ಪತ್ರೆಯಲ್ಲಿ ಸಾವು


