ಕಳೆದ ಎಂಟು ದಿನಗಳಲ್ಲಿ ಏಳನೇ ಬಾರಿಗೆ ಮಂಗಳವಾರ ಮತ್ತೆ ಇಂಧನ ಬೆಲೆ ಏರಿಕೆಯಾಗಿದೆ. ರಾಜ್ಯ ಇಂಧನ ಚಿಲ್ಲರೆ ವ್ಯಾಪಾರಿಗಳ ಬೆಲೆ ಅಧಿಸೂಚನೆಯ ಪ್ರಕಾರ, ದೆಹಲಿಯಲ್ಲಿ ಪೆಟ್ರೋಲ್ ದರವನ್ನು ಲೀಟರ್‌ಗೆ 80 ಪೈಸೆ ಮತ್ತು ಡೀಸೆಲ್ ಲೀಟರ್‌ಗೆ 70 ಪೈಸೆಗಳಷ್ಟು ಹೆಚ್ಚಿಸಲಾಗಿದೆ. ಈ ಏರಿಕೆಯೊಂದಿಗೆ ರಾಜ್ಯದಲ್ಲೂ ಇಂಧನ ದರ ಹೆಚ್ಚಳವಾಗಿದ್ದು, ಪೆಟ್ರೋಲ್ 84 ಪೈಸೆ ಹೆಚ್ಚಿಸಲಾಗದ್ದು, ಪ್ರತಿ ಲೀಟರ್‌ಗೆ 106.13 ರೂ.ಗೆ ತಲುಪಿದೆ. ಡೀಸೆಲ್ ದರ 69 ಪೈಸೆ ಹೆಚ್ಚಿಸಲಾಗಿದ್ದು, ಪ್ರತಿ ಲೀಟರ್‌ಗೆ 90.19 ರೂ.ಗೆ ತಲುಪಿದೆ.
ದೇಶಾದ್ಯಂತ ದರಗಳನ್ನು ಹೆಚ್ಚಿಸಲಾಗಿದ್ದು, ಸ್ಥಳೀಯ ತೆರಿಗೆಯನ್ನು ಅವಲಂಬಿಸಿ ರಾಜ್ಯದಿಂದ ರಾಜ್ಯಕ್ಕೆ ದರಗಳು ಬದಲಾಗುತ್ತವೆ. ರಾಜ್ಯದಲ್ಲಿ ಕಳೆದ ಹತ್ತು ದಿನಗಳಲ್ಲಿ ಇಂಧನ ದರ ಏರಿಕೆ ಚಿತ್ರ ಕೆಳಗಿದೆ. ಗಮನಿಸಿ.
ಈ ದರ ಹೆಚ್ಚಳದೊಂದಿಗೆ ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್‌ಗೆ 84 ಪೈಸೆ ಬೆಲೆ ಹೆಚ್ಚಾಗಿದ್ದು, 105.62 ರೂ.ಗೆ ತಲುಪಿದೆ. ಡೀಸೆಲ್ ಪ್ರತಿ ಲೀಟರ್‌ಗೆ 68 ಪೈಸೆ ಹೆಚ್ಚಾಗಿದ್ದು, 89.70 ರೂ. ತಲುಪಿದೆ. ರಾಜ್ಯದಲ್ಲೇ ಅತೀ ಹೆಚ್ಚು ಪೆಟ್ರೋಲ್ ದರ ಹೆಚ್ಚಿರುವ ಜಿಲ್ಲೆಯಾಗಿ ಚಿಕ್ಕಮಗಳೂರು ಹೊರಹೊಮ್ಮಿದ್ದು, ಪ್ರತಿ ಲೀಟರ್ ಪೆಟ್ರೋಲ್ ಬೆಲೆ 107.95 ರೂ. ಗೆ ತಲುಪಿದ್ದು, ಡೀಸೆಲ್ ದರ 69 ಪೈಸೆ ಹೆಚ್ಚಳದೊಂದಿಗೆ 91.71 ರೂ. ಗೆ ಏರಿಕೆಯಾಗಿದೆ.
ಇದನ್ನೂ ಓದಿ: ಚುನಾವಣೆ ಮುಗಿದ ಕೂಡಲೇ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಗೆ ಸಿದ್ದತೆ: ಕಾಂಗ್ರೆಸ್ ವಿರೋಧ
ಗುಲ್ಬರ್ಗಾ ಜಿಲ್ಲೆಯಲ್ಲಿ ಇಂದು ಪೆಟ್ರೋಲ್ ಬೆಲೆ 1.57 ಏರಿಕೆಯಾಗಿದ್ದು, ಇದರೊಂದಿಗೆ ಜಿಲ್ಲೆಯಲ್ಲಿ ಪ್ರತಿ ಲೀಟರ್ ಪೆಟ್ರೋಲ್‌ಗೆ 106.07 ರೂ. ಆಗಿದೆ. ಡೀಸೆಲ್ ಬೆಲೆ 1.34 ಹೆಚ್ಚಳವಾಗಿದ್ದು ಇದರೊಂದಿಗೆ ಪ್ರತಿ ಲೀಟರ್ ಬೆಲೆ 90.13 ರೂ. ಗೆ ತಲುಪಿದೆ. ಬಳ್ಳಾರಿಯಲ್ಲೂ ಇಂದು ಪೆಟ್ರೋಲ್ ಬೆಲೆ 1.11 ರೂ. ಹೆಚ್ಚಿಸಲಾಗಿದೆ. ಉಳಿದಂತೆ ಬಾಕಿ ಜಿಲ್ಲೆಗಳ ಬೆಲೆಗಳು ಕೆಳಗಿನಂತಿವೆ.
ಐದು ರಾಜ್ಯಗಳಲ್ಲಿ ಚುನಾವಣೆ ಇದ್ದುದರಿಂದ ಕಚ್ಚಾ ತೈಲ ಬೆಲೆ ಏರಿಕೆಯ ಹೊರತಾಗಿಯೂ ನಾಲ್ಕು ತಿಂಗಳ ಕಾಲ ಇಂಧನ ದರಗಳನ್ನು ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಏರಿಸಿರಲಿಲ್ಲ. ಇದರ ಬಂತರ ದರ ಪರಿಷ್ಕರಣೆ ಮಾರ್ಚ್ 22 ರ ನಂತರ ಮತ್ತೆ ಪ್ರಾರಂಭವಾಗಿತ್ತು.
ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂನಂತಹ ಸರ್ಕಾರಿ ತೈಲ ಸಂಸ್ಕರಣಾಗಾರಗಳು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿನ ಕಚ್ಚಾ ತೈಲ ಬೆಲೆಗಳು ಮತ್ತು ರೂಪಾಯಿ-ಡಾಲರ್ ವಿನಿಮಯ ದರಗಳನ್ನು ಗಣನೆಗೆ ತೆಗೆದುಕೊಂಡು ಪ್ರತಿದಿನ ಇಂಧನ ದರಗಳನ್ನು ಪರಿಷ್ಕರಿಸುತ್ತವೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆಗಳನ್ನು ಪ್ರತಿದಿನ ಬೆಳಿಗ್ಗೆ 6 ರಿಂದ ಜಾರಿಗೆ ತರಲಾಗುತ್ತದೆ.
ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ಮೇಲಿನ ಸಂಪೂರ್ಣ ಸೆಸ್ ತೆಗೆದುಹಾಕಿ: ತೆಲಂಗಾಣ ಸಿಎಂ ಒತ್ತಾಯ



ಬನ್ನಿ ದೇಶದ ಜನಗಳೆಲ್ಲಾ ಕಾಶ್ಮೀರ್ ಫ಼ೈಲ್ಸ್ ನೋಡಿ. ಪೆಟ್ರೋಲ್ ಮತ್ತು ಡಿಸೇಲ್ ದರಗಳ ಬಗ್ಗೆ ಯೋಚನೆ ಬಿಡಿ…. ನಾಚಿಕೆಯಾಗಬೇಕು ಕೇಂದ್ರ ಸರಕಾರಕ್ಕೆ……..