Homeಮುಖಪುಟಚುನಾವಣೆ ಮುಗಿದ ಕೂಡಲೇ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಗೆ ಸಿದ್ದತೆ: ಕಾಂಗ್ರೆಸ್ ವಿರೋಧ

ಚುನಾವಣೆ ಮುಗಿದ ಕೂಡಲೇ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಗೆ ಸಿದ್ದತೆ: ಕಾಂಗ್ರೆಸ್ ವಿರೋಧ

- Advertisement -
- Advertisement -

ಐದು ರಾಜ್ಯಗಳ ವಿಧಾನಸಭಾ ಚುನಾವಣೆ ನಡೆಯುವ ಮುನ್ನ ತೆರಿಗೆ ಕಡಿಮೆ ಮಾಡಿ ಸರಕಾರ ತೈಲ ಬೆಲೆ ಕಡಿಮೆ ಮಾಡಿತು. ಉತ್ತರ ಪ್ರದೇಶದ ಏಳನೇ ಹಂತದ ಚುನಾವಣೆ ಇಂದು ಮುಗಿಯಲಿದೆ. ಇದರೊಂದಿಗೆ ತೈಲ ಕಂಪೆನಿಗಳು ಬೆಲೆ ಹೆಚ್ಚಿಸುವ ಸೂಚನೆ ನೀಡಿವೆ.

ಉಕ್ರೇನ್ ಮೇಲೆ ರಷ್ಯಾ ದಾಳಿ ಮಧ್ಯೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಬ್ಯಾರಲ್‌ಗೆ 130 ಡಾಲರ್‌ನಷ್ಟು ಏರಿಕೆಯಾಗಿದೆ. 2008ರ ನಂತರ ಅತ್ಯಂತ ಹೆಚ್ಚು ಬೆಲೆ ಇದಾಗಿದ್ದು, ರಷ್ಯಾದಿಂದ ಇಂಧನ ತರಿಸುವುದನ್ನು ನಿಲ್ಲಿಸಲು ಅಮೆರಿಕ ಮತ್ತು ಯುರೋಪಿಯನ್ ಒಕ್ಕೂಟಗಳು ನಿರ್ಬಂಧ ಹೇರಿದ್ದರಿಂದ ಈ ಬೆಳವಣಿಗೆ ನಡೆದಿದೆ.

ಇದೇ ವೇಳೆ ಭಾರತದ ಇಂಧನ ದರ ಹೆಚ್ಚಳವಾಗುವ ಸಾಧ್ಯತೆ ಇದೆ. ಪೆಟ್ರೋಲ್ ದರ ಲೀಟರ್‌ಗೆ 22 ರೂಪಾಯಿ ಹೆಚ್ಚಳವಾಗಲಿದೆ ಎಂದು ಅಂದಾಜಿಸಲಾಗಿದ್ದು, ಸದ್ಯ ಭಾರತವು ಖರೀದಿ ಮಾಡುತ್ತಿರುವ ಕಚ್ಚಾ ತೈಲ ಬ್ಯಾರಲ್‌ಗೆ 100 ಡಾಲರ್ ಆಗಿದೆ. ಇಂಧನ ಬೆಲೆ ಹೆಚ್ಚಳವಾಗುವ ಹಿನ್ನೆಲೆಯಲ್ಲಿ ದೇಶದಲ್ಲಾಗುವ ಸಮಸ್ಯೆ ತಡೆಯಲು ಅಬಕಾರಿ ತೆರಿಗೆ ಕಡಿಮೆ ಮಾಡುವಂತೆ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಲಾಗುತ್ತಿದೆ.

ಇಂಧನ ಬೆಲೆ ಏರಿಕೆಗೆ ಕಾಂಗ್ರೆಸ್ ವಿರೋಧ

ಇತ್ತೀಚೆಗಷ್ಟೇ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರು ಚುನಾವಣೆ ಮುಗಿದ ಬಳಿಕ ಸರಕಾರ ತೈಲ ಬೆಲೆ ಹೆಚ್ಚಳ ಮಾಡಲಿದೆ ಎಂದು ಟ್ವಿಟರ್‌ನಲ್ಲಿ ವ್ಯಂಗ್ಯವಾಡಿದ್ದರು. “ಕೂಡಲೇ ಪೆಟ್ರೋಲ್ ಟ್ಯಾಂಕ್ ಪೂರ್ತಿ ತುಂಬಿಸಿಕೊಳ್ಳಿ. ಏಕೆಂದರೆ ಮೋದಿ ಸರ್ಕಾರದ ‘ಚುನಾವಣೆ’ ಆಫರ್ ಮುಗಿಯಲಿದೆ” ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.

ಕರ್ನಾಟಕದ ಕಾಂಗ್ರೆಸ್ ಶಾಸಕ ಕೃಷ್ಣಭೈರೇಗೌಡರವರು ಟ್ವೀಟ್ ಮಾಡಿ, “ಚುನಾವಣೆ ಮುಗಿದಿದೆ. ಪೆಟ್ರೋಲ್/ಡೀಸೆಲ್ ಬೆಲೆ ಏರಿಕೆಗೆ ಸಿದ್ಧರಾಗಿ” ಎಂದು ಎಚ್ಚರಿಸಿದ್ದಾರೆ.

ಸರ್ಕಾರದ ನಿಯಂತ್ರಣವಿಲ್ಲ. ಯಾವುದೇ ಹಸ್ತಕ್ಷೇಪವಿಲ್ಲ ಎಂದು ನರೇಂದ್ರ ಮೋದಿಯವರು ಹೇಳುತ್ತಾರೆ. ಆದರೆ ಚುನಾವಣೆ ನಡೆಯುತ್ತಿರುವುದರಿಂದ 3 ತಿಂಗಳಾದರೂ ಬೆಲೆ ಏರಿಕೆಯಾಗಿಲ್ಲ. ಚುನಾವಣೆಗೂ ಬೆಲೆ ಏರಿಕೆಗೂ ಯಾವುದೇ ಸಂಬಂಧವಿಲ್ಲವೇ? ಕೇವಲ ಕಾಕತಾಳೀಯವೇ? ಹಾಗಾದರೆ ಮತದಾನ ಮುಗಿದ ಕೂಡಲೇ ಬೆಲೆ ಏರಿಕೆ ಪ್ರಾರಂಭವಾಗುವುದು ಏಕೆ ಎಂದು ಅವರು ಪ್ರಶ್ನಿಸಿದ್ದಾರೆ.

ಕಚ್ಚಾ ತೈಲವು ಬ್ಯಾರೆಲ್‌ಗೆ $110 ಇದ್ದಾಗ, ಯುಪಿಎ ಪೆಟ್ರೋಲ್ ಅನ್ನು ₹60 ಕ್ಕೆ ಮಾರಿತು.

ಕಚ್ಚಾ ತೈಲವು ಬ್ಯಾರೆಲ್‌ಗೆ $74 ಇದ್ದಾಗಲೂ ಮೋದಿ ಸರ್ಕಾರವು ಪೆಟ್ರೋಲ್ ಅನ್ನು ₹95 ಕ್ಕೆ ಮಾರಾಟ ಮಾಡಿತು.

ಈಗ ಕಚ್ಚಾ ತೈಲವು $ 109 ಕ್ಕೆ ಮರಳಿದಾಗ, ಬಿಜೆಪಿ ಯಾವ ಮಟ್ಟಕ್ಕೆ ಬೆಲೆಗಳನ್ನು ಹೆಚ್ಚಿಸಲಿದೆ ಎಂದು ಊಹಿಸಿ?

ಪೆಟ್ರೋಲ್ ಲೀಟರ್‌ಗೆ ₹120-130 ತಲುಪುತ್ತದೆಯೇ? ಎಂದು ಕಾಂಗ್ರೆಸ್ ವಕ್ತಾರ ಗೌರವ್ ಪಾಂಡಿ ಟ್ವೀಟ್ ಮಾಡಿದ್ದಾರೆ.

ಕೆಲ ತಿಂಗಳುಗಳ ಹಿಂದೆ ಕಂಪನಿಗಳು ಖರೀದಿಸಿದ ಕಚ್ಛಾ ತೈಲದ ಆಧಾರದ ಮೇಲೆ ಪೆಟ್ರೋಲ್/ಡೀಸೆಲ್ ಬೆಲೆಗಳು ಈಗ ಇದ್ದಕ್ಕಿದ್ದಂತೆ ಗಗನಕ್ಕೇರಲು ಹೇಗೆ ಸಾಧ್ಯ ಎಂಬುದನ್ನು ಯಾರಾದರೂ ವಿವರಿಸಬಹುದೇ? ಏಕೆಂದರೆ ಕಚ್ಚಾ ತೈಲವನ್ನು ಈ ಒಂದೆರೆಡು ದಿನದ ಹಿಂದೆ ಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ಗಲ್ಫ್‌ನಿಂದ ಕಚ್ಚಾ ತೈಲವನ್ನು ಸಾಗಿಸಲು ಹಲವು ವಾರಗಳನ್ನು ತೆಗೆದುಕೊಳ್ಳುತ್ತದೆ. ತೈಲ ಕಂಪನಿಗಳು ಸಾಗಣೆಗಾಗಿ ತಿಂಗಳ ಮುಂಚಿತವಾಗಿ ಕಚ್ಚಾ ತೈಲವನ್ನು ಖರೀದಿಸುತ್ತವೆ ಎಂದು ಜಾನ್ ಎಂಬುವವರು ಟ್ವೀಟ್ ಮಾಡಿದ್ದಾರೆ.

ಪ್ರಪಂಚದಾದ್ಯಂತ ಪೆಟ್ರೋಲ್ ಮೇಲಿನ ತೆರಿಗೆ:

ಅಮೆರಿಕ: 20%
ಜಪಾನ್: 45%
ಇಂಗ್ಲೆಂಡ್: 62%
ಜರ್ಮನಿ: 65%
ಭಾರತ: 260%

ಇದು ಮುದ್ರಣದೋಷವಲ್ಲ. ಪ್ರತಿ ಲೀಟರ್ ಪೆಟ್ರೋಲ್ ಮೇಲೆ ನಾವು 260% ತೆರಿಗೆಯನ್ನು ಪಾವತಿಸುತ್ತೇವೆ ಎಂದು ಕಾಂಗ್ರೆಸ್ ವಕ್ತಾರ ಸರಳ್ ಪಟೇಲ್ ಆತಂಕ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ: ಪಾಕ್ ಕ್ರಿಕೆಟ್ ನಾಯಕಿಯ ಪುಟ್ಟ ಮಗುವಿನೊಂದಿಗೆ ಭಾರತೀಯ ತಂಡದ ಪ್ರೀತಿಯ ಕ್ಷಣಗಳು: ಎಲ್ಲೆಡೆ ಅಭಿಮಾನದ ಮಹಾಪೂರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...