Homeಮುಖಪುಟಮೇಘಾಲಯ-ಅಸ್ಸಾಂ ಗಡಿಯ ವಿವಾದಿತ ಗ್ರಾಮಗಳಲ್ಲಿ 30 ಮೇಘಾಲಯದಲ್ಲಿ ಉಳಿಯಲಿವೆ: ಸಿಎಂ

ಮೇಘಾಲಯ-ಅಸ್ಸಾಂ ಗಡಿಯ ವಿವಾದಿತ ಗ್ರಾಮಗಳಲ್ಲಿ 30 ಮೇಘಾಲಯದಲ್ಲಿ ಉಳಿಯಲಿವೆ: ಸಿಎಂ

- Advertisement -
- Advertisement -

ಮೇಘಾಲಯ-ಅಸ್ಸಾಂ ಗಡಿಯಲ್ಲಿರುವ 36 ವಿವಾದಿತ ಗ್ರಾಮಗಳ ಪೈಕಿ 30 ಗ್ರಾಮಗಳನ್ನು ಮೇಘಾಲಯದಲ್ಲೇ ಉಳಿಯುವಂತೆ ಎರಡು ರಾಜ್ಯಗಳ ಪ್ರಾದೇಶಿಕ ಸಮಿತಿಗಳು ಶಿಫಾರಸು ಮಾಡಿದೆ ಎಂದು ಮುಖ್ಯಮಂತ್ರಿ ಕಾನ್ರಾಡ್ ಕೆ. ಸಂಗ್ಮಾ ಸೋಮವಾರ ವಿಧಾನಸಭೆಗೆ ತಿಳಿಸಿದ್ದಾರೆ.

ಈ ವಿವಾದಿತ 36 ಗ್ರಾಮಗಳು 36.9 ಚದರ ಕಿಲೋಮೀಟರ್ ವಿಸ್ತೀರ್ಣವನ್ನು ಹೊಂದಿದ್ದು, 30 ಗ್ರಾಮಗಳು 18 ಚದರ ಕಿಮೀ ಪ್ರದೇಶದಲ್ಲಿ ಹರಡಿಕೊಂಡಿವೆ ಎಂದು ಮಾಹಿತಿ ನೀಡಿದ್ದಾರೆ.

ಅಂತರರಾಜ್ಯ ಗಡಿ ವಿವಾದವನ್ನು ಪರಿಹರಿಸಲು ಅಸ್ಸಾಂ ಸರ್ಕಾರದೊಂದಿಗಿನ ಮಾತುಕತೆಯ ಕುರಿತು ಸದನವನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ, “ಈಗಾಗಲೇ ಗುರುತಿಸಲಾಗಿರುವ 12 ಸ್ಥಳಗಳಿಗೆ ಯಾವುದೇ ಹೊಸ ವ್ಯತ್ಯಾಸಗಳನ್ನು ಸೇರಿಸಬಾರದು ಎಂದು ಎರಡೂ ರಾಜ್ಯಗಳು ಒಪ್ಪಿಕೊಂಡಿವೆ. 2011 ರಲ್ಲಿ ಮೇಘಾಲಯವು ಹಕ್ಕು ಸಾಧಿಸಿದ 36 ಹಳ್ಳಿಗಳಲ್ಲಿ, ಒಟ್ಟು 30 ಗ್ರಾಮಗಳನ್ನು ಮೇಘಾಲಯದಲ್ಲಿ ಉಳಿಯಲು ಎರಡು ರಾಜ್ಯಗಳ ಪ್ರಾದೇಶಿಕ ಸಮಿತಿಗಳು ಶಿಫಾರಸು ಮಾಡಿದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮೋದಿ ಸ್ಥಿಮಿತತೆ ಕಳೆದುಕೊಂಡಿದ್ದಾರೆ ಎಂದು ಅಮಿತ್ ಶಾ ಹೇಳಿದ್ದರು: ಮೇಘಾಲಯ ರಾಜ್ಯಪಾಲರ ಸ್ಫೋಟಕ ಹೇಳಿಕೆ

“ತಾರಾಬರಿ ಪ್ರದೇಶದಲ್ಲಿ ಮೇಘಾಲಯವು ಹಕ್ಕು ಸಾಧಿಸಿದ ಎಲ್ಲಾ ಎಂಟು ಹಳ್ಳಿಗಳು ರಾಜ್ಯದಲ್ಲಿ ಉಳಿಯುತ್ತವೆ. ಗಿಜಾಂಗ್‌ನ ಮೂರು ಹಳ್ಳಿಗಳಲ್ಲಿ ಎರಡು ನಮ್ಮೊಂದಿಗೆ ಉಳಿಯುತ್ತವೆ. ನಾವು 12 ಹಕ್ಕು ಸಾಧಿಸಿದ ಹಳ್ಳಿಗಳಲ್ಲಿ 11 ಪಡೆದಿದ್ದೇವೆ. ಬೊಕ್ಲಾಪಾರಾದಲ್ಲಿ ಒಂದು, ಖಾನಪಾರ-ಪಿಳ್ಳಂಗಟಾದ ಐದು ಹಳ್ಳಿಗಳು ಮತ್ತು ರಟಾಚೆರಾದಲ್ಲಿ ಮೂರು ಹಳ್ಳಿಗಳು ನಮ್ಮ ರಾಜ್ಯದಲ್ಲಿವೆ” ಎಂದು ಹೇಳಿದ್ದಾರೆ.

ಕ್ಯಾಬಿನೆಟ್ ಸಚಿವರ ನೇತೃತ್ವದ ಎರಡು ರಾಜ್ಯಗಳ ಪ್ರಾದೇಶಿಕ ಸಮಿತಿಗಳಿಂದ ಹಲವು ಚರ್ಚೆಗಳು, ಭೇಟಿಗಳು ಮತ್ತು ಸಮೀಕ್ಷೆಗಳನ್ನು ನಡೆಸಲಾಗಿದೆ. ವಿಶೇಷ ತಂತ್ರಜ್ಞಾನಗಳನ್ನು ಸಮೀಕ್ಷೆಯಲ್ಲಿ ಬಳಸಲಾಗಿದೆ. ಎರಡೂ ರಾಜ್ಯಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ಸರ್ವೆ ಆಫ್ ಇಂಡಿಯಾದಿಂದ ಪ್ರದೇಶಗಳನ್ನು ಹೆಚ್ಚು ನಿಖರವಾಗಿ ನಿರ್ಧರಿಸಲಾಗುತ್ತದೆ ಎಂದು ಸಿಎಂ ಸಂಗ್ಮಾ ಎಂದಿದ್ದಾರೆ.

ಇದೆ ವೇಳೆ ಉಳಿದ ಆರು ಕ್ಷೇತ್ರಗಳ ತೀರ್ಮಾನದ ಕುರಿತು ಜನವರಿ ಅಂತ್ಯದಲ್ಲಿ ಎರಡೂ ರಾಜ್ಯಗಳು ಒಪ್ಪಂದಕ್ಕೆ ಸಹಿ ಹಾಕಿದ್ದು, ಅದನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ರವಾನಿಸಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.


ಇದನ್ನೂ ಓದಿ: ಸಿಬಿಐಗಿದ್ದ ಸಮ್ಮತಿಯನ್ನು ಹಿಂಪಡೆದ ಮೇಘಾಲಯ: ಒಂಬತ್ತು ರಾಜ್ಯಗಳಲ್ಲಿ ಸಿಬಿಐಗೆ ಎಂಟ್ರಿ ಇಲ್ಲ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...