Homeಅಂತರಾಷ್ಟ್ರೀಯಮೋದಿ ಯುಎಸ್‌ ಭೇಟಿ - ‘ಮಾಧ್ಯಮಗಳು ಪ್ರಶ್ನೆ ಕೇಳಬಾರದೆಂದು ಮೊದಲೇ ತೀರ್ಮಾನವಾಗಿತ್ತು!’

ಮೋದಿ ಯುಎಸ್‌ ಭೇಟಿ – ‘ಮಾಧ್ಯಮಗಳು ಪ್ರಶ್ನೆ ಕೇಳಬಾರದೆಂದು ಮೊದಲೇ ತೀರ್ಮಾನವಾಗಿತ್ತು!’

- Advertisement -
- Advertisement -

ಪ್ರಧಾನಿ ಮೋದಿ ಅವರು ಮೂರು ದಿನದ ಅಮೆರಿಕಾ ಪ್ರವಾಸದಲ್ಲಿದ್ದಾರೆ. ಶ್ವೇತಭವನದ ಓವಲ್ ಕಚೇರಿಯಲ್ಲಿ 20 ನಿಮಿಷಗಳ ಕಾಲ ಶುಕ್ರವಾರದಂದು ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ಈ ಮಾತುಕತೆಯಲ್ಲಿ ಉಭಯ ದೇಶಗಳ ಸಂಬಂಧವನ್ನು ಗಟ್ಟಿಗೊಳಿಸುವ ಬಗ್ಗೆ ನಾಯಕರಿಬ್ಬರು ಮಾತನಾಡಿದ್ದಾರೆ. ಆದರೆ ವಿಶೇಷವೇನೆಂದರೆ, ಇಬ್ಬರು ನಾಯಕರು ಪರ್ತಕರ್ತರಿಂದ ಯಾವುದೆ ಪ್ರಶ್ನೆಗಳನ್ನು ಎದುರುಗೊಳ್ಳಲಿಲ್ಲ ಹಾಗೂ ಇದನ್ನು ಮೊದಲೆ ತೀರ್ಮಾನಿಸಲಾಗಿತ್ತು ಎಂದು ದಿವೈರ್‌ ವರದಿ ಮಾಡಿದೆ.

ದಿ ವೈರ್‌ ತನ್ನ ವರದಿಯಲ್ಲಿ, “ಮಾಧ್ಯಮಗಳ ಮುಂದೆ ಶ್ವೇತಭವನದ ಓವಲ್ ಕಚೇರಿಯಲ್ಲಿ 20 ನಿಮಿಷಗಳ ಕಾಲ ಜಂಟಿ ಮಾತುಕತೆಯಿತ್ತು. ಮಾತುಕತೆಯ ಕೊನೆಯಲ್ಲಿ ಯಾವುದೇ ನಾಯಕರು ಯಾವುದೇ ಪ್ರಶ್ನೆಗಳನ್ನು ತೆಗೆದುಕೊಳ್ಳಲಿಲ್ಲ, ಇದನ್ನು ಮೊದಲೆ ತೀರ್ಮಾನಿಸಲಾಗಿತ್ತು” ಎಂದು ಹೇಳಿದೆ.

ಇದನ್ನೂ ಓದಿ: ಮೋದಿ ಮುಂದೆಯೆ ಭಾರತೀಯ ಮಾಧ್ಯಮಗಳ ಬಗ್ಗೆ ಬಿಡೆನ್ ವ್ಯಂಗ್ಯ?

“ಪ್ರಧಾನಿ ಮೋದಿ ಅವರು, 2015 ರಲ್ಲಿ ಲಂಡನ್‌ನಲ್ಲಿ ಯುಕೆ ಪ್ರಧಾನಿ ಡೇವಿಡ್ ಕ್ಯಾಮರೂನ್ ಅವರನ್ನು ಭೇಟಿಯಾದಾಗ ಪತ್ರಕರ್ತರು ಪ್ರಶ್ನಿಸಿದ್ದರು. ಅದರ ನಂತರ ಮೋದಿ ಯಾವುದೆ ಪತ್ರಿಕಾಗೋಷ್ಠಿಗೆ ಒಪ್ಪಿಕೊಂಡಿಲ್ಲ” ಎಂದು ದಿ ವೈರ್‌ ಹೇಳಿದೆ.

ಈ ಮಾತುಕತೆಗೂ ಮೊದಲು ಜೋ ಬಿಡೆನ್ ಅವರು, ಭಾರತೀಯ ಮಾಧ್ಯಮಗಳು ಅಮೆರಿಕನ್‌‌ ಪತ್ರಿಕೆಗಳಿಗಿಂತ ಉತ್ತಮ ನಡವಳಿಕೆ ಹೊಂದಿದೆ ಎಂದು ಹೇಳಿದ್ದಾರೆ.

ಮಾತುಕತೆಗೆ ಶುರು ಮಾಡುವುದಕ್ಕಿಂತ ಮುಂಚೆಯೆ ಶುಭಾಶಯ ವಿನಿಮಯ ಮಾಡಿಕೊಂಡ ಬಿಡನ್, “ಭಾರತೀಯ ಮಾಧ್ಯಮಗಳು ಅಮೆರಿಕನ್‌‌ ಪತ್ರಿಕೆಗಳಿಗಿಂತ ಉತ್ತಮವಾಗಿ ನಡೆದುಕೊಳ್ಳುತ್ತವೆ. ನಿಮ್ಮ ಅನುಮತಿಯೊಂದಿಗೆ ಹೇಳುವುದಾದರೆ… ನೀವು ಅವರಿಗೆ(ಮಾಧ್ಯಮ) ಉತ್ತರಿಸುವ ಅಗತ್ಯವೆ ಇರುವುದಿಲ್ಲ, ಯಾಕೆಂದರೆ ಅವರು ನಿಮಗೆ ಪ್ರಶ್ನೆಯೆ ಕೇಳುವುದಿಲ್ಲ” ಎಂದು ಹೇಳಿದ್ದರು.

ಇದನ್ನೂ ಓದಿ: ಮೋದಿ ಎದುರು ಗಾಂಧಿತತ್ವಗಳ ಅಗತ್ಯತೆ ಸ್ಮರಿಸಿದ ಅಮೆರಿಕ ಅಧ್ಯಕ್ಷ ಬೈಡನ್‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...