ಸೋಮವಾರ ಬೆಳಗ್ಗೆ 6 ಗಂಟೆಯಿಂದ ದೆಹಲಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್‌ನ ಚಿಲ್ಲರೆ ಬೆಲೆಯು ತಲಾ 80 ಪೈಸೆಗಳಷ್ಟು ಹೆಚ್ಚಾಗಿದೆ. ಇದು 2021ರ ಡಿಸೆಂಬರ್ 1 ರಿಂದ ಮಾಡಿರುವ ಮೊದಲ ಏರಿಕೆಯಾಗಿದೆ. ಅದಕ್ಕೂ ಹಿಂದೆ ನಿರಂತರವಾಗಿ ಏರಿಕೆಯಾಗುತ್ತಿದ್ದ ದರವು ಐದು ರಾಜ್ಯಗಳ ಚುನಾವಣಾ ಹಿನ್ನಲೆಯಲ್ಲಿ ಏರಿಕೆಯಾಗಿರಲಿಲ್ಲ ಎಂದು ಚುನಾವಣಾ ವಿಶ್ಲೇಷಕರು ಹೇಳಿದ್ದಾರೆ. ಈ ನಡುವೆ ಮನೆಬಳಕೆಯ ಅಡುಗೆ ಅನಿಲ (ಎಲ್‌ಪಿಜಿ) ಬೆಲೆಯನ್ನು ಪ್ರತಿ ಸಿಲಿಂಡರ್‌ಗೆ ₹ 50 ಹೆಚ್ಚಿಸಲಾಗಿದೆ ಎಂದು ಪಿಟಿಐ ವರದಿ ಮಾಡಿದೆ.
ಮಂಗಳವಾರ, ದೆಹಲಿಯ ರಾಜಧಾನಿ ಸೇವಾ ಕೇಂದ್ರದಲ್ಲಿ ಒಂದು ಲೀಟರ್ ಪೆಟ್ರೋಲ್ ದರ 96.21 ರೂ.ಗೆ ಏರಿತು. ಡೀಸೆಲ್ ದರವು ಲೀಟರ್‌ಗೆ 87.47 ರೂ.ಗೆ ಏರಿದೆ.
ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 84 ಪೈಸೆ ಏರಿದರೆ, ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 79 ಪೈಸೆ ಹೆಚ್ಚಾಗಿದೆ.
ಈ ಮಧ್ಯೆ ಅಕ್ಟೋಬರ್ ಆರಂಭದ ನಂತರ ಮೊದಲ ಬಾರಿಗೆ ಗೃಹ ಅಡುಗೆ ಅನಿಲ (ಎಲ್‌ಪಿಜಿ) ಬೆಲೆಯನ್ನು ಮಂಗಳವಾರ ಪ್ರತಿ ಸಿಲಿಂಡರ್‌ಗೆ ₹ 50 ಹೆಚ್ಚಿಸಲಾಗಿದೆ.
ಚಿಲ್ಲರೆ ಇಂಧನ ಬೆಲೆಗಳ ಹೆಚ್ಚಳವು ನವೆಂಬರ್ ನಂತರ ಇದೆ ಮೊದಲ ಬಾರಿಗೆ ಏರಿಕೆಯಾಗಿದೆ. ದೇಶದ ಪ್ರಮುಖ ಮೆಟ್ರೋ ನಗರಗಳಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಇತಿಂವೆ:
ಈ ಏರಿಕೆಯಿಂದಾಗಿ ಗುಲ್ಬರ್ಗಾ ಜಿಲ್ಲೆಯಲ್ಲಿ ಪೆಟ್ರೋಲ್ ಬೆಲೆ 1.45 ಏರಿಕೆಯಾಗಿದ್ದು, ಡೀಸೆಲ್ ಬೆಲೆ 1.33 ರೂ. ಏರಿಕೆಯಾಗಿದೆ. ಇಂಧನ ಬೆಲೆ ಏರಿಕೆ ನಡುವೆಯು ಚಿತ್ರದುರ್ಗದಲ್ಲಿ ಪೆಟ್ರೋಲ್‌ಗೆ 11 ಪೈಸೆ ಇಳಿಕೆಯಾಗಿದ್ದು, ಡೀಸೆಲ್‌ಗೆ 6 ಪೈಸೆ ಇಳಿಕೆಯಾಗಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಮೈಸೂರಿನಲ್ಲಿ ಪೆಟ್ರೋಲ್‌ಗೆ 1.8 ರೂ ಏರಿಕೆಯಾಗಿದ್ದು, ಡೀಸೆಲ್‌ಗೆ ಒಂದು ರೂ ಬೆಲೆ ಏರಿಕೆಯಾಗಿದೆ. ಉಳಿದಂತೆ ಬಾಕಿ ಜಿಲ್ಲೆಗಳ ಬೆಲೆಗಳು ಇಂತಿವೆ.
ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್, ಗೋವಾ ಮತ್ತು ಮಣಿಪುರದಲ್ಲಿ ವಿಧಾನಸಭಾ ಚುನಾವಣೆಗಳು ಮುಗಿದಿರುವುದರಿಂದ ಇಂಧನ ಬೆಲೆ ಏರಿಕೆಯಾಗಬಹುದು ಎಂಬ ಊಹಾಪೋಹಗಳಿದ್ದವು.
ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದ ಬೆಲೆಗಳಿಂದ ಪರಿಹಾರವನ್ನು ನೀಡಲು ಕೇಂದ್ರವು ನವೆಂಬರ್ 4, 2021 ರಂದು ಅಬಕಾರಿ ಸುಂಕವನ್ನು ಕಡಿತಗೊಳಿಸಿತು. ಸರ್ಕಾರವು ಪ್ರತಿ ಲೀಟರ್ ಪೆಟ್ರೋಲ್ ಮೇಲಿನ ಸುಂಕವನ್ನು 5 ರೂ. ಮತ್ತು ಡೀಸೆಲ್‌ಗೆ 10 ರೂ. ನಷ್ಟು ಕಡಿತಗೊಳಿಸಿತ್ತು. ಇದರಿಂದಾಗಿ ಇಂಧನ ದರಗಳು ಇಳಿಕೆಯಾಗಿತ್ತು.
4 ತಿಂಗಳ ವಿರಾಮದ ನಂತರ ಚಿಲ್ಲರೆ ಇಂಧನ ಬೆಲೆಗಳು ಮಂಗಳವಾರದಿಂದ ಮೊದಲ ಬಾರಿಗೆ ಏರಿಕೆಯಾಗಲಿವೆ ಎಂದು ರಾಯಿಟರ್ಸ್ ಸೋಮವಾರ ವರದಿ ಮಾಡಿತ್ತು.
ಇದನ್ನೂ ಓದಿ: ಗೃಹಬಳಕೆಯ ಅಡುಗೆ ಅನಿಲ (LPG) ದರ 50 ರೂ. ಏರಿಕೆ; ಸಿಲಿಂಡರ್‌ಗೆ 950 ರೂ.


