Homeಮುಖಪುಟಝೀ ನ್ಯೂಸ್‌ನಿಂದ 18 ಕೋಟಿ ರೂ. ಪರಿಹಾರ ಕೇಳಿದ ಫೋಟೋಗ್ರಾಫರ್...ಕಾರಣ?

ಝೀ ನ್ಯೂಸ್‌ನಿಂದ 18 ಕೋಟಿ ರೂ. ಪರಿಹಾರ ಕೇಳಿದ ಫೋಟೋಗ್ರಾಫರ್…ಕಾರಣ?

- Advertisement -
- Advertisement -

ಆಫ್ರಿಕಾದಿಂದ ಭಾರತಕ್ಕೆ ಚಿರತೆಗಳ ಸಾಗಣೆಯನ್ನು ದಾಖಲಿಸಿರುವ ತನ್ನ ಅತ್ಯಮೂಲ್ಯ ವಿಡಿಯೋವನ್ನು ಅನುಮತಿಯಿಲ್ಲದೆ ಬಳಸಿಕೊಂಡಿದ್ದಕ್ಕೆ ಝೀ ನ್ಯೂಸ್‌ ಚಾನೆಲ್‌ ವಿರುದ್ದ ಎಮ್ಮಿ ಪ್ರಶಸ್ತಿಗೆ ನಾಮನಿರ್ದೇಶಿತರಾದ ಚಲನಚಿತ್ರ ನಿರ್ಮಾಪಕ ಮತ್ತು ಛಾಯಾಗ್ರಾಹಕ ರೋನಿ ಸೇನ್ ಹಕ್ಕುಸ್ವಾಮ್ಯ ಉಲ್ಲಂಘನೆಯ ಮೊಕದ್ದಮ್ಮೆ ಹೂಡಿದ್ದು, ಬರೋಬ್ಬರಿ 18 ಕೋಟಿ ರೂಪಾಯಿ ಪರಿಹಾರ ಕೇಳಿದ್ದಾರೆ.

ಝೀ ನ್ಯೂಸ್ ಮತ್ತು ಅದರ ಮಾತೃ ಕಂಪನಿ ಝೀ ಮೀಡಿಯಾ ಕಾರ್ಪೊರೇಷನ್ ಅನ್ನು ಈ ಪ್ರಕರಣದಲ್ಲಿ ಪ್ರಮುಖ ಪ್ರತಿವಾದಿಗಳಾಗಿ ಹೆಸರಿಸಲಾಗಿದೆ.

ಜೂನ್ 2022ರಲ್ಲಿ ತಾನು ಸೆರೆ ಹಿಡಿದ ವಿಡಿಯೋ ಬಳಸಿಕೊಂಡಿದ್ದಕ್ಕೆ ಸೇನ್ ಮೊಕದ್ದಮೆ ಹೂಡಿದ್ದಾರೆ. ಜೂನ್ 3 ಮತ್ತು 10ರ ನಡುವೆ ದಕ್ಷಿಣ ಆಫ್ರಿಕಾಕ್ಕೆ ಪ್ರಯಾಣ ಬೆಳೆಸಿದ್ದ ಸೇನ್, ಭಾರತಕ್ಕೆ ಸ್ಥಳಾಂತರಿಸಲು ನಿರ್ಧರಿಸಲಾಗಿದ್ದ ಚಿರತೆಗಳನ್ನು ಸೆರೆಹಿಡಿದು ಸಾಗಿಸುವುದನ್ನು ದಾಖಲಿಸಿದ್ದರು.

ವಿಶ್ವದ ಮೊದಲ ಅಂತರಖಂಡ ವನ್ಯಜೀವಿ ಸ್ಥಳಾಂತರದಲ್ಲಿ, ಭಾರತವು 2022 ಮತ್ತು 2023ರಲ್ಲಿ ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾದಿಂದ 20 ಆಫ್ರಿಕನ್ ಚಿರತೆಗಳನ್ನು ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ತಂದಿದೆ. ಈ ಚಿರತೆಗಳು 1952ರಲ್ಲಿ ಭಾರತದಲ್ಲಿ ನಿರ್ನಾಮವಾಗಿದೆ ಎಂದು ಘೋಷಿಸಲಾಗಿದೆ.

ತಾನು ಚಿತ್ರೀಕರಿಸಿದ ವಿಡಿಯೋದ 12 ಸೆಕೆಂಡ್‌ಗಳ ಕಿರು ತುಣುಕನ್ನು ಝೀ ನ್ಯೂಸ್ ಹಿಂದಿ ಚಾನೆಲ್‌ನ ಪ್ರೈಮ್‌ಟೈಮ್ ಕಾರ್ಯಕ್ರಮವಾದ ಡಿಎನ್‌ಎಯಲ್ಲಿ ಪ್ರಸಾರ ಮಾಡಲಾಗಿದೆ ಎಂದು ಸೇನ್ ಆರೋಪಿಸಿದ್ದಾರೆ. 2022ರ ಸೆಪ್ಟೆಂಬರ್ 16 ಮತ್ತು 17ರಂದು ವಿಡಿಯೋ ತುಣುಕುಗಳನ್ನು ಬಳಸಿಕೊಳ್ಳಲಾಗಿದೆ. ಆ ಸಮಯದಲ್ಲಿ ರೋಹಿತ್ ರಂಜನ್ ಅವರು ಕಾರ್ಯಕ್ರಮವನ್ನು ನಿರೂಪಿಸುತ್ತಿದ್ದರು ಎಂದು ಹೇಳಿಕೊಂಡಿದ್ದಾರೆ.

ತಾನು ಚಿತ್ರೀಕರಿಸಿದ 12 ಸೆಕೆಂಡ್‌ಗಳ ವಿಡಿಯೋ ಅತ್ಯಂತ ಅಪರೂಪದ್ದು. ಪ್ರಾಣಿಗಳ ಛಾಯಾಚಿತ್ರಣಲ್ಲಿ ಇಂಥದ್ದು ಕಾಣ ಸಿಗುವುದು ಬಹಳ ಕಡಿಮೆ. ಅದಕ್ಕಿಂತ ಮುಖ್ಯವಾಗಿ, ಈ ವಿಡಿಯೋಗೆ ಸಂಬಂಧಿಸಿದ ಚಿರತೆಗಳ ಸ್ಥಳಾಂತರ ಯೋಜನೆ ಇತಿಹಾಸದಲ್ಲೇ ಮೊದಲ ಬಾರಿಗೆ ನಡೆದಿದೆ. ಯಾವ ದೊಡ್ಡ ಬೆಕ್ಕು ಪ್ರಭೇದವನ್ನೂ (ಚಿರತೆ, ಸಿಂಹ, ಹುಲಿ ಇತ್ಯಾದಿ) ಒಂದು ಖಂಡದಿಂದ ಮತ್ತೊಂದು ಖಂಡಕ್ಕೆ ಸಾಗಿಸಿ ಬಿಡುಗಡೆ ಮಾಡಿದ ಯೋಜನೆ ಇದುವರೆಗೆ ಎಂದೂ ನಡೆದಿರಲಿಲ್ಲ ಎಂದು ಸೇನ್ ಮೊಕದ್ದಮೆಯಲ್ಲಿ ತಿಳಿಸಿದ್ದಾರೆ.

ಪ್ರಸಾರದ ವೇಳೆ ಝೀ ನ್ಯೂಸ್ ಚಾನೆಲ್‌ ವಿಡಿಯೋ ತನ್ನದೇ ‘ಸೂಪರ್ ಎಕ್ಸ್‌ಕ್ಲೂಸಿವ್’ ಎಂದು ಹೇಳಿಕೊಂಡಿತ್ತು. ವಾಟರ್‌ಮಾರ್ಕ್‌ಗಳು, ಟಿಕ್ಕರ್‌ಗಳು ಮತ್ತು ಆನ್-ಸ್ಕ್ರೀನ್ ಟೆಕ್ಸ್‌ ಅನ್ನೂ ಹಾಕಿಕೊಂಡಿತ್ತು. ಆಫ್ರಿಕಾದಿಂದ ಭಾರತಕ್ಕೆ ಚಿರತೆಗಳನ್ನು ಸಾಗಿಸುವ ವಿಮಾನದೊಳಗೆ ಪ್ರವೇಶಿಸುವ ಅಪರೂಪದ ಅವಕಾಶ ತನಗೆ ದೊರೆತಿದೆ ಎಂಬಂತೆ ಬಿಂಬಿಸಿತ್ತು ಎಂದು ಸೇನ್ ಆರೋಪಿಸಿದ್ದಾರೆ.

ಝೀ ನ್ಯೂಸ್ ನನ್ನ ವಿಡಿಯೋವನ್ನು ಕದ್ದು ತನ್ನದು ಎಂದು ಹೇಳಿಕೊಂಡಿದೆ. ಇದರಿಂದ ವಿಡಿಯೋ ತೆಗೆದ ತನಗೆ ಸಿಗಬೇಕಿದ್ದ ಖ್ಯಾತಿ ಮತ್ತು ಹಣ ಎರಡೂ ನಷ್ಟವಾಗಿದೆ ಎಂದು ಸೇನ್ ಹೇಳಿದ್ದಾರೆ.

ಝೀ ನ್ಯೂಸ್ ವಿರುದ್ದ ಕಾನೂನು ಕ್ರಮ ಅಗತ್ಯವಾಗಿದೆ. ಏಕೆಂದರೆ, ಝೀ ನ್ಯೂಸ್ ಮೊದಲ ಬಾರಿಗೆ ಈ ರೀತಿ ಮಾಡುತ್ತಿಲ್ಲ. ಭಾರತೀಯ ಟಿವಿ ಚಾನೆಲ್‌ಗಳಲ್ಲಿ ಇದೊಂದು ದೊಡ್ಡ ರೋಗವೇ ಆಗಿದೆ. ಕ್ಯಾಮರಾಮ್ಯಾನ್‌ಗಳು ಕಷ್ಟಪಟ್ಟು ಸೆರೆ ಹಿಡಿದ ವಿಡಿಯೋಗಳನ್ನು ಹಣ ಅಥವಾ ಕನಿಷ್ಠ ಕ್ರೆಡಿಟ್ ಕೂಡ ಕೊಡದೆ ಚಾನೆಲ್‌ಗಳು ತಮ್ಮ ಸ್ವಂತದ್ದು ಎಂಬಂತೆ ಬಳಸಿಕೊಳ್ಳುತ್ತಿವೆ. ಇದಕ್ಕೆ ಅವರು ‘ಫೇರ್ ಯೂಸ್’ (fair use) ಎಂಬ ಹೆಸರು ಕೊಟ್ಟು ಸಮರ್ಥನೆ ಮಾಡಿಕೊಳ್ಳುತ್ತಾರೆ. ಆದರೆ, ಇದು ನಿಜವಾಗಿಯೂ ಫೇರ್ ಯೂಸ್ ಅಲ್ಲ, ಇದು ಸ್ಪಷ್ಟ ಕಳ್ಳತನ” ಎಂದು ಸೇನ್ ಹೇಳಿಕೊಂಡಿದ್ದಾರೆ.

ತನ್ನ ವಿಡಿಯೋವನ್ನು ಉದ್ದೇಶಪೂರ್ವಕವಾಗಿ ಕದ್ದು ಬಳಸಿಕೊಳ್ಳುವ ಮೂಲಕ ಝೀ ನ್ಯೂಸ್ ಹಕ್ಕುಸ್ವಾಮ್ಯ ಕಾಯ್ದೆಯ ಉಲ್ಲಂಘನೆ ಮಾತ್ರ ಮಾಡಿಲ್ಲ. ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ ಕಾಯ್ದೆಗಳನ್ನೂ ಉಲ್ಲಂಘಿಸಿದೆ ಎಂದು ಸೇನ್ ತಿಳಿಸಿದ್ದಾರೆ.

ಝೀ ನ್ಯೂಸ್ ನನ್ನ ಕೆಲಸವನ್ನು ಬಳಸಿಕೊಂಡಿದ್ದು ಇದೇ ಮೊದಲಲ್ಲ. 2014ರಲ್ಲಿ ಝೀ ನ್ಯೂಸ್ (ಬಂಗಾಳಿ) ಜಾದವ್‌ಪುರ ವಿಶ್ವವಿದ್ಯಾಲಯದ ಪ್ರತಿಭಟನೆಗಳ ಕುರಿತಾದ ಒಂದು ವರದಿಯಲ್ಲಿ ನನ್ನ ಒಂದು ಫೋಟೋವನ್ನು ಅನುಮತಿಯಿಲ್ಲದೆ ಪ್ರಕಟಿಸಿದೆ ಎಂದು ಹೇಳಿದ್ದಾರೆ.

ಝೀ ನ್ಯೂಸ್ ನನ್ನ ವಿಡಿಯೋವನ್ನು ಅನುಮತಿಯಿಲ್ಲದೆ ಬಳಸಿಕೊಂಡಿದೆ. ಈ ಬಗ್ಗೆ ಪರಿಹಾರ ಕೋರಿ ನಾನು ಅವರನ್ನು ಹಲವು ಬಾರಿ ಸಂಪರ್ಕಿಸಿದ್ದೇನೆ. ಎರಡು ಬಾರಿ ಅವರ ಕಚೇರಿ ತೆರಳಿ ಮಾತುಕತೆಯೂ ನಡೆಸಿದ್ದೇನೆ. ಕೊನೆಗೆ ಅವರು ಬಿಲ್ ಹಾಕು ಹಣ ಕೊಡುತ್ತೇವೆ ಎಂದು ಹೇಳಿದ್ದಾರೆ. ಅದಕ್ಕೆ 18 ಕೋಟಿ ಪರಿಹಾರ ಕೋರಿ ಮೊಕದ್ದಮೆ ಹೂಡಿದ್ದೇನೆ ಎಂದು ಸೇನ್ ತಿಳಿಸಿದ್ದಾರೆ.

ತಮ್ಮ ಮೊಕದ್ದಮೆಯಲ್ಲಿ, ಸೇನ್ ಅವರು ಝೀ ನ್ಯೂಸ್ ಅನುಮತಿಯಿಲ್ಲದೆ ತಮ್ಮ ವಿಶೇಷ ಚಿರತೆ ಸ್ಥಳಾಂತರ ದೃಶ್ಯಗಳನ್ನು ಪ್ರಸಾರ ಮಾಡಿದ್ದರಿಂದ ಉಂಟಾದ ಆರ್ಥಿಕ ಮತ್ತು ವೃತ್ತಿಪರ ನಷ್ಟಗಳ ಪಟ್ಟಿಯನ್ನು ವಿವರಿಸಿದ್ದಾರೆ.

ತಾನು ಸೆರೆಹಿಡಿದ ವಿಶೇಷ ವಿಡಿಯೋವನ್ನು ಮಾರಾಟ ಮಾಡುವ ಮೊದಲೇ ಝೀ ನ್ಯೂಸ್ ಸೂಪರ್ ಎಕ್ಸ್‌ಕ್ಲೂಸಿವ್ ಎಂದು ಪ್ರಸಾರ ಮಾಡಿದೆ. ಇದರಿಂದ ನನಗೆ ತುಂಬಾ ನಷ್ಟವಾಗಿದೆ. ಝೀ ನ್ಯೂಸ್ ವಿಡಿಯೋ ಪ್ರಸಾರ ಮಾಡುವ ಮೊದಲು ನಾನು ಎನ್‌ಡಿಟಿವಿಗೆ ವಿಡಿಯೋ ಮಾರಾಟ ಸಂಬಂಧ ರೂ. 1.25 ಲಕ್ಷಕ್ಕೆ ಒಪ್ಪಂದ ಮಾಡಿಕೊಂಡಿದ್ದೆ. ನಂತರ ಅದು ಕೈ ತಪ್ಪಿ ಹೋಯಿತು. ಇತರ ಚಾನೆಲ್‌ಗಳೂ ನನ್ನ ವಿಡಿಯೋ ಖರೀದಿಸುತ್ತಿತ್ತು. ಆದರೆ, ಝೀ ಪ್ರಸಾರ ಮಾಡಿದ್ದರಿಂದ ಯಾರೂ ನನ್ನ ವಿಡಿಯೋ ಖರೀದಿಸಲು ಮುಂದೆ ಬರಲಿಲ್ಲ ಎಂದು ಸೇನ್ ಹೇಳಿಕೊಂಡಿದ್ದಾರೆ.

ಕೋಲ್ಕತ್ತಾದ ವಾಣಿಜ್ಯ ನ್ಯಾಯಾಲಯವು ಈ ಮೊಕದ್ದಮೆಯನ್ನು ಒಪ್ಪಿಕೊಂಡಿದ್ದು, ಜನವರಿ 16ರಂದು ವಿಚಾರಣೆ ನಡೆಸಲಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಯುಪಿ: ತಂದೆ ಮತ್ತು ಮಾನಸಿಕ ಅಸ್ವಸ್ಥ ಮಗಳನ್ನು ಐದು ವರ್ಷ ಕೋಣೆಯಲ್ಲಿ ಕೂಡಿ ಹಾಕಿದ ಸೇವಕ ದಂಪತಿ: ತಂದೆ ಸಾವು, ಅಸ್ಥಿಪಂಜರದಂತೆ ಪತ್ತೆಯಾದ ಮಗಳು

ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯಲ್ಲಿ ನಿವೃತ್ತ ರೈಲ್ವೆ ಉದ್ಯೋಗಿ ಮತ್ತು ಅವರ ಮಾನಸಿಕ ಅಸ್ವಸ್ಥ ಮಗಳನ್ನು ಅವರ ಆರೈಕೆದಾರರು ಐದು ವರ್ಷಗಳ ಕಾಲ ಬಂಧಿಯಾಗಿಟ್ಟು ಚಿತ್ರಹಿಂಸೆ ನೀಡಿ, ಆ ವ್ಯಕ್ತಿಯ ಸಾವಿಗೆ ಕಾರಣವಾದ...

ಈಶಾನ್ಯ ಭಾರತ ನಾಗರಿಕರ ವಿರುದ್ಧದ ಜನಾಂಗೀಯ ಹಿಂಸಾಚಾರ: ಸುಪ್ರೀಂ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ

ಈಶಾನ್ಯ ರಾಜ್ಯಗಳು ಮತ್ತು ಇತರ ಗಡಿ ಪ್ರದೇಶಗಳ ನಾಗರಿಕರ ಮೇಲಿನ ಜನಾಂಗೀಯ ತಾರತಮ್ಯ ಮತ್ತು ಹಿಂಸಾಚಾರವನ್ನು ತಡೆಗಟ್ಟುವಲ್ಲಿ, ಪ್ರತಿಕ್ರಿಯಿಸುವಲ್ಲಿ ನಿರಂತರ ಸಾಂವಿಧಾನಿಕ ವೈಫಲ್ಯವನ್ನು ಪರಿಹರಿಸಲು ನ್ಯಾಯಾಂಗ ಹಸ್ತಕ್ಷೇಪವನ್ನು ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ...

ಎಸ್‌ಐಆರ್‌ ದೊಡ್ಡ ಹಗರಣ : ನೈಜ ಮತದಾರರನ್ನು ಕೈಬಿಟ್ಟರೆ ಚು.ಆಯೋಗದ ಕಚೇರಿಗೆ ಘೇರಾವ್ : ಮಮತಾ ಬ್ಯಾನರ್ಜಿ ಎಚ್ಚರಿಕೆ

ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆ ಪೂರ್ಣಗೊಂಡ ನಂತರ ಅಂತಿಮ ಮತದಾರರ ಪಟ್ಟಿಯಿಂದ ಒಬ್ಬನೇ ಒಬ್ಬ ಕಾನೂನುಬದ್ಧ ಮತದಾರರ ಹೆಸರನ್ನು ಅಳಿಸಿದರೆ, ದೆಹಲಿಯಲ್ಲಿರುವ ಚುನಾವಣಾ ಆಯೋಗದ ಕಚೇರಿಗೆ ಘೇರಾವ್ ಹಾಕುವುದಾಗಿ...

ಬೀದಿ ನಾಯಿ ಎಣಿಕೆ ಕಾರ್ಯಕ್ಕೆ ಶಾಲಾ ಶಿಕ್ಷಕರನ್ನು ನಿಯೋಜಿಸಿಲ್ಲ: ದೆಹಲಿ ಸರ್ಕಾರದ ಸ್ಪಷ್ಟನೆ

ನಗರದಲ್ಲಿ ಬೀದಿ ನಾಯಿಗಳ ಎಣಿಕೆಗೆ ಯಾವುದೇ ಶಾಲಾ ಶಿಕ್ಷಕರನ್ನು ನಿಯೋಜಿಸಲಾಗಿಲ್ಲ ಎಂದು ದೆಹಲಿ ಸರ್ಕಾರ ಸ್ಪಷ್ಟಪಡಿಸಿದೆ. ಶಿಕ್ಷಕರಿಗೆ ಜನಗಣತಿ ಸಂಬಂಧಿತ ಕರ್ತವ್ಯಗಳಿಗೆ ಮಾತ್ರ ನಿಯೋಜಿಸಲಾಗಿದೆ. ಬೀದಿ ನಾಯಿ ಸಂಬಂಧಿತ ವಿಷಯಗಳಿಗೆ ಸಂಬಂಧಿಸಿದಂತೆ ಶಿಕ್ಷಣ ಸಂಸ್ಥೆಗಳಿಗೆ...

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಎಚ್‌.ಡಿ ರೇವಣ್ಣ ಖುಲಾಸೆ

ಮನೆ ಕೆಲಸದ ಮಹಿಳೆಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜೆಡಿಎಸ್‌ ಶಾಸಕ ಎಚ್‌.ಡಿ ರೇವಣ್ಣ ಅವರನ್ನು ಬೆಂಗಳೂರಿನ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ಸೋಮವಾರ (ಡಿ.29) ಆರೋಪ ಮುಕ್ತಗೊಳಿಸಿ ಮಹತ್ವದ ಆದೇಶ ನೀಡಿದೆ. ಕಳೆದ ತಿಂಗಳು...

ಅಧಿಕಾರಕ್ಕೆ ಬಂದರೆ ಬಂಗಾಳವನ್ನು ನುಸುಳುಕೋರರಿಂದ ಮುಕ್ತಗೊಳಿಸುತ್ತೇವೆ: ಅಮಿತ್ ಶಾ

ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯ ನಂತರ ಪಕ್ಷವು ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ, ಪಶ್ಚಿಮ ಬಂಗಾಳವನ್ನು ನುಸುಳುಕೋರರಿಂದ ಮುಕ್ತಗೊಳಿಸುವುದು ಬಿಜೆಪಿಯ ಮೊದಲ ಕೆಲಸ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳವಾರ...

ಅಂಜೆಲ್ ಚಕ್ಮಾ ಜನಾಂಗೀಯ ಹತ್ಯೆ: ತ್ರಿಪುರಾದಲ್ಲಿ ತೀವ್ರಗೊಂಡ ಪ್ರತಿಭಟನೆ; ಮೇಣದಬತ್ತಿ ಮೆರವಣಿಗೆ

ಅಂಜೆಲ್ ಚಕ್ಮಾ ಜನಾಂಗೀಯ ಹತ್ಯೆ ಖಂಡಿಸಿ ತ್ರಿಪುರಾದಲ್ಲಿ ಪ್ರತಿಭಟನೆಗಳು, ಮೇಣದಬತ್ತಿ ಜಾಗೃತಿ ಮುಂದುವರೆದಿದೆ. ಹತ್ಯೆ ಸಂಬಂಧ ಪೊಲೀಸರು ಆರಂಭದಲ್ಲಿ ಎಫ್‌ಐಆರ್ ದಾಖಲಿಸುವಲ್ಲಿ ವಿಫಲರಾಗುವ ಮೂಲಕ ಅಪರಾಧದ ಸಾಕ್ಷಿಗಳನ್ನು ದುರ್ಬಲಗೊಳಿಸಲು ಪ್ರಯತ್ನಿಸಿದ್ದಾರೆ ಎಂದು ಅಖಿಲ...

ತಮಿಳುನಾಡು: ವಿಶ್ವವಿದ್ಯಾಲಯ ತಿದ್ದುಪಡಿ ಮಸೂದೆ ವಾಪಸ್ ಕಳುಹಿಸಿದ ದ್ರೌಪದಿ ಮುರ್ಮು: ಸ್ಟಾಲಿನ್ ಸರ್ಕಾರಕ್ಕೆ ಹಿನ್ನೆಡೆ

ಚೆನ್ನೈ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ತಮಿಳುನಾಡು ವಿಶ್ವವಿದ್ಯಾಲಯದ ಮದ್ರಾಸ್ ತಿದ್ದುಪಡಿ ಮಸೂದೆಯನ್ನು ಹಿಂದಿರುಗಿಸಿದ್ದಾರೆ, ಇದು ರಾಜ್ಯ ಸರ್ಕಾರಕ್ಕೆ ತನ್ನ ಉಪಕುಲಪತಿಯನ್ನು ನೇಮಿಸಲು ಅಧಿಕಾರ ನೀಡುತ್ತದೆ ಎಂದು ಅಧಿಕೃತ ಮೂಲಗಳು ಮಂಗಳವಾರ ತಿಳಿಸಿವೆ. ಏಪ್ರಿಲ್...

ಹುಬ್ಬಳ್ಳಿ ಮರ್ಯಾದೆಗೇಡು ಹತ್ಯೆ: ನೊಂದ ಕುಟಂಬವನ್ನು ಭೇಟಿಯಾದ ಮಾವಳ್ಳಿ ಶಂಕರ್

ಮಾದಿಗ ಸಮುದಾಯದ ಯುವಕನನ್ನು ಮದುವೆಯಾಗಿದ್ದಕ್ಕೆ ತಂದೆಯಿಂದಲೇ ಭೀಕರವಾಗಿ ಹತ್ಯೆಗೀಡಾದ ಗರ್ಭಿಣಿ ಯುವತಿ ಮಾನ್ಯ ಪಾಟೀಲ್ ಅವರ ಪತಿ ವಿವೇಕಾನಂದ ಮತ್ತು ಹಲ್ಲೆಗೆ ಒಳಗಾದ ಕುಟುಂಬದ ಸದಸ್ಯರನ್ನು ಹಿರಿಯ ದಲಿತ ನಾಯಕ ಮಾವಳ್ಳಿ ಶಂಕರ್...

ತಲವಾರು ವಿತರಣೆ : ಹಿಂದೂ ರಕ್ಷಾ ದಳದ 10 ದುಷ್ಕರ್ಮಿಗಳ ಬಂಧನ

ಉತ್ತರ ಪ್ರದೇಶದ ಗಾಝಿಯಾಬಾದ್‌ನ ಶಾಲಿಮಾರ್ ಗಾರ್ಡನ್ ಕಾಲೋನಿಯಲ್ಲಿ ತಲವಾರು ವಿತರಿಸಿದ ಆರೋಪದ ಮೇಲೆ ಹಿಂದೂ ರಕ್ಷಾ ದಳದ ಹತ್ತು ದುಷ್ಕರ್ಮಿಗಳನ್ನು ಪೊಲೀಸರು ಸೋಮವಾರ (ಡಿ.29) ಬಂಧಿಸಿದ್ದಾರೆ ಎಂದು ವರದಿಯಾಗಿದೆ. ಶಾಲಿಮಾರ್...