ರಾಜ್ಯದ 52 ಹೋಟೆಲ್‌ಗಳು ಇಡ್ಲಿ ತಯಾರಿಸಲು ಪಾಲಿಥಿನ್ ಹಾಳೆಗಳನ್ನು ಬಳಸುತ್ತಿವೆ ಎಂದು ರಾಜ್ಯ ಆಹಾರ ಸುರಕ್ಷತಾ ಇಲಾಖೆಯು ಗುರುವಾರ ಕಂಡುಹಿಡಿದಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಪಾಲಿಥಿನ್, ಅದರಲ್ಲೂ ವಿಶೇಷವಾಗಿ ತೆಳುವಾದ ಹಾಳೆಗಳು ಕ್ಯಾನ್ಸರ್ ಕಾರಕವಾಗಿದ್ದು, ಹೋಟೆಲ್ ಉದ್ಯಮದಲ್ಲಿ ಅದನ್ನು ಬಳಸಲು ಸರ್ಕಾರ ಅನುಮತಿಸುವುದಿಲ್ಲ ಎಂದು ಅವರು ಹೇಳಿದ್ದಾರೆ. ಇಡ್ಲಿ ತಯಾರಿಕೆಯಲ್ಲಿ
“ಆಹಾರ ಸುರಕ್ಷತಾ ಇಲಾಖೆಯು ಕರ್ನಾಟಕದಾದ್ಯಂತ 251 ಸ್ಥಳಗಳಲ್ಲಿ ಇಡ್ಲಿ ಮಾದರಿಗಳನ್ನು ಸಂಗ್ರಹಿಸಿತ್ತು. ಈ ಹಿಂದೆ ಬಟ್ಟೆಗಳನ್ನು ಬಳಸಿ ಇಡ್ಲಿಗಳನ್ನು ಬೇಯಿಸಲಾಗುತ್ತಿತ್ತು. ಆದರೆ ಇತ್ತೀಚೆಗೆ ಹೋಟೆಲ್‌ಗಳು ಪ್ಲಾಸ್ಟಿಕ್ ಬಳಸಲು ಪ್ರಾರಂಭಿಸಿವೆ ಎಂಬ ಮಾಹಿತಿ ನಮಗೆ ಸಿಕ್ಕಿತು. ಆದ್ದರಿಂದ ನಮ್ಮ ಅಧಿಕಾರಿಗಳು ವಿವಿಧ ಸ್ಥಳಗಳಿಗೆ ಹೋಗಿ ವಿಚಾರಣೆ ನಡೆಸಿದ್ದಾರೆ” ಎಂದು ದಿನೇಶ್ ಗುಂಡುರಾವ್ ವರದಿಗಾರರಿಗೆ ತಿಳಿಸಿದ್ದಾರೆ.
“251 ಹೋಟೆಲ್‌ಗಳಲ್ಲಿ 52 ಹೋಟೆಲ್‌ಗಳು ಪ್ಲಾಸ್ಟಿಕ್ ಬಳಸುತ್ತಿದ್ದವು. ಈ ಪ್ಲಾಸ್ಟಿಕ್ ಕ್ಯಾನ್ಸರ್ ಕಾರಕವಗಿದ್ದು, ಹೋಟೆಲ್ ಮಾಲೀಕರು ಇದನ್ನು ಎಂದಿಗೂ ಮಾಡಬಾರದಿತ್ತು. ಪ್ಲಾಸ್ಟಿಕ್‌ನಲ್ಲಿನ ಕ್ಯಾನ್ಸರ್ ಕಾರಕ ಅಂಶಗಳು ಇಡ್ಲಿಗೆ ಪ್ರವೇಶಿಸಬಹುದು” ಎಂದು ಸಚಿವರು ಹೇಳಿದ್ದಾರೆ. ಇಡ್ಲಿ ತಯಾರಿಕೆಯಲ್ಲಿ
ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದ್ದು, ಹೊಟೇಲ್‌ಗಳಿಗೆ ಸ್ಪಷ್ಟ ಸಂದೇಶವನ್ನು ರವಾನಿಸಲಾಗುವುದು ಮತ್ತು ಆಹಾರ ತಯಾರಿಕೆ ಪ್ರಕ್ರಿಯೆಯಲ್ಲಿ ಪ್ಲಾಸ್ಟಿಕ್ ಅನ್ನು ನಿಷೇಧಿಸಲಾಗುವುದು ಎಂದು ಸಚಿವ ಗುಂಡುರಾವ್ ಹೇಳಿದ್ದಾರೆ. “ಯಾರಾದರೂ ಪ್ಲಾಸ್ಟಿಕ್‌ನಲ್ಲಿ ಇಡ್ಲಿ ಮಾಡುತ್ತಿದ್ದರೆ ಅದನ್ನು ನಮ್ಮ ಗಮನಕ್ಕೆ ತರಬೇಕು” ಎಂದು ಅವರು ಕೇಳಿಕೊಂಡಿದ್ದಾರೆ.
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಗ್ಯಾರಂಟಿಗೆ ಬಳಸಿರುವ ದಲಿತರ ಹಣ ಕೂಡಲೇ ಹಿಂದಿರುಗಿಸಬೇಕೆಂದು ದಸಂಸ ಒಕ್ಕೂಟ ಆಗ್ರಹ
ಗ್ಯಾರಂಟಿಗೆ ಬಳಸಿರುವ ದಲಿತರ ಹಣ ಕೂಡಲೇ ಹಿಂದಿರುಗಿಸಬೇಕೆಂದು ದಸಂಸ ಒಕ್ಕೂಟ ಆಗ್ರಹ

