Homeಮುಖಪುಟಹಬ್ಬಹರಿದಿನದೊಂದಿಗೆ ಜೀವ ವೈವಿಧ್ಯತೆಯ ಸಂಭ್ರಮ: ಕೆ ಸಿ ರಘು

ಹಬ್ಬಹರಿದಿನದೊಂದಿಗೆ ಜೀವ ವೈವಿಧ್ಯತೆಯ ಸಂಭ್ರಮ: ಕೆ ಸಿ ರಘು

- Advertisement -
- Advertisement -

ನಮ್ಮಲ್ಲಿ ಅನೇಕ ಸಂಪ್ರದಾಯಗಳು, ಹಬ್ಬಹರಿದಿನಗಳ ಧಾರ್ಮಿಕ ಆಚರಣೆಗಳು ಕೂಡಾ ಪ್ರಕೃತಿ, ಪರಿಸರ ಮತ್ತು ನಭೋಮಂಡಲದ ಆಗುಹೋಗುಗಳನ್ನೂ, ಬದಲಾವಣೆಗಳನ್ನೂ ಅವಲಂಬಿಸಿ ಆಚರಿಸುವಂತದ್ದಾಗಿವೆ. ಸೂರ್ಯಕೇಂದ್ರಿತ ಈ ಮಂಡಲದಲ್ಲಿ, ಭೂಮಿ ಮತ್ತು ಸೂರ್ಯನ ನಡುವೆ ನಡೆವ ಪಥ ಚಲನೆಯಿಂದ ಭೂಮಿಯ ಪ್ರತಿಯೊಂದು ಜೀವಿಯ ಮೇಲೂ ಮಹತ್ತರವಾದ ಬದಲಾವಣೆಗಳಾಗುತ್ತವೆ. ನಮ್ಮ ಪ್ರತಿಯೊಂದು ಜೀವಕೋಶದಲ್ಲೂ ಒಂದು ಜೈವಿಕ ಗಡಿಯಾರವುಂಟು. ಆ ಗಡಿಯಾರ ಸೂರ್ಯನ ಹುಟ್ಟು ಮತ್ತು ಮುಳುಗುವಿಕೆಗೆ ತಕ್ಕಂತೆ ನಡೆಯುತ್ತಿರುತ್ತದೆ ಎಂದು ಆಧುನಿಕ ಜೀವಶಾಸ್ತ್ರ ಹೇಳುತ್ತದೆ. ಇದನ್ನು ಸಿರ್ಕೇಡಿಯನ್ ರಿದಮ್ ಎಂದು ಕರೆಯುವುದು. ಅದರ ಆಧಾರದ ಮೇಲೆ ಮನುಷ್ಯನ ಆರೋಗ್ಯ ಎಷ್ಟು ಅವಲಂಬಿಸಿದೆ ಎನ್ನುವ ಅಧ್ಯಯನ ಜೀವಶಾಸ್ತ್ರದಲ್ಲಿ ಒಂದು ಹೊಸ ಶಾಖೆಯೇ ಆಗಿದೆ.

ನಮ್ಮ ಮೆದುಳಿಗೂ ಸೂರ್ಯನ ಬೆಳಕಿಗೂ ತನ್ನದೇ ಆದ ರೀತಿಯಲ್ಲಿ ಸಂಪರ್ಕವಿದೆ ಎಂದು ತಿಳಿದಿರುವ ಮನುಷ್ಯ ಅದನ್ನು ಬೆಳಕಿನ ಗುಣಾನುಶಾಸ್ತ್ರ (Optogenetic) ಎಂದು ನಾಮಕರಣ ಮಾಡಿದ. ನಮ್ಮ ಆಹಾರದಲ್ಲಿ ಅನೇಕ ಪೌಷ್ಟಿಕಾಂಶಗಳ ಪ್ರಮಾಣ ಮತ್ತು ಗುಣ, ಸೌರಶಕ್ತಿಯ ಪ್ರಖರತೆಯನ್ನು ಅವಲಂಬಿಸಿರುತ್ತದೆ. ಉದಾಹರಣೆಗೆ ಸೂರ್ಯಕಾಂತಿ ಬೀಜದಿಂದ ತಯಾರಿಸುವ ಎಣ್ಣೆಯಲ್ಲಿನ ಅಂಶಗಳಾದ ಲಿನೋಲೀಕ್ ಆಮ್ಲ ಶೇ.20ರಷ್ಟು ಕಿರಣಗಳ ಪ್ರಖರತೆಯನ್ನು ಅವಲಂಬಿಸಿ ಹೆಚ್ಚು ಅಥವಾ ಕಡಿಮೆ ಆಗಬಹುದು. ನಮ್ಮ ದೇಹ ಅತ್ಯಂತ ಸುಲಭವಾಗಿ ದಕ್ಕುವ ಬಿಸಿಲಿಗೆ ಮೈಯೊಡ್ಡಿ ಸೂರ್ಯನ ಕಿರಣಗಳಿಂದ ಚರ್ಮದಲ್ಲಿರುವ ಕೊಲೆಸ್ರ್ಟಾಲನ್ನು ಕೋಲಿಕ್ಯಾಲ್ಸಿಫೆರಾಲ್ ಅಂದರೆ ವಿಟಮಿನ್ ಡಿ ಆಗಿ ಪರಿವರ್ತಿಸಿ ಮೂಳೆಯನ್ನು ಗಟ್ಟಿ ಮಾಡಿಕೊಳ್ಳುತ್ತದೆ. ಬೇಯಿಸದಿರುವ ಅಥವಾ ಸೂರ್ಯನಿಂದಲೇ ಬೇಯಿಸಲ್ಪಟ್ಟ ಸ್ವಾಭಾವಿಕ ಆಹಾರ ಅರ್ಧಕ್ಕೆ ಅರ್ಧದಷ್ಟಿದ್ದಲ್ಲಿ ಉತ್ತಮ ಆರೋಗ್ಯಕ್ಕೆ ಅತ್ಯಂತ ಪೂರಕವೆಂದು ಈಗ ತಿಳಿದಿರುವ ಸಂಗತಿ.

ಒಂದು ರೀತಿಯಲ್ಲಿ ನಾವು ಸೌರಶಕ್ತಿಯನ್ನು ರೂಪಾಂತರಗೊಳಿಸುವ ವಾಹಕಗಳಷ್ಟೇ ಸರಿ. ಥರ್ಮೋಡೈನಮಿಕ್ಸ್ ಪ್ರಕಾರ ಶಕ್ತಿಯನ್ನು ಉತ್ಪಾದಿಸಲು ಅಥವಾ ನಶಿಸಲು ಸಾಧ್ಯವಿಲ್ಲ. ಅದೇನಿದ್ದರೂ ಒಂದು ರೂಪದಿಂದ ಇನ್ನೊಂದು ರೂಪಕ್ಕೆ ಬದಲಾವಣೆಯಾಗುತ್ತದೆ ಮಾತ್ರ. ಇದನ್ನೇ ಆಲ್ಬರ್ಟ್ ಐನ್ಸ್ಟೈನ್ ಶಕ್ತಿ ಮತ್ತು ದ್ರವ್ಯ ಎರಡೂ ಒಂದೇ ನಾಣ್ಯದ ಎರಡು ಮುಖಗಳೆಂದು ತನ್ನ ಹೆಸರಾಂತ e=mc2 ಸೂತ್ರದಲ್ಲಿ ತಿಳಿಸಿದ.

ಈ ರೀತಿ ವಾಸ್ತವವಾಗಿ ಭೌತಶಾಸ್ತ್ರದ ದೃಷ್ಟಿಯಲ್ಲೇ ಜಗತ್ತನ್ನು ನೋಡಿದರೆ ರಸ, ರುಚಿ, ಸತ್ವ, ಆನಂದಗಳು ನಮ್ಮ ಬದುಕಿಗೆ ಬೆಲೆಯೇ ಇಲ್ಲದಂತೆ ಕಾಣಬಹುದು. ಕೇವಲ ಶಕ್ತಿಯೇ ದೇಹಕ್ಕೆ ಸಾಕು ಎಂದು, ಮೊಬೈಲ್ ಫೋನ್ ಚಾರ್ಜ್ ಮಾಡಿಕೊಂಡಂತೆ ನಾವು ಶಕ್ತಿಯನ್ನು ಬರಿಸಿಕೊಳ್ಳಲಾಗುವುದಿಲ್ಲ. ಕೊನೆಗೆ ನಮಗೆ ಬೇಕಾಗಿರುವುದು ಶಕ್ತಿಯೇ ಆದರೂ ಸಹ ಈ ಭೂಮಿಯ ಸ್ವಾರಸ್ಯ ಅಡಗಿರುವುದು ಸೂಕ್ಷ್ಮ ವಿಶಿಷ್ಟ ಅನುಭವದ ಆಧಾರದ ಮೇಲೆ. ನಮ್ಮ ಮೂಗು ಮತ್ತು ನಾಲಿಗೆಗೆ ಲಕ್ಷಾಂತರ ಸ್ವಾದಗಳನ್ನು ಗ್ರಹಿಸುವ ಶಕ್ತಿಯೇ ಇದಕ್ಕೆ ಸಾಕ್ಷಿ. ಹಿಂದಿನವರು ಷಡ್ರಸಗಳನ್ನು, ಸಪ್ತಸ್ವರಗಳನ್ನು ಗುರುತಿಸಿದರೂ ಅವುಗಳ ಅಂತರಂಗದಲ್ಲಿ ಗುರುತಿಸಲಾಗದ ಮಿಲಿಯಗಟ್ಟಲೆ ವಿಭಿನ್ನ ನೋಟ್‌ಗಳನ್ನು ಅನುಭವದಲ್ಲಿ ಕಾಣಬಹುದು. ಇವುಗಳ ಅನುಭವಕ್ಕೆ ಒಂದು ರೀತಿಯಲ್ಲಿ ಹಬ್ಬ ಹರಿದಿನಗಳು ಅತ್ಯಂತ ಪ್ರಯೋಜನಕಾರಿಯಾಗಿ ಒದಗಿಬರುತ್ತವೆ. ಯಾರೋ ಒಬ್ಬ ನಾನು ಅನೇಕ ವರ್ಷ ನಾಸ್ತಿಕನಾಗಿದ್ದೆ, ಆಗ ಹಬ್ಬಗಳನ್ನು ತಿಳಿದು ಆಸ್ತಿಕನಾದೆ ಎನ್ನುತ್ತಾನೆ.

ಎಲ್ಲ ರೀತಿಯ ಬಹುತರದ ರಸ, ರುಚಿಗಳನ್ನು ಮತ್ತು ತಿಳಿದ ಮತ್ತು ಇನ್ನೂ ತಿಳಿಯದ ಅಗಾಧವಾದ ಪೌಷ್ಟಿಕಾಂಶಗಳನ್ನು ಪಡೆಯಲು ಒಂದೇ ಒಂದು ಮಾರ್ಗವೆಂದರೆ ನಮ್ಮ ಆಹಾರದಲ್ಲಿ ವೈವಿಧ್ಯತೆಯನ್ನು ಉಳಿಸಿಕೊಳ್ಳುವುದು. ಎಲ್ಲಿ ಆಹಾರದ ವೈವಿಧ್ಯತೆ ಇರುವುದೋ ಅಲ್ಲಿ ನಮಗೆ ಬೇಕಾದ ಪೌಷ್ಟಿಕಾಂಶಗಳು ತಿಳಿಯದೇ ಬಂದೊದಗುತ್ತವೆ. ಅದಕ್ಕೆ ಒಬ್ಬ ಹೀಗೆನ್ನುತ್ತಾನೆ: ‘Let food be part of your diet plan!’ ಎಂದು. ಆಹಾರವಿದ್ದರೆ ಪೌಷ್ಟಿಕಾಂಶ. ವೈವಿಧ್ಯತೆ ಇದ್ದರೆ ಅಗಾಧವಾದ ಸೂಕ್ಷ್ಮ ಪೌಷ್ಟಿಕಾಂಶಗಳೆಲ್ಲವನ್ನೂ ಆನಂದಮಯ ಅನುಭವದೊಂದಿಗೆ ಪಡೆದುಕೊಳ್ಳಬಹುದು. ಆಹಾರ ವೈವಿಧ್ಯತೆ ನೂರಿದ್ದರೆ ಅಡುಗೆಯ ವೈವಿಧ್ಯತೆ ಸಾವಿರವಿರಬಹುದು. ನಾವು ಅನ್ನವೊಂದರಲ್ಲಿ ಎಷ್ಟು ರೀತಿಯ ತಿನಿಸುಗಳನ್ನು ಮಾಡಬಹುದು ಎಂದು ಊಹಿಸಿದರೆ ಸಾಕು! ಆದರೆ ವೈವಿಧ್ಯತೆ ಎನ್ನುವುದು ಕೇವಲ ಬಿಳಿ ಅನ್ನವನ್ನು ಹತ್ತಾರು ರೀತಿಯ ಮಸಾಲಪದಾರ್ಥಗಳಿಂದ ರುಚಿಕರಗೊಳಿಸುವುದಷ್ಟೇ ಅಲ್ಲ. ಅಡುಗೆಯ ಕಲೆಯ ದೃಷ್ಟಿಯಿಂದ ಅದನ್ನು ಒಪ್ಪಿಕೊಳ್ಳಬಹುದಾದರೂ ವೈವಿಧ್ಯತೆಯ ದೃಷ್ಟಿಯಿಂದ ಭತ್ತದಲ್ಲೇ ಇರುವ ಸಾವಿರಾರು ತಳಿಗಳನ್ನು ಬಳಸಿದಲ್ಲಿ ಅಥವಾ ಇನ್ನೂ ಹತ್ತಾರು ಏಕದಳ ಧಾನ್ಯಗಳನ್ನು ಬಳಸಿದ್ದಲ್ಲಿ ಅದರ ಅನುಭವವೇ ಬೇರೆ! ಸಾಮಾನ್ಯವಾಗಿ ಇಂದು ಬೇಕರಿಗೆ ಹೋದರೆ ತರತರದ ಖಾದ್ಯಗಳನ್ನು ಅಲ್ಲಿ ಕಾಣಬಹುದು. ಆದರೆ ಅವೆಲ್ಲಕ್ಕೂ ಮೂಲ ಸಾಮಗ್ರಿ ಮೈದಾ, ಡಾಲ್ಡಾ ಮತ್ತು ಸಕ್ಕರೆಯೇ ಆಗಿದ್ದರೆ ಆ ವೈವಿಧ್ಯತೆ ಕೇವಲ ತೋರಿಕೆಯದ್ದು ಮಾತ್ರ ಎನ್ನುವುದು ಮರೆಯಬಾರದು.

ಬುಡಕಟ್ಟು ಜನಾಂಗದವರ ದೇಹದಲ್ಲಿನ ಸೂಕ್ಷ್ಮಜೀವಜಗತ್ತು ಪ್ರತೀ ಋತುವಿಗೂ ಸಂಪೂರ್ಣವಾಗಿ ಬದಲಾಗುತ್ತದೆ. ಆದರೆ ನಾಗರಿಕರೆನ್ನುವ ನಮಗೆ, ಏಕಮುಖಿಯಾದ ಆಹಾರ ಪದ್ಧತಿಯಿಂದ, ಋತುವಿಗೆ ತಕ್ಕಂತೆ ಅಂತಹ ಬದಲಾವಣೆ ಆಗದಿರುವುದು, ನಮ್ಮ ಅನಾರೋಗ್ಯಕ್ಕೆ ಒಂದು ರೀತಿಯಲ್ಲಿ ಬುನಾದಿ ಎನ್ನಬಹುದು. ಸಂಕ್ರಾಂತಿ ಕಾಲದಲ್ಲಿ ಪ್ರಾಕೃತಿಕ ಬದಲಾವಣೆಗೆ ತಕ್ಕಂತೆ ಬದಲಾವಣೆಯನ್ನು ತಂದುಕೊಳ್ಳುವುದು ನಮ್ಮ ಹಿರೀಕರು ವೈಜ್ಞಾನಿಕವಾಗಿ ಸಂಪ್ರದಾಯಗಳ ಮೂಲಕ ಅಳವಡಿಸಿಕೊಂಡು ಬಂದಿರುವುದನ್ನು ನಾವು ಗಮನಿಸಬಹುದು. ಇದನ್ನು ಆಯುರ್ವೇದದಲ್ಲಿ ಋತುಬುಕ್ ಹಿತಬುಕ್ ಮತ್ತು ಮಿತಬುಕ್ ಎಂದೆಲ್ಲಾ ಹೇಳುವುದುಂಟು.

ಚೈನಾದೇಶ ಇತ್ತೀಚೆಗೆ ಒಂದು ಹೊಸ ಬೀಜಸಂಗ್ರಹಣಾ ಮತ್ತು ಸಂರಕ್ಷಣಾ ಕೇಂದ್ರವೊಂದನ್ನು ಆರಂಭಿಸಿದ ವರದಿ ಬಂದಿದೆ. ಅಲ್ಲಿಯವರು ಮುಂದಿನ ಪೀಳಿಗೆಗಾಗಿ ಸುಮಾರು ಹದಿನೈದು ಲಕ್ಷ ವಿವಿಧ ರೀತಿಯ ಆಹಾರದ ಬೀಜಗಳನ್ನು ಸಂಗ್ರಹಿಸಿದ್ದಾರೆ. ಹಿಂದೆ ಸ್ವಾಲ್ಬಾರ್ಡ್ ಎನ್ನುವ ಇದೇ ರೀತಿಯ ಬೀಜಸಂರಕ್ಷಣಾ ಬ್ಯಾಂಕ್ ಒಂದನ್ನು ನಾರ್ವೆ ದೇಶದಲ್ಲಿ ಕಟ್ಟಿರುವುದು ನಮಗೆಲ್ಲಾ ತಿಳಿದಿತ್ತು. ಅಲ್ಲಿ ಸುಮಾರು ಹತ್ತು ಲಕ್ಷ ವೈವಿಧ್ಯಮಯ ಬೀಜಗಳ ಸಂಗ್ರಹವಿದೆ ಎನ್ನುತ್ತಾರೆ. ಚೈನಾದೇಶ ಈ ದೃಷ್ಟಿಯಿಂದ ಅತ್ಯಂತ ದೂರದೃಷ್ಟಿ ಉಳ್ಳದ್ದು ಎನ್ನಬಹುದಾಗಿದೆ. ಏಕೆಂದರೆ ಇನ್ನ್ಯಾವುದೋ ಗ್ರಹಕ್ಕೆ ಮುಂದೆ ಮನುಕುಲ ಹಾರಬಹುದೋ ಇಂದು ತಿಳಿಯದು. ಆದರೆ ಈ ಭೂಮಿಯ ಮೇಲೆ ಬಹಳ ಕಾಲ ಬದುಕಬೇಕೆಂದಿದ್ದರೆ ನಮ್ಮ ಆಹಾರದ ವೈವಿಧ್ಯತೆಯನ್ನು ಬೀಜರೂಪದಲ್ಲಿ, ಆಹಾರ ರೂಪದಲ್ಲಿ ಮತ್ತು ಅಡುಗೆಯ ರೂಪದಲ್ಲಿ ಉಳಿಸಿಕೊಳ್ಳುವುದು ಅತ್ಯಂತ ಸೂಕ್ತ. ದುರಂತವೆಂದರೆ, ಸಾಮಾನ್ಯವಾಗಿ ನಮಗೆ ಇಂತಹ ವಿಷಯಗಳು, ಅತ್ಯಂತ ಉನ್ನತ ವಿಜ್ಞಾನ ಮತ್ತು ತಂತ್ರಜ್ಞಾನವೆಂದು ಇಲಾನ್ ಮಸ್ಕ್‌ನ ಎಲೆಕ್ಟ್ರಿಕ್ ಕಾರ್ ಕಂಡು ವಿಸ್ಮಯಗೊಂಡಂತೆ ಅನ್ನಿಸುವುದಿಲ್ಲ.

ಆಹಾರದ ವಿಷಯ ನಿಜವಾಗಿಯೂ ನಮ್ಮ ಆಂತರ್ಯದ ವಿಷಯವಾಗಿದೆ. ಈ ಜೀವಿ ಎಷ್ಟುಕಾಲ ಇಲ್ಲಿ ಬದುಕಬಹುದು ಎನ್ನುವುದು ಈ ಆಹಾರ ವೈವಿಧ್ಯತೆಯನ್ನೇ ಆಧರಿಸಿದೆ. ಹೀಗಾಗಿ ಸಂಕ್ರಾಂತಿಯಂತಹ ಹಬ್ಬ ಹರಿದಿನಗಳನ್ನು ಸಂಭ್ರಮದಿಂದ ಆಚರಿಸುವುದರೊಂದಿಗೆ ಮನುಕುಲದ ಬಹುಕಾಲದ ಇರುವಿಕೆ ಮತ್ತು ಒಳಿತಿಗೆ ಆಳವಾದ ವಿಚಾರಗಳನ್ನು ಅಳವಡಿಸಿಕೊಳ್ಳುವುದು ಆಚರಣೆಗೆ ಇನ್ನೂ ಹೆಚ್ಚು ಮೆರಗು ನೀಡುತ್ತದೆ.

ಕೆ.ಸಿ. ರಘು

ಕೆ.ಸಿ. ರಘು ಅವರು ನಾಡಿನ ಹೆಸರಾಂತ ಆಹಾರ ತಜ್ಞರು, ಅನೇಕ ವರ್ಷಗಳ ಕಾಲ ‘ಫುಡ್ ಅಂಡ್ ನ್ಯೂಟ್ರೀಷನ್ ವರ್ಲ್ಡ್’ ಎಂಬ ಆಂಗ್ಲ ನಿಯತಕಾಲಿಕದ ಸಂಪಾದಕರಾಗಿದ್ದರು. ಅನೇಕ ದಿನಪತ್ರಿಕೆಗಳಲ್ಲಿ ಆಹಾರ ಸಂಸ್ಕೃತಿಗಳ ಹಿಂದಿರುವ ರಾಜಕೀಯ, ಸಂಸ್ಕೃತಿ, ಸಾಮಾಜಿಕ ಆಯಾಮಗಳನ್ನು ಕುರಿತು ಅಂಕಣಗಳನ್ನು ಬರೆಯುತ್ತಿದ್ದಾರೆ.


ಇದನ್ನೂ ಓದಿ: ನೀವು ಯಾರ ಪರ?: ಸುಪ್ರೀಂ ಕೋರ್ಟ್ ಮತ್ತು ಕೇಂದ್ರ ಸಚಿವರಿಗೆ ರಕ್ತದಲ್ಲಿ ಪತ್ರ ಬರೆದ ರೈತರು!
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...