Homeಮುಖಪುಟಪಿಎಂ ಕೇರ್ಸ್ ಸರ್ಕಾರದ ನಿಯಂತ್ರಣದಲ್ಲಿಲ್ಲ, ಅದೊಂದು ಚಾರಿಟಬಲ್ ಟ್ರಸ್ಟ್: ಕೇಂದ್ರ ಸರ್ಕಾರ ಅಫಿಡವಿಟ್‌

ಪಿಎಂ ಕೇರ್ಸ್ ಸರ್ಕಾರದ ನಿಯಂತ್ರಣದಲ್ಲಿಲ್ಲ, ಅದೊಂದು ಚಾರಿಟಬಲ್ ಟ್ರಸ್ಟ್: ಕೇಂದ್ರ ಸರ್ಕಾರ ಅಫಿಡವಿಟ್‌

- Advertisement -
- Advertisement -

ತುರ್ತು ಪರಿಸ್ಥಿತಿಗಳಲ್ಲಿ ಪ್ರಧಾನ ಮಂತ್ರಿಗಳ ನಾಗರಿಕ ನೆರವು ಮತ್ತು ಪರಿಹಾರ (ಪಿಎಂ ಕೇರ್ಸ್) ನಿಧಿಯನ್ನು ಸಾರ್ವಜನಿಕ ಚಾರಿಟಬಲ್ ಟ್ರಸ್ಟ್ ಆಗಿ ಸ್ಥಾಪಿಸಲಾಗಿದೆ. ಇದನ್ನು ಸಂವಿಧಾನ ಅಥವಾ ಸಂಸದೀಯ ಕಾನೂನಿನ ಅಡಿಯಲ್ಲಿ ರಚಿಸಲಾಗಿಲ್ಲ ಎಂದು ಕೇಂದ್ರ ಸರ್ಕಾರವು ದೆಹಲಿ ಹೈಕೋರ್ಟ್‌ಗೆ ಅಫಡವಿಟ್‌ ಸಲ್ಲಿಸಿದೆ.

ಕೊರೊನಾ ವೈರಸ್ ಸಾಂಕ್ರಾಮಿಕದ ನಂತರ, “ಯಾವುದೇ ರೀತಿಯ ತುರ್ತು ಅಥವಾ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸಲು ಮೀಸಲಾದ ರಾಷ್ಟ್ರೀಯ ನಿಧಿ” ಎಂದು ಪಿಎಂ ಕೇರ್ಸ್‌ ಫಂಡ್ ಅನ್ನು ಮಾರ್ಚ್ 2020ರಲ್ಲಿ ಸ್ಥಾಪಿಸಲಾಯಿತು.

ಪಿಎಂ ಕೇರ್ಸ್ ನಿಧಿಯ ಕಾರ್ಯನಿರ್ವಹಣೆಯಲ್ಲಿ ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಸಂವಿಧಾನದ 12 ನೇ ವಿಧಿಯ ಅಡಿಯಲ್ಲಿ ಅದನ್ನು ‘ಸರ್ಕಾರ’ ಎಂದು ಘೋಷಿಸಲು ಕೋರಿದ ಮನವಿಗೆ ಪ್ರತಿಕ್ರಿಯೆಯಾಗಿ ಕೇಂದ್ರವು ಅಫಿಡವಿಟ್ ಸಲ್ಲಿಸಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“‘ಯಾವುದೇ ರೀತಿಯಲ್ಲಿ ಟ್ರಸ್ಟ್‌ನ ಕಾರ್ಯನಿರ್ವಹಣೆಯ ಮೇಲೆ ಕೇಂದ್ರ ಸರ್ಕಾರ ಅಥವಾ ಯಾವುದೇ ರಾಜ್ಯ ಸರ್ಕಾರ/ಗಳ ನೇರ ಅಥವಾ ಪರೋಕ್ಷವಾದ ಯಾವುದೇ ನಿಯಂತ್ರಣವಿಲ್ಲ” ಎಂದು ಅಫಿಡವಿಟ್ ಹೇಳಿದೆ.

“ಮಾಹಿತಿ ಹಕ್ಕು ಕಾಯಿದೆಯಡಿಯಲ್ಲಿ ಮಾಹಿತಿ ನೀಡಲು ಫಿಎಂ ಕೇರ್ಸ್ ಫಂಡ್ ಸಾರ್ವಜನಿಕ ಸಂಸ್ಥೆಯಲ್ಲ” ಎಂದು ಸರ್ಕಾರ ಪುನರುಚ್ಚರಿಸಿದೆ, “ಆದ್ದರಿಂದ ಅದನ್ನು ಪರಿಶೀಲನೆಗೆ ತೆಗೆದುಕೊಳ್ಳಬಾರದು” ಎಂದು ಸರ್ಕಾರ ವಾದಿಸಿದೆ.

“ವ್ಯಕ್ತಿಗಳು ಮತ್ತು ಸಂಸ್ಥೆಗಳಿಂದ ಸ್ವಯಂಪ್ರೇರಿತ ದೇಣಿಗೆಗಳನ್ನು ಮಾತ್ರ ನಿಧಿ ಸ್ವೀಕರಿಸುತ್ತದೆ” ಎಂದು ಸರ್ಕಾರ ಹೇಳಿದೆ. ಆದರೆ ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಶ್ಯಾಮ್ ದಿವಾನ್, “ಉಪರಾಷ್ಟ್ರಪತಿಗಳಂತಹ ಸರ್ಕಾರದ ಭಾಗವಾಗಿರುವವರು ದೇಣಿಗೆ ನೀಡುವಂತೆ ರಾಜ್ಯಸಭಾ ಸದಸ್ಯರಲ್ಲಿ ಮನವಿ ಮಾಡಿದ್ದರು” ಎಂದು ಉಲ್ಲೇಖಿಸಿದ್ದಾರೆ.

“ಸರ್ಕಾರ ಭಾಗವಲ್ಲದಿದ್ದರೆ ಸರ್ಕಾರಿ ಚಿಹ್ನೆಗಳು ಅಥವಾ ಸರ್ಕಾರಿ ವೆಬ್‌ಸೈಟ್ ಹೊಂದಲು ಸಾಧ್ಯವಿಲ್ಲ. ಇದರಿಂದಾಗಿ ಸಾರ್ವಜನಿಕರು ನಿಮ್ಮನ್ನು ‘ಸರ್ಕಾರ’ ಎಂದು ಭಾವಿಸುತ್ತಾರೆ” ಎಂದು ತಿಳಿಸಿದ್ದಾರೆ.

ಏನಿದು ಅರ್ಜಿ?

ಸರ್ಕಾರ ಸ್ಥಾಪಿಸಿದ ಮತ್ತು ನಿರ್ವಹಿಸುವ ನಿಧಿಯನ್ನು ಹಿರಿಯ ಸರ್ಕಾರಿ ಅಧಿಕಾರಿಗಳು ಪ್ರತಿನಿಧಿಸುತ್ತಿದ್ದಾರೆ ಎಂದು ಅರ್ಜಿದಾರರು ವಾದಿಸಿದ್ದಾರೆ.

ನಿಧಿಯು ತನ್ನ ವೆಬ್‌ಸೈಟ್‌ಗಾಗಿ “gov.in” ಡೊಮೇನ್ ಹೆಸರು, ರಾಷ್ಟ್ರೀಯ ಲಾಂಛನ ಮತ್ತು “ಪ್ರಧಾನಿ” – ಎಂಬ ಪದಗಳನ್ನು ಬಳಸಿದೆ. ಸರ್ಕಾರಿ ಸಂಪನ್ಮೂಲಗಳನ್ನು ಒಳಗೊಂಡಿದೆ. ಅಧಿಕೃತ ಮತ್ತು ಅನಧಿಕೃತ ಸಂವಹನಗಳಲ್ಲಿ ತನ್ನನ್ನು ಸರ್ಕಾರವೆಂಬಂತೆ ಬಿಂಬಿಸಿಕೊಳ್ಳಲಾಗಿದೆ. ಪಿಎಂ ಕೇರ್ಸ್ ಫಂಡ್ ಕಚೇರಿಯು ಪ್ರಧಾನ ಮಂತ್ರಿ ಕಚೇರಿಯಾಗಿದೆ. ಈ ರೀತಿಯಲ್ಲಿ ನಿಧಿಯನ್ನು ಪ್ರಸ್ತುತ ಪಡಿಸಿದ ಫಲವಾಗಿ ಅಪಾರ ದೇಣಿಗೆ ದೊರೆತಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಪಿಎಂ ಕೇರ್ಸ್ ಫಂಡ್ ವೆಬ್‌ಸೈಟ್ ರಚಿಸಿದ ನಾಲ್ಕು ದಿನಗಳಲ್ಲಿ 3,076.62 ಕೋಟಿ ರೂಪಾಯಿ ಸಂಗ್ರಹಿಸಲಾಗಿದೆ ಎಂಬುದನ್ನು ಅರ್ಜಿಯಲ್ಲಿ ಪ್ರಸ್ತಾಪಿಸಲಾಗಿದೆ.

ಸರ್ಕಾರದ ಅಫಿಡವಿಟ್‌ ಕುರಿತು ಕನ್ನಡಪರ ಹೋರಾಟಗಾರ ಎಸ್.ಸಿ.ದಿನೇಶ್‌ಕುಮಾರ್‌ ಫೇಸ್‌ಬುಕ್‌ನಲ್ಲಿ ಪ್ರತಿಕ್ರಿಯಿಸಿದ್ದು, “ಪಿಎಂ ಕೇರ್ಸ್ ಸ್ಥಾಪನೆಯಾಗಿದ್ದು ಕೋವಿಡ್ ಸಂಕಟದ ಕಾಲದಲ್ಲಿ. ಅಪಾರ ಸಾವು ನೋವು ಆರ್ಥಿಕ ನಷ್ಟ ಗಳಿಂದ ಕಂಗಾಲಾಗಿದ್ದ ಜನರಿಗೆ ಪಿಎಂ ಕೇರ್ಸ್ ಎಂಬುದು ಗಂಧರ್ವ ಲೋಕದಿಂದ ಬಂದ ಸಂಜೀವಿನಿ ಎಂಬಂತೆ ಬಿಂಬಿಸಲಾಗಿತ್ತು. ಸರ್ಕಾರಕ್ಕೂ ಇದಕ್ಕೂ ಸಂಬಂಧವಿಲ್ಲವೆಂದು ಅಂದೇ ಹೇಳಬಹುದಿತ್ತಲ್ಲವೇ? ಇದೊಂದು ಖಾಸಗಿ ಟ್ರಸ್ಟ್, ಇದಕ್ಕೆ ಭಾರತ ಸಂವಿಧಾನಕ್ಕೆ, ಸರ್ಕಾರಗಳಿಗೆ, ಜನರಿಗೆ ಉತ್ತರದಾಯಿ ಅಲ್ಲ ಎಂದು ಅಂದೇ ಹೇಳಬಹುದಿತ್ತಲ್ಲವೇ?” ಎಂದು ಪ್ರಶ್ನಿಸಿದ್ದಾರೆ.

“ಇದು ಭಾರತ ಸಂವಿಧಾನದ ಅಡಿಯಲ್ಲಿ ಸ್ಥಾಪನೆಯಾಗದಿದ್ದರೂ ರಾಷ್ಟ್ರೀಯ ಲಾಂಚನ ಬಳಸಿದ್ದು ಯಾಕೆ? ಇದು ಸರ್ಕಾರದ ಅಡಿಯಲ್ಲಿ ಬರುವ ಸಂಸ್ಥೆಯಲ್ಲವಾದರೂ gov.in ಬಳಸಿದ್ದು ಯಾಕೆ? ಹಣ ವಸೂಲಿಗೆ ಸರ್ಕಾರಿ ಯಂತ್ರಾಂಗಗಳನ್ನು ಬಳಸಿಕೊಂಡಿದ್ದು ಯಾಕೆ? ಸರ್ಕಾರವನ್ನು ಮುನ್ನಡೆಸುವವರೇ ಹಣ ಕೊಡಿ ಎಂದು ಬೇಡಿದ್ದು ಯಾಕೆ? ಸ್ವತಃ ಉಪರಾಷ್ಟ್ರಪತಿಗಳೇ ರಾಜ್ಯಸಭೆಯಲ್ಲಿ ಪಿಎಂ ಕೇರ್ಸ್ ಗೆ ದೇಣಿಗೆ ಕೊಡಿ ಎಂದು ಬೇಡಿಕೊಂಡಿದ್ದು ಯಾಕೆ?” ಎಂದು ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.

“ಒಂದು ಖಾಸಗಿ ಟ್ರಸ್ಟ್‌ಗೆ ಪಿಎಂ ಕೇರ್ಸ್ ಹೆಸರು ಬಳಸಿದ್ದು ಯಾಕೆ? ಇದರಿಂದ ದೇಶದ ಪ್ರಧಾನಿ ಹುದ್ದೆಯ ಘನತೆಯನ್ನು ಕುಗ್ಗಿಸಿದಂತೆ ಆಗಲಿಲ್ಲವೇ? ಖಾಸಗಿ ವ್ಯಕ್ತಿಗಳು ಪ್ರಧಾನಿ ಹೆಸರಲ್ಲಿ ಟ್ರಸ್ಟ್ ಮಾಡಿದರೆ ಅದು ಅಪರಾಧವಲ್ಲವೇ? ಪಿಎಂ ಕೇರ್ಸ್ ಖಾಸಗಿ ಟ್ರಸ್ಟ್ ಆದ ಮೇಲೆ, ಸರ್ಕಾರಿ ನೌಕರರ ಒಂದು ದಿನದ ಸಂಬಳವನ್ನು ಹೇಗೆ ಕಡಿತ ಮಾಡಿಕೊಂಡು ಟ್ರಸ್ಟ್ ಅಕೌಂಟಿಗೆ ಜಮಾ ಮಾಡಲಾಯಿತು? ಆದಾಯ ತೆರಿಗೆ ವಿನಾಯಿತಿಯನ್ನು ಯಾವ ಆಧಾರದಲ್ಲಿ ನೀಡಲಾಯಿತು? ಪಿಎಂ ಹೆಸರಲ್ಲಿ ಏನನ್ನು ಬೇಕಾದರೂ ಮಾಡಬಹುದೇ?” ಎಂದು ಕೇಳಿದ್ದಾರೆ.

ಇದನ್ನೂ ಓದಿರಿ: ಪಿಎಂ ಕೇರ್ಸ್‌ ಭಾರತ ಸರ್ಕಾರದ ನಿಧಿಯಲ್ಲ, RTI ಅಡಿಯಲ್ಲಿ ತರಲು ಸಾಧ್ಯವಿಲ್ಲ: ಮೋದಿ ಸರ್ಕಾರ

“ದೇಶದ ಜನರು ಸಾವಿರಾರು ಕೋಟಿ ರುಪಾಯಿಗಳನ್ನು ಪಿಎಂ ಕೇರ್ಸ್‌‌ಗೆ ನೀಡಿದ್ದಾರೆ. ಈಗ ಅವರು ತಾವು ಕೊಟ್ಟ ಹಣದ ಲೆಕ್ಕ ಕೇಳುವಂತಿಲ್ಲ. ಎಷ್ಟು ಹಣ, ಯಾತಕ್ಕಾಗಿ ಖರ್ಚು ಮಾಡಿದ್ದೀರಿ ಎಂದು ಕೇಳುವಂತಿಲ್ಲ. ನಾಳೆ ಹಣವನ್ನೆಲ್ಲ ತೆಗೆದು ಅದಾನಿ ಕಂಪೆನಿಗೆ ಕೊಟ್ಟರೂ, ಭಾರತೀಯ ಜನತಾ ಪಕ್ಷ ಚುನಾವಣೆ ಖರ್ಚಿಗೋ, ಶಾಸಕರ ಖರೀದಿಗೋ ಬಳಸಿದರೂ ನಾವು ಕೇಳುವಂತಿಲ್ಲ. ಇದು ಭಾರತದ ಯಾವುದೇ ಕಾನೂನಿನ ಅಡಿಯಲ್ಲಿ ಸ್ಥಾಪಿಸಿಲ್ಲ ಎಂದು ಸರ್ಕಾರ ಹೇಳುತ್ತಿರುವುದರಿಂದ ನಾವು ಕೋರ್ಟುಗಳ ಮೊರೆ ಹೋಗುವಂತಿಲ್ಲ. ಇಂಥ ಅನೈತಿಕ ವ್ಯವಹಾರ ಯಾಕೆ ಬೇಕಿತ್ತು?” ಎಂದು ಟೀಕಿಸಿದ್ದಾರೆ.

“ಮೊದಲಿನಿಂದಲೂ ಇರುವ ಪಿಎಂ ರಿಲೀಫ್ ಫಂಡ್‌ಗೆ ಪಿಎಂ ಕೇರ್ಸ್ ಹಣ ಕೊಡುತ್ತದೆಯಂತೆ! ಈ ಡಬ್ಬಲ್ ಎಂಜಿನ್ ಯಾಕೆ ಬೇಕಿತ್ತು? ಒಂದು ಅಧಿಕೃತ ಇರುವಾಗ ಇನ್ನೊಂದು ಅನಧಿಕೃತ ಯಾಕೆ ಬೇಕಿತ್ತು? ಪಿಎಂ ರಿಲೀಫ್ ಫಂಡ್ ಮೂಲಕ ಮಾಡಲಾಗದ ಯಾವ ಘನಂದಾರಿ ಕೆಲಸವನ್ನು ಪಿಎಂ ಕೇರ್ಸ್ ಮಾಡುತ್ತದೆ? ನರೇಂದ್ರ ಮೋದಿ ಸರ್ಕಾರ ಬಿದ್ದು ಹೋಗಿ, ಹೊಸ ಸರ್ಕಾರ ಬಂತು ಎಂದಿಟ್ಟುಕೊಳ್ಳಿ. ಆಗ ಟ್ರಸ್ಟ್ ಹಣೆ ಬರೆಹವೇನು? ಹೊಸ ಪ್ರಧಾನಿಗೆ ಅಲ್ಲಿ ಪಾತ್ರವೇ ಇರುವುದಿಲ್ಲ. ಪ್ರಧಾನಿ ಬದಲಾದರೂ ಮೋದಿಯೇ ಪಿಎಂ ಕೇರ್ಸ್ ನಿರ್ವಹಿಸುತ್ತಾರೆಯೇ? ಆಗ ಪ್ರಧಾನಿಯಲ್ಲದ ವ್ಯಕ್ತಿ ಪ್ರಧಾನಿ ಹೆಸರಲ್ಲಿ ಹೇಗೆ ಟ್ರಸ್ಟ್ ನಡೆಸುತ್ತಾರೆ? ಇದೆಲ್ಲ ಗಮನಿಸಿದರೆ ಪಿಎಂ ಕೇರ್ಸ್ ಕೂಡ ಒಂದು ದೊಡ್ಡ ಫ್ರಾಡ್ ಎಂದು ಅನಿಸುವುದಿಲ್ಲವೇ? ದೇಶವನ್ನು ಮುನ್ನಡೆಸಬೇಕಾದವರೇ ಇಂಥ ದಂಧೆಗೆ ಇಳಿದರೆ ದೇಶ ಉಳಿಯಲು ಸಾಧ್ಯವೇ?” ಎಂದು ದಿನೇಶ್‌ಕುಮಾರ್‌ ಆತಂಕ ವ್ಯಕ್ತಪಡಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...