Homeಅಂಕಣಗಳುಮಾತು ಮರೆತ ಭಾರತ-32; ಕಾಶ್ಮೀರಿ-ದಲಿತ್ ಫೈಲ್: ದಲಿತರ ಜೀವಕ್ಕಿಲ್ಲಿ ಬೆಲೆ ಇಲ್ಲ

ಮಾತು ಮರೆತ ಭಾರತ-32; ಕಾಶ್ಮೀರಿ-ದಲಿತ್ ಫೈಲ್: ದಲಿತರ ಜೀವಕ್ಕಿಲ್ಲಿ ಬೆಲೆ ಇಲ್ಲ

- Advertisement -
- Advertisement -

ಡಿಸೆಂಬರ್ 16, 2022ರ ಬೆಳ್ಳಂಬೆಳಗ್ಗೆ ಫಲಿಯಾನ ಗ್ರಾಮದ ರಜೌರಿ ಸೇನಾ ನೆಲೆಯ ಮುಂದೆಯೇ ಇಬ್ಬರು ದಲಿತರ ಮೃತ ದೇಹಗಳು ಪತ್ತೆಯಾದವು. ಈ ಘಟನೆಗೆ ಕಾರಣ ಉಗ್ರಗಾಮಿಗಳೆಂದು ಸೇನೆಯು ಹೇಳಿತು. ಆದರೆ ಅಲ್ಲಿನ ಗ್ರಾಮಸ್ಥರು ಮತ್ತು ದಲಿತ ಕುಟುಂಬಗಳು ಈ ಕೊಲೆಗೆ ಕಾರಣ ಸೇನೆಯೇ ಆಗಿದೆ ಎಂದು ಆರೋಪಿಸಿವೆ. ಉಗ್ರಗಾಮಿಗಳೆಂದು ಭಾವಿಸಿ ನಡೆಯುವ ವಿಚಾರಣಾ ರಹಿತ ಎನ್‌ಕೌಂಟರ್‌ಗಳ ಮಾದರಿಯಲ್ಲಿಯೇ ತಪ್ಪಾಗಿ ನಮ್ಮ ಮಕ್ಕಳನ್ನು ಸೇನೆ ಬಲಿ ಪಡೆದಿದೆ ಎಂಬುದೇ ಅವರ ಆರೋಪ. ಈ ಆರೋಪ ನೂರಕ್ಕೆ ನೂರು ಸುಳ್ಳಲ್ಲ ಎನ್ನುವುದು ಜಗಜ್ಜಾಹೀರಾಗಿದೆ. ಜಮ್ಮು ಕಾಶ್ಮೀರದಲ್ಲಿ ಮುಸ್ಲಿಮರಿಗೆ ಉಗ್ರಗಾಮಿಗಳೆಂಬ ಹಣೆಪಟ್ಟಿ ಕಟ್ಟಿ ಎನ್‌ಕೌಂಟರ್ ಮಾಡಿ ದೇಹವನ್ನೇ ನಾಪತ್ತೆಯಾಗಿಸುವ ತಂತ್ರ ಇಂದು ನಿನ್ನೆಯದಲ್ಲ. ಈ ಬಗ್ಗೆ ಹಲವು ಆಪಾದನೆಗಳಿಗೆ ಮತ್ತು ಕೆಲವು ಪ್ರಕರಣಗಳು ವಿಚಾರಣೆ ಕಂಡು ತಪ್ಪಿತಸ್ಥರಿಗೆ ಶಿಕ್ಷೆಯೂ ಆಗಿದೆ. ಭಾರತ ಸರ್ಕಾರ ಈ ದಲಿತ ಯುವಕರ ಹತ್ಯೆಯನ್ನು ತನಿಖೆ ಮಾಡಲು ತಂಡವನ್ನು ರಚಿಸಿದೆ. ತನಿಖೆ ನಡೆಯುತ್ತಿದೆ. ಸತ್ಯ ಆದಷ್ಟು ಬೇಗ ಬೆಳಕಿಗೆ ಬರಬಹುದೇ? ಕಾದು ನೋಡಬೇಕಾಗಿದೆ.

ಜಮ್ಮು ಮತ್ತು ಕಾಶ್ಮೀರ ಕಣಿವೆಯಲ್ಲಿ ವಾಸವಿರುವ ಹಿಂದೂ-ಮುಸ್ಲಿಮರು ಕಾಶ್ಮೀರಿಯತ್ ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಬರುತ್ತಿದ್ದಾರಾದರೂ ಆಳುವ ಇಚ್ಛೆ ಇರುವ ಸರ್ಕಾರಗಳಿಗೆ ಅವರ ಒಗ್ಗಟ್ಟು ಮುಳುವಾಗಿದೆ. ಹಾಗಾಗಿ ಹಿಂದೂ ವರ್ಸಸ್ ಮುಸ್ಲಿಂ ಮಾಡಲು ಶತಾಯಗತಾಯ ಎರಡೂ ಕಡೆಯ ಕುತಂತ್ರ ರಾಜಕಾರಣಿಗಳು ಶ್ರಮ ಪಡುತ್ತಿದ್ದಾರೆ. ಅದಿರಲಿ, ಇಲ್ಲಿ ಮುಖ್ಯವಾದ ಮತ್ತೊಂದು ಅಂಶವೆಂದರೆ ಸೇನೆಗೆ ಹಾಗೂ ಸೇನಾ ಮುಖ್ಯಸ್ಥರಿಗೆ ಹಿಂದೂ ಮೇಲ್ಜಾತಿ ಹಾಗೂ ದಲಿತರ ಜೀವಗಳು ಒಂದೇ ಎಂಬ ಭಾವನೆ ಇಲ್ಲದಿರುವುದು. ಭಾರತೀಯರಿಗೆ ಜಾತಿ ಪದ್ಧತಿ ಆಚರಣೆಯು ಸಹಜವಲ್ಲವೇ? ಅದು ಸೇನಾ ಮುಖ್ಯಸ್ಥರಾದರೇನು? ನ್ಯಾಯಾಧೀಶರಾದರೇನು? ಸರ್ಕಾರದ ಮಂತ್ರಿಯಾದರೇನು? ಎಲ್ಲರೂ ಇರುವೆಗಳೇ – ಜಾತಿ ಎಂಬ ಸಿಹಿಗೆ.

ಈಗಾಗಲೇ ಉಲ್ಲೇಖಿಸಿದಂತೆ ಡಿಸೆಂಬರ್ 16ನೇ ತಾರೀಕು ಜಮ್ಮುವಿನ ರಜೌರಿ ಬಳಿಯ ಫಲಿಯಾನ ಗ್ರಾಮದ ಸೇನಾ ಕ್ಯಾಂಪ್ ಮುಂಭಾಗ ಸುರೇಂದರ್ ಕುಮಾರ್ ಮತ್ತು ಕಮಲ್ ಕಿಶೋರ್ ಎಂಬ ಇಬ್ಬರು ದಲಿತ ಯುವಕರ ಮೃತದೇಹಗಳು ಬಿದ್ದಿದ್ದವು. ಆ ಎರಡು ದೇಹಗಳ ಮೇಲೆ ಗುಂಡಿನ ದಾಳಿಯಾಗಿತ್ತು. ಸೇನೆಯ ಡೆಪ್ಯುಟಿ ಕಮಿಷನರ್ ಆ ಇಬ್ಬರ ಕುಟುಂಬಕ್ಕೆ ತಲಾ 1 ಲಕ್ಷ ರೂಪಾಯಿ ಘೋಷಿಸಿದರು. ದಲಿತರ ಹೋರಾಟದಿಂದಾಗಿ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ 5 ಲಕ್ಷ ರೂಪಾಯಿಗಳ ಪರಿಹಾರವನ್ನು ಪ್ರತಿ ದಲಿತ ಕುಟುಂಬಕ್ಕೆ ಹೆಚ್ಚುವರಿಯಾಗಿ ಘೋಷಿಸಿದರು. ಒಟ್ಟು ಆ ಎರಡು ದಲಿತ ಜೀವಗಳ ಬದಲಿಗೆ ತಲಾ 6 ಲಕ್ಷ ರೂಪಾಯಿ ಪರಿಹಾರ ನೀಡಲಾಯಿತು. ಕುಟುಂಬದ ಒಬ್ಬರಿಗೆ ಸರ್ಕಾರಿ ನೌಕರಿ ನೀಡುವ ಭರವಸೆಯನ್ನೂ ನೀಡಿದರು. ಇದು ದೇಶಾದ್ಯಂತ ಮಾಧ್ಯಮಗಳಲ್ಲಿ ಒಂದು ಕ್ಷಣವೂ ಬಿತ್ತರಗೊಳ್ಳಲಿಲ್ಲ.

ಈ ಘಟನೆಯಾದ 15 ದಿನಗಳ ನಂತರ ಅಂದರೆ, ಜನವರಿ 1, 2023ರಂದು ಅದೇ ರಜೌರಿಯಿಂದ ಕೇವಲ 7 ಕಿಲೋಮೀಟರ್ ದೂರದಲ್ಲಿದ್ದ ಧಂಗ್ರಿ ಎಂಬ ಹಳ್ಳಿಯೊಂದರಲ್ಲಿ 6 ಜನರ ಕೊಲೆಯಾಗಿತ್ತು. ಉಗ್ರಗಾಮಿ ಸಂಘಟನೆಯೊಂದು ಅವರನ್ನು ಅಮಾನವೀಯವಾಗಿ ಕೊಂದಿತ್ತು. ಹೊಸ ವರ್ಷದ ದಿನದಂದೇ ನಡೆದ ಈ ಘಟನೆಯಲ್ಲಿ ಪರಸ್ಪರ ಸಂಬಂಧಿಕರಾದ ವಿಹಾನ್ ಶರ್ಮ, ಸಮೀಕ್ಷ ಶರ್ಮ, ಸತೀಶ್ ಕುಮಾರ್, ದೀಪಕ್ ಕುಮಾರ್, ಪ್ರೀತಮ್ ಲಾಲ್ ಮತ್ತು ಶಿಶುಪಾಲ್ ಕೊಲೆಗೀಡಾಗಿದ್ದರು. ಮಾಧ್ಯಮಗಳು ಎಂದಿನಂತೆ ನಮ್ಮಲ್ಲೇ ಮೊದಲು ಎಂದು ಮುಗಿಬಿದ್ದು ಸುದ್ದಿ ಮಾಡಿದವು. ಖಂಡಿತಾ ಮಾಡಲೇಬೇಕು. ಎಲ್ಲರ ಜೀವಕ್ಕೂ ಬೆಲೆ ಇದೆ. ಈ ಘಟನೆ ಆದ ತಕ್ಷಣ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಆ ಹಳ್ಳಿಗೆ ಬೇಟಿ ನೀಡಿದರು. ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ರೂಪಾಯಿ ಪರಿಹಾರ ಘೋಷಿಸಿದರು. ಜೊತೆಗೆ ಕುಟುಂಬಸ್ಥರಲ್ಲಿ ಒಬ್ಬರಿಗೆ ಸರ್ಕಾರಿ ನೌಕರಿ ನೀಡುವ ಭರವಸೆ ನೀಡಿದರು.

ಇದನ್ನೂ ಓದಿ: ಮಾತು ಮರೆತ ಭಾರತ-32; ಲಾಕ್‌ಡೌನ್ ಫೈಲ್ಸ್: ಪ್ರೀತಿಯನ್ನು ಮಣಿಸಿದ ಜಾತಿ

ಈ ಮೇಲಿನ ಎರಡೂ ಘಟನೆಗಳನ್ನು ಮೇಲ್ನೋಟಕ್ಕೆ ಗಮನಿಸಿದರೆ ಸಾಕು, ಭಾರತದ ಸೇನೆಯಲ್ಲೂ ಜಾತಿಪದ್ಧತಿ ಅದೆಷ್ಟು ಆಳವಾಗಿ ಬೇರು ಬಿಟ್ಟಿದೆ ಎಂದು ಮನದಟ್ಟಾಗುತ್ತದೆ. ಲೆಫ್ಟಿನೆಂಟ್ ಗವರ್ನರ್ 6 ಜನರು ಮೃತರಾದ ಹಳ್ಳಿಗೆ ದೌಡಾಯಿಸಿದ ಮುಖ್ಯ ಕಾರಣ ಅವರೆಲ್ಲರೂ ಬ್ರಾಹ್ಮಣ ಕುಟುಂಬದವರಾಗಿದ್ದರು ಎಂಬುವುದಾಗಿತ್ತು. ಆದರೆ ಕಜೌರಿಯಲ್ಲಿ ಮೃತಪಟ್ಟವರು ದಲಿತರಾದ ಕಾರಣ ಗವರ್ನರ್ ಅವರಿಗೆ ಅಷ್ಟು ಪುರುಸೊತ್ತು ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ, ಮನಸ್ಸಾಗಲಿಲ್ಲ. ಪರಿಹಾರ ಘೋಷಿಸುವಲ್ಲಿಯೂ ಸೇನಾ ಮುಖ್ಯಸ್ಥರು ತಾರತಮ್ಯವೆಸಗಿದ್ದಾರೆ. ಬ್ರಾಹ್ಮಣರಿಗೆ 10 ಲಕ್ಷ ರೂ, ದಲಿತರಿಗೆ 6 ಲಕ್ಷ ರೂ. ಅದೂ ಹೋರಾಟ ಮಾಡಿದರೆ ಮಾತ್ರ! ಸೇನಾ ನೆಲೆಯ ಮುಂದೆಯೇ ಹೆಣವಾದ ದಲಿತರು ಸುದ್ದಿಯಾಗುವುದೇ ಇಲ್ಲ. ಸೇನಾ ನೆಲೆಯಿಂದ 7 ಕಿಲೋಮೀಟರ್ ದೂರದಲ್ಲಿ ನಡೆದ ಶೂಟೌಟ್ ಸುದ್ದಿಯಾಗುತ್ತದೆ. ಎರಡೂ ಘಟನೆಯೂ ನಡೆಯಬಾರದಿತ್ತು. ಎರಡೂ ಘಟನೆಯನ್ನು ಮನುಷ್ಯರಾದವರು ಖಂಡಿಸಬೇಕು. ಸಮಾನ ಆದ್ಯತೆ ನೀಡಬೇಕು. ಆದರೆ ಇಲ್ಲಿ ಆಗಿರುವುದೇ ಬೇರೆ. ದಲಿತರಿಗೆ ಬದುಕಿದ್ದಾಗಲೂ ಸಮಾನ ಸ್ಥಾನವಿಲ್ಲ. ಸತ್ತ ಮೇಲೂ ಸಮಾನ ಸ್ಥಾನವಿಲ್ಲ ಎನ್ನುತ್ತಾರೆ ಕಜೌರಿಯ ಗ್ರಾಮಪಂಚಾಯತ್ ಅಧ್ಯಕ್ಷರು.

ಮನೋಜ್ ಸಿನ್ಹಾ

ಈ ಎರಡು ಘಟನೆಗೆ ಸಂಬಂಧಿಸಿದಂತೆ ಮೋದಿ ನೇತೃತ್ವದ ಒಕ್ಕೂಟ ಸರ್ಕಾರದ ನಿಲುವು ಸಹ ಬಹಿರಂಗಗೊಂಡಿದೆ. ಒಕ್ಕೂಟ ಸರ್ಕಾರದ ಗೃಹ ಮಂತ್ರಿಯಾದ ಅಮಿತ್ ಶಾ ಜನವರಿ 13, 2023ರಂದು 6 ಬ್ರಾಹ್ಮಣರನ್ನು ಕೊಂದಿದ್ದ ಧಂಗ್ರಿ ಗ್ರಾಮಕ್ಕೆ ಬೇಟಿ ನೀಡಿ ಆ ಕುಟುಂಬಸ್ಥರಿಗೆ ಸಾಂತ್ವನ ಹೇಳಲು ವೇಳಾಪಟ್ಟಿ ನಿಗದಿಪಡಿಸಿಕೊಂಡಿದ್ದರು. ವಾಯುಗುಣ ಸರಿ ಇಲ್ಲದ ಕಾರಣ ಹವಾಮಾನ ಇಲಾಖೆಯು ಪ್ರಯಾಣವನ್ನು ರದ್ದುಗೊಳಿಸಿದ್ದರಿಂದಾಗಿ ನೊಂದುಕೊಂಡ ಅಮಿತ್ ಶಾ ಫೋನ್ ಮೂಲಕವೇ 6 ಸಂತ್ರಸ್ತ ಕುಟುಂಬದವರೊಟ್ಟಿಗೆ ಮಾತನಾಡಿ ಅವರಿಗೆ ಧೈರ್ಯ ತುಂಬಿದರು. ನಿಮ್ಮೊಟ್ಟಿಗೆ ನಮ್ಮ ಸರ್ಕಾರವಿದೆ ಎಂಬ ಭರವಸೆ ನೀಡಿದರು. ನಿಜಕ್ಕೂ ಈ ಬೆಳವಣಿಗೆ ಸ್ವಾಗತಾರ್ಹ. ಪ್ರತಿಯೊಬ್ಬ ಭಾರತೀಯರ ನೋವಿಗೆ ದನಿಯಾಗಬೇಕಿರುವುದು ಪ್ರಗತಿಪರ ಸರ್ಕಾರದ ಹೊಣೆಯಾಗಿರುತ್ತದೆ. ಆದರೆ ಅಮಿತ್ ಶಾ ಅವರಿಗೆ ಕಜೌರಿಯಲ್ಲಿ ಕೊಲೆಯಾದ 2 ದಲಿತ ಯುವಕರ ಕುಟುಂಬ ನೆನಪಾಗಲಿಲ್ಲವಲ್ಲ ಏಕೆ? ಅವರ ಮನೆಗೆ ಭೇಟಿ ನೀಡುವುದಿರಲಿ, ಕನಿಷ್ಠ ಪಕ್ಷ ಫೋನ್ ಮಾಡಿ ವಿಚಾರಿಸಿಕೊಳ್ಳಲಿಲ್ಲವೇಕೆ? ದಲಿತ ಕುಟುಂಬಗಳಿಗೇನು ಸಾಂತ್ವನ ಮಾಡುವ ಅವಶ್ಯಕತೆ ಇಲ್ಲವೆಂಬುದು ಅಮಿತ್ ಶಾ ಹಾಗೂ ಮೋದಿಯವರ ಸರ್ಕಾರದ ನಿಲುವೇ? ಈ ಎಲ್ಲಾ ಪ್ರಶ್ನೆಗಳನ್ನು ಮೃತ ದಲಿತ ಯುವಕರ ಕುಟುಂಬಸ್ಥರು ಕೇಳುತ್ತಿದ್ದಾರೆ. ಆದರೆ ಈ ಎರಡು ಬಡಪಾಯಿ ದಲಿತ ಕುಟುಂಬದ ಪರವಾಗಿ ನಿಲ್ಲುವವರಾರು? ದಪ್ಪ ಚರ್ಮದ ಸರ್ಕಾರದ ಬಾಯಿ ಬಿಡಿಸುವವರಾರು?

ಈ ರೀತಿಯ ಬಹಿರಂಗ ತಾರತಮ್ಯಗಳು, ದಲಿತರನ್ನು ಈ ಸರ್ಕಾರ ಎರಡನೇ ದರ್ಜೆಯ ನಾಗರಿಕರನ್ನಾಗಿ ಪದೇಪದೇ ಕಾಣುತ್ತಿರುವುದನ್ನು ಸಾಬೀತುಪಡಿಸುತ್ತಿದೆ. ಈ ಸರ್ಕಾರದಲ್ಲಿ ಕಾಶ್ಮೀರಿ ಪಂಡಿತರು ಹಾಗೂ ಕಾಶ್ಮೀರಿ ದಲಿತರು ಒಂದೇ ಅಲ್ಲ. ಕಾಶ್ಮೀರಿ ಪಂಡಿತರಿಗಿರುವ ಬೆಲೆ ದಲಿತರಿಗಿಲ್ಲ. ವಿಪರ್ಯಾಸ ಹಾಗೂ ದುರಂತವೆಂದರೆ, ಮೋದಿ ನೇತೃತ್ವದ ಒಕ್ಕೂಟ ಸರ್ಕಾರಕ್ಕೆ ಕಾಶ್ಮೀರಿ ಪಂಡಿತರ ಮೇಲೆಯೂ ಪ್ರಾಮಾಣಿಕ ಪ್ರೀತಿ ಇಲ್ಲ. ಹಿಂದೂ-ಮುಸ್ಲಿಂ ಎಂದು ಒಡೆದು ಆಳುತ್ತಾ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮಾತ್ರ ಪಂಡಿತರು ಬೇಕಾಗಿದ್ದಾರೆ. ಅವರಿಗೆ ವಸತಿ, ಮೂಲಸೌಕರ್ಯ, ಭದ್ರತೆ ಕೊಡುವಲ್ಲಿ ಮೋದಿ ಸರ್ಕಾರ ವಿಫಲವಾಗಿದೆ. ಹೀಗೆ ಪಂಡಿತರ ಸ್ಥಿತಿಯೇ ಚಿಂತಾಜನಕವಾಗಿರುವಾಗ ದಲಿತರ ಸ್ಥಿತಿ ಕೇಳುವವರಾರು? ಕೇಳಬೇಕೆಂದರೆ ದಲಿತರು ಏನು ಮಾಡಬೇಕು? ಖಂಡಿತವಾಗಿಯೂ ಇದಕ್ಕೆ ಭಾರತ ಉತ್ತರಿಸಲೇಬೇಕು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...