Homeಎಕಾನಮಿಪ್ರಧಾನಿಯ 20 ಲಕ್ಷ ಕೋಟಿ ಪ್ಯಾಕೇಜ್: ಮೊದಲ ಕಂತಲ್ಲಿ ಕೊಡ್ತಿರೋದು ಕೇವಲ 2500 ಕೋಟಿ ಅಷ್ಟೆ!

ಪ್ರಧಾನಿಯ 20 ಲಕ್ಷ ಕೋಟಿ ಪ್ಯಾಕೇಜ್: ಮೊದಲ ಕಂತಲ್ಲಿ ಕೊಡ್ತಿರೋದು ಕೇವಲ 2500 ಕೋಟಿ ಅಷ್ಟೆ!

ಈಗ ವ್ಯವಹಾರವೇ ಸ್ತಬ್ದವಾಗುತ್ತಿರುವುದರಿಂದ MSMEಗಳು ಭಾರೀ ಸಂಕಷ್ಟದಲ್ಲಿದ್ದು ತಮ್ಮ ಸಿಬ್ಬಂದಿಗಳಿಗೆ ಸಂಬಳ ಕೊಡಲಾರದ ಸ್ಥಿತಿಯಲ್ಲಿವೆ. ಹಾಗಾಗಿ ಅವುಗಳಿಗೆ ಬೇಕಿರುವುದು ತಮ್ಮ ಸಿಬ್ಬಂದಿಗೆ ಕನಿಷ್ಟ ಮೂರು ತಿಂಗಳು ಸಂಬಳ ಕೊಡುವಷ್ಟು ಹಣ.

- Advertisement -
- Advertisement -

ಪ್ರಧಾನಿಯವರು ಎಲ್ರಿಗೂ ಶಾಕ್ ಆಗುವ ಹಾಗೆ ಕೊರೋನಾ ಆರ್ಥಿಕ ಪ್ಯಾಕೇಜ್ ಎಂದು 20 ಲಕ್ಷ ಕೋಟಿ ಅನೌನ್ಸ್ ಮಾಡಿದ್ರು.

ಶಾಕ್ ಯಾಕಂದ್ರೆ ಇಪ್ಪತ್ತಲ್ಲ, ಅದ್ರಲ್ಲಿ ಅರ್ಧ ಅಂದರೆ ಹತ್ತು ಲಕ್ಷ ಕೋಟಿಗಳನ್ನು ಅವರು ಕನಿಷ್ಟ ಒಂದೂವರೆ ತಿಂಗಳ ಮುಂಚೆನೇ ಅನೌನ್ಸ್ ಮಾಡಬೇಕಿತ್ತು.

ಹಾಗೆ ಮಾಡಿದ್ದಿದ್ರೆ, ನಾವು ಈಗ ನೋಡ್ತಿರೋ ವಲಸೆ ಕಾರ್ಮಿಕರ ದಾರುಣ ಸ್ಥಿತಿಯನ್ನು ತಡೆಯಬಹುದಿತ್ತು ಮತ್ತು ಇತರೆ ಕೋಟ್ಯಂತರ ಜನರ ಕಣ್ಣಿಗೆ ಕಾಣದಿರುವ ಬವಣೆಗಳನ್ನೂ ಸಹ. ಜನ ಅಷ್ಟು ಬವಣೆ ಪಡ್ತಿದ್ರೂ ಅದರ ಬಗ್ಗೆ ಸರ್ಕಾರ ಮಾತೇ ಆಡದಿದ್ದಕ್ಕೆ ಜನರಿಗೆ ಸರ್ಕಾರದಿಂದ ಜನರಿಗಾಗಿ ಹಣ ಬಿಡುಗಡೆಯ ಎಲ್ಲಾ ನಂಬಿಕೆಯೂ ಹೋಗಿದ್ದರಿಂದ ಪ್ರಧಾನಿಯ ಈ ಪ್ರಕಟಣೆ ಶಾಕ್ ಅನ್ಸಿದ್ದು ನಿಜ.

ಆದ್ರೂ ಹೋಗ್ಲಿ, ಲೇಟಾಗಾದ್ರೂ ಪ್ರಧಾನಿ ಅನೌನ್ಸ್ ಮಾಡಿದ್ರಲ್ಲ. ಅದ್ರಲ್ಲೂ ಹತ್ತು ಸಾಕಾಗುತ್ತೆ ಅಂತಿದ್ರೂ ಕೂಡ ಅದರ ಡಬಲ್ ಅಮೌಂಟ್ ಅನೌನ್ಸ್ ಮಾಡಿದ್ರಲ್ಲ ಅಂತ ಬಹುತೇಕರಿಗೆ ಸಮಾಧಾನ ಆಗಿದ್ದು ನಿಜ.

ಆದರೆ, ಈ ಪ್ರಕಟಣೆಯ ಮಾರನೆಯ ದಿನವೇ ಮತ್ತೆ ನಿರಾಸೆ ಕಾದಿತ್ತು.

ಮೊದಲನೆಯದಾಗಿ ವಿತ್ತ ಮಂತ್ರಿ ನಿರ್ಮಲಾ ಸೀತಾರಾಮನ್‌ ಈ ಇಪ್ಪತ್ತು ಲಕ್ಷ ಪ್ಯಾಕೇಜನ್ನ ಕಂತುಗಳಲ್ಲಿ ಹೇಳ್ತೀವಿ ಅಂದಿದ್ದು (ಇದು ಸರ್ಕಾರದ ಸಿದ್ಧತೆಯ ಕೊರತೆಯನ್ನ ಮತ್ತೆ ತೋರಿಸ್ತಿದೆ).

ಆತ್ಮನಿರ್ಭರ ಭಾರತ

ಎರಡನೆಯದಾಗಿ, ಈ ಮೊದಲ ಕಂತಿನಲ್ಲಿ ಜನರಿಗೆ ಮತ್ತು ಹೆಚ್ಚು ಉದ್ಯೋಗ ಕೊಡುವ MSME ಗಳಿಗೆ ಯಾವ ಹಣಕಾಸಿನ ನೆರವೂ ಸಿಗದಿದ್ದುದು.

ಮೂರನೆಯದಾಗಿ, ಈ ಮೊದಲ ಕಂತಿನಲ್ಲಿ ಮತ್ತೆ ರಾಜ್ಯಗಳಿಗೆ ಹಣ ಕೊಡದಿರುವುದು.

ವಿತ್ತ ಮಂತ್ರಿಗಳ ಇಡೀ ಪ್ರಕಟಣೆಯಲ್ಲಿ ಸರ್ಕಾರದಿಂದ ಮಾಡಲಾಗುತ್ತಿರುವ ಅಥವಾ ಭರಿಸಲಾಗುತ್ತಿರುವ ಹಣಕಾಸಿನ ವೆಚ್ಚ ಕೇವಲ 2500 ಕೋಟಿ ರೂಪಾಯಿಗಳು ಎಂದರೆ ನಾವು ನಿಜಕ್ಕೂ ಶಾಕ್ ಆಗಬೇಕಿರುವುದು ಇಲ್ಲಿ.

ಹೌದು, 100 ಸಿಬ್ಬಂದಿಗಳಿಗಿಂತ ಕಡಿಮೆಯಿರುವ ಮತ್ತು ಅದರಲ್ಲಿ ಶೇ.90ರಷ್ಟು ಜನ 15000ಕ್ಕಿಂತ ಕಡಿಮೆ ಸಂಬಳ ಪಡೆಯುವ ಉದ್ದಿಮೆಗಳ ಮತ್ತು ಅಲ್ಲಿಯ ಉದ್ಯೋಗಿಗಳ EPF (employer and employee  ಇಬ್ಬರದೂ) ಅನ್ನು ಇನ್ನೂ ಮೂರು ತಿಂಗಳ ಕಾಲ ಸರ್ಕಾರವೇ ಭರಿಸಲಿದೆ.

ಇದರ ವೆಚ್ಚ ಒಟ್ಟು 2500 ಕೋಟಿ ಆಗಲಿದ್ದು ಇಷ್ಟನ್ನು ಮಾತ್ರವೇ ಕೇಂದ್ರ ಸರ್ಕಾರ ಈಗ ನಿಜವಾಗಿ ತನ್ನ 20 ಲಕ್ಷ ಕೋಟಿ ಪ್ಯಾಕೇಜಲ್ಲಿ ಕೊಡುತ್ತಿರುವುದು ಅಂದರೆ ನೀವು ನಂಬಲೇಬೇಕು.

ಯಾಕೆಂದರೆ ಉಳಿದುದೆಲ್ಲವೂ ಉದ್ದಿಮೆಗಳಿಗೆ ಕೊಡುತ್ತಿರುವ ಸಾಲದ ರೂಪದಲ್ಲಿದೆ ಮತ್ತು ಜನರಿಗೆ ಸರ್ಕಾರ ಕೊಡಬೇಕಿದ್ದ ಜನರ ದುಡ್ಡೇ ಆಗಿದೆ. ಈಗ ನೋಡಿ, MSMEಗಳು ಸುಮಾರು ಹತ್ತು ಕೋಟಿಗಿಂತ ಹೆಚ್ಚು ಜನರಿಗೆ ಕೆಲಸ ಕೊಟ್ಟಿವೆ. ಅವುಗಳಲ್ಲಿ ಬಹುತೇಕ ದೊಡ್ಡ ಕಂಪನಿಗಳಿಗೆ ಬಿಡಿಭಾಗಗಳನ್ನು ತಯಾರಿಸಿ ಕೊಡುತ್ತವೆ. ಹಾಗಾಗಿ, ಜನರ ಕೈಯಲ್ಲಿ ದುಡ್ಡಿದ್ದರೆ ಅವರು ವಾಹನ ಇತ್ಯಾದಿ ವಸ್ತುಗಳನ್ನು ಖರೀದಿಸುವುದರಿಂದ ಪರೋಕ್ಷವಾಗಿ MSMEಗಳೂ ಆರೋಗ್ಯದಿಂದಿರುತ್ತವೆ. ಅದರಿಂದಾಗಿಯೇ ಆರ್ಥಿಕ ತಜ್ಞರು ಜನರ ಕೈಯಲ್ಲಿ ಹಣ ಇರುವಂತೆ ನೋಡಿಕೊಳ್ಳಿ ಎನ್ನುತ್ತಿರುವುದು.

ಈಗ ವ್ಯವಹಾರವೇ ಸ್ತಬ್ದವಾಗುತ್ತಿರುವುದರಿಂದ MSMEಗಳು ಭಾರೀ ಸಂಕಷ್ಟದಲ್ಲಿದ್ದು ತಮ್ಮ ಸಿಬ್ಬಂದಿಗಳಿಗೆ ಸಂಬಳ ಕೊಡಲಾರದ ಸ್ಥಿತಿಯಲ್ಲಿವೆ. ಹಾಗಾಗಿ ಅವುಗಳಿಗೆ ಬೇಕಿರುವುದು ತಮ್ಮ ಸಿಬ್ಬಂದಿಗೆ ಕನಿಷ್ಟ ಮೂರು ತಿಂಗಳು ಸಂಬಳ ಕೊಡುವಷ್ಟು ಹಣ ಕೊಟ್ಟರೆ ಚೇತರಿಸಿಕೊಂಡು ಸಿಬ್ಬಂದಿಗಳನ್ನೂ ಉಳಿಸಿಕೊಳ್ಳಬಹುದು ಎಂಬ ನಿರೀಕ್ಷೆಯಲ್ಲಿದ್ದವು. ಆದರೆ ವಿತ್ತ ಮಂತ್ರಿ MSMEಗಳಿಗೆ 3 ಲಕ್ಷ ಕೋಟಿಯಷ್ಟು ಅಡಮಾನ ರಹಿತ ಸಾಲ ಕೊಡುವ ಪ್ರಕಟಣೆ ಮಾಡಿದ್ದಾರೆ. ಕನಿಷ್ಟ ಈ ಸಾಲ ಬಡ್ಡಿ ರಹಿತ ಸಾಲವೂ ಅಲ್ಲ.

ಅದೇ ರೀತಿ NBFC ಮತ್ತು MFI (Non banking finance corporations and micro financing institutions)ಗಳಿಗೆ ಒಟ್ಟಾರೆ 80000 ಕೋಟಿಯಷ್ಟು ಹಣವನ್ನು ಅವುಗಳು ಸಣ್ಣ ಉದ್ದಿಮೆಗಳಿಗೆ ಸಾಲ ಕೊಡಲು ಅನುವಾಗುವಂತೆ ವಿವಿಧ ಹೆಡಿಂಗುಗಳ ಅಡಿಯಲ್ಲಿ ಹಣ ಹರಿಸುವ ಪ್ರಕಟಣೆ ಮಾಡಲಾಗಿದೆ. ಒಟ್ಟಾರೆಯಾಗಿ ಇವುಗಳು MSMEಗಳಿಗೆ ಮತ್ತು ಇತರೆ ಸಣ್ಣ ಉದ್ದಿಮೆಗಳಿಗೆ ಸುಲಭವಾಗಿ ಸಾಲದ ರೂಪದಲ್ಲಿ ಹಣ ಹರಿಯುವಂತೆ ಮಾಡುವ ಯೋಜನೆಗಳಾಗಿವೆ.

ಇನ್ನು ಇತರೆಲ್ಲ ಉದ್ದಿಮೆಗಳು ತಮ್ಮ ಸಿಬ್ಬಂದಿಗಳಿಗೆ ಕೊಡಬೇಕಿರುವ 12.5% EPF ಕಡ್ಡಾಯ ಕೊಡುಗೆಯನ್ನು ಮತ್ತು ಸಿಬ್ಬಂದಿಗಳ ಸಂಬಳದಲ್ಲಿ ಕಡಿತವಾಗುವ 12.5%ಅನ್ನು 10%ಗೆ ಇಳಿಸಲಾಗಿದೆ. ಇದರಿಂದಾಗಿ ಒಟ್ಟು 6750 ಕೋಟಿಗಳನ್ನು ಸಿಬ್ಬಂದಿಗಳ ಮತ್ತು ಉದ್ದಿಮೆಗಳ ಕೈಯಲ್ಲಿ ಉಳಿಸಿ ಅವರು ಖರ್ಚು ಮಾಡಲು ಅನುಕೂಲ ಮಾಡಿಕೊಡಲಾಗಿದೆ ಎಂದು ತಿಳಿಸಲಾಗಿದೆ. ವಾಸ್ತವದಲ್ಲಿ ಇದು ನಮ್ಮದೇ ದುಡ್ಡನ್ನು ನಮ್ಮ ಹತ್ತಿರ ಉಳಿಸಿದಂತಾಗಿದೆಯಷ್ಟೆ. ಅದಕ್ಕಿಂತ ಹೆಚ್ಚಾಗಿ ನಾಳೆಗೆಂದು ಉಳಿತಾಯ ಮಾಡುತ್ತಿದ್ದುದನ್ನು ಇಂದೇ ಖರ್ಚು ಮಾಡುವಂತೆ ಮಾಡುವ ಕ್ರಮವಾಗಿದ್ದು ಇದು ವೈಯಕ್ತಿಕ ಆರ್ಥಿಕತೆಗೆ ತೊಂದರೆ ಕೊಡುವಂತದ್ದಾಗಿದೆ.

ಆಮೇಲೆ ಹಲವು ವೃತ್ತಿಪರರ ಸಂಪಾದನೆಯಲ್ಲಿ ಮಾಡಲಾಗುತ್ತಿದ್ದ TDSನಲ್ಲಿ (tax deduction at source) 25% ನಷ್ಟು ಕಡಿಮೆ ಮಾಡಲಾಗಿದೆ. ಇದರಿಂದಾಗಿ ಅವರುಗಳಿಗೆ ಒಟ್ಟಾರೆ 50000 ಕೋಟಿಗಳಷ್ಟು ಕೈಯಲ್ಲಿ ಉಳಿಯುವಂತೆ ಮಾಡಲಾಗಿದೆ ಎಂದೂ ಹೇಳಲಾಗಿದೆ. ಆದರೆ ಈ 25%ನ್ನು ಅವರು ವರ್ಷದ ಕಡೆಯ ತೆರಿಗೆಯಲ್ಲಿ ಕಟ್ಟಲೇಬೇಕಾಗಿದೆ. ಅಂದರೆ, ಇದು ನಮ್ಮ ಹಣವನ್ನು 6 ತಿಂಗಳ ನಂತರ ಅವರಿಗೆ ಕೊಡಬೇಕಿದ್ದದ್ದನ್ನು ಈಗ ನಮ್ಮಲ್ಲೇ ಉಳಿಸಿ ಈಗಲೇ ಖರ್ಚು ಮಾಡಿ ಎಂದಂತೆ ಅಷ್ಟೆ.

ಕಡೆಯದಾಗಿ, ಹಲವು ಸಂಸ್ಥೆಗಳಿಗೆ ಕೊಡಬೇಕಿರುವ ತೆರಿಗೆ ಬಾಕಿಯನ್ನು ನಲವತ್ತೈದು ದಿನಗಳ ಒಳಗೆ ಕೊಡಲಾಗುವುದೆಂದು ಹೇಳಲಾಗಿದೆ. ಇದೂ ಕೂಡ ಅವರಿಗೆ ಬರಬೇಕಾದ ಹಣವನ್ನು ಕೊಟ್ಟಂತೆ ಅಷ್ಟೆ. ಜತೆಗೆ ಕಂಟ್ರಾಕ್ಟರುಗಳಿಗೆ ಎಷ್ಟು ಕೆಲಸ ಆಗಿದೆಯೋ ಅಷ್ಟಕ್ಕೆ ಹಣ ಬಿಡುಗಡೆ ಮಾಡಲು ಬ್ಯಾಂಕ್ ಗ್ಯಾರಂಟಿಗೆ ಸೂಚಿಸಲಾಗಿದೆ.

ಒಟ್ಟಾರೆಯಾಗಿ ಮೊದಲ ಕಂತಿನಲ್ಲಿ ಜನರ ಕೈಗೆ ನಿಜಕ್ಕೂ ಹಣ ಸಿಗುತ್ತಿರುವುದು ಕೇವಲ 2500 ಕೋಟಿ ರೂಪಾಯಿಗಳಷ್ಟು ಮಾತ್ರ. ಉಳಿದುದು ಕೆಲವು ಸುಲಭ ಸಾಲದ ರೂಪದಲ್ಲಿದೆ.

ಇನ್ನು ಕೆಲವು ಜನರ ದುಡ್ಡನ್ನೇ ಜನರಿಗೆ ಸಿಗುವಂತೆ (ಸ್ವಲ್ಪ ಬೇಗ ಸಿಗುವಂತೆ) ಮಾಡಿ ಅದನ್ನೇ ಆರ್ಥಿಕ ಪ್ಯಾಕೇಜ್‌ನ ಭಾಗ ಎಂದು ಹೇಳುತ್ತಿರುವುದು ಆಶ್ಚರ್ಯಕರವಾಗೂ ಮತ್ತು ಅನುತ್ತೇಜಕವಾಗಿಯೂ ಇದೆ. ಜನರ ಕೈಗೆ ಹಣ ಸಿಕ್ಕಿ ಅದರಿಂದ ಅವರೂ ಬದುಕಿ ಆರ್ಥಿಕತೆಯನ್ನೂ ಚೇತರಿಸುವಂತೆ ಮಾಡುವ ಅಂಶ ಈ ಇಪ್ಪತ್ತು ಲಕ್ಷ ಕೋಟಿಯ ಮೊದಲ ಪ್ಯಾಕೇಜಲ್ಲಿ ಬಹುತೇಕ ಮಿಸ್ ಆಗಿದೆ.

ಆದರೂ, ಶೀಘ್ರದಲ್ಲಿಯೇ ಬರಲಿರುವ (ಶೀಘ್ರದಲ್ಲಿಯೇ ಬರಲಿ ಎಂದು ಆಶಿಸುತ್ತಾ) ಎರಡನೇ ಕಂತಿನಲ್ಲಿಯಾದರೂ ಜನರ ಕೈಗೆ ಹಣ ಸಿಗುವಂತ ಪ್ರಕಟಣೆಗಳು ಆಗಲಿ ಎಂದು ಆಗ್ರಹಿಸುತ್ತಾ ಮತ್ತು ಹಾಗೆ ಆಗುವುದೆಂದು ಆಶಿಸುತ್ತಾ ಶೀಘ್ರ ಬರಲಿರುವ ಆ ಎರಡನೆ ಕಂತಿಗಾಗಿ ಕಾಯೋಣ.


ಇದನ್ನೂ ಓದಿ: ಇಂದು ಸಂಜೆ ಮತ್ತೆ ಪತ್ರಿಕಾಗೋಷ್ಟಿ ನಡೆಸಲಿರುವ ನಿರ್ಮಲಾ ಸೀತಾರಾಮನ್!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...