ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ‘ಟ್ರಂಪ್‌ಗೆ ಹೆದರಿದ್ದು’ ಮಾತ್ರವಲ್ಲ, ಕೋಟ್ಯಾದಿಪತಿಗಳಾದ ‘ಅಂಬಾನಿ, ಅದಾನಿ ರಿಮೋಟ್ ಕಂಟ್ರೋಲ್‌ನಲ್ಲಿದ್ದಾರೆ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾನುವಾರ ಹೇಳಿದ್ದಾರೆ.
ಲೋಕಸಭೆಯ ವಿರೋಧ ಪಕ್ಷದ ನಾಯಕರಾಗಿರುವ ರಾಹುಲ್ ಗಾಂಧಿ, ಚುನಾವಣೆಯ ಹೊಸ್ತಿಲಲ್ಲಿರುವ ಬಿಹಾರದ ಬೇಗುಸರಾಯ್ ಮತ್ತು ಖಗಾರಿಯಾ ಜಿಲ್ಲೆಗಳಲ್ಲಿ ಸತತ ರ‍್ಯಾಲಿಗಳನ್ನುದ್ದೇಶಿಸಿ ಮಾತನಾಡುತ್ತಾ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
“ದೊಡ್ಡ ಎದೆ ಹೊಂದಿರುವುದು ನಿಮ್ಮನ್ನು ಬಲಿಷ್ಠರನ್ನಾಗಿ ಮಾಡುವುದಿಲ್ಲ. ದುರ್ಬಲವಾದ ಮೈಕಟ್ಟು ಹೊಂದಿದ್ದ ಮಹಾತ್ಮ ಗಾಂಧಿಯವರನ್ನು ನೋಡಿ, ಅವರು ಆ ಕಾಲದ ಮಹಾಶಕ್ತಿಗಳಾಗಿದ್ದ ಬ್ರಿಟಿಷರನ್ನು ಎದುರಿಸಿದ್ದರು” ಎಂದು ರಾಹುಲ್ ಗಾಂಧಿ ಮೋದಿಯ ಕಾಲೆಳೆದಿದ್ದಾರೆ.
“ಮುಂದುವರಿದು, 56 ಇಂಚಿನ ಎದೆಯ ಹೆಮ್ಮೆಯ ನರೇಂದ್ರ ಮೋದಿ ಇದ್ದಾರೆ. ಆದರೆ, ಆಪರೇಷನ್ ಸಿಂಧೂರ್ ಸಮಯದಲ್ಲಿ ಟ್ರಂಪ್ ಕರೆ ಮಾಡಿದಾಗ ಅವರು ಪ್ಯಾನಿಕ್ ಅಟ್ಯಾಕ್‌ಗೆ ಒಳಗಾದರು. ಪಾಕಿಸ್ತಾನದೊಂದಿಗಿನ ಮಿಲಿಟರಿ ಸಂಘರ್ಷ ಎರಡು ದಿನಗಳಲ್ಲಿ ಕೊನೆಗೊಂಡಿತು. ಅವರು (ಮೋದಿ) ಟ್ರಂಪ್‌ಗೆ ಹೆದರುವುದಲ್ಲದೆ, ಅಂಬಾನಿ ಮತ್ತು ಅದಾನಿಯ ರಿಮೋಟ್ ಕಂಟ್ರೋಲ್‌ನಲ್ಲೂ ಕೂಡ ಇದ್ದಾರೆ” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
“1971ರಲ್ಲಿ ಆಗಿನ ಪ್ರಧಾನಿ ಇಂದಿರಾ ಗಾಂಧಿಯವರಿಗೆ ಅಮೆರಿಕ ಬೆದರಿಕೆ ಹಾಕಿತ್ತು. ಆದರೆ, ಅವರು ಹೆದರಲಿಲ್ಲ ಮಾಡಬೇಕಾದ್ದನ್ನು ಮಾಡಿದರು. ಟ್ರಂಪ್ ಮೋದಿಗೆ ಆಪರೇಷನ್ ಸಿಂಧೂರ್ ನಿಲ್ಲಿಸುವಂತೆ ಹೇಳಿದಾಗ, ಅವರು ನಿಲ್ಲಿಸಿದರು” ಎಂದಿದ್ದಾರೆ.
ಜಿಎಸ್‌ಟಿ, ನೋಟು ರದ್ದತಿಯಂತಹ ಮೋದಿ ಸರ್ಕಾರದ ಎಲ್ಲಾ ಪ್ರಮುಖ ನಿರ್ಧಾರಗಳು ಸಣ್ಣ ವ್ಯವಹಾರಗಳನ್ನು ನಾಶಮಾಡುವ ಮತ್ತು ದೊಡ್ಡ ವ್ಯವಹಾರಗಳಿಗೆ ಲಾಭ ತರುವ ಗುರಿಯನ್ನು ಹೊಂದಿವೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ನಮ್ಮ ವಿಧಾನವು ವಿಭಿನ್ನವಾಗಿದೆ. ನಾವು ಸಣ್ಣ ವ್ಯವಹಾರಗಳನ್ನು ಉತ್ತೇಜಿಸಲು ಬಯಸುತ್ತೇವೆ. ನಿಮ್ಮ ಫೋನ್‌ಗಳು ಮತ್ತು ಟಿ-ಶರ್ಟ್‌ಗಳ ಲೇಬಲ್‌ಗಳನ್ನು ಮೇಡ್ ಇನ್ ಚೀನಾ ಬದಲಾಗಿ ಮೇಡ್ ಇನ್ ಬಿಹಾರ ಎಂದು ಬದಲಾಯಿಸಲು ನಾವು ಬಯಸುತ್ತೇವೆ ಎಂದಿದ್ದಾರೆ.
ಪ್ರಧಾನಿ ಮೋದಿ ಮತಕ್ಕಾಗಿ ಏನು ಬೇಕಾದರೂ ಮಾಡಬಹುದು. ಅವರಿಗೆ ಯೋಗ ಮಾಡಲು ಹೇಳಿ, ಅವರು ಕೆಲವು ಆಸನಗಳನ್ನು ಮಾಡುತ್ತಾರೆ. ಸ್ಟೇಜ್ ಮೇಲೆ ಡ್ಯಾನ್ಸ್ ಮಾಡಲು ಹೇಳಿ ಮಾಡುತ್ತಾರೆ. ಚುನಾವಣಾ ದಿನದವರೆಗೆ ನೀವು ಏನು ಹೇಳಿದರೂ ಮೋದಿ ಅದನ್ನು ಮಾಡುತ್ತಾರೆ. ಏಕೆಂದರೆ ಚುನಾವಣೆಯ ನಂತರ ಅವರು ತಮ್ಮ ನೆಚ್ಚಿನ ಕಾರ್ಪೋರೇಷನ್‌ಗಳಿಗೆ ಮಾತ್ರ ಕೆಲಸ ಮಾಡುತ್ತಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ರಾಜ್ಯದಲ್ಲಿ ಇಂಡಿಯಾ ಒಕ್ಕೂಟ ಗೆದ್ದರೆ ಎಲ್ಲಾ ಜಾತಿ, ಧರ್ಮಗಳನ್ನು ಒಳಗೊಂಡ ಸರ್ಕಾರ ರಚಿಸುತ್ತೇವೆ ಎಂದಿದ್ದಾರೆ.
ಯುವಜನರ ಗಮನವನ್ನು ಬೇರೆಡೆಗೆ ತಿರುಗಿಸಲು, ನಿರುದ್ಯೋಗದಂತಹ ನೈಜ ಸಮಸ್ಯೆಗಳ ಬಗ್ಗೆ ಯುವಕರು ಪ್ರಶ್ನೆಗಳನ್ನು ಎತ್ತದಂತೆ ಮಾಡಲು ಪ್ರಧಾನಿಯವರು ರೀಲ್‌ಗಳನ್ನು ವೀಕ್ಷಿಸಲು ಹೇಳುತ್ತಿದ್ದಾರೆ. ಬಿಜೆಪಿ ನಿಮಗೆ ಅಗ್ಗದ ಇಂಟರ್ನೆಟ್ ನೀಡಿದೆ, ಇದರಿಂದ ನೀವು ರೀಲ್‌ಗಳನ್ನು ವೀಕ್ಷಿಸಬಹುದು ಮತ್ತು ರೀಲ್‌ಗಳನ್ನು ಮಾಡಬಹುದು ಎಂದು ಮೋದಿ ಹೇಳುತ್ತಾರೆ. ಆದರೆ ನೀವು ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ನಲ್ಲಿ ರೀಲ್‌ಗಳನ್ನು ವೀಕ್ಷಿಸಿದಾಗ, ಹಣವು ಅಂಬಾನಿಗೆ ಹೋಗುತ್ತದೆ ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಕರ್ನಾಟಕ, ಮಹಾರಾಷ್ಟ್ರ, ಹರಿಯಾಣ ಮತ್ತು ಮಧ್ಯಪ್ರದೇಶದ ಚುನಾವಣೆಗಳನ್ನು ಬಿಜೆಪಿ ಮತ್ತು ಆರ್‌ಎಸ್‌ಎಸ್ ಸಂಪೂರ್ಣವಾಗಿ ಕದ್ದಿದೆ. ಚುನಾವಣಾ ಆಯೋಗವು ಬಿಹಾರದ ಮತದಾರರ ಪಟ್ಟಿಯಿಂದ ಮಹಾಘಟಬಂಧನ್ ಬೆಂಬಲಿಗರ ಹೆಸರುಗಳನ್ನು ತೆಗೆದುಹಾಕಿದೆ. ನಾವು ಇದಕ್ಕೆ ಪುರಾವೆಗಳನ್ನು ಈಗಾಗಲೇ ಒದಗಿಸಿದ್ದೇವೆ. ನಾವು ಅದನ್ನು ಮತ್ತೊಮ್ಮೆ ಒದಗಿಸುತ್ತೇವೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ರ‍್ಯಾಲಿಯಲ್ಲಿ ರಾಹುಲ್ ಗಾಂಧಿಯವರೊಂದಿಗೆ ಇಂಡಿಯಾ ಒಕ್ಕೂಟದ ನಾಯಕ ಮುಖೇಶ್ ಸಾಹ್ನಿ ಕೂಡ ಇದ್ದರು. ಸಾಹ್ನಿ ಅವರನ್ನು ಇಂಡಿಯಾ ಒಕ್ಕೂಟದ ಉಪಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಲಾಗಿದೆ. ಆದರೆ, ಅವರ ವಿಕಾಸಶೀಲ ಇನ್ಸಾನ್ ಪಕ್ಷವು ಈಗ ಕೊನೆಗೊಂಡ ವಿಧಾನಸಭೆಯಲ್ಲಿ ಯಾವುದೇ ಶಾಸಕರನ್ನು ಹೊಂದಿಲ್ಲ.
ಸಾಹ್ನಿ ಅವರನ್ನು ಉಪ ಮುಖ್ಯಮಂತ್ರಿಯನ್ನಾಗಿ ಮಾಡುವ ಉದ್ದೇಶದ ಹಿಂದೆ ಒಂದು ಆಲೋಚನೆ ಇದೆ. ಸಮಾಜದ ಎಲ್ಲಾ ವರ್ಗಗಳನ್ನು ಪ್ರತಿನಿಧಿಸುವ ಸರ್ಕಾರವನ್ನು ನಾವು ರಚಿಸಲು ಬಯಸುತ್ತೇವೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಸಾಹ್ನಿ ಅತ್ಯಂತ ಹಿಂದುಳಿದ ನಿಶಾದ್ ಜಾತಿಗೆ ಸೇರಿದವರಾಗಿದ್ದು, ಇದು ಸಾಂಪ್ರದಾಯಿಕವಾಗಿ ಮೀನುಗಾರರ ಸಮುದಾಯವಾಗಿದೆ.
ತಮಿಳುನಾಡು | ಎಸ್‌ಐಆರ್ ವಿರುದ್ಧ ನಿರ್ಣಯ ಅಂಗೀಕರಿಸಿದ ಸರ್ವಪಕ್ಷ ಸಭೆ : ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ನಿರ್ಧಾರ


