Homeಮುಖಪುಟಇದು ಯಾರೋ ಕೆಲವು ಪೊಲೀಸರ ಅಚಾತುರ್ಯವಲ್ಲ : ಬದಲಾಗಬೇಕಿರುವುದು ಇಡೀ ನಮ್ಮ ಪೊಲೀಸ್‌ ವ್ಯವಸ್ಥೆ

ಇದು ಯಾರೋ ಕೆಲವು ಪೊಲೀಸರ ಅಚಾತುರ್ಯವಲ್ಲ : ಬದಲಾಗಬೇಕಿರುವುದು ಇಡೀ ನಮ್ಮ ಪೊಲೀಸ್‌ ವ್ಯವಸ್ಥೆ

ಒಬ್ಬ ಪೊಲೀಸ್ ಪೇದೆ ಅಥವಾ ಓರ್ವ ಅಧಿಕಾರಿ ಜನಸ್ನೇಹಿ ಆಗುವುದರಿಂದ ಲಾಭವಿಲ್ಲ. ಇಡೀ ವ್ಯವಸ್ಥೆಯನ್ನು ಜನಸ್ನೇಹಿಯನ್ನಾಗಿಸುವಲ್ಲಿ ಪ್ರಯತ್ನಗಳು ಸಾಗಬೇಕಿದೆ.

- Advertisement -
- Advertisement -

ಭಾರತದ ಪೊಲೀಸರಿಗೆ ಈಗ ಒದಗಿಬಂದಿರುವ ಸವಾಲು ಭಿನ್ನವಾದದ್ದು. ಕೋಮುಗಲಭೆ, ರಾಜಕೀಯ ಗಲಭೆ, ಸಮುದಾಯ ಕೇಂದ್ರಿತ ದಾಳಿಗಳು, ಗ್ಯಾಂಗ್ ವಾರ್, ಎಲ್ಲಾ ಬಗೆಯ ಭಯೊತ್ಪಾದಕರ ದಾಳಿ, ದೇಶದ ಆಂತರಿಕವಾಗಿ ಕಾನೂನು- ಸುವ್ಯವಸ್ಥೆ ಗೆ ಧಕ್ಕೆ ಬಂದಾಗ ಅವುಗಳನ್ನು ನಿಭಾಯಿಸುವ ಕ್ಷಮತೆ ಮತ್ತು ಸಾಮರ್ಥ್ಯ ಪೊಲೀಸರಲ್ಲಿದೆ.

ಆದರೆ ಹೀಗಿನ ಪರಿಸ್ಥಿತಿ ತುಂಬಾ ಭಿನ್ನವಾದದ್ದು. ಕೊರೊನಾ ಹಿನ್ನಲೆಯಲ್ಲಿ ಕೈಗೊಂಡಿರುವ ಕ್ರಮಗಳನ್ನು ಜಾರಿಗೊಳಿಸುವ ಸಂದರ್ಭದಲ್ಲಿ ಪೊಲೀಸರು ಬೇರೆ ತರವಾದ ಮನೋಸ್ಥಿತಿಯನ್ನೆ ಹೊಂದಿರಬೇಕಾಗಿದೆ. ಆದರೆ ಅವರಿಗೆ ಇದುವರೆಗೂ ರೂಢಿಸಿರುವ ಮನೋಸ್ಥಿತಿಯಿಂದ ಹೊರಗೆಳೆಯುವುದು ಕಷ್ಡದ ಕೆಲಸ. ಹೊಡಿ. ಬಡಿ, ಶೂಟ್ ಮಾಡು ಇವೇ ಅವರ ಕಾರ್ಯಕ್ಷಮತೆಯ ಪಾಠಗಳಾಗಿರುವಾಗ ಇದಕ್ಕಿಂತ ಭಿನ್ನವಾಗಿ ವರ್ತಿಸುವುದು ಅಷ್ಟು ಸುಲಭವಲ್ಲ. ಬಹಳಷ್ಟು ಪೊಲೀಸರು ಸಂದರ್ಭಾನುಸಾರವಾಗಿ ಮಾನವೀಯತೆಯನ್ನು ಮೆರೆದ ಉದಾಹರಣೆಗಳಿವೆ. ಆದರೆ ಪೊಲೀಸರು ಮಾನವ ಹಕ್ಕುಗಳನ್ನು ಹತ್ತಿಕ್ಕಿದ್ದೆ ಹೆಚ್ಚು ಎಂಬ ವರದಿಗಳಿವೆ.

ಲಾಕ್‌ಡೌನ್‌ನ ಈ ಹೊತ್ತಿನಲ್ಲಿ ಪೊಲೀಸರು ಸಮುದಾಯದ ಸ್ನೇಹಿತರಂತೆ ವರ್ತಿಸಬೇಕಾಗಿದೆ. ಜನರ ಹಿತದ ದೃಷ್ಟಿಯಲ್ಲಿ ಸರ್ಕಾರ ಜಾರಿಗೆ ತಂದ ನಿಯಮಗಳನ್ನು ಪಾಲಿಸುವುದು ಜನರ ಕರ್ತವ್ಯ. ಆದರೆ ಈ ಒತ್ತಡದಲ್ಲಿ ಜನರನ್ನು ಹೊಡೆದು ಬಡಿದು ನಿರ್ಬಂಧಿಸುವ ಸಂದರ್ಭ ಇದಲ್ಲ. ಸ್ವಾತಂತ್ರ್ಯ ನಂತರದ ಭಾರತದಲ್ಲಿ ಪೊಲೀಸ್ ವ್ಯವಸ್ಥೆ ಮತ್ತು ಸಂಸ್ಕೃತಿ ಬ್ರಿಟೀಷರ ಪಳೆಯುಳಿಕೆಯಂತೆ ಉಳಿದಿವೆ. ಅದು ಬದಲಾಗಿಲ್ಲ. ” socioyo police ” (ಸಾಮಾಜಿಕ ಆರಕ್ಷಕ) ಕಲ್ಪನೆಯಿಂದ ದೂರವೆ ಉಳಿದಿದೆ. ಜನಸ್ನೇಹಿ ಪೊಲೀಸ್ ಎಂಬ ಘೋಷಣೆಗಳು ಜನರಲ್ಲಿ ನಂಬಿಕೆ ಹುಟ್ಟಿಸಿಲ್ಲ. ಇದಕ್ಕೆ ಕಾರಣ ಭಾರತದ ಪೊಲೀಸ್ ವ್ಯವಸ್ಥೆ ಭಾರತದ ಸಾಮಾಜಿಕ ಸಂರಚನೆಗೆ ತಕ್ಕಂತೆ ಬದಲಾಗಿಲ್ಲ.

ಈ ಕಾರಣದಿಂದಲೆ ಪೊಲೀಸರು ಪದೇ ಪದೇ ಜನರ ತಿರಸ್ಕಾರಕ್ಕೆ ಮತ್ತು ಜನರ ಶತ್ರುವಿನಂತೆ ಕಾಣತೊಡಗುತ್ತಾರೆ. ಅಸಲಿಗೆ ಪೊಲೀಸರು ನಮ್ಮಂತೆ ಮನುಷ್ಯರು. ಇಲ್ಲಿ ಪೊಲೀಸರ ವ್ಯಕ್ತಿಯ ನೆಲೆಯಲ್ಲಿನ ದೋಷಗಳಿಗಿಂತ ವ್ಯವಸ್ಥೆ ಕಟ್ಟಿಕೊಟ್ಟಿರುವ ಲೋಪಗಳಿಗೆ ಪೊಲೀಸರೂ ಬಲಿಯಾಗುತ್ತಿದ್ದಾರೆ. ಇದು ವಿಪರ್ಯಾಸ.

ಪೊಲೀಸರೆಂದರೆ ಅವರು ರಾಜಕೀಯ ನಿರ್ಣಯಗಳ ಜಾರಿಯ ಕಾಲಾಳುಗಳು ಎಂಬ ಸ್ಥಾಪಿತ ಕಟ್ಟುಪಾಡುಗಳನ್ನು ಶಿಸ್ತು ಪಾಲನೆ ನೆಪದಲ್ಲಿ ಪೊಲೀಸ್ ಸಮುದಾಯದಲ್ಲಿ ಬಿತ್ತಲಾಗಿದೆ.

ಸುಬ್ರಹ್ಮಣ್ಯ ದೇವಸ್ಥಾನದ ಅರ್ಚಕನ ಮೇಲೆ ಹಲ್ಲೆ ನಡೆಸಿದ ಆರೋಪ ಪೊಲೀಸರನ್ನು ಸುಲಭವಾಗಿ ಪಾರಾಗಲು ಬಿಡುವುದಿಲ್ಲ.

ಅದೇ ಶಿಕಾರಿಪುರದ ಸುಣ್ಣದಳ್ಳಿಯ ಬಡ ರೈತನೊಬ್ಬ ಪೊಲೀಸರ ಏಟಿನಿಂದ ಸತ್ತರೂ ಪೊಲೀಸರು ಸುಲಭವಾಗಿ ಪಾರಾಗಿಬಿಡುತ್ತಾರೆ.

ಈ ಎರಡೂ ಜವಾಬ್ದಾರಿಯನ್ನು ಪೊಲೀಸ್ ವ್ಯವಸ್ಥೆಯೇ ನಿರ್ವಹಿಸುತ್ತಾ ಒಂದು ‘ಸಾಮಾಜಿಕ ಅನ್ಯಾಯ’ ವನ್ನು ಪ್ರಜ್ಞಾಪೂರ್ವಕವಾಗಿಯೇ ನಡೆಸಿಬಿಡುತ್ತದೆ.

ಒಬ್ಬ ಪೊಲೀಸ್ ಪೇದೆ ಅಥವಾ ಓರ್ವ ಅಧಿಕಾರಿ ಜನಸ್ನೇಹಿ ಆಗುವುದರಿಂದ ಲಾಭವಿಲ್ಲ. ಇಡೀ ವ್ಯವಸ್ಥೆಯನ್ನು ಜನಸ್ನೇಹಿಯನ್ನಾಗಿಸುವಲ್ಲಿ ಪ್ರಯತ್ನಗಳು ಸಾಗಬೇಕಿದೆ.


ಇದನ್ನೂ ಓದಿ: ವಿಡಿಯೊ| ಮಿತಿ ಮೀರುತ್ತಿರುವ ಪೊಲೀಸರ ವರ್ತನೆ-ಕೊರೊನಾ ವಾರಿಯರ್‌ ಸ್ವಯಂಸೇವಕನ ಕೈ ಮುರಿದ ದಾವಣಗೆರೆ ಪೊಲೀಸ್‌ 


ಅದಾದಾಗ ಪೊಲೀಸರ ಗುಂಡಿಗೆ, ಲಾಠಿ ಏಟಿಗೆ ಜನಸಾಮಾನ್ಯ, ನಿರಪರಾಧಿ, ಅಮಾಯಕ ಬಲಿಯಾಗುವುದು ತಪ್ಪುತ್ತದೆ. ಅದೇ ಕಾಲಕ್ಕೆ ಪೊಲೀಸರು ಕಟಕಟೆಯಲ್ಲಿ ನಿಲ್ಲವುದು ತಪ್ಪುತ್ತದೆ.

-(ಎನ್‌. ರವಿಕುಮಾರ್‌ ಟೆಲೆಕ್ಸ್‌ರವರ ಫೇಸ್‌ಬುಕ್‌ ವಾಲ್‌ನಿಂದ)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮೂರನೇ ಅತ್ಯಾಚಾರ ಪ್ರಕರಣ ದಾಖಲು : ಉಚ್ಛಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಬಂಧನ

ಅತ್ಯಾಚಾರ ಆರೋಪ ಕೇಳಿ ಬಂದ ಬಳಿಕ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿರುವ ಕೇರಳದ ಪಾಲಕ್ಕಾಡ್‌ನ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಭಾನುವಾರ (ಜ.11) ಬಂಧಿಸಲಾಗಿದೆ. ಪಾಲಕ್ಕಾಡ್‌ನ ಕೆಪಿಎಂ ರೀಜೆನ್ಸಿ ಹೋಟೆಲ್‌ನಿಂದ ಬೆಳಗಿನ ಜಾವ 12.30ರ ಸುಮಾರಿಗೆ ಮಾಂಕೂಟತ್ತಿಲ್...

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...

ದ್ವೇಷ ಭಾಷಣ ಮಸೂದೆ ರಾಜ್ಯಪಾಲರಿಂದ ತಿರಸ್ಕೃತವಾಗಿಲ್ಲ: ಸಿಎಂ ಸಿದ್ದರಾಮಯ್ಯ

ದ್ವೇಷ ಭಾಷಣ ಮಸೂದೆ ಸರ್ವಾನುಮತದಿಂದ ಅಂಗೀಕಾರವಾಗಿದ್ದು, ರಾಜ್ಯಪಾಲರು ಅದನ್ನು ವಾಪಸ್ ಕಳಿಸಿಲ್ಲ, ತಿರಸ್ಕರಿಸಿಲ್ಲ, ಅಂಕಿತವನ್ನೂ ಹಾಕಿಲ್ಲ. ಅವರು ಕರೆದಾಗ ಈ ಬಗ್ಗೆ ವಿವರಣೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಭಾನುವಾರ (ಜ.11) ಮಂಗಳೂರಿನಲ್ಲಿ...

ಐಸಿಸ್ ಗುರಿ ಮಾಡಿ ಸಿರಿಯಾ ಮೇಲೆ ವೈಮಾನಿಕ ದಾಳಿ ನಡೆಸಿದ ಅಮೆರಿಕ

ಸಿರಿಯಾದ ಇಸ್ಲಾಮಿಕ್ ಸ್ಟೇಟ್ (ಐಎಸ್) ಗುಂಪಿನ ತಾಣಗಳ ಮೇಲೆ ಅಮೆರಿಕ ಮತ್ತು ಅದರ ಪಾಲುದಾರ ಪಡೆಗಳು ದೊಡ್ಡ ಪ್ರಮಾಣದ ದಾಳಿಗಳನ್ನು ನಡೆಸಿವೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ (ಸೆಂಟ್‌ಕಾಮ್) ಘೋಷಿಸಿದೆ. ಡಿಸೆಂಬರ್ 13ರಂದು ಸಿರಿಯಾದಲ್ಲಿ...

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...