Homeಮುಖಪುಟವಿಕಾಸ್ ದುಬೆಗೆ ದಾಳಿಯ ಮಾಹಿತಿ ಸೋರಿಕೆ: ಪೋಲಿಸ್ ಬಂಧನ!

ವಿಕಾಸ್ ದುಬೆಗೆ ದಾಳಿಯ ಮಾಹಿತಿ ಸೋರಿಕೆ: ಪೋಲಿಸ್ ಬಂಧನ!

ದಾಳಿಯ ಮಾಹಿತಿ ಬಿಟ್ಟುಕೊಟ್ಟದ್ದರು ಎನ್ನುವ ಆರೋಪದ ಮೇಲೆ ಅಮಾನತುಗೊಂಡಿರುವ ಉತ್ತರ ಪ್ರದೇಶದ ಪೊಲೀಸ್ ಇನ್ಸ್‌ಪೆಕ್ಟರ್ ವಿನಯ್ ತಿವಾರಿ ಅವರನ್ನು ಪೋಲಿಸರು ಇಂದು ಬಂಧಿಸಿದ್ದಾರೆ.

- Advertisement -
- Advertisement -

ಕಳೆದ ವಾರ ನಡೆದ ದಾಳಿಯಲ್ಲಿ ದರೋಡೆಕೋರ ವಿಕಾಸ್ ದುಬೆ ಮತ್ತವನ ಗುಂಪು ಸೇರಿ ಎಂಟು ಮಂದಿ ಪೊಲೀಸರು ಹತ್ಯೆಗೈದಿದ್ದನು. ಅವನಿಗೆ ದಾಳಿಯ ಮಾಹಿತಿ ಬಿಟ್ಟುಕೊಟ್ಟದ್ದರು ಎನ್ನುವ ಆರೋಪದ ಮೇಲೆ ಅಮಾನತುಗೊಂಡಿರುವ ಉತ್ತರ ಪ್ರದೇಶದ ಪೊಲೀಸ್ ಇನ್ಸ್‌ಪೆಕ್ಟರ್ ವಿನಯ್ ತಿವಾರಿಯನ್ನು ಪೋಲಿಸರು ಇಂದು ಬಂಧಿಸಿದ್ದಾರೆ.

ವಿನಯ್ ತಿವಾರಿ, ಕಾನ್ಪುರದ ವಿಕಾಸ್ ದುಬೆ ಅವರ ಹಳ್ಳಿಯ ಚೌಬೆಪುರ ಪೊಲೀಸ್ ಠಾಣೆಯ ಉಸ್ತುವಾರಿ ವಹಿಸಿದ್ದರು ಮತ್ತು ಹಿಂದಿನ ಪ್ರಕರಣಗಳಲ್ಲಿ ಅವರ ವಿರುದ್ಧದ ಆರೋಪಗಳಿದ್ದವು.

“ಸಾಕಷ್ಟು ಸಾಕ್ಷ್ಯಾಧಾರಗಳ ನಂತರ ನಾವು ಬಂಧನಗಳನ್ನು ಮಾಡಿದ್ದೇವೆ. ಯಾರಾದರೂ ಪೊಲೀಸರ ಮೇಲೆ ಹಲ್ಲೆ ನಡೆಸಿದರೆ ಅಥವಾ ಕೆಲಸ ಮಾಡುವುದನ್ನು ತಡೆಯುತ್ತಿದ್ದರೆ ಅಥವಾ ಪೊಲೀಸರ ಮೇಲೆ ಹಲ್ಲೆ ನಡೆಸಲು ಸಂಚು ಮಾಡಿದರೆ, ಅವರು ಪೋಲೀಸರೇ  ಆಗಿದ್ದರೂ ನಾವು ಅವರ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ” ಎಂದು ಕಾನ್ಪುರದ ಪೊಲೀಸ್ ಮುಖ್ಯಸ್ಥ ದಿನೇಶ್ ಕುಮಾರ್ ಪಿ ಹೇಳಿದ್ದಾರೆ.

ಅಪರಾಧಿ ಜೊತೆಗಿನ ಸಂಪರ್ಕದಲ್ಲಿದ್ದ ಕಾರಣ ವಿನಯ್ ತಿವಾರಿ ಅವರನ್ನು ಭಾನುವಾರ ಅಮಾನತುಗೊಳಿಸಲಾಗಿದೆ. ಅದೇ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್‌ಪೆಕ್ಟರ್ ಕೆ.ಕೆ.ಶರ್ಮಾ ಅವರನ್ನೂ ಬಂಧಿಸಲಾಗಿದೆ.

ವಿಕಾಸ್ ದುಬೆ ಅವರ ಆಪ್ತರಲ್ಲಿ ಒಬ್ಬರಾದ ಅಮನ್ ದುಬೆ ಅವರನ್ನು ಇಂದು ಬೆಳಿಗ್ಗೆ ಗುಂಡಿಕ್ಕಿ ಕೊಲ್ಲಲಾಯಿತು ಮತ್ತು ಇನ್ನೂ ಇಬ್ಬರು ಸಹಚರರನ್ನು ಬಂಧಿಸಲಾಗಿದೆ.

ಕೊಲೆ, ಅಪಹರಣ ಮತ್ತು ಸುಲಿಗೆ ಸೇರಿದಂತೆ 60 ಪ್ರಕರಣಗಳಲ್ಲಿ ಆರೋಪಿಯಾಗಿರುವ ಕುಖ್ಯಾತ ದರೋಡೆಕೋರ ವಿಕಾಸ್ ದುಬೆ ಇಂದು ಫರಿದಾಬಾದ್, ಗುರುಗ್ರಾಮ್ ಬಳಿ ಹೊಟೇಲ್ ನಲ್ಲಿ ಕಾಣಿಸಿಕೊಂಡಿದ್ದಾನೆ ಎಂದು ವರದಿಯಾಗಿದೆ.

ಕಳೆದ ಕೆಲವು ದಿನಗಳಿಂದ, ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದ ಪತ್ರವೊಂದರಲ್ಲಿ ವಿಕಾಸ್ ದುಬೆಗೆ ಪೊಲೀಸರು ಸಹಾಯ ಮಾಡಿದ್ದಾರೆ ಎಂದು ಸೂಚಿಸಲಾಗಿತ್ತು. ಈ ಆಧಾರದಲ್ಲಿ ತನಿಖೆ ನಡೆಸಿ ವಿನಯ್ ತಿವಾರಿಯನ್ನು ಬಂಧಿಸಲಾಗಿದೆ.

ಪತ್ರವನ್ನು ಕಡೆಗಣಿಸಿದ್ದಾರೆ ಎಂದು ಆರೋಪಿಸಿರುವ ಅನಂತ್ ಡಿಯೋ ಅವರನ್ನು ಉತ್ತರ ಪ್ರದೇಶ ಸರ್ಕಾರ ವರ್ಗಾಯಿಸಿದೆ. ವಿಶೇಷ ಕಾರ್ಯಪಡೆಯ ಡೆಪ್ಯೂಟಿ ಇನ್ಸ್‌ಪೆಕ್ಟರ್ ಜನರಲ್ ಆಗಿರುವ ಶ್ರೀ ಡಿಯೊ ಅವರನ್ನು ಮೊರಾದಾಬಾದ್‌ನ ಪ್ರಾಂತೀಯ ಸಶಸ್ತ್ರ ಕಾನ್‌ಸ್ಟಾಬ್ಯುಲರಿಗೆ ವರ್ಗಾಯಿಸಲಾಗಿದೆ`


ಇದನ್ನೂ ಓದಿ : ಯುಪಿಯ 8 ಪೋಲಿಸರ ಹತ್ಯೆ : ದೆಹಲಿ ಹೋಟೆಲ್‌ನಲ್ಲಿ ಆರೋಪಿ ವಿಕಾಸ್ ದುಬೆ ಸುಳಿವು…

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೋವಿಡ್ ಭ್ರಷ್ಟ ಸುಧಾಕರ್ ಪರವಾಗಿ ಮತ ಕೇಳಲು ಪ್ರಧಾನಿ ಮೋದಿ ಚಿಕ್ಕಬಳ್ಳಾಪುರಕ್ಕೆ ಬರುತ್ತಿದ್ದಾರೆ :...

0
ಪ್ರಧಾನಿ ಮೋದಿಯವರು ಹತ್ತು ವರ್ಷದಲ್ಲಿ ಕೊಟ್ಟ ಒಂದೂ ಆಶ್ವಾಸನೆಯನ್ನೂ ಈಡೇರಿಸದೆ ಭಾರತೀಯರ ನಂಬಿಕೆಗಳಿಗೆ ದ್ರೋಹ ಬಗೆದಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಾಗೇಪಲ್ಲಿಯಲ್ಲಿ ನಡೆದ ಪ್ರಜಾಧ್ವನಿ-2 ಬೃಹತ್ ಜನ ಸಮಾವೇಶದಲ್ಲಿ...