Homeದಿಟನಾಗರಫ್ಯಾಕ್ಟ್‌ಚೆಕ್‌‌: ಚೀನಾದ ನೂರು ಸೈನಿಕರು ಸತ್ತರೆಂದು ಪ್ರಕಟಿಸಿ, ಡಿಲೀಟ್ ಮಾಡಿದ ರಿಪಬ್ಲಿಕ್‌ ಟಿವಿ!

ಫ್ಯಾಕ್ಟ್‌ಚೆಕ್‌‌: ಚೀನಾದ ನೂರು ಸೈನಿಕರು ಸತ್ತರೆಂದು ಪ್ರಕಟಿಸಿ, ಡಿಲೀಟ್ ಮಾಡಿದ ರಿಪಬ್ಲಿಕ್‌ ಟಿವಿ!

ಭಾರತದ ಮತ್ತು ಚೀನಾ ನಡುವಿನ ಹಿಂಸಾತ್ಮಕ ಮುಖಾಮುಖಿಯಲ್ಲಿ 100 ಕ್ಕೂ ಹೆಚ್ಚು ಚೀನಿ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಚೀನಾದ ಮಾಜಿ ಮಿಲಿಟರಿ ಅಧಿಕಾರಿ ಜಿಯಾನ್ಲಿ ಯಾಂಗ್ ಒಪ್ಪಿಕೊಂಡಿದ್ದಾರೆ ಎಂದು ಹೇಳಿದ್ದರು.

- Advertisement -
- Advertisement -

ಯಾಂಗ್ ಜಿಯಾನ್ಲಿ ಎಂಬ ಚೀನಾದ ಮಾಜಿ ಅಧಿಕಾರಿ ಗಾಲ್ವಾನ್‌ನಲ್ಲಿ 100 ಚೀನಿಯರು ಸಾವನ್ನಪ್ಪಿದ್ದಾರೆ ಎಂದಿದ್ದಾರೆಂದು ರಿಪಬ್ಲಿಕ್ ಟಿವಿ, ಬಿಜೆಪಿ ನಾಯಕ ಕಪಿಲ್ ಮಿಶ್ರಾ ಸೇರಿದಂತೆ ಹಲವಾರು ಜನರು ಸಾಮಾಜಿಕ ಜಾಲತಾಣದಲ್ಲಿ ಹಂಚಿದ್ದಾರೆ.

ಬಿಜೆಪಿ ನಾಯಕ ಕಪಿಲ್ ಮಿಶ್ರಾ ಅಸ್ಪಷ್ಟ ವೆಬ್‌ಸೈಟ್ kreately.in ‌ನ ವರದಿಯನ್ನು ಟ್ವೀಟ್ ಮಾಡಿ “ಚೀನಾದ ಮಾಜಿ ಮಿಲಿಟರಿ ಅಧಿಕಾರಿ ಚೀನಾದ ಕಮ್ಯುನಿಸ್ಟ್ ಪಕ್ಷದ ನಾಯಕನ ಮಗ ಜಿಯಾನ್ಲಿ ಯಾಂಗ್, ಜೂನ್ 15 ರ ರಾತ್ರಿ ಭಾರತ-ಚೀನಾದ ಸೈನಿಕರ ನಡುವಿನ ಭೀಕರ ಸಂಘರ್ಷದಲ್ಲಿ 100 ಕ್ಕೂ ಹೆಚ್ಚು ಚೀನೀ ಸೈನಿಕರು ಕೊಲ್ಲಲ್ಪಟ್ಟರು ಎಂದು ಒಪ್ಪಿಕೊಂಡಿದ್ದಾರೆ.” ಎಂದು ಬರೆದಿದ್ದಾರೆ. ಕಪಿಲ್ ಮಿಶ್ರಾರ ಈ ಟ್ವೀಟ್ 11,700 ಕ್ಕೂ ಹೆಚ್ಚು ಬಾರಿ ರಿಟ್ವೀಟ್‌ ಆಗಿದೆ.

ಜುಲೈ 7 ರಂದು ಪ್ರಕಟವಾದ ರಿಪಬ್ಲಿಕ್ ಟಿವಿ ವರದಿಯಲ್ಲಿ ಕೂಡ ಇದೆ ಮಾಹಿತಿಯನ್ನು ನೀಡಲಾಗಿದೆ. “ಭಾರತ-ಚೀನಾ ನಡುವಿನ ಹಿಂಸಾತ್ಮಕ ಮುಖಾಮುಖಿಯಲ್ಲಿ 100 ಕ್ಕೂ ಹೆಚ್ಚು ಚೀನಿ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಚೀನಾದ ಮಾಜಿ ಮಿಲಿಟರಿ ಅಧಿಕಾರಿ ಜಿಯಾನ್ಲಿ ಯಾಂಗ್ ಒಪ್ಪಿದ್ದಾರೆ” ಎಂದು ಬರೆದಿದೆ. ಮೈನೇಷನ್ ಕೂಡಾ ರೀತಿಯ ವರದಿಯನ್ನು ಪ್ರಕಟಿಸಿತು.

ರಿಪಬ್ಲಿಕ್ ಟಿವಿಯ ಲೇಖನವು ತ್ಸೈ ಇಂಗ್-ವೆನ್ ಎಂಬ ಖಾತೆಯಿಂದ ಪಡೆದುಕೊಂಡದ್ದಾಗಿದೆ.

ಇದನ್ನು ಮೊದಲಿಗೆ @NewsLineIFE  ಎಂಬ ಟ್ವಿಟ್ಟರ್‌ ಹ್ಯಾಂಡಲ್ ಟ್ವಿಟ್ಟರಿನಲ್ಲಿ ಹಂಚಿತ್ತು.

ಫ್ಯಾಕ್ಟ್‌‌ಚೆಕ್‌:

ಈ ವಿವಾದಾತ್ಮಕ ಸಂದೇಶದ ಎಲ್ಲಾ ವಾದಗಳು ಸಂಶಯಾಸ್ಪದ ವೆಬ್‌ಸೈಟ್‌ಗಳು ಮತ್ತು ಖಾತೆಗಳಿಂದ ಹೊರಹೊಮ್ಮಿದವುಗಳಾಗಿದೆ.

@NewsLineIFE ಎಂಬ ಟ್ವಿಟ್ಟರ್‌‌ ಹ್ಯಾಂಡಲ್ ಈ ಸಂದೇಶವನ್ನು ಮೊದಲ ಬಾರಿಗೆ ಹಂಚಿಕೊಂಡಿತು. ಜುಲೈ 2 ರಂದು ಈ ಹ್ಯಾಂಡಲ್ ಚೀನಾದ ಐವರು ಸೈನಿಕರು ಸಾವನ್ನಪ್ಪಿದರು ಮತ್ತು 11 ಮಂದಿ ಗಾಯಗೊಂಡಿದ್ದಾರೆ ಎಂಬ ಆಧಾರರಹಿತವಾಗಿ ಬರೆದಿತ್ತು. ಅದರ ನಂತರ ಚೀನಾದ 43 ಸೈನಿಕರು ಕೊಲ್ಲಲ್ಪಟ್ಟರು ಎಂದು ಟ್ವೀಟ್ ಮಾಡಿತ್ತು ಆದರೆ ಎರಡೂ ಟ್ವೀಟ್‌ಗಳನ್ನು ಈಗ ಅಳಿಸಲಾಗಿದೆ.

@NewsLineIFE  ಈ ಸುದ್ದಿಯನ್ನು ಟ್ವೀಟ್ ಮಾಡುವಾಗ @drapr007 ಎಂಬ ಟ್ವಿಟ್ಟರ್‌ ಹ್ಯಾಂಡಲ್‌ಅನ್ನು ಟ್ಯಾಗ್ ಮಾಡಿತ್ತು. ಈ ಹ್ಯಾಂಡಲ್ ಈ ವಿಚಾರವನ್ನು ಜುಲೈ 1 ರಂದು ಅಂದರೆ ಒಂದು ದಿನದ ಹಿಂದೆಯೇ  ಬರೆದಿತ್ತು.

ಇದಲ್ಲದೆ 100 ಚೀನೀ ಸೈನಿಕರ ಸಾವುಗಳ ಕುರಿತು ಲೇಖನವನ್ನು ಪ್ರಕಟಿಸಿದ ವೆಬ್‌ಸೈಟ್ kreately.in ಹೊಸದಾಗಿ ರಚಿಸಲಾದ ಸಾಮಾಜಿಕ ಜಾಲತಾಣದ ವೇದಿಕೆಯಾಗಿದೆ. ಅದರ ಟ್ವಿಟರ್ ಬಯೋ “ ನೀವೆ ಪ್ರಕಟಿಸಿ, ಸೈನ್‌ಅಪ್ ಮಾಡಿ ಮತ್ತು ಬರಹಗಾರರಾಗಿ, ಈಗಿದು ಸುಲಭ…” ಎಂದು ಬರೆದಿದೆ. ಈ ವೆಬ್‌ಸೈಟ್ ಪತ್ರಿಕೋದ್ಯಮದ ವೇದಿಕೆಯಲ್ಲ, ಅದು ಬಳಕೆದಾರರು ಕಳುಹಿಸಿದ ವಿಷಯವನ್ನು ಪ್ರಕಟಿಸುತ್ತದೆ. ಅಲ್ಲದೆ ಇದನ್ನು ಯಾರು ನಡೆಸುತ್ತಿದ್ದಾರೆ ಹಾಗೂ ಅವರ ವಿಳಾಸದಂತಹ ಯಾವುದೆ ಮಾಹಿತಿಯನ್ನು ಅದು ಹೊಂದಿಲ್ಲ.

ಅಷ್ಟೇ ಅಲ್ಲದೆ ನ್ಯೂಸ್ಕಾಸ್ಟ್- ಪ್ರತ್ಯಕ್ಷಾ.ಕಾಂನ ಲೇಖನವನ್ನು ಹಲವಾರು ವ್ಯಕ್ತಿಗಳು ಹಂಚಿಕೊಂಡಿದ್ದು, 100 ಚೀನೀ ಸೈನಿಕರನ್ನು ಭಾರತೀಯ ಸೇನೆಯಿಂದ ಕೊಲ್ಲಲಾಗಿದೆ ಎಂದು ವೆಬ್‌ಸೈಟ್ ಹೇಳಿಕೊಂಡಿದೆ ಮತ್ತು ಜಿಯಾನ್ಲಿ ಯಾಂಗ್ ಅವರ ವಾಷಿಂಗ್ಟನ್ ಟೈಮ್ಸ್ ಅಭಿಪ್ರಾಯವನ್ನು ಈ ವೆಬ್‌ಸೈಟ್‌ ಉಲ್ಲೇಖಿಸಿದೆ.

ವಾಷಿಂಗ್ಟನ್ ಟೈಮ್ಸ್ ನಲ್ಲಿ ಯಾಂಗ್ ಜಿಯಾನ್ಲಿಯ ಅಭಿಪ್ರಾಯದ ತುಣುಕು

ಯಾಂಗ್ ಜಿಯಾನ್ಲಿ ಭಾರತದೊಂದಿಗಿನ ಘರ್ಷಣೆಯಲ್ಲಿ 100 ಚೀನೀ ಸೈನಿಕರು ಸಾವನ್ನಪ್ಪಿದ್ದಾರೆಂದು ಮುಖ್ಯವಾಹಿನಿಯಲ್ಲಿ ಇಲ್ಲದ, ನಂಬಲರ್ಹವಲ್ಲದ ಮಾಧ್ಯಮಗಳು ಹೇಳಿವೆ ಎಂದು ಆಲ್ಟ್ ನ್ಯೂಸ್ ಕಂಡುಹಿಡಿದಿದೆ.

ಜಿಯಾನ್ಲಿ ನಿಜಕ್ಕೂ ಮಾಜಿ ಸಿಪಿಸಿ ನಾಯಕ ಯಾಂಗ್ ಫೆಂಗ್‌ಶೂನ್‌ರ ಮಗನಾಗಿದ್ದರೂ, ಅವರು ಚೀನಾದ ಮಾಜಿ ಮಿಲಿಟರಿ ನಾಯಕನಲ್ಲ. ಜಿಯಾನ್ಲಿ ವಾಸ್ತವವಾಗಿ ಅಮೆರಿಕಾದಲ್ಲಿ ವಾಸಿಸುವ ಚೀನಾದ ಭಿನ್ನಮತೀಯ ಆಗಿದ್ದರೆ. ಅವರು ಅಮೆರಿಕಾದಲ್ಲಿ ಅಧ್ಯಯನ ಮಾಡಿದ ಮಾನವ ಹಕ್ಕುಗಳ ಕಾರ್ಯಕರ್ತರಾಗಿದ್ದಾರೆ. ಇವರು ಮಾಜಿ ಟಿಯಾನನ್ಮೆನ್ ಸ್ಕ್ವೇರ್ ಕಾರ್ಯಕರ್ತರಾಗಿದ್ದು, ಕಾರ್ಮಿಕ ಅಶಾಂತಿಯ ಧ್ವನಿಯೆತ್ತಲು ಯತ್ನಿಸಿದ್ದಕ್ಕಾಗಿ 2002 ರಲ್ಲಿ ಚೀನಾ ಸರ್ಕಾರವು ಜೈಲಿಗಟ್ಟಿತ್ತು ಹಾಗೂ 2007 ರಲ್ಲಿ ಬಿಡುಗಡೆಯಾಗಿದ್ದರು.

ಇಂಡೋ-ಚೀನಾ ಘರ್ಷಣೆಗಳ ಕುರಿತು ಅವರು ಇತ್ತೀಚೆಗೆ ದಿ ವಾಷಿಂಗ್ಟನ್ ಟೈಮ್ಸ್ ನಲ್ಲಿ ತಮ್ಮ ಅಭಿಪ್ರಾಯವನ್ನು ಬರೆದಿದ್ದು, ಅದರಲ್ಲಿ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೋ ಲಿಜಿಯಾನ್ ಚೀನಾದ ಸಾವಿನ ಸಂಖ್ಯೆಯನ್ನು ಒಪ್ಪಿಕೊಂಡಿಲ್ಲ ಹಾಗೂ ಕನಿಷ್ಠ 40 ಚೀನಾ ಸೈನಿಕರ ಸಾವುಗಳ ಬಗ್ಗೆ ಭಾರತೀಯ ವರದಿಗಳು “ಸುಳ್ಳು ಮಾಹಿತಿ” ಎಂದು ಬರೆದಿದ್ದರು.

“ಯಾವ ದೇಶವು ತನ್ನ ಗಡಿಯಲ್ಲಿರುವ ಸಮವಸ್ತ್ರಧಾರಿ ಸೈನಿಕರ ಹುತಾತ್ಮತೆಯನ್ನು ಅಂಗೀಕರಿಸುವುದಿಲ್ಲ, ಅವರಿಗೆ ಗೌರವಾನ್ವಿತ ಕೊನೆಯ ಗೌರವ ಸಲ್ಲಿಸಲಿ. ಚೀನಾ ತಾನು ಸೈನ್ಯವನ್ನು ಎದುರಾಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಕಳೆದುಕೊಂಡೆ ಎಂದು ಒಪ್ಪಿಕೊಳ್ಳುವುದು ಆಂತರಿಕ ಅಶಾಂತಿಗೆ ಕಾರಣವಾಗಬಹುದು ಎಂಬ ಭಯದಲ್ಲಿ ತತ್ತರಿಸಿದೆ” ಎಂದು ಜಿಯಾನ್ಲಿ ಬರೆದಿದ್ದಾರೆ.

ಈ ವರದಿಯಲ್ಲಿ ಎಲ್ಲಿಯೂ ಚೀನಾದ ಸೈನಿಕರ ಸಾವಿಗೆ ಸಂಖ್ಯೆಯನ್ನು ಜಿಯಾನ್ಲಿ ಉಲ್ಲೇಖಿಸಿಲ್ಲ.

ನಕಲಿ ಟ್ವಿಟ್ಟರ್‌ ಖಾತೆಯಿಂದ ಸುದ್ದಿಯನ್ನು ಪಡೆದ ರಿಪಬ್ಲಿಕ್ ಟಿವಿ.

ರಿಪಬ್ಲಿಕ್ ಟಿವಿ @tsaiing_wen ಎಂಬ ಖಾತೆಯಿಂದ ಸುದ್ದಿಯನ್ನು ಪಡೆದಿದೆ. ಇದು ಚೀನಾ ಗಣರಾಜ್ಯದ (ತೈವಾನ್) ಅಧ್ಯಕ್ಷರದ್ದೆಂದು ಹೇಳುವ ನಕಲಿ ಖಾತೆಯಾಗಿದೆ. ಇದರಲ್ಲಿ ಟ್ವಿಟ್ಟರ್‌ ಪರಿಶೀಲನೆಯ ನೀಲಿ ಟಿಕ್ ಇಲ್ಲ.

ವೈರಲ್ ಸಂದೇಶದಲ್ಲಿ ಬಳಸಲಾದ ಜಿಯಾನ್ಲಿಯ ಹಳೆಯ ಫೋಟೋಗಳು

ಜಾಗತಿಕ ಮಾನವ ಹಕ್ಕುಗಳ ಕುರಿತ ಯುಎಸ್ ಹೌಸ್ ಉಪಸಮಿತಿಯ ಮುಂದೆ ಚೀನಾದಲ್ಲಿನ ಮಾನವ ಹಕ್ಕುಗಳ ಪರಿಸ್ಥಿತಿಯ ಬಗ್ಗೆ ಹೇಳುತ್ತಿರುವ 2013 ರ ಫೋಟೋವನ್ನು kreately.com ಬಳಸಿದೆ.

ನ್ಯೂಸ್ಕಾಸ್ಟ್- ಪ್ರತ್ಯಕ್ಷಾ.ಕಾಮ್ ಬಳಸಿದ ಚಿತ್ರ ಕೂಡಾ ವಿಕಿಪೀಡಿಯಾದಿಂದ ಪಡೆಯಲಾಗಿದೆ. ಅದರ ವಿವರಣೆಯ ಪ್ರಕಾರ, “ಯು.ಎಸ್. ಕಾಂಗ್ರೆಸ್ ರೇಬರ್ನ್ ಹೌಸ್ ಆಫೀಸ್ ಕಟ್ಟಡದಲ್ಲಿ ನಡೆದ 13 ನೇ ಇಂಟೆರೆಥ್ನಿಕ್ ಇಂಟರ್ ಫೇಯ್ತ್ ಲೀಡರ್ಶಿಪ್ ಕಾನ್ಫರೆನ್ಸ್‌ನ ಉದ್ಘಾಟನಾ ಸಮಾರಂಭದಲ್ಲಿ ಡಾ. ಯಾಂಗ್ ಜಿಯಾನ್ಲಿಯವರ ಚಿತ್ರ. ಡಿಸೆಂಬರ್ 10, 2018.” ಎಂದು ಹೇಳಿದೆ.

 ಸುಳ್ಳು ಸುದ್ದಿಗಳ ತಂಡಗಳು

ಭಾರತದೊಂದಿಗಿನ ಘರ್ಷಣೆಯಲ್ಲಿ 100 ಚೀನಾದ ಸೈನಿಕರು ಸಾವನ್ನಪ್ಪಿದ್ದಾರೆ ಎಂಬ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಡಿತ್ತು. ಇದನ್ನು ಹಂಚಿದವರಲ್ಲಿ ಜಿಡಿ ಬಕ್ಷಿ, ರಮೇಶ್ ಸೋಲಂಕಿ, ಚಯಾನ್ ಚಟರ್ಜಿ ಪ್ರಮುಖರಾಗಿದ್ದಾರೆ. ಇವರಲ್ಲಿ ಹೆಚ್ಚಿನವರು newscast-pratyakhsha.com ಎಂಬ ವೆಬ್‌ಸೈಟಿನ ಆಧಾರವಿಲ್ಲದ ಸುದ್ದಿಗಳನ್ನು ಹಂಚಿದ್ದಾರೆ.


ಓದಿ: ಕನ್ನಡ ಖಾಸಗಿ ಚಾನೆಲ್ ಮಾಲಿಕರು ಪ್ರತಿ ಜಿಲ್ಲೆಯಲ್ಲಿ ಕೊರೊನಾ ಆಸ್ಪತ್ರೆ ಕಟ್ಟುತ್ತಿರುವುದು ನಿಜವೇ ?


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

2ಜಿ ತರಂಗಾಂತರ ತೀರ್ಪಿನ ಸ್ಪಷ್ಟನೆ ಕೋರಿದ್ದ ಕೇಂದ್ರದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ ರಿಜಿಸ್ಟ್ರಿ

0
2ಜಿ ತರಂಗಾಂತರ ಹಂಚಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 2012ರಲ್ಲಿ ನೀಡಿರುವ ತೀರ್ಪಿನ ಸ್ಪಷ್ಟನೆ ಕೋರಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಾರ್ ನಿರಾಕರಿಸಿದ್ದಾರೆ. ಕೆಲ ಸಂದರ್ಭಗಳಲ್ಲಿ ಸಾರ್ವಜನಿಕ ಹರಾಜು ಹೊರತುಪಡಿಸಿ...