ಉತ್ತರ ಪ್ರದೇಶದ ಉನ್ನಾವೊದ ಪೊಲೀಸ್ ಠಾಣೆ ಮುಂದೆ ಕಾಣೆಯಾದ ತನ್ನ ಮಗಳನ್ನು ಹುಡುಕಲು ಸಹಾಯಕ್ಕಾಗಿ ಬೇಡುತ್ತಿರುವ ತಂದೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ವರದಿಗಳ ಪ್ರಕಾರ, ಈ ಘಟನೆಯು ಮೇ 6 ರಿಂದ ಶಾಲೆಯಿಂದ ಮನೆಗೆ ಬಾರದ ಕಾರಣ ಕಾಣೆಯಾಗಿರುವ ಅಪ್ರಾಪ್ತ ಬಾಲಕಿಗೆ ಸಂಬಂಧಿಸಿದೆ. ನಾಲ್ಕು ದಿನಗಳು ಕಳೆದರೂ, ಹದಿಹರೆಯದ ಬಾಲಕಿಯನ್ನು ಪತ್ತೆ ಹಚ್ಚಲು ಪೊಲೀಸರು ವಿಫಲರಾಗಿದ್ದಾರೆ ಎಂದು ವರದಿಯಾಗಿದೆ.
ವೈರಲ್ ವೀಡಿಯೊದಲ್ಲಿ, ತಂದೆ ಸದರ್ ಕೊಟ್ವಾಲಿ ಪೊಲೀಸ್ ಠಾಣೆಯಲ್ಲಿ ಕಣ್ಣೀರು ಸುರಿಸುತ್ತಿರುವುದನ್ನು ಕಾಣಬಹುದು. ತನ್ನ ಮಗಳ ನಾಪತ್ತೆಯ ತನಿಖೆಯಲ್ಲಿ ಠಾಣೆಯ ಉಸ್ತುವಾರಿ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿದ್ದಾರೆ.
“ಪೊಲೀಸ್ ಠಾಣೆ ಮತ್ತು ಹೊರಠಾಣೆ ನಡುವೆ ನಮ್ಮನ್ನು ಹಿಂದಕ್ಕೆ ಮತ್ತು ಮುಂದಕ್ಕೆ ಕಳುಹಿಸಲಾಗುತ್ತಿದೆ. ಇಂದು ನನ್ನ ಮಗಳು ಸಿಗುತ್ತಾಳೆ ಎಂದು ನಾನು ಆಶಿಸಿದ್ದೆ. ಆದರೆ, ಈಗ ಅವರು ನನ್ನ ಮಗಳು ಸಿಗುವುದಿಲ್ಲ ಎಂದು ಹುಡುಕುತ್ತಲೇ ಇರಲು ಹೇಳುತ್ತಿದ್ದಾರೆ” ಎಂದು ತಂದೆ ಹೇಳುತ್ತಿರುವುದು ವಿಡಿಯೊದಲ್ಲಿ ಸೆಯಾಗಿದೆ.
“ನಮಗೆ ನ್ಯಾಯ ಬೇಕು” ಎಂದು ಬೇಡಿಕೊಳ್ಳುತ್ತಾ ಆ ವ್ಯಕ್ತಿ ಅಸಹನೀಯವಾಗಿ ಅಳುತ್ತಿರುವುದನ್ನು ವೀಡಿಯೊಯೊದಲ್ಲಿ ರೆಕಾರ್ಡ್ ಆಗಿದೆ.
ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ, ಉತ್ತರ ಪ್ರದೇಶ ಪೊಲೀಸರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ಪ್ರಕರಣದಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಉನ್ನಾವೋ ಪೊಲೀಸರಿಗೆ ನಿರ್ದೇಶನ ನೀಡಿದ್ದಾರೆ.
ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಕುರಿತ ಟ್ರೋಲ್ ವಿರೋಧಿಸಿದ ಅಸಾದುದ್ದೀನ್ ಓವೈಸಿ


