ಮಹಾರಾಷ್ಟ್ರದ ಥಾಣೆಯ ಶಿಕ್ಷಣ ಸಂಸ್ಥೆಯೊಂದರ ಸ್ಥಾಪಕನೊಬ್ಬನನ್ನು ತನ್ನ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಶಿಕ್ಷಕಿಯೊಬ್ಬರ ಮೇಲೆ ಪದೇ ಪದೇ ಅತ್ಯಾಚಾರ ಎಸಗಿದ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ. ಆರೋಪಿಯನ್ನು 54 ವರ್ಷದ ರಮೇಶ್ಚಂದ್ರ ಶೋಭನಾಥ್ ಮಿಶ್ರಾ ಎಂದು ಗುರುತಿಸಲಾಗಿದ್ದು, ಆತನನ್ನು ಗುರುವಾರ ರಾತ್ರಿ ವಶಕ್ಕೆ ಪಡೆಯಲಾಗಿದೆ ಎಂದು ಶ್ರೀ ನಗರದ ಹಿರಿಯ ಇನ್ಸ್‌ಪೆಕ್ಟರ್ ಗುಲ್ಜರಿಲಾಲ್ ಫಡ್ತಾರೆ ತಿಳಿಸಿದ್ದಾರೆ. ಥಾಣೆ
ಸಂತ್ರಸ್ತೆಯಾಗಿರುವ 42 ವರ್ಷದ ಶಿಕ್ಷಕಿ ನೀಡಿದ ದೂರಿನ ಪ್ರಕಾರ, ಆರೋಪಿ ತನಗೆ ಕೆಲಸ ಕೊಡಿಸುವುದಾಗಿ ತನ್ನಿಂದ 6 ಲಕ್ಷ ರೂಪಾಯಿಗಳನ್ನು ಪಡೆದಿದ್ದಾರೆ ಎಂದು ದೂರಿದ್ದಾರೆ. ಅಲ್ಲದೆ, ಅವರ ಶಿಕ್ಷಣ ಸಂಸ್ಥೆಯ ಉದ್ಯೋಗದಲ್ಲಿ ಮುಂದುವರಿಸಲು 2015 ರಿಂದ ತನ್ನ ಮೇಲೆ ಆರೋಪಿಯು ಪದೇ ಪದೇ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದರು ಎಂದು ಶಿಕ್ಷಕಿ ಆರೋಪಿಸಿದ್ದಾರೆ ಎಂದು ಪಿಟಿಐ ಉಲ್ಲೇಖಿಸಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಅಲ್ಲದೆ, ಶಿಕ್ಷಕಿಯನ್ನು ಖಾಯಂ ಮಾಡುವುದಾಗಿಯೂ ಆರೋಪಿ ಭರವಸೆ ನೀಡಿದ್ದ ಎಂದು ಶಿಕ್ಷಕಿ ಪೊಲೀಸರಿಗೆ ತಿಳಿಸಿದ್ದಾರೆ. ಥಾಣೆ
ಇತ್ತಿಚೆಗಷ್ಟೆ, ಕೆಲವು ಶಿಕ್ಷಕರ ದೂರಿನ ಮೇರೆಗೆ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಮಿಶ್ರಾ ಸೇರಿದಂತೆ ನಾಲ್ವರು ವ್ಯಕ್ತಿಗಳ ಮೇಲೆ ಇತ್ತೀಚೆಗೆ ಲೈಂಗಿಕ ಕಿರುಕುಳದ ಪ್ರಕರಣ ದಾಖಲಾಗಿತ್ತು. ಹಾಗಾಗಿ, ಮಹಿಳೆಯು ಪೊಲೀಸರನ್ನು ಸಂಪರ್ಕಿಸಿ ದೂರು ಸಲ್ಲಿಸುವ ಧೈರ್ಯ ಮಾಡಿದ್ದರು ಎಂದು ಅಧಿಕಾರಿ ತಿಳಿಸಿದ್ದಾರೆ. ಇತ್ತೀಚಿನ ದೂರಿಗೆ ಸಂಬಂಧಿಸಿದಂತೆ ಮಿಶ್ರಾ ಅವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಅವರು ಹೇಳಿದ್ದಾರೆ.
ಮುಂಬೈ | ಅತ್ಯಾಚಾರ ಸಂತ್ರಸ್ತೆಗೆ ಆರೋಪಿ ಶಾಲಾ ಶಿಕ್ಷಕನ ಸಂಬಂಧಿಕರಿಂದ ಬೆದರಿಕೆ ಆರೋಪ
ಮುಂಬೈಯ 14 ವರ್ಷದ ಅತ್ಯಾಚಾರ ಸಂತ್ರಸ್ತೆ ಪೆಲ್ಹಾರ್ ಪೊಲೀಸ್ ಠಾಣೆಯಲ್ಲಿ ಹೊಸ ದೂರು ದಾಖಲಿಸಿದ್ದಾರೆ. ಆರೋಪಿ ಶಿಕ್ಷಕನ ಸಂಬಂಧಿಕರು ಮತ್ತು ಶಾಲಾ ಆಡಳಿತ ಮಂಡಳಿಯ ವಿರುದ್ಧ ಪೋಕ್ಸೋ ಕಾಯ್ದೆಯ ಕಠಿಣ ವಿಭಾಗಗಳ ಅಡಿಯಲ್ಲಿ ಆರೋಪ ಹೊರಿಸಲಾಗಿದೆ. ಎಫ್‌ಐಆರ್ ದಾಖಲಾಗಿದಾಗಿನಿಂದ ಅವರು ತನ್ನನ್ನು ಮತ್ತು ತನ್ನ ಕುಟುಂಬವನ್ನು ಕ್ರಿಮಿನಲ್ ರೀತಿಯಲ್ಲಿ ಬೆದರಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಸಂತ್ರಸ್ತೆ ನೀಡಿರುವ ಒಂದು ಪುಟದ ದೂರಿನಲ್ಲಿ, ಆರೋಪಿಯ ಆಪ್ತ ಸಂಬಂಧಿಕರಿಂದ ತನಗೆ ಜೀವ ಬೆದರಿಕೆ ಬರುತ್ತಿದೆ ಎಂದು ಅತ್ಯಾಚಾರ ಸಂತ್ರಸ್ತೆ ಆರೋಪಿಸಿದ್ದಾರೆ. ಮಾರ್ಚ್‌ನಿಂದ ಅವರು (ಶಾಲಾ ಬಾಲಕಿ) ತನ್ನನ್ನು ಅತ್ಯಾಚಾರ ಮಾಡಿದ ಶಿಕ್ಷಕನನ್ನೇ ಮದುವೆಯಾಗುವಂತೆ ಎಂದು ಪದೇ ಪದೇ ಒತ್ತಾಯಿಸುತ್ತಿದ್ದಾರೆ ಎಂದು ಬಾಲಕಿ ಹೇಳಿದ್ದಾರೆ.
“ಅವರು ಪ್ರಭಾವಶಾಲಿಗಳಾಗಿರುವುದರಿಂದ ಮತ್ತು ನಾನು ಒಂಟಿಯಾಗಿರುವುದರಿಂದ ನಾನು ಭಯದಲ್ಲಿದ್ದೇನೆ” ಎಂದು ತನಿಖಾಧಿಕಾರಿಯ ಮುಂದೆ ಸಲ್ಲಿಸಲಾದ ದೂರು ಪತ್ರದಲ್ಲಿ ಸಂತ್ರಸ್ತೆ ಹೇಳಿದ್ದಾರೆ. ನಾನು ತೀವ್ರ ಒತ್ತಡ ಎದುರಿಸುತ್ತಿದ್ದು, ದಯವಿಟ್ಟು ಈ ವಿಷಯದ ಬಗ್ಗೆ ಗಮನ ಕೊಡಿ ಎಂದು ಸೆಪ್ಟೆಂಬರ್ 9 ರಂದು ಪೆಲ್ಹಾರ್ ಪೊಲೀಸ್ ಠಾಣೆಗೆ ಸಲ್ಲಿಸಲಾದ ದೂರಿನಲ್ಲಿ ತಿಳಿಸಲಾಗಿದೆ.
ಕಳೆದ ತಿಂಗಳು ಬಾಲಕಿ ಮಹಾರಾಷ್ಟ್ರದ ನಲಸೋಪರಾ ಪೂರ್ವದ ಪೆಲ್ಹಾರ್ ಪೊಲೀಸ್ ಠಾಣೆಗೆ ತನ್ನ ಮೇಲೆ ನಡೆದ ಅತ್ಯಾಚಾರದ ಬಗ್ಗೆ ದೂರು ನೀಡಿದ್ದರು. ನಂತರ ಆರೋಪಿ ಶಿಕ್ಷಕನನ್ನು ಬಂಧಿಸಲಾತ್ತು. ಆದಾಗ್ಯೂ, ಗಂಭೀರ ಅಪರಾಧದ ಬಗ್ಗೆ ಮಾಹಿತಿ ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳದ ಪ್ರಾಂಶುಪಾಲರು ಮತ್ತು ಮೇಲ್ವಿಚಾರಕರು ಸೇರಿದಂತೆ ಶಾಲಾ ಆಡಳಿತ ಮಂಡಳಿಯು ಶಿಕ್ಷಕನ ವಿರುದ್ಧ ಕ್ರಮಕೈಗೊಂಡಿರಲಿಲ್ಲ. ಆದರೆ, ಘಟನೆ ಬೆಳಕಿಗೆ ಬಂದ ನಂತರ, ಪ್ರಾಂಶುಪಾಲರು ಮತ್ತು ಮೇಲ್ವಿಚಾರಕರ ವಿರುದ್ಧವೂ ಪೋಕ್ಸೋ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಇದನ್ನೂಓದಿ: ಕಾಲ್ತುಳಿತದಿಂದ ಸಂಭವಿಸಿದ ಸಾವಿನ ಸಂಖ್ಯೆಯನ್ನು ಉತ್ತರ ಪ್ರದೇಶ ಸರ್ಕಾರ ಮುಚ್ಚಿಟಿದೆ: ಅಖಿಲೇಶ್ ಯಾದವ್
ಕಾಲ್ತುಳಿತದಿಂದ ಸಂಭವಿಸಿದ ಸಾವಿನ ಸಂಖ್ಯೆಯನ್ನು ಉತ್ತರ ಪ್ರದೇಶ ಸರ್ಕಾರ ಮುಚ್ಚಿಟಿದೆ: ಅಖಿಲೇಶ್ ಯಾದವ್


