Homeಕರ್ನಾಟಕಪೊಲೀಸರೆಂದರೆ.... ಇಲ್ಲಿದೆ ನೋಡಿ ಪೊಲೀಸರ ಮಾನವೀಯ ಮುಖ: ವಿಡಿಯೋ ನೋಡಿ

ಪೊಲೀಸರೆಂದರೆ…. ಇಲ್ಲಿದೆ ನೋಡಿ ಪೊಲೀಸರ ಮಾನವೀಯ ಮುಖ: ವಿಡಿಯೋ ನೋಡಿ

- Advertisement -
- Advertisement -

ಪೊಲೀಸರೆಂದರೆ ಕಲ್ಲು ಹೃದಯದವರು, ಅವರಿಗೆ ಭಾವನೆಗಳು ಅರ್ಥವಾಗುವುದಿಲ್ಲ. ಕಷ್ಟ ಸುಖ ಯಾವುದೂ ನೋಡದೇ ಜನರೊಂದಿಗೆ ವರ್ತಿಸುತ್ತಾರೆ ಎಂಬುದರಿಂದ ಹಿಡಿದು ಅಮಾನವೀಯರು, ಅವರಿಗೆ ಹೊಡಿ ಬಡಿ ಎಂಬುದಷ್ಟೇ ಗೊತ್ತು ಎಂಬುವವರೆಗೂ ಆರೋಪಗಳಿವೆ. ಅದರಲ್ಲೂ ಟ್ರಾಫಿಕ್ ಪೊಲೀಸ್ ಗಳೆಂದರೆ ಜನರಿಗೆ ಮತ್ತಷ್ಟು ಸಿಟ್ಟು. ಹೆಲ್ಮೆಟ್, ಡಿ.ಎಲ್ ಇಲ್ಲದಿದ್ದರೆ ದಂಡ ಹಾಕುವುದಲ್ಲದೇ, ಲಂಚ ತಿನ್ನುತ್ತಾರೆ ಎಂಬ ಆರೋಪ ಸಾಮಾನ್ಯವಾಗಿದೆ. ಇದರಲ್ಲಿ ಕೆಲವು ವಾಸ್ತವಾಂಶಗಳಿರುವುದು ಸಹ ಸತ್ಯವೇ. ಆದರೆ ಅವರಲ್ಲಿ ಕೆಲವರು ಮಾನವೀಯ ಮೂರ್ತಿಗಳು ಇದ್ದಾರೆ. ಅವರಿಗೂ ನೋವು-ನಲಿವು ಸಮಾಜಕ್ಕೆ ಸ್ಪಂದಿಸುವ ಭಾವನೆಗಳಿರುತ್ತವೆ ಎಂಬುದು ಅಷ್ಟೇ ಸತ್ಯ. ಅಂತಹ ಒಂದು ಘಟನೆ ಇಲ್ಲಿದೆ.

ಬೆಂಗಳೂರಿನ ಹೊರಮಾವು ಬಳಿ ಮೂರು ದಿನಗಳಿಂದ ಹೊಟ್ಟೆಗೆ ಊಟವಿಲ್ಲದೇ, ಮೈಗೆ ಬಟ್ಟೆಯಿಲ್ಲದೇ ಕುಳಿತಿದ್ದ ವ್ಯಕ್ತಿಯೊಬ್ಬನನ್ನು ನೂರಾರು ಜನ ನೋಡಿಯೂ ನೋಡದಂತೆ ಮುಂದೆ ಹೋಗಿದ್ದಾರೆ. ಅಸ್ವಸ್ಥಗೊಂಡಿದ್ದ ಆ ವ್ಯಕ್ತಿಯೂ ಏನು ಮಾಡಬೇಕೆಂದು ತೋಚದೆ ವಾಹನಗಳ ಎದುರು ಹೋಗಿ ನಿಲ್ಲುವುದು, ವಾಪಸ್ ಬಂದು ಕೂರುವುದು, ಮಲಗುವುದು ಇಷ್ಟೇ ಮಾಡುತ್ತಿದ್ದ. ಅಂತಹ ಸಂದರ್ಭದಲ್ಲಿ ಅವನ ನೆರವಿಗೆ ಧಾವಿಸಿದವರೆ ಬಾಣಸವಾಡಿ ಸಂಚಾರ ಠಾಣೆಯ ಪೊಲೀಸ್ ಕಾನ್ಸ್ಟೆಬಲ್ ಗಳಾದ ಅತೀಕ್ ಅಹ್ಮದ್ ಮತ್ತು ನಯಾಜ್ ಬಾಷಾ.

ವಿಡಿಯೋ ನೋಡಿ

ಬಟ್ಟೆ, ಊಟ, ಹಣ ನೀಡಿದ ಈ ಪೊಲೀಸ್ ರಿಗಿರಲಿ ಒಂದು ಸೆಲ್ಯೂಟ್.. ??

Naanu Gauri यांनी वर पोस्ट केले शुक्रवार, २१ जून, २०१९

ಇವರಿಬ್ಬರೂ ಸ್ಥಳೀಯ ಯುವಕ ಗೋಪಿಯ ಸಹಾಯದಿಂದ ಆ ವ್ಯಕ್ತಿಯ ಬಳಿ ಹೋಗಿ ಆತ ಬೆತ್ತಲೆ ಇದ್ದರೂ ತಲೆಕೆಡಿಸಿಕೊಳ್ಳದೇ ಮಾತನಾಡಿಸಿ, ಆತನಿಗೆ ಹೊಸ ಬಟ್ಟೆ ತೊಡಿಸಿ, ಹೋಟೆಲ್ ನಲ್ಲಿ ಊಟ ಮಾಡಿಸಿ ನಂತರ ಆತನ ಊರು ಧರ್ಮಪುರಿ ಎಂದು ತಿಳಿದು, ಊರಿಗೆ ಹೋಗಲು ಹಣವನ್ನು ಸಹ ನೀಡಿ ಮಾನವೀಯತೆ ಮೆರೆದಿದ್ದಾರೆ.

ಇವರ ಈ ಕಾರ್ಯಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಅಭಿನಂದನೆಗಳ ಮಳೆ ಸುರಿಸಿದ್ದಾರೆ. ಇದು ಚಿಕ್ಕ ಕೆಲಸವೇ ಆದರೂ ಇಂತ ಚಿಕ್ಕ ಚಿಕ್ಕ ಕೆಲಸಗಳೇ ಇಡೀ ಸಮಾಜವನ್ನು ಸುಧಾರಿಸಬಲ್ಲವು. ಈ ಘಟನೆಯಿಂದ ನಾವುಗಳು ಸಹ ಪ್ರೇರಣೆಗೊಂಡು ಕಷ್ಟದಲ್ಲಿರುವವರಿಗೆ ಸಹಾಯ ಮಾಡಿದರೆ ಸಮಾಜಕ್ಕೆ ಮತ್ತಷ್ಟು ಒಳಿತಾಗುತ್ತದೆ ಅಲ್ಲವೇ?

ಇಂತಹ ಒಳ್ಳೆಯ ಕೆಲಸದ ನಡುವೆಯೇ ಕಳೆದ 10 ದಿನಗಳ ಹಿಂದೆ ಗುಂಡ್ಲುಪೇಟೆಯ ಬಳಿ ಯುವಕನೊಬ್ಬನ್ನನ್ನು ಬೆತ್ತಲೆ ಮೆರವಣಿಗೆ ಮಾಡಿದ ಕ್ರೂರ ಘಟನೆ ಕೂಡ ನಡೆದುಹೋಗಿದೆ. ಇದನ್ನು ಕೂಡ ನಾವು ಮರೆಯಬಾರದು, ಇಂತಹ ಘಟನೆಗಳನ್ನು ಕೂಡ ಖಂಡಿಸಬೇಕಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಧಾನಿ ಮೋದಿ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿರ್ಬಂಧ ವಿಧಿಸಲು ಕೋರಿ ದೆಹಲಿ ಹೈಕೋರ್ಟ್‌ಗೆ ಅರ್ಜಿ

0
ಲೋಕಸಭೆ ಚುನಾವಣೆಗೆ "ದೇವರು ಮತ್ತು ಪೂಜಾ ಸ್ಥಳಗಳ" ಹೆಸರಿನಲ್ಲಿ ಮತ ಕೇಳುವ ಮೂಲಕ ಮಾದರಿ ನೀತಿ ಸಂಹಿತೆ (ಎಂಸಿಸಿ) ಉಲ್ಲಂಘಿಸಿರುವ ಆರೋಪದ ಮೇಲೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ದೆಹಲಿ...