ಭೀಫ್ ಖಾದ್ಯವನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದ ವಿವಾದಕ್ಕೆ ಸಂಬಂಧಿಸಿದಂತೆ ಕೇರಳ ಸರ್ಕಾರವು “ಯಾವುದೇ ಗುಂಪಿನ ಧಾರ್ಮಿಕ ನಂಬಿಕೆಗಳನ್ನು ನೋಯಿಸುವ ಆಸಕ್ತಿಯನ್ನು ಹೊಂದಿಲ್ಲ” ಎಂದು ಪ್ರವಾಸೋದ್ಯಮ ಸಚಿವರ ಕಡಕಂಪಲ್ಲಿ ಸುರೇಂದ್ರನ್ ಸ್ಪಷ್ಟಪಡಿಸಿದ್ದಾರೆ.
ಗುರುವಾರ, ಕೇರಳ ಪ್ರವಾಸೋದ್ಯಮ ಇಲಾಖೆಯು ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಭೀಫ್ ಖಾದ್ಯದ ಚಿತ್ರವನ್ನು ಪ್ರಕಟಿಸಿದೆ. ಅದರಲ್ಲಿ “ಗೋಮಾಂಸದ ಕೋಮಲ ಭಾಗಗಳು, ಆರೊಮ್ಯಾಟಿಕ್ ಮಸಾಲೆಗಳು, ತೆಂಗಿನಕಾಯಿ ತುಂಡುಗಳು ಮತ್ತು ಕರಿಬೇವಿನ ಎಲೆಗಳಿಂದ ನಿಧಾನವಾಗಿ ಹುರಿದ ಅತ್ಯಂತ ಶ್ರೇಷ್ಠ ಖಾದ್ಯವಾದ ಬೀಫ್ ಉಲಾರ್ತಿಯಾಥು” ಎಂದು ಬರೆದುಕೊಂಡಿದೆ.
Tender chunks of beef, slow-roasted with aromatic spices, coconut pieces, and curry leaves. A recipe for the most classic dish, Beef Ularthiyathu, the stuff of legends, from the land of spices, Kerala: https://t.co/d7dbgWmlBw pic.twitter.com/aI1Y9vEXJm
— Kerala Tourism (@KeralaTourism) January 15, 2020
ಸರ್ಕಾರದ ಈ ನಡೆಗೆ ಹಲವಾರು ಜನ ಸ್ವಾಗತಿಸಿದ್ದರೆ ಕೆಲವು ವಿರೊಧ ವ್ಯಕ್ತಪಡಿಸಿದ್ದಾರೆ. ಆಶ್ಚರ್ಯಕರ ರೀತಿಯಲ್ಲಿ ಆ ಟ್ವೀಟನ್ನು 12 ಸಾವಿರಕ್ಕೂ ಹೆಚ್ಚು ಜನರು ಲೈಕ್ ಮಾಡಿದರೆ, 4 ಸಾವಿರಕ್ಕೂ ಹೆಚ್ಚು ಜನ ಷೇರ್ ಮಾಡಿದ್ದಾರೆ. ಕರ್ನಾಟಕದ ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ಅದನ್ನು ಷೇರ್ ಮಾಡಿ ವೆಲ್ಕಂ ಟು ಕರ್ನಾಟಕ ಎಂದು ಟ್ವೀಟ್ ಮಾಡಿದ್ದರು. ಅದು ಸಹ ಸಾಕಷ್ಟು ಗೊಂದಲ ಹುಟ್ಟಿಸಿತ್ತು.
ಇದನ್ನೂ ಓದಿ: ಟ್ವಿಟ್ಟರ್ನಲ್ಲಿ ಭೀಫ್ ಖಾದ್ಯದ ಫೋಟೊ ಷೇರ್ ಮಾಡಿದ ಸಚಿವ ಸಿ.ಟಿ ರವಿ ; ನೆಟ್ಟಿಗರಿಂದ ಫುಲ್ ಟ್ರೋಲ್
ಕರ್ನಾಟಕದ ಉಡುಪಿಯ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ “ಕೇರಳ ಕಮ್ಯುನಿಸ್ಟ್ ಸರ್ಕಾರವು ರಾಜ್ಯದ ಹಿಂದೂಗಳ ವಿರುದ್ಧ ಯುದ್ಧ ಘೋಷಿಸಿದೆ! ಕೇರಳ ಸರ್ಕಾರ ಮಕರ ಸಂಕ್ರಾಂತಿ ದಿನದಂದು ಗೋಮಾಂಸವನ್ನು ವೈಭವೀಕರಿಸುವ ಮೂಲಕ ಹಿಂದೂ ಭಾವನೆಗಳ ಮೇಲೆ ಸವಾರಿ ಮಾಡುತ್ತಿದೆ.” ಎಂದು ಟ್ವೀಟ್ ಮಾಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿ “ಕೇರಳದಲ್ಲಿ ಯಾರೂ ಆಹಾರವನ್ನು ಧರ್ಮದೊಂದಿಗೆ ಜೋಡಿಸುತ್ತಿಲ್ಲ. ಯಾರ ಧಾರ್ಮಿಕ ನಂಬಿಕೆಗಳನ್ನು ನೋಯಿಸುವ ಸರ್ಕಾರಕ್ಕೆ ಯಾವುದೇ ಆಸಕ್ತಿ ಇಲ್ಲ. ಇದಕ್ಕೆ ಕೋಮು ಬಣ್ಣ ನೀಡುವುದು ಖಂಡನೀಯ ”ಎಂದು ಪ್ರವಾಸೋದ್ಯಮ ಸಚಿವ ಕಡಕಂಪಲ್ಲಿ ಸುರೇಂದ್ರನ್ ಸುದ್ದಿಗಾರರಿಗೆ ತಿಳಿಸಿದರು.
“ಈ ಎಲ್ಲದರಲ್ಲೂ ಕೋಮುವಾದವನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿರುವವರು ‘ಹಂದಿಮಾಂಸ ಚಿತ್ರಗಳನ್ನು ಹಾಕಿ’ ಎಂದು ಹೇಳುವ ಮೂಲಕ ವಿವಾದವನ್ನು ಸೃಷ್ಟಿಸುತ್ತಿದ್ದಾರೆ. ಹಂದಿಮಾಂಸದ ಚಿತ್ರಗಳು ಸೇರಿದಂತೆ ಅನೇಕ ಭಕ್ಷ್ಯಗಳು ಈಗಾಗಲೇ ವೆಬ್ಸೈಟ್ನಲ್ಲಿವೆ … ಗೋಮಾಂಸವು ಎಮ್ಮೆಯ ಮಾಂಸವನ್ನು ಸಹ ಒಳಗೊಂಡಿದೆ ಆದರೆ ಕೆಲವರು ಇದನ್ನು ಮರೆಮಾಚಲು, ಗೋಮಾಂಸವೆಂದರೆ ಕೇವಲ ಹಸುವಿನ ಮಾಂಸ ಎಂದು ಪ್ರಚಾರ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ದೂರಿದ್ದಾರೆ.
“ಹಂದಿಮಾಂಸ, ಗೋಮಾಂಸ, ಮೀನು ಎಲ್ಲವೂ ಕೇರಳಕ್ಕೆ ಬರುವ ಪ್ರವಾಸಿಗರು ಇಷ್ಟಪಡುವ ಭಕ್ಷ್ಯಗಳು. ದೇಶದ ಯಾವುದೇ ರಾಜ್ಯವು ನಮಗಿಂತ ಹೆಚ್ಚು ಅನುಯಾಯಿಗಳನ್ನು ಹೊಂದಿಲ್ಲ. ಆಹಾರದಂತೆಯೇ ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಎಲ್ಲಾ ಇತರ ವಸ್ತುಗಳು ಸಾಮಾಜಿಕ ಮಾಧ್ಯಮದಲ್ಲಿ ಸಹ ಮಾರಾಟವಾಗಿದೆ” ಎಂದು ಸುರೇಂದ್ರನ್ ಹೇಳಿದರು.



ದನದ ಬಾಡು