Homeಮುಖಪುಟಕೊರೊನಾ ತಡೆಯಲು ಬಟ್ಟೆಯಿಂದ ತಯಾರಿಸಿದ ಮಾಸ್ಕ್‌ಗಳನ್ನು ಧರಿಸಬಾರದೇ? ಪೋಸ್ಟ್‌ ಕಾರ್ಡ್‌ ಹರಡಿದ ಮೂರು ಮಹಾಸುಳ್ಳುಗಳು.

ಕೊರೊನಾ ತಡೆಯಲು ಬಟ್ಟೆಯಿಂದ ತಯಾರಿಸಿದ ಮಾಸ್ಕ್‌ಗಳನ್ನು ಧರಿಸಬಾರದೇ? ಪೋಸ್ಟ್‌ ಕಾರ್ಡ್‌ ಹರಡಿದ ಮೂರು ಮಹಾಸುಳ್ಳುಗಳು.

- Advertisement -
- Advertisement -

ಸುಳ್ಳು 1 : ಕೊರೊನಾ ಹರಡದಂತೆ ತಡೆಯಲು ಬಟ್ಟೆಯಿಂದ ತಯಾರಿಸಿದ ಮಾಸ್ಕ್‌ಗಳನ್ನು ಧರಿಸಬಾರದು.

ಹೀಗಂತ ಕನ್ನಡದ ಫೇಕ್‍ನ್ಯೂಸ್ ಹರಡುವ ಪೋಸ್ಟ್ ಕಾರ್ಡ್ ಕನ್ನಡ ವೆಬ್‍ಸೈಟ್ ತಿಳಿಸಿದೆ. ಕೇರಳದಲ್ಲಿ ಕೊರೊನಾ ಹರಡುತ್ತಿದ್ದಂತೆಯೇ ಮಾಸ್ಕ್‌ಗಳ ಕೊರತೆಯುಂಟಾಯಿತು. ಮಾರ್ಚ್ 14ರಂದು ಅಲ್ಲಿನ ಸಿಎಂ ಪಿಣರಾಯಿ ವಿಜಯನ್‍ರವರು ಹತ್ತಿ ಬಟ್ಟೆಯ ಮಾಸ್ಕ್‌ಗಳನ್ನು ಸಿದ್ಧಪಡಿಸುವಂತೆ ಆದೇಶಿಸಿದ್ದರು.

ಅಂದಿನಿಂದ ತಿರುವನಂತಪುರದ ಸೆಂಟ್ರಲ್ ಜೈಲಿನ ಕೈದಿಗಳು ದಿನವೊಂದಕ್ಕೆ ಎರಡು ಸಾವಿರ ಮಾಸ್ಕ್‍ಗಳನ್ನು ತಯಾರಿಸಿ ವಿತರಿಸುತ್ತಿದ್ದಾರೆ. ಇದನ್ನು ವಿರೋಧಿಸಿ ಪೋಸ್ಟ್ ಕಾರ್ಡ್ ಕನ್ನಡ ವೆಬ್‍ಸೈಟ್ ವಿಶ್ವ ಆರೋಗ್ಯ ಸಂಘಟನೆಯ ಸಲಹೆಯನ್ನು ತಿರಸ್ಕರಿಸಿ ಮಾಸ್ಕ್ ತಯಾರಿಸಿದ್ದಾರೆ ಎಂದು ದೂರಿದೆ.

ಸತ್ಯ: ಹತ್ತಿ ಬಟ್ಟೆಯ ಮಾಸ್ಕ್‌ಗಳು ಸುರಕ್ಷಿತವಾಗಿರುತ್ತವೆ ಮಾತ್ರವಲ್ಲ ಅದರಿಂದ ಯಾವುದೇ ತೊಂದರೆಯಿಲ್ಲ. ಅವುಗಳನ್ನು ಸುಲಭವಾಗಿ ಬಳಸಬಹುದು, ತೊಳೆದು ಮರುಬಳಕೆ ಸಹ ಮಾಡಬಹುದು. ವಿಶ್ವ ಆರೋಗ್ಯ ಸಂಸ್ಥೆ ಇದನ್ನು ಬಳಸಬಾರದೆಂದು ಎಲ್ಲಿಯೂ ಹೇಳಿಲ್ಲ. ಈ ಕುರಿತು ಡಬ್ಲೂಎಚ್‍ಓ ವೆಬ್‍ಸೈಟ್‍ನಲ್ಲಿ ತಿಳಿಸಿಲ್ಲ ಕೂಡ.

ಕೇರಳ ಸರ್ಕಾರವನ್ನು ಕಂಡರಾಗದ ಈ ವೆಬ್‍ಸೈಟ್ ಸುಳ್ಳುಗಳನ್ನು ಹರಡುತ್ತಿದೆ ಅಷ್ಟೇ.

ಸುಳ್ಳು 2: ಗಲಭೆ ಮಾಡುವುದು ನಮ್ಮ ಸ್ವಭಾವವಲ್ಲ, ಗಲಭೆ ಮಾಡುವವರನ್ನು ಜೈಲಿಗೆ ಹಾಕುವುದು ನಮ್ಮ ಸ್ವಭಾವ ; ಅಮಿತ್ ಶಾ

ಆದರೆ ವಾಸ್ತವ ಏನೆಂದರೆ 2002ರ ಗುಜರಾತ್ ಗಲಭೆಯ ಸಮಯದಲ್ಲಿ ಇದೇ ಅಮಿತ್ ಶಾ ಗುಜರಾತಿನ ಗೃಹ ಮಂತ್ರಿಯಾಗಿದ್ದರು. ಗಲಭೆಗೆ ಕುಮ್ಮಕ್ಕು ಕೊಟ್ಟ ಕಾರಣದಿಂದಾಗಿ ಶಾ ಮೇಲೆ ಹಲವಾರು ಪ್ರಕರಣಗಳಿದ್ದು ನಾನಾವತಿ ಆಯೋಗ ಈ ಕುರಿತು ತನಿಖೆ ನಡೆಸಿದೆ. ಈ ಕುರಿತು ಖ್ಯಾತ ಪತ್ರಕರ್ತೆ ರಾಣಾ ಅಯ್ಯೂಬ್ ಹೇಳುವುದು ಹೀಗೆ?

“2010ರಲ್ಲಿ ನಾನು ಈ ಕೊಲೆಗಳ ಬಗ್ಗೆ ವರದಿ ಮಾಡಿದ್ದೆ. ನಾನು ಶಾರ ದೂರವಾಣಿ ಕರೆಗಳ ದಾಖಲೆ ಮತ್ತು ಗುಜರಾತ್ ರಾಜ್ಯದ ಗುಪ್ತಚರ ಇಲಾಖೆಯ ಆಂತರಿಕ ದಾಖಲೆಯನ್ನೂ ಮುಂದಿಟ್ಟಿದ್ದೆ. ಕೊಲ್ಲಬೇಕಾದವರನ್ನು ಕೊಂಡೊಯ್ಯುತ್ತಿರುವಾಗಲೇ ಈತ ಅಧಿಕಾರಿಗಳ ಜೊತೆಯಲ್ಲಿ ಮಾತುಕತೆಯಲ್ಲಿ ತೊಡಗಿದ್ದುದನ್ನು ಈ ದಾಖಲೆಗಳು ಸಾಬೀತುಪಡಿಸುತ್ತಿದ್ದವು. ನನ್ನ ತನಿಖಾ ವರದಿ ಪ್ರಕಟವಾದ ಎರಡು ವಾರಗಳಲ್ಲಿ ಶಾ ಬಂಧನವಾಗಿತ್ತು. ಮೂರು ತಿಂಗಳು ಜೈಲಿನಲ್ಲಿದ್ದರು.

ಸಿಬಿಐ ಸೊಹ್ರಾಬುದ್ದೀನ್ ಮತ್ತು ಆತನ ಪತ್ನಿ ಕೌಸರ್ ಬೀ ಎಂಬ ಮುಸ್ಲಿಮರ ಕೊಲೆಯಲ್ಲಿನ ಪಾತ್ರದ ಬಗ್ಗೆ ಶಾ ವಿರುದ್ಧ ತನಿಖೆ ನಡೆಸುತ್ತಿತ್ತು. ಸುಪ್ರೀಂಕೋರ್ಟ್ ಕಣ್ಗಾವಲಿನಲ್ಲಿ ಶಾರನ್ನು ಈ ಅಪರಾಧದ ಮುಖ್ಯ ಆರೋಪಿ ಮತ್ತು ಸಂಚುಕೋರ ಎಂದು ಹೆಸರಿಸಲಾಗಿತ್ತು. ಅದಲ್ಲದೇ ಆತನನ್ನು ಭೂಗತ ಗೂಂಡಾಗಳು ಮತ್ತು ರಾಜಕಾರಣಿಗಳನ್ನು ಒಳಗೊಂಡ ವಸೂಲಿ ದಂಧೆಯ ಮುಖ್ಯಸ್ಥ ಎಂದೂ ಹೆಸರಿಸಿತ್ತು. ಈ ಆರೋಪಗಳು ಎಷ್ಟು ಗಂಭೀರವಾಗಿದ್ದವು ಎಂದರೆ, ಆತ ಸಾಕ್ಷಿಗಳ ಮೇಲೆ ಪ್ರಭಾವ ಬೀರದಂತೆ ಮತ್ತು ಬೆದರಿಸದಂತೆ ಸುಪ್ರೀಂಕೋರ್ಟ್ ಆತನನ್ನು ಎರಡು ವರ್ಷ ತನ್ನ ತವರು ರಾಜ್ಯ ಪ್ರವೇಶಿಸದಂತೆ ಗಡಿಪಾರು ಮಾಡಿತ್ತು.

ಸುಳ್ಳು 3 : ಮಾಂಸ ತಿಂದರೆ ಕೊರೊನಾ ಬರುತ್ತದೆಯೇ?

ಕನ್ನಡದ ಫೇಕ್‍ನ್ಯೂಸ್ ಹರಡುವ ಪೋಸ್ಟ್ ಕಾರ್ಡ್ ಕನ್ನಡ ವೆಬ್‍ಸೈಟ್ ಕೊರೊನಾ ಬಂದುದರಿಂದ ಹ್ಯಾಂಡ್‍ಷೇಕ್ ಬದಲು ನಮಸ್ಕರಿಸುತ್ತಿದ್ದಾರೆ, ಸಸ್ಯಹಾರಿಗಳಾಗುತ್ತಿದ್ದಾರೆ ಮತ್ತು ಹೆಣವನ್ನು ಹೂಳುವ ಬದಲು ಸುಡುತ್ತಿದ್ದಾರೆ ಎಂದು ವರದಿ ಮಾಡಿದೆ. ಈ ಮೂಲಕ ಅದು ಬ್ರಾಹ್ಮಣ್ಯದ ಶ್ರೇಷ್ಠತೆಯನ್ನು ಹೇರಲು ಪ್ರಯತ್ನಿಸುತ್ತಿದೆ ಅಷ್ಟೇ.

ಸತ್ಯ ಏನೆಂದರೇ ಮಾಂಸ ತಿನ್ನುವುದಕ್ಕೂ ಕೊರೊನಾಗೂ ಸಂಬಂಧವೇ ಇಲ್ಲ. ಮಾಂಸ ತಿನ್ನುವುದರಿಂದ ಕೊರೊನಾ ಬರುವುದಿಲ್ಲ.

ಇನ್ನು ಸತ್ತ ದೇಹವನ್ನು ಹೂಳುವುದರಿಂದ ಕೊರೊನಾ ಹರಡುವುದಿಲ್ಲ ಎಂದು ವೈದ್ಯರು ದೃಢಪಡಿಸಿದ್ದಾರೆ. ಕೊರೊನಾ ಭಯವನ್ನು ತಮ್ಮ ಧಾರ್ಮಿಕ ಮೌಢ್ಯಗಳನ್ನು ಹರಡಲು ಬಳಸುತ್ತಿದ್ದಾರೆ ಅಷ್ಟೇ.

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮೂರನೇ ಅತ್ಯಾಚಾರ ಪ್ರಕರಣ ದಾಖಲು : ಉಚ್ಛಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಬಂಧನ

ಅತ್ಯಾಚಾರ ಆರೋಪ ಕೇಳಿ ಬಂದ ಬಳಿಕ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿರುವ ಕೇರಳದ ಪಾಲಕ್ಕಾಡ್‌ನ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಭಾನುವಾರ (ಜ.11) ಬಂಧಿಸಲಾಗಿದೆ. ಪಾಲಕ್ಕಾಡ್‌ನ ಕೆಪಿಎಂ ರೀಜೆನ್ಸಿ ಹೋಟೆಲ್‌ನಿಂದ ಬೆಳಗಿನ ಜಾವ 12.30ರ ಸುಮಾರಿಗೆ ಮಾಂಕೂಟತ್ತಿಲ್...

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...

ದ್ವೇಷ ಭಾಷಣ ಮಸೂದೆ ರಾಜ್ಯಪಾಲರಿಂದ ತಿರಸ್ಕೃತವಾಗಿಲ್ಲ: ಸಿಎಂ ಸಿದ್ದರಾಮಯ್ಯ

ದ್ವೇಷ ಭಾಷಣ ಮಸೂದೆ ಸರ್ವಾನುಮತದಿಂದ ಅಂಗೀಕಾರವಾಗಿದ್ದು, ರಾಜ್ಯಪಾಲರು ಅದನ್ನು ವಾಪಸ್ ಕಳಿಸಿಲ್ಲ, ತಿರಸ್ಕರಿಸಿಲ್ಲ, ಅಂಕಿತವನ್ನೂ ಹಾಕಿಲ್ಲ. ಅವರು ಕರೆದಾಗ ಈ ಬಗ್ಗೆ ವಿವರಣೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಭಾನುವಾರ (ಜ.11) ಮಂಗಳೂರಿನಲ್ಲಿ...

ಐಸಿಸ್ ಗುರಿ ಮಾಡಿ ಸಿರಿಯಾ ಮೇಲೆ ವೈಮಾನಿಕ ದಾಳಿ ನಡೆಸಿದ ಅಮೆರಿಕ

ಸಿರಿಯಾದ ಇಸ್ಲಾಮಿಕ್ ಸ್ಟೇಟ್ (ಐಎಸ್) ಗುಂಪಿನ ತಾಣಗಳ ಮೇಲೆ ಅಮೆರಿಕ ಮತ್ತು ಅದರ ಪಾಲುದಾರ ಪಡೆಗಳು ದೊಡ್ಡ ಪ್ರಮಾಣದ ದಾಳಿಗಳನ್ನು ನಡೆಸಿವೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ (ಸೆಂಟ್‌ಕಾಮ್) ಘೋಷಿಸಿದೆ. ಡಿಸೆಂಬರ್ 13ರಂದು ಸಿರಿಯಾದಲ್ಲಿ...

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...