Homeಕರೋನಾ ತಲ್ಲಣತಿರುವನಂತಪುರ: ಸಾಮಾಜಿಕ ಅಂತರ ಕಾಪಾಡದ ಪೋಥಿಸ್ ಪರವಾನಗಿ ರದ್ದು!

ತಿರುವನಂತಪುರ: ಸಾಮಾಜಿಕ ಅಂತರ ಕಾಪಾಡದ ಪೋಥಿಸ್ ಪರವಾನಗಿ ರದ್ದು!

- Advertisement -
- Advertisement -

ಸಾಮಾಜಿಕ ಅಂತರದ ಮಾನದಂಡಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ತಿರುವನಂತಪುರಂ ಕಾರ್ಪೊರೇಷನ್ ‘ರಾಮಚಂದ್ರನ್ ಮತ್ತು ಪೋಥಿಸ್’ ಅವರ ಶಾಪಿಂಗ್ ಮಾಲ್ ಪರವಾನಗಿಯನ್ನು ರದ್ದುಗೊಳಿಸಿದೆ.

ಈ ಮಳಿಗೆಗಳು ಕೊರೊನಾ ಹರಡುವಿಕೆಯ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿವೆ. ಕೊರೊನಾ ಪ್ರೋಟೋಕಾಲ್ ಅನುಸರಿಸುವಂತೆ ಅನೇಕ ಬಾರಿ ಆದೇಶ ನೀಡಲಾಯಿತು. ಆದರೂ ಅವರು ಅದನ್ನು ನಿರ್ಲಕ್ಷಿಸಿದ್ದಾರೆ. ಇದರಿಂದಾಗಿ ರಾಮಚಂದ್ರನ್ ಅವರ 100 ಕ್ಕೂ ಹೆಚ್ಚು ಸಿಬ್ಬಂದಿಗೆ ಸೋಂಕು ದೃಢಪಟ್ಟಿದೆ ಎಂದು ಕಾರ್ಪೋರೇಷನ್ ಅಧಿಕಾರಿಗಳು ತಿಳಿಸಿದ್ದಾರೆ.

ಇದೇ ರೀತಿಯ ಘಟನೆಗಳು ಪೋಥಿಸ್ ನಲ್ಲಿಯೂ ಸಹ ವರದಿಯಾಗಿವೆ. ಪೋಥಿಸ್‌ಗೆ ನಿಗಮದಿಂದ ಹಲವು ಬಾರಿ ಎಚ್ಚರಿಕೆ ನೀಡಲಾಯಿತು. ಆದರೂ ಅನುಸರಿಸಿಲ್ಲ. ಹಾಗಾಗಿ ಮುಂದಿನ ಸೂಚನೆ ಬರುವವರೆಗೂ ಈ ಮಾಲ್ ಗಳ ಪರವಾನಗಿಯನ್ನು ರದ್ದುಪಡಿಸಲಾಗಿದೆ ಎಂದು ತಿರುವನಂತಪುರಂ ಮೇಯರ್ ಕೆ.ಶ್ರೀಕುಮಾರ್ ತಮ್ಮ ಫೇಸ್‌ಬುಕ್ ಪುಟದಲ್ಲಿ ತಿಳಿಸಿದ್ದಾರೆ.

ನಗರದ ಅತ್ಯಂತ ಹಳೆಯ ಉದ್ಯಮಗಳಲ್ಲಿ ಒಂದಾದ ರಾಮಚಂದ್ರನ್ ಅತ್ತಕುಮಂಗರದಲ್ಲಿದೆ. ಬಹುಮಹಡಿ ಮಳಿಗೆಯು ಹೈಪರ್ ಮಾರ್ಕೆಟ್, ಫುಡ್ ಕೋರ್ಟ್ ಅನ್ನು ಒಳಗೊಂಡಿದೆ. ಜವಳಿ, ಮನೆ ಅಲಂಕಾರಿಕ, ಕಟ್ಲರಿ ಮತ್ತು ಪೀಠೋಪಕರಣಗಳನ್ನು ಮಾರಾಟ ಮಾಡುತ್ತದೆ.

ಪೋಥಿಸ್ ಎಂಬ ಬಹುಮಹಡಿ ಜವಳಿ ಅಂಗಡಿಯು ಆಯುರ್ವೇದ ಕಾಲೇಜು ಜಂಕ್ಷನ್ ಬಳಿ ಇದೆ. ಮಾಲ್‌ಗೆ ಪ್ರವೇಶಿಸುವ ಮೊದಲು ಗ್ರಾಹಕರ ತಾಪಮಾನವನ್ನು ಪರಿಶೀಲಿಸಿದೆ. ಕೈ ತೊಳೆಯುವುದು ಮತ್ತು ಸ್ಯಾನಿಟೈಸರ್ ಬಳಸುವುದನ್ನು ಕಡ್ಡಾಯಗೊಳಿಸಿದ್ದರೂ, ಸಾಮಾಜಿಕ ಅಂತರವನ್ನು ಅನುಸರಿಸಲಿಲ್ಲ ಎಂದು ಆರೋಪಿಸಲಾಗಿದೆ.

ರಾಮಚಂದ್ರನ್ ಅವರಲ್ಲೂ ಇದೇ ರೀತಿಯ ಸಮಸ್ಯೆ ವರದಿಯಾಗಿದೆ, ಗ್ರಾಹಕರು ಶಾಪಿಂಗ್ ಮಾಡುವಾಗ ಸಾಮಾಜಿಕ ಅಂತರವನ್ನು ಅನುಸರಿಸಲು ವಿಫಲರಾಗಿದ್ದಾರೆ. ಮಾಲ್ ಅಧಿಕಾರಿಗಳು ಸಾಮಾಜಿಕ ಅಂತರವನ್ನು ಖಚಿತಪಡಿಸಿಕೊಳ್ಳಲು ಯಾವುದೇ ಸೌಲಭ್ಯಗಳನ್ನು ವ್ಯವಸ್ಥೆ ಮಾಡಿರಲಿಲ್ಲ ಎನ್ನಲಾಗಿದೆ.

ಶನಿವಾರ ಜಿಲ್ಲಾಧಿಕಾರಿ ನವಜೋತ್ ಖೋಸಾ ಅವರು ಸೋಂಕು ದೃಢ ಪಟ್ಟ ಜನರು ಕೆಲಸ ಮಾಡಿದ ಸ್ಥಳಗಳ ಪಟ್ಟಿಯನ್ನು ಬಿಡುಗಡೆ ಮಾಡಿದರು. ಇದರಲ್ಲಿ ಪೋಥಿಸ್, ರಾಮಚಂದ್ರನ್ಸ್ ಮತ್ತು ಇತರ 22 ಸ್ಥಳಗಳು ಸೇರಿವೆ. ಈ ಪಟ್ಟಿಯಲ್ಲಿ ಬೇಕರಿಗಳು, ಬ್ಯಾಂಕುಗಳು, ವೈದ್ಯಕೀಯ ಅಂಗಡಿಗಳು, ವಿದ್ಯುತ್ ಅಂಗಡಿಗಳು, ಮಾರುಕಟ್ಟೆಗಳು, ಸೂಪರ್ ರ್ಮಾರ್ಕೆಟ್‌ಗಳು ಇವೆ.

ಕಳೆದ ವಾರ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು, ಪ್ರೋಟೋಕಾಲ್ ಉಲ್ಲಂಘಿಸಿ ಭಾರಿ ಹರಡುವಿಕೆಗೆ ಕಾರಣವಾದ ವ್ಯಾಪಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದರು. “ನಾನು ಯಾವುದೇ ನಿರ್ದಿಷ್ಟ ಸ್ಥಳವನ್ನು ಉಲ್ಲೇಖಿಸುತ್ತಿಲ್ಲ. ಆದರೆ ಇದಕ್ಕೆ ಕಾರಣರಾದ ಎಲ್ಲ ವ್ಯಾಪಾರಿಗಳ ಮೇಲೆ ಕಾನೂನಿನಡಿಯಲ್ಲಿ ಪ್ರಕರಣ ದಾಖಲಿಸಲಾಗುವುದು” ಎಂದು ಹೇಳಿದರು.


ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಈ ಆಕ್ರೋಶ ಭರಿತ ಜನರ ಗುಂಪು ಕೇರಳದ ಮುಸ್ಲಿಮರದ್ದೇ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚುನಾವಣೆಯಲ್ಲಿ ಬೆಂಬಲಿಸಿಲ್ಲ ಎಂದು ದಲಿತರ ಮೇಲೆ ಹಲ್ಲೆ ಪ್ರಕರಣ: YSRCP ಮುಖಂಡನಿಗೆ ಜೈಲು

0
1996ರಲ್ಲಿ ನಡೆದಿದ್ದ ದಲಿತರ ಮೇಲಿನ ದೌರ್ಜನ್ಯ ಮತ್ತು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ (ವೈಎಸ್‌ಆರ್‌ಸಿಪಿ) ಮುಖಂಡ ತೋಟ ತ್ರಿಮೂರ್ತಿಲು ಸೇರಿದಂತೆ ಒಂಬತ್ತು ಮಂದಿಯನ್ನು ವಿಶಾಖಪಟ್ಟಣ ನ್ಯಾಯಾಲಯವು ದೋಷಿ ಎಂದು ಘೋಷಿಸಿ...