Homeದಿಟನಾಗರಫ್ಯಾಕ್ಟ್‌ಚೆಕ್: ಈ ಆಕ್ರೋಶ ಭರಿತ ಜನರ ಗುಂಪು ಕೇರಳದ ಮುಸ್ಲಿಮರದ್ದೇ?

ಫ್ಯಾಕ್ಟ್‌ಚೆಕ್: ಈ ಆಕ್ರೋಶ ಭರಿತ ಜನರ ಗುಂಪು ಕೇರಳದ ಮುಸ್ಲಿಮರದ್ದೇ?

ಇವರು ನಿಮ್ಮ ಪ್ರದೇಶಗಳಿಗೂ ಬಂದರೆ ನೀವೇನು ಮಾಡುತ್ತೀರಿ ಎಂಬ ಪ್ರಶ್ನೆಯೊಂದಿಗೆ ಚಿತ್ರ ವೈರಲಾಗಿದೆ.

- Advertisement -
- Advertisement -

ಹಲವಾರು ಜನರು ಆಕ್ರೋಶಗೊಂಡು ಕೋಲುಗಳನ್ನು ಹಿಡಿದು ಓಡಿ ಬರುತ್ತಿರುವ ಚಿತ್ರವೊಂದು ವೈರಲಾಗಿದ್ದು, ಅದು ಕೇರಳದ ಮುಸ್ಲಿಮರ ಚಿತ್ರವೆಂದು ಹೇಳಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ವೈರಲ್ ಚಿತ್ರದ ಜೊತೆಗೆ “ಇದು ಕೇರಳದ ಚಿತ್ರವಾಗಿದ್ದು, ಇಂತಹ ಜನರ ಗುಂಪು ನಿಮ್ಮ ಪ್ರದೇಶಗಳಿಗೆ ತಲುಪಿದರೆ ನೀವು ಸ್ವಾಗತಿಸುವಿರೊ ಅಥವಾ ಇಲ್ಲವೇ” ಎಂಬ ಸಂದೇಶ ಕೂಡಾ ಹರಡಲಾಗುತ್ತದೆ.

ಫ್ಯಾಕ್ಟ್‌‌ಚೆಕ್‌‌: 

ಈ ಚಿತ್ರವನ್ನು ರಿವರ್ಸ್ ಸರ್ಚ್ ನಡೆಸಿದಾಗ, ಬಾಂಗ್ಲಾದೇಶದ ಬರಹಗಾರ್ತಿ ತಸ್ಲೀಮಾ ನಸ್ರೀನ್ ಅವರ ಅಕ್ಟೋಬರ್ 2019 ರ ಟ್ವೀಟ್‌ನಲ್ಲಿ ಈ ಚಿತ್ರವನ್ನು ಕಾಣಬಹುದಾಗಿದೆ. ಅದರಲ್ಲಿ ತಸ್ಲೀಮ ಅವರು ಈ ಚಿತ್ರವನ್ನು ಬಾಂಗ್ಲಾದೇಶವೆಂದು ಉಲ್ಲೇಖಿಸಿದ್ದಾರೆ.

ಅಲ್ಲದೆ ಇದೇ ಚಿತ್ರವು ಗೂಗಲ್‌ನಲ್ಲಿ ಹಲವಾರು ಲಭ್ಯವಿದ್ದು, ಗೆಟ್ಟಿ ಇಮೇಜ್‌ನಲ್ಲಿ ಕೂಡಾ ಈ ಚಿತ್ರವಿದೆ. ಈ ಛಾಯಚಿತ್ರ ಎಎಫ್‌ಪಿ ಕ್ಲಿಕ್ಕಿಸಿದ್ದು, ಈ ದೃಶ್ಯವು 5 ಮೇ 2013 ರಂದು ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ನಡೆದ ಪ್ರತಿಭಟನೆಯಾಗಿದೆ. ಚಿತ್ರವೂ ಪ್ರತಿಭಟನಾಗಾರರು ಬೀದಿಯಲ್ಲಿ ಮೆರವಣಿಗೆ ನಡೆಸುತ್ತಿರುವುದಾಗಿದೆ.

ಈ ಪ್ರತಿಭಟನಾಕಾರರು ಬಾಂಗ್ಲಾದೇಶದಲ್ಲಿ ಧರ್ಮನಿಂದೆಯ ಹೊಸ ಕಾನೂನನ್ನು ಕೋರಿ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಶೀರ್ಷಿಕೆ ತಿಳಿಸುತ್ತದೆ.

ದೇಶದಲ್ಲಿ ಹೊಸ ಕಾನೂನನ್ನು ತರಬೇಕು ಎಂದು 5 ಮೇ 2013 ರಂದು ನಡೆದ ಹಲವಾರು ಚಿತ್ರಗಳು ಸಿಗುತ್ತದೆ. ಅಲ್ ಜಜೀರಾ ವರದಿಯ ಪ್ರಕಾರ, ಪ್ರತಿಭಟನೆಗಳು ಹಿಂಸಾತ್ಮಕ ಘರ್ಷಣೆಗಳಾಗಿ ಮಾರ್ಪಟ್ಟಿದ್ದು, ಅದರಲ್ಲಿ ಅನೇಕ ಜನರು ಸಾವಿಗೀಡಾದರು ಎಂದು ಹೇಳಿದೆ. ವರದಿಯಲ್ಲಿ ಪ್ರತಿಭಟನೆಯನ್ನು ಹೆಫಜತ್-ಎ-ಇಸ್ಲಾಂ ಎಂಬ ಗುಂಪಿನ ಜನರು ಸಂಘಟಿಸಿದ್ದರು ಎಂದು ಅದು ಹೇಳಿದೆ.

ಈ ಬಗ್ಗೆ ಇನ್ನಷ್ಟು ಹುಡುಕಿದಾಗ ಈ ಪ್ರತಿಭಟನೆಯು ಎಪ್ರಿಲ್ 2013 ರಿಂದ ನಡೆಯುತ್ತಿದೆ ಎಂದು ವರದಿಯಾಗಿದೆ.

“ಹೆಫಜತ್-ಇ-ಇಸ್ಲಾಂ 2013 ಬಾಂಗ್ಲಾದೇಶ ಢಾಕಾ ಪ್ರತಿಭಟನೆ” ಎಂಬ ಕೀ ವರ್ಡ್‌ಗಳನ್ನು ಬಳಸಿ ಗೂಗಲ್‌ನಲ್ಲಿ ಹುಡುಕಿದರೆ ಅಲಾಮಿ ವೆಬ್‌ಸೈಟ್‌ನಲ್ಲಿ ಇದರ ಚಿತ್ರಗಳನ್ನು ನಮಗೆ ಕಾಣಬಹುದಾಗಿದೆ. ಅಲ್ಲದೆ ವೈರಲಾಗುತ್ತಿರುಯವ ಚಿತ್ರದ ಬೇರೆ ಕೋನದ ಚಿತ್ರಗಳು ಕೂಡಾ ಅಲ್ಲಿ ಲಭ್ಯವಿದೆ.

ಢಾಕಾದ ಪೋಸ್ಟಾಗೋಲಾ ಬಳಿಯ ಬಾಂಗ್ಲಾದೇಶ-ಚೀನಾ ಸ್ನೇಹ ಸೇತುವೆಯಲ್ಲಿ 2013 ರ ಮೇ 5 ರಂದು ಇದನ್ನು ಕ್ಲಿಕ್ಕಿಸಲಾಗಿದೆ ಎಂದು ಫೋಟೋದ ವಿವರಣೆಯಲ್ಲಿ ಹೇಳಲಾಗಿದೆ.

ಈ ಎರಡೂ ಫೋಟೋಗಳನ್ನು ವೈರಲ್ ಫೋಟೋದೊಂದಿಗೆ ಹೋಲಿಸಿದಾಗ, ಅವು ಒಂದೇ ರ್‍ಯಾಲಿಯದ್ದಾಗಿದೆ ಎಂದು ನಾವು ಗಮನಿಸಬಹುದಾಗಿದ್ದು, ಆದರೆ ವಿಭಿನ್ನ ಕೋನಗಳಿಂದ ಚಿತ್ರೀಕರಿಸಲಾಗಿದೆ.

ಆದ್ದರಿಂದ, 2013 ರಲ್ಲಿ ಬಾಂಗ್ಲಾದೇಶದ ಢಾಕಾದಲ್ಲಿ ನಡೆದ ಹಳೆಯ ಘಟನೆಯ ಫೋಟೋವನ್ನು ಕೇರಳದಲ್ಲಿ ನಡೆದಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡಲಾಗುತ್ತಿದೆ ಎಂಬುವುದು ಸ್ಪಷ್ಟಮಾಗುತ್ತದೆ.


ಓದಿ: ರೇವಾದಲ್ಲಿ ಪ್ರಧಾನಿ ಮೋದಿ ಉದ್ಘಾಟಿಸಿದ್ದು ಏಷ್ಯಾದ ಅತಿದೊಡ್ಡ ಸೌರ ವಿದ್ಯುತ್ ಸ್ಥಾವರವೆ ??; ಫ್ಯಾಕ್ಟ್‌ಚೆಕ್


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಿಯಾಂಕ ಗಾಂಧಿ

ಗಾಜಾದಲ್ಲಿ ಇಸ್ರೇಲ್‌ನ ‘ಜನಾಂಗೀಯ ಕೃತ್ಯಗಳು’ ನಿಲ್ಲಬೇಕು: ಪ್ರಿಯಾಂಕಾ ಗಾಂಧಿ

0
ಗಾಜಾದಲ್ಲಿ ಇಸ್ರೇಲ್ ನಡೆಸುತ್ತಿರುವ ಮಿಲಿಟರಿ ದಾಳಿಯನ್ನು ಸ್ವೀಕಾರಾರ್ಹವಲ್ಲ ಮತ್ತು ಹತ್ಯಾಕಾಂಡ ಎಂದು ಹೇಳಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಇದನ್ನು ಜಗತ್ತಿನ ಪ್ರತಿಯೊಂದು ಸರ್ಕಾರ ಖಂಡಿಸಬೇಕು ಎಂದು ಶುಕ್ರವಾರ ಕರೆ...