Homeಮುಖಪುಟವಿಕಾಸ್ ದುಬೆ ಪ್ರಕರಣ: ತೆಲಂಗಾಣದಂತೆ ಏನಾದರೂ ಮಾಡುತ್ತೇವೆ- ಸುಪ್ರೀಂ

ವಿಕಾಸ್ ದುಬೆ ಪ್ರಕರಣ: ತೆಲಂಗಾಣದಂತೆ ಏನಾದರೂ ಮಾಡುತ್ತೇವೆ- ಸುಪ್ರೀಂ

ಎರಡೂ ಘಟನೆಗಳ ಬಗ್ಗೆ ನ್ಯಾಯಾಲಯವು ಪಿಐಎಲ್‌ಗಳಿಗೆ ಪ್ರತಿಕ್ರಿಯಿಸಿ, ಯುಪಿ ಸರ್ಕಾರಕ್ಕೆ "ಯಾವ ರೀತಿಯ ಸಮಿತಿ" ಬೇಕು ಎಂದು ತಿಳಿಸುವಂತೆ ಗುರುವಾರದ ತನಕ ಕಾಲಾವಕಾಶ ನೀಡಿದೆ. 

- Advertisement -
- Advertisement -

8 ಪೊಲೀಸರ ಹತ್ಯೆ ಮತ್ತು ಉತ್ತರ ಪ್ರದೇಶದ ಕ್ರಿಮಿನಲ್ ವಿಕಾಸ್ ದುಬೆ ಮತ್ತು ಅವನ ಸಹಚರರನ್ನು ಕಾನ್ಪುರ ಪೊಲೀಸರು ಹತ್ಯೆ ಮಾಡಿರುವುದರ ಬಗ್ಗೆ ತನಿಖೆ ನಡೆಸಲು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿಯನ್ನು ನೇಮಿಸುವುದಾಗಿ ತಿಳಿಸಿದೆ.

ಎರಡೂ ಘಟನೆಗಳ ಬಗ್ಗೆ ಸುಪ್ರೀಂ ಕೋರ್ಟ್‌ ಮೇಲ್ವಿಚಾರಣೆಯಲ್ಲಿ ಸಿಬಿಐ ಅಥವಾ ಎನ್‌ಐಎ ತನಿಖೆ ನಡೆಸಬೇಕೆಂಬ ಪಿಐಎಲ್‌ಗಳಿಗೆ ಪ್ರತಿಕ್ರಿಯಿಸಿದ ನ್ಯಾಯಾಲಯ “ಯುಪಿ ಸರ್ಕಾರಕ್ಕೆ ಯಾವ ರೀತಿಯ ಸಮಿತಿ ಬೇಕು” ಎಂದು ತಿಳಿಸುವಂತೆ ಗುರುವಾರದ ತನಕ ಕಾಲಾವಕಾಶ ನೀಡಿದೆ. ಈ ವಿಚಾರಣೆಯನ್ನು ಜುಲೈ 20ಕ್ಕೆ ಮುಂದೂಡಿದೆ.

ತೆಲಂಗಾಣದಲ್ಲಿ ನಡೆದ ದಿಶಾ ಅತ್ಯಾಚಾರ ಮತ್ತು ಹತ್ಯೆಯ ಪ್ರಕರಣದ ಆರೋಪಿಗಳಾದ ನಾಲ್ವರನ್ನು ಎನ್‌ಕೌಂಟರ್ ಹತ್ಯೆ ಮಾಡಿರುವುದನ್ನು ಉಲ್ಲೇಖಿಸಿದ ಕೋರ್ಟ್ “ತೆಲಂಗಾಣ ಪ್ರಕರಣದಲ್ಲಿ ನಾವು ಏನು ಮಾಡಿದ್ದೇವೆಯೋ, ಈಗಲೂ ಹಾಗೆಯೇ ಮಾಡುತ್ತೇವೆ. ನಿಮಗೆ ಯಾವ ರೀತಿಯ ಸಮಿತಿ ಬೇಕು ಎಂದು ತಿಳಿಸಿ” ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಹೇಳಿದರು.

ತೆಲಂಗಾಣ ಪ್ರಕರಣದಲ್ಲಿ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖಾ ಸಮಿತಿಯನ್ನು ನೇಮಿಸಿದ್ದು, ಕೊರೊನಾ ವೈರಸ್‌ ಸಾಂಕ್ರಾಮಿಕ ಕಾರಣದಿಂದ ಅದು ಇನ್ನು ವರದಿಯನ್ನು ಸಲ್ಲಿಸಿಲ್ಲ.

ಈ ನಡುವೆ ಯೋಗಿ ಆದಿತ್ಯನಾಥ್ ಸರ್ಕಾರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ರಾಜ್ಯದ ಪ್ರತಿಕ್ರಿಯೆಯನ್ನು ತಿಳಿಸಲು “ದಯವಿಟ್ಟು ನಮಗೆ ಸಮಯ ನೀಡಿ. ನಾವು ಈ ವಿಷಯವನ್ನು ಅರಿತುಕೊಂಡಿದ್ದೇವೆ. ಈ ಪ್ರಕರಣದ ಕುರಿತು ಹಲವಾರು ಸಂಗತಿಗಳು ಸಾರ್ವಜನಿಕ ವಲಯದಲ್ಲಿವೆ” ಎಂದರು.

ಎಂಟು ಪೊಲೀಸರು ಸಾವು ಮತ್ತು ಇತರ ಏಳು ಮಂದಿ ಪೊಲೀಸರು ಗಾಯಗೊಂಡ ಕಾನ್ಪುರ ಪ್ರಕರಣದ ಕ್ರೂರ ದಾಳಿಯ ಮುಖ್ಯ ಆರೋಪಿ ವಿಕಾಸ್ ದುಬೆಯನ್ನು ಮಧ್ಯಪ್ರದೇಶದಿಂದ ಕರೆತರುವಾಗ ಪೊಲೀಸರು ಹತ್ಯೆಗೈದಿದ್ದರು.

ವಿಕಾಸ್ ದುಬೆ ಪ್ರಕರಣದಲ್ಲಿ ಪೊಲೀಸರು ನೀಡಿರುವ ಹೇಳಿಕೆಯು ತೆಲಂಗಾಣ ಎನ್ಕೌಂಟರ್ ಅನ್ನು ಪ್ರತಿಧ್ವನಿಸುತ್ತಿದೆ. ಹಾಗಾಗಿ ದುಬೆ ಸಾವಿನ ಕುರಿತು ಹಲವಾರು ಪ್ರಶ್ನೆಗಳು ಹೊರಬಿದ್ದಿವೆ.

ಘಟನೆಯ ತನಿಖೆಗಾಗಿ ಯುಪಿ ಸರ್ಕಾರ ಈಗಾಗಲೇ ಸ್ವತಂತ್ರ ಏಕ ಸದಸ್ಯ ಆಯೋಗವನ್ನು ನೇಮಿಸಿದೆ; ಇದು ನಿವೃತ್ತ ನ್ಯಾಯಾಧೀಶರನ್ನು ಒಳಗೊಂಡಿರುತ್ತದೆ ಮತ್ತು ಎರಡು ತಿಂಗಳೊಳಗೆ ವರದಿಯನ್ನು ಸಲ್ಲಿಸಬೇಕಾಗಿದೆ.

ಮುಖ್ಯನ್ಯಾಯಮೂರ್ತಿ ಎಸ್‌.ಎ ಬಾಬ್ಡೆಯವರೊಂದಿಗೆ ನ್ಯಾಯಮೂರ್ತಿಗಳಾದ ಆರ್. ಸುಭಾಷ್ ರೆಡ್ಡಿ ಮತ್ತು ಎ.ಎಸ್.ಬೋಪಣ್ಣ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್‌ನ ತ್ರಿಮೂರ್ತಿ ಪೀಠವು ಈ ಅರ್ಜಿಯನ್ನು ಆಲಿಸಲಿದೆ.


ಇದನ್ನೂ ಓದಿ: ವಿಕಾಸ್ ದುಬೆ ಹತ್ಯೆ ತನಿಖೆಗೆ ವಿಶೇಷ ತಂಡ: ವಿವಾದಾತ್ಮಕ ಎನ್ ಕೌಂಟರ್ ಆರೋಪಿ ರವೀಂದರ್ ಗೌಡ್ ಸದಸ್ಯ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರಾಮ ಮಂದಿರ, ಸಿಖ್ಖರ ಉಲ್ಲೇಖ ನೀತಿ ಸಂಹಿತೆ ಉಲ್ಲಂಘನೆಯಾಗದು: ಪ್ರಧಾನಿ ಮೋದಿಗೆ ಕ್ಲೀನ್ ಚಿಟ್...

0
ರಾಮ ಮಂದಿರ ನಿರ್ಮಾಣ, ಸಿಖ್‌ ತೀರ್ಥಯಾತ್ರೆಯ ಹಾದಿಯಾದ ಕರ್ತಾರ್‌ಪುರ್‌ ಸಾಹಿಬ್‌ ಕಾರಿಡಾರ್‌ ಅಭಿವೃದ್ಧಿ, ಸಿಖರ ಪವಿತ್ರ ಗ್ರಂಥವಾದ ಗುರು ಗ್ರಂಥ ಸಾಹಿಬ್‌ ಪ್ರತಿಗಳನ್ನು ಅಫ್ಗಾನಿಸ್ತಾನದಿಂದ ವಾಪಸ್‌ ತರಲು ಸರ್ಕಾರದ ಕ್ರಮ ಕೈಗೊಂಡಿರುವುದನ್ನು ಉಲ್ಲೇಖಿಸಿ...