Homeಮುಖಪುಟಸಚಿನ್ ಪೈಲಟ್ ಕಾಂಗ್ರೆಸ್ ತೊರೆಯಲು ಕಾರಣವಾದ ಮೂರು ಪ್ರಮುಖ ಬೇಡಿಕೆಗಳಿವು...!!

ಸಚಿನ್ ಪೈಲಟ್ ಕಾಂಗ್ರೆಸ್ ತೊರೆಯಲು ಕಾರಣವಾದ ಮೂರು ಪ್ರಮುಖ ಬೇಡಿಕೆಗಳಿವು…!!

ಸಚಿನ್ ಪಕ್ಷದ ನಾಯಕತ್ವದ ಮುಂದೆ ಮೂರು ಷರತ್ತುಗಳನ್ನು ಇಟ್ಟಿದ್ದು ಪಕ್ಷವು ಅದನ್ನು ಪೂರೈಸಲು ಸಾಧ್ಯವಿಲ್ಲ ಎಂದಿದೆ.

- Advertisement -
- Advertisement -

ಸಚಿನ್ ಪೈಲಟ್ “ಯಾವಾಗಲೂ ನನ್ನ ಹೃದಯದಲ್ಲಿರುತ್ತಾರೆ” ಎಂದು ಸೋಮವಾರ ರಾಹುಲ್ ಗಾಂಧಿಯವರ ಕಚೇರಿಯಿಂದ ಘೋಷಿಸಿ, ಅವರು ಹಿಂತಿರುಗಿ ಸಮಸ್ಯೆಗಳನ್ನು ಬಗೆಹರಿಸುವಂತೆ ಪಕ್ಷವು ಹಲವು ಬಾರಿ ವಿನಂತಿ ಮಾಡಿದ 24 ಗಂಟೆಗಳ ಒಳಗೆ ಅಶೋಕ್ ಗೆಹ್ಲೋಟ್ ಅವರ ಮಂತ್ರಿ ಮಂಡಲದಿಂದ ಸಚಿನ್ ಪೈಲಟ್ ಅವರನ್ನು ಉಪಮಂತ್ರಿ ಸ್ಥಾನದಿಂದ ಕೈಬಿಡಲಾಗಿದೆ.

ರಾಜಸ್ಥಾನ ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿದ್ದ ಸಚಿನ್ ಪೈಲಟ್ ಪಕ್ಷದಿಂದ ನಿರ್ಗಮಿಸಲು ಕಾರಣವಾದ ಪ್ರಮುಖ ಘಟನೆಗಳನ್ನು ಹಿಂದುಸ್ಥಾನ್ ಟೈಮ್ಸ್ ವರದಿ ಮಾಡಿದೆ.

ಹೆಸರು ಹೇಳಲು ಇಚ್ಚಿಸದ ಹಿರಿಯ ನಾಯಕರ ಪ್ರಕಾರ, ಸಚಿನ್ ಪಕ್ಷದ ನಾಯಕತ್ವದ ಮುಂದೆ ಮೂರು ಷರತ್ತುಗಳನ್ನು ಇಟ್ಟಿದ್ದು ಪಕ್ಷವು ಅದನ್ನು ಪೂರೈಸಲು ಸಾಧ್ಯವಿಲ್ಲ ಎಂದು ಹೇಳಿದೆ ಎನ್ನಲಾಗಿದೆ.

ಮೊದಲನೆಯದು, ನಾಲ್ಕು ವರ್ಷಕ್ಕೆ ವಿಧಾನಸಭೆಯನ್ನು ವಿಸರ್ಜಿಸಿ 2022 ರಲ್ಲಿ ಚುನಾವಣೆಗೆ ಹೋಗಬೇಕು. ಮುಂದಿನ ರಾಜ್ಯ ಚುನಾವಣೆಗೆ ಒಂದು ವರ್ಷದ ಮೊದಲು ಕಾಂಗ್ರೆಸ್ ಸಚಿನ್ ಪೈಲಟ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಬೇಕು.

ಎರಡನೆಯ ಬೇಡಿಕೆಯೆಂದರೆ, ಸಚಿನ್‌ರೊಂದಿಗೆ ಬಂಡಾಯವೆದ್ದ ಎಲ್ಲಾ ಶಾಸಕರಿಗೂ ಮಂತ್ರಿ ಸ್ಥಾನ, ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನ ಅಥವಾ ಇತರ ಯಾವುದೇ ಸ್ಥಾನಮಾನಗಳನ್ನು ನೀಡಬೇಕು.

ಮೂರನೆಯ ಮತ್ತು ಅಂತಿಮ ಬೇಡಿಕೆಯೆಂದರೆ, ರಾಜ್ಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮತ್ತು ರಾಜಸ್ಥಾನ್ ಕಾಂಗ್ರೆಸ್ ಉಸ್ತುವಾರಿ ಅವಿನಾಶ್ ಪಾಂಡೆ ಅವರನ್ನು ಅವರ ಹುದ್ದೆಯಿಂದ ಕಿತ್ತು ಹಾಕಿ ಅವರ ಜಾಗಕ್ಕೆ ಬೇರೆ ಜನರನ್ನು ನೇಮಿಸಬೇಕು. ಅವಿನಾಶ್ ಪಾಂಡೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಪರ ಇರುತ್ತಾರೆ ಎಂದು ಸಚಿನ್ ಪೈಲಟ್‌ ಭಾವನೆಯಾಗಿದೆ ಎನ್ನಲಾಗಿದೆ.

“ನಾವು ಅವನನ್ನು ವಾಪಾಸು ಕರೆತರಲು ನಿಜವಾಗಿಯೂ ಪ್ರಯತ್ನಿಸಿದ್ದೇವೆ ಆದರೆ ಇದು ಬ್ಲ್ಯಾಕ್‌ ಮೇಲ್‌ ಆಗಿರುವುದರಿಂದ ಅವರ ಷರತ್ತುಗಳನ್ನು ನಾವು ಒಪ್ಪಲು ಸಾಧ್ಯವಾಗಲಿಲ್ಲ. ಒಂದು ವೇಳೆ ಒಪ್ಪಿದ್ದರೆ ಇತರ ರಾಜ್ಯಗಳಲ್ಲಿಯೂ ಉಳಿದವರು ಇದೇ ದಾರಿಯನ್ನು ಬಳಸಲು ಪ್ರಾರಂಭಿಸಿದರೆ?” ಎಂದು ಕಾಂಗ್ರೆಸ್‌ ಹಿರಿಯ ನಾಯಕ ಹೇಳಿದ್ದಾರೆ. ಈ ಬಗ್ಗೆ ಸಚಿನ್ ಇನ್ನೂ ಯಾವುದೆ ಪ್ರತಿಕ್ರಿಯೆ ನೀಡಲಿಲ್ಲ .

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಮತ್ತೆ ಪಕ್ಷದಲ್ಲಿ ಉಳಿಸಿಕೊಳ್ಳಲು ಪ್ರಯತ್ನಿಸಿ ಎಂದು ತಮ್ಮ ಪಕ್ಷಕ್ಕೆ ನಿರ್ದೇಶನ ನೀಡಿದ್ದರು ಎನ್ನಲಾಗಿದೆ.

ಸಚಿನ್ ನಡೆಯನ್ನು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲಾ, “ಸಚಿನ್ ಮತ್ತು ಅವರ ಬೆಂಬಲಿಗರು ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ಸರ್ಕಾರವನ್ನು ಉರುಳಿಸುವ ಬಿಜೆಪಿಯ ಪಿತೂರಿಯಲ್ಲಿ ಭಾಗಿಯಾಗಿದ್ದಕ್ಕೆ ನಮಗೆ ವಿಷಾದವಿದೆ.’’ ಎಂದು ತೀವ್ರವಾಗಿ ಖಂಡಿಸಿದ್ದಾರೆ.


ಓದಿ: ಉಪಮುಖ್ಯಮಂತ್ರಿ, ಕಾಂಗ್ರೆಸ್ ಅಧ್ಯಕ್ಷ ಹುದ್ದೆಯಿಂದ ಸಚಿನ್ ಪೈಲಟ್ ವಜಾ


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರೋಹಿತ್ ವೇಮುಲಾ ಪ್ರಕರಣ: ಪೊಲೀಸರ ವರದಿ ಸಂಪೂರ್ಣವಾಗಿ ಸುಳ್ಳಿನಿಂದ ಕೂಡಿದೆ; ಪ್ರತಿಕ್ರಿಯಿಸಿದ ಕುಟುಂಬ

0
ಹೈದರಾಬಾದ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ರೋಹಿತ್ ವೇಮುಲಾ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ತೆಲಂಗಾಣ ಪೊಲೀಸರು ಮುಕ್ತಾಯದ ವರದಿಯನ್ನು ಸಲ್ಲಿಸಿದ್ದಾರೆ. ಇದಲ್ಲದೆ ವರದಿಯಲ್ಲಿ ರೋಹಿತ್‌ ವೇಮುಲಾ 'ದಲಿತ ಅಲ್ಲ', ತನ್ನ “ನಿಜವಾದ ಜಾತಿಯ ಗುರುತು”...