Homeದಿಟನಾಗರಫ್ಯಾಕ್ಟ್ ಚೆಕ್: ರೇವಾದಲ್ಲಿ ಪ್ರಧಾನಿ ಮೋದಿ ಉದ್ಘಾಟಿಸಿದ್ದು ಏಷ್ಯಾದ ಅತಿದೊಡ್ಡ ಸೌರ ವಿದ್ಯುತ್ ಸ್ಥಾವರ ಎಂಬುದು...

ಫ್ಯಾಕ್ಟ್ ಚೆಕ್: ರೇವಾದಲ್ಲಿ ಪ್ರಧಾನಿ ಮೋದಿ ಉದ್ಘಾಟಿಸಿದ್ದು ಏಷ್ಯಾದ ಅತಿದೊಡ್ಡ ಸೌರ ವಿದ್ಯುತ್ ಸ್ಥಾವರ ಎಂಬುದು ಸುಳ್ಳು..

ಬಿಜೆಪಿ ನಾಯಕರು ಮಾಡಿದ ಗೊಂದಲದಿಂದ ಟ್ವೀಟರ್ ಬಳಕೆದಾರರೊಬ್ಬರು, ಕರ್ನಾಟಕ ಏಷ್ಯಾದಲ್ಲಿಲ್ಲವೇ? ರೇವಾದಲ್ಲಿರುವುದಕ್ಕಿಂತ ಹೆಚ್ಚಿನ ಸಾಮರ್ಥ್ಯವನ್ನು ಹೊಂದಿರುವ ಕರ್ನಾಟಕದ ಪಾವಗಡ ಉದ್ಯಾನವನ್ನು ಬಿಜೆಪಿ ಏಕೆ ನಿರ್ಲಕ್ಷಿಸಿದೆ ಎಂದು ಪ್ರಶ್ನಿಸಿದ್ದಾರೆ.

- Advertisement -
- Advertisement -

ಮಧ್ಯಪ್ರದೇಶದ ರೇವಾದಲ್ಲಿ 750 ಮೆಗಾವ್ಯಾಟ್ ಸಾಮರ್ಥ್ಯದ ಅಲ್ಟ್ರಾ ಮೆಗಾ ಸೌರ ವಿದ್ಯುತ್ ಉದ್ಯಾನವನ್ನು ಪ್ರಧಾನಿ ನರೇಂದ್ರ ಮೋದಿ ನಿನ್ನೆ ಉದ್ಘಾಟಿಸಿದ್ದಾರೆ. ಜನವರಿಯಲ್ಲಿ ನಿಯೋಜಿಸಲಾದ ಈ ಸೌಲಭ್ಯವು ಮಧ್ಯಪ್ರದೇಶ ಮತ್ತು ದೆಹಲಿ ಮೆಟ್ರೋ ರೈಲು ನಿಗಮಕ್ಕೆ (DMRC) ವಿದ್ಯುತ್ ಸರಬರಾಜು ಮಾಡುತ್ತದೆ. ಈ ಯೋಜನೆಯನ್ನು ನಿರ್ಮಿಸಲು 1,550 ಹೆಕ್ಟೇರ್ ಪ್ರದೇಶವನ್ನು ಬಳಸಲಾಗುತ್ತದೆ. ಬಿಜೆಪಿ ಮಂತ್ರಿಗಳು ಮತ್ತು ನಾಯಕರು ಇದನ್ನು ಏಷ್ಯಾದ ಅತಿದೊಡ್ಡ ಸೌರ ವಿದ್ಯುತ್ ಯೋಜನೆ ಎಂದು ಬಣ್ಣಿಸಿದ್ದಾರೆ. ಇದು ಸತ್ಯವೇ ಪರಿಶೀಲಿಸೋಣ ಬನ್ನಿ.

ಗೃಹಮಂತ್ರಿ ಅಮಿತ್‌ ಶಾರವರು 750 ಮೆಗಾ ವ್ಯಾಟ್ ಸಾಮರ್ಥ್ಯದ ಏಷ್ಯಾದ ಅತಿ ದೊಡ್ಡ ಸೌರವಿದ್ಯುತ್ ಘಟಕವನ್ನು ಉದ್ಘಾಟನೆ ಮಾಡಿದ್ದಕ್ಕೆ ನರೇಂದ್ರ ಮೋದಿಯವರಿಗೆ ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದಾರೆ.

ಬಹಳಷ್ಟು ಜಾಲತಾಣಿಗರು ಬಿಜೆಪಿಯ ಈ ಪ್ರಚಾರಪ್ರಿಯತೆಯನ್ನು ತೀವ್ರವಾಗಿ ಟೀಕಿಸಿದ್ದಾರೆ.  ಬಿಜೆಪಿ ಹೇಳಿಕೊಳ್ಳುವಂತೆ ಇದು ಏಷ್ಯಾದ ಅತಿ ದೊಡ್ಡ ಸೌರ ವಿದ್ಯುತ್ ಯೋಜನೆಯಲ್ಲ. ಏಕೆಂದರೆ 2,050 ಮೆಗಾವ್ಯಾಟ್ ಸಾಮರ್ಥ್ಯ ಹೊಂದಿರುವ ಕರ್ನಾಟಕದ ಪಾವಗಡ ಸೌರ ಉದ್ಯಾನವನವು 2018 ರಿಂದ ಕಾರ್ಯನಿರ್ವಹಿಸುತ್ತಿದೆ. ಹಾಗಾಗಿ ಏಷ್ಯಾದ ಅತಿದೊಡ್ಡ ಸೌರಶಕ್ತಿ ಉದ್ಯಾನವನವನ್ನು ಪ್ರಾರಂಭಿಸುವ ಬಿಜೆಪಿಯ ಹೇಳಿಕೆಗಳು ಸುಳ್ಳು ಎಂಬುದು ಹಲವರ ಅಭಿಪ್ರಾಯವಾಗಿದೆ.

ಬಿಜೆಪಿ ನಾಯಕರು ಮಾಡಿದ ಗೊಂದಲದಿಂದ ಟ್ವೀಟರ್ ಬಳಕೆದಾರರೊಬ್ಬರು, ಕರ್ನಾಟಕ ಏಷ್ಯಾದಲ್ಲಿಲ್ಲವೇ? ರೇವಾದಲ್ಲಿರುವುದಕ್ಕಿಂತ ಹೆಚ್ಚಿನ ಸಾಮರ್ಥ್ಯವನ್ನು ಹೊಂದಿರುವ ಕರ್ನಾಟಕದ ಪಾವಗಡ ಉದ್ಯಾನವನ್ನು ಬಿಜೆಪಿ ಏಕೆ ನಿರ್ಲಕ್ಷಿಸಿದೆ ಎಂದು ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಅವರು ಟ್ವೀಟ್ ಮಾಡಿ “ಬಿಜೆಪಿ ಕೇಂದ್ರ ಸರ್ಕಾರ ಇಂದು ಮಧ್ಯಪ್ರದೇಶದಲ್ಲಿ 750 ಮೆಗಾವ್ಯಾಟ್‌ನ ಏಷ್ಯಾದ ಅತಿದೊಡ್ಡ ಸೌರ ಸ್ಥಾವರವನ್ನು ಉದ್ಘಾಟಿಸಿದೆ ಎಂದು ಹೇಳಿಕೊಳ್ಳುತ್ತಿದೆ. ಆದರೆ ಕರ್ನಾಟಕದ ಪಾವಗಡದಲ್ಲಿರುವ 2000 ಮೆಗಾವ್ಯಾಟ್ ಸಾಮರ್ಥ್ಯದ ಸೌರ ವಿದ್ಯುತ್ ಸ್ಥಾವರ ಯಾವುದು? ಇದನ್ನು ಕೇವಲ 3 ವರ್ಷಗಳಲ್ಲಿ ಕರ್ನಾಟಕದ ಅಂದಿನ ಕಾಂಗ್ರೆಸ್ ಸರ್ಕಾರವು ನಿರ್ಮಿಸಿದೆ. ಇದು 2018 ರಿಂದ ಕಾರ್ಯನಿರ್ವಹಿಸುತ್ತಿದೆ ಎಂದಿದ್ದಾರೆ.

ಆದರೆ, ಅಂತರ್ಜಾಲದಲ್ಲಿ ತುಂಬಾ ಸಣ್ಣ ಮಟ್ಟದ ಸಂಶೋಧನೆ ನಡೆಸಿದರೆ ಸಾಕು ಈ ಎರಡೂ ಹೇಳಿಕೆಗಳು ಸುಳ್ಳು ಎಂದು HWNEWS ವರದಿ ಮಾಡಿದೆ.

ರಾಜಸ್ಥಾನದ ಜೋಧಪುರ ಜಿಲ್ಲೆಯ ಫಲೋಡಿ ತಹಸಿಲ್‌ನ ಭಾದ್ಲಾದಲ್ಲಿನ ಸೌರ ಉದ್ಯಾನವನವು ಮಾರ್ಚ್ 2020ರ ಹೊತ್ತಿಗೆ ವಿಶ್ವದ ಅತಿದೊಡ್ಡ ಸೌರ ಉದ್ಯಾನವನವಾಗಿದೆ. ಇದು ಒಟ್ಟು 10,000 ಎಕರೆ ವಿಸ್ತೀರ್ಣದಲ್ಲಿ ನಿರ್ಮಿತವಾಗಿದ್ದು, ಒಟ್ಟು 2,245 ಮೆಗಾವ್ಯಾಟ್ ಸಾಮರ್ಥ್ಯವನ್ನು ಹೊಂದಿದೆ. ಇದು ರೇವಾದಲ್ಲಿ ಪಿಎಂ ಮೋದಿ ಉದ್ಘಾಟಿಸಿದ ಸ್ಥಾವರ ಮತ್ತು ಕರ್ನಾಟಕದ ಪಾವಗಡ ಸೌರ ಉದ್ಯಾನವನಕ್ಕಿಂತ ದೊಡ್ಡದಾಗಿದೆ ಎಂದು HWNEWS ವರದಿ ಮಾಡಿದೆ.

ಮಾರ್ಚ್ 19, 2020ರ ಮೆರ್ಕಾಮ್ ಇಂಡಿಯಾದ ವರದಿಯ ಪ್ರಕಾರ, ಭಾದ್ಲಾ ಸೌರ ಉದ್ಯಾನವನವು ವಿಶ್ವದ ಅತಿದೊಡ್ಡ ಸೌರ ಉದ್ಯಾನವನವಾಗಿದೆ.

 

ವಿಕಿಪೀಡಿಯಾದ ಪ್ರಕಾರ, ಪಾವಗಡ ಸ್ಥಾವರವು 2,050 ಮೆಗಾವ್ಯಾಟ್ ಸಾಮರ್ಥ್ಯವನ್ನು ಹೊಂದಿದೆ ಮತ್ತು 2245 ಮೆಗಾವ್ಯಾಟ್ ಸಾಮರ್ಥ್ಯದ ಭಾದ್ಲಾ ಸೌರ ಉದ್ಯಾನದ ನಂತರ ವಿಶ್ವದ ಎರಡನೇ ಅತಿದೊಡ್ಡ ದ್ಯುತಿವಿದ್ಯುತ್‌ಜನಕ ಕೇಂದ್ರವಾಗಿದೆ.

ಹಾಗಾಗಿ ರೇವಾ ಸ್ಥಾವರವು ಏಷ್ಯಾದಲ್ಲಿ ಅತಿದೊಡ್ಡದಾಗಿದೆ ಎಂಬ ಕೆಲವು ಬಿಜೆಪಿ ಮಂತ್ರಿಗಳು ಮತ್ತು ಮುಖಂಡರು ನೀಡಿದ ಹೇಳಿಕೆಗಳು ಸುಳ್ಳು ಎಂದು ತಿಳಿದುಬಂದಿದೆ.

ರೇವಾ ಸ್ಥಾವರಕ್ಕಿಂತ ಹೆಚ್ಚಿನ ಸಾಮರ್ಥ್ಯವನ್ನು ಹೊಂದಿರುವ ಪಾವಗಡ ವಿದ್ಯುತ್ ಉದ್ಯಾನವನದ ಬಗ್ಗೆ ಕಾಂಗ್ರೆಸ್ ಮಾಡಿದ ಹೇಳಿಕೆ ನಿಜವಾದರೂ, ಏಷ್ಯಾದಲ್ಲಿ ಮಾತ್ರವಲ್ಲದೇ, ಜಗತ್ತಿನಲ್ಲಿಯೇ ದೊಡ್ಡ ಸೌರಶಕ್ತಿ ಉದ್ಯಾನವನವು ರಾಜಸ್ಥಾನದ ಭದ್ಲಾದಲ್ಲಿದೆ ಎಂದು ತಿಳಿದು ಬಂದಿದೆ.


ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಮೋದಿಯ ಶಿಫಾರಸ್ಸಿನಂತೆ ಈ ಯುವ ವಿಜ್ಞಾನಿಯನ್ನು ಡಿಆರ್‌‌ಡಿಒಗೆ ಸೇರಿಸಲಾಗಿದೆಯೆ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೀಸಲಾತಿ ಹೇಳಿಕೆ: ಆಧಾರ ಸಹಿತ ಸಾಬೀತುಪಡಿಸುವಂತೆ ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ಸವಾಲು

0
ಹಿಂದುಳಿದ ಜಾತಿ ಮತ್ತು ದಲಿತರ ಮೀಸಲಾತಿಯನ್ನು ಕಿತ್ತು ಮುಸ್ಲಿಮರಿಗೆ ನೀಡಲು ಕಾಂಗ್ರೆಸ್ ಹೊರಟಿದೆ ಎಂಬ ಹೇಳಿಕೆಯನ್ನು ಆಧಾರ ಸಹಿತ ಸಾಬೀತುಪಡಿಸಬೇಕು. ಇಲ್ಲದಿದ್ದರೆ ದೇಶದ ಜನರ ಕ್ಷಮೆ ಕೇಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿಯವರಿಗೆ...