ಬಡತನದಿಂದ ಬಳಲುತ್ತಿರುವ ಮಹಿಳೆಯೊಬ್ಬರು ತನ್ನ ಬ್ಯಾಂಕ್ ಸಾವನ್ನು ತೀರಿಸಲು ಸ್ವಂತ ಮಗುವನ್ನೆ ಕೇವಲ 9 ಸಾವಿರಕ್ಕೆ ಮಾರಾಟ ಮಾಡಿರುವ ಘಟನೆ ಬಿಹಾರದ ಅರಾರಿಯಾ ಜಿಲ್ಲೆಯಲ್ಲಿ ನಡೆದಿದೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿದ್ದಾರೆ ಎಂದು ವರದಿಗಳು ಹೇಳಿವೆ. ಬಡತನ
ಪೊಲೀಸರು ಮಗುವನ್ನು ಮಹಿಳೆಯ ಸಂಬಂಧಿಕರ ಮನೆಯಿಂದ ವಶಪಡಿಸಿಕೊಂಡಿದ್ದಾರೆ. ಮಗುವನ್ನು ಬೆಂಗಳೂರು ಮೂಲದ ಮಕ್ಕಳಿಲ್ಲದ ತಾಯಿಯೊಬ್ಬರಿಗೆ ಹಸ್ತಾಂತರಿಸುವ ಮೊದಲು ಅಲ್ಲಿ ಇರಿಸಲಾಗಿತ್ತು. ಮಗುವಿನ ಹುಡುಕಾಟದಲ್ಲಿದ್ದ ಅವರು ಮಗುವಿಗೆ ಬದಲಾಗಿ 2 ಲಕ್ಷ ರೂಪಾಯಿ ನೀಡುವುದಾಗಿ ಭರವಸೆ ನೀಡಿದ್ದರು ಎಂದು ವರದಿ ಹೇಳಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಮಗುವಿನ ಪೋಷಕರಾದ ಮೊಹಮ್ಮದ್ ಹಾರೂನ್ ಮತ್ತು ರೆಹಾನಾ ಖಾತೂನ್ ಅವರು ವಿಚಾರಣೆಗಾಗಿ ಪೊಲೀಸರು ಕಸ್ಟಡಿಗೆ ಪಡೆದಿದ್ದಾರೆ. ಅವರ ಮಗುವನ್ನು ಶನಿವಾರ ಮಕ್ಕಳ ಕಲ್ಯಾಣ ಸಮಿತಿಗೆ ಹಸ್ತಾಂತರಿಸಲಾಗಿದೆ ಎಂದು ವರದಿಯಾಗಿದೆ.
ಮಗುವಿನ ತಾಯಿ ರೆಹಾನಾ ಖಾತೂನ್ ಅವರ ಸಹೋದರ ತನ್ವೀರ್ ಎಂಬಾತ ಮಗುವನ್ನು ಗ್ರಾಮಸ್ಥರಾದ ಮೊಹಮ್ಮದ್ ಆರಿಫ್‌ಗೆ ಮಾರಾಟ ಮಾಡಿದ್ದು, ಭಾನುವಾರ 9,000 ರೂ. ನೀಡಿದ್ದನು. ತನ್ವೀರ್ ತನ್ನ ಮಗನನ್ನು ಮಾರಾಟ ಮಾಡಿ ಆರೀಫ್‌ನಿಂದ ಎಷ್ಟು ಹಣ ಪಡೆದಿದ್ದಾನೆ ಎಂಬ ಬಗ್ಗೆ ತನಗೆ ತಿಳಿದಿಲ್ಲ ಎಂದು ಮಗುವಿನ ತಾಯಿ ಪೊಲೀಸರಿಗೆ ತಿಳಿಸಿದ್ದಾರೆ. ಅದಾಗ್ಯೂ, ಮಗುವನ್ನು ಪಡೆದ ಆರೀಫ್ ಅವರ ಸಂಬಂಧಿಕರು ಮಗುವಿಗಾಗಿ ಆತ 45 ಸಾವಿರ ನೀಡಿದ್ದಾಗಿ ವರದಿಯಾಗಿದೆ.
ಈ ಅಪರಾಧಕ್ಕೆ ತನ್ನ ಬಡತನವನ್ನು ದೂಷಿಸಿರುವ ಮಗುವಿನ ತಾಯಿ ರೆಹನಾ, ಹಣಕಾಸಿನ ಅಡಚಣೆಯಿಂದಾಗಿ 50,000 ರೂ. ಬ್ಯಾಂಕ್ ಸಾಲವನ್ನು ಪಾವತಿಸಲು ಸಾಧ್ಯವಾಗದ ಕಾರಣ ತನ್ನ ಮಗುವನ್ನು ಮಾರಾಟ ಮಾಡಬೇಕಾಯಿತು ಎಂದು ಹೇಳಿದ್ದಾರೆ. ಬ್ಯಾಂಕ್ ಉದ್ಯೋಗಿಗಳು ತನಗೆ ಕಿರುಕುಳ ನೀಡಲು ಪ್ರಾರಂಭಿಸಿದ್ದರು ಎಂದು ಅವರು ಹೇಳಿದ್ದಾರೆ.
“ಖಾಸಗಿ ಫೈನಾನ್ಸ್ ಕಂಪನಿಯಿಂದ ನಾನು ಪಡೆದ ಸಾಲದ ಕಂತು ಕಳೆದ ಮೂರು ತಿಂಗಳಿಂದ ಬಾಕಿಯಿರುವುದರಿಂದ ನಾನು ತೀವ್ರ ಒತ್ತಡಕ್ಕೆ ಒಳಗಾಗಿದ್ದೆ. ಸಾಲ ನೀಡುವ ಕಂಪನಿಯ ಏಜೆಂಟರು ನಮಗೆ ಕಿರುಕುಳ ನೀಡುತ್ತಿದ್ದರು. ಸಾಲವನ್ನು ಮರುಪಾವತಿಸಲು ವಿಫಲವಾದ ಕಾರಣ ನನ್ನ ವಿರುದ್ಧ ಮೊಕದ್ದಮೆ ಹೂಡುವುದಾಗಿ ಬೆದರಿಕೆ ಹಾಕಿದ್ದರು. ಸಾಲವನ್ನು ಮರುಪಾವತಿಸಲು ನನ್ನ ಮಕ್ಕಳಲ್ಲಿ ಒಬ್ಬರನ್ನು ಮಾರಾಟ ಮಾಡುವಂತೆ ನನ್ನ ಸಹೋದರ ತನ್ವೀರ್ ನನಗೆ ಸಲಹೆ ನೀಡಿದ್ದಾನೆ” ಎಂದು ರೆಹಾನಾ ವಿಚಾರಣೆ ವೇಳೆ ತಿಳಿಸಿದ್ದಾರೆ.
ಅರಾರಿಯಾ ಜಿಲ್ಲೆಯ ರಾಣಿಗಂಜ್ ಬ್ಲಾಕ್‌ನ ಪಚಿರಾ ಪಂಚಾಯತ್‌ನಲ್ಲಿ ವಾಸಿಸುವ ದಂಪತಿಯ ಮಕ್ಕಳಲ್ಲಿ ಒಬ್ಬರಾದ ಒಂದೂವರೆ ವರ್ಷದ ಗುರ್ಫಾನ್ ಅವರನ್ನು ಮಾರಾಟ ಮಾಡುವ ಬಗ್ಗೆ ಯೋಜಿಸಿದ್ದರು. ಹಾಗಾಗಿ ಗುರ್ಫಾನ್ ಅವರನ್ನು ಭಾನುವಾರ ಅವರ ತಾಯಿಯ ಚಿಕ್ಕಪ್ಪ ತನ್ವೀರ್ ಅವರ ಮನೆಗೆ ಕಳುಹಿಸಲಾಯಿತು. ಅಲ್ಲಿಂದ ಮಗುವನ್ನು ದುಮಾರಿಯಾ ನಿವಾಸಿ ಮೊಹಮ್ಮದ್ ಆರಿಫ್ ಅವರಿಗೆ ಹಸ್ತಾಂತರಿಸಲಾಗಿದೆ.
ಮಗುವನ್ನು ದತ್ತು ಪಡೆಯಲು ಇಚ್ಛಿಸಿದ ಬೆಂಗಳೂರು ಮೂಲದ ಮಹಿಳೆಯೊಬ್ಬರಿಂದ ಆರಿಫ್ ಅಪಾರ ಹಣ ಪಡೆದಿದ್ದಾಗಿ ಪೊಲೀಸರಿಗೆ ಮಹಿಳೆ ತಿಳಿಸಿದ್ದಾರೆ. ಅರಾರಿಯಾ ನೇಪಾಳ ಗಡಿಗೆ ಸಮೀಪದಲ್ಲಿದ್ದು, ಬಿಹಾರದ ಈ ಗಡಿ ಜಿಲ್ಲೆಗಳಲ್ಲಿ ಮಕ್ಕಳ ಕಳ್ಳಸಾಗಣೆ ಘಟನೆಗಳು ಸಾಮಾನ್ಯವಾಗಿ ನಡೆಯುತ್ತಲೆ ಇರುತ್ತವೆ ಎನ್ನಲಾಗಿದೆ.
2016 ರಲ್ಲಿ ಪಾಟ್ನಾ ಜಿಲ್ಲೆಯ ಹಳ್ಳಿಯೊಂದರ ರುಕ್ಮಣಿ ಮತ್ತು ಸಂದೀಪ್ ಮೀನಾ ತಮ್ಮ ಒಂಬತ್ತು ವರ್ಷದ ಮಗನನ್ನು ಇಂದೋರ್‌ನ ಮಧ್ಯವರ್ತಿಯೊಬ್ಬರಿಗೆ 20,000 ರೂ ಸಾಲವನ್ನು ಮರುಪಾವತಿಸಲು ಮಾರಾಟ ಮಾಡಿದ್ದರು.
ಅದೇ ವರ್ಷ, ಮುಜಾಫರ್‌ಪುರ ಜಿಲ್ಲೆಯ ವ್ಯಕ್ತಿ ಹಿಮಾಂಶು ರಂಜನ್ ತನ್ನ ಹೆಂಡತಿ ಮತ್ತು ಸುಮಾರು ಐದು ವರ್ಷ ಮತ್ತು ಮೂರು ವರ್ಷ ವಯಸ್ಸಿನ ಇಬ್ಬರು ಹೆಣ್ಣುಮಕ್ಕಳನ್ನು 4 ಲಕ್ಷ ರೂಪಾಯಿ ಸಾಲವನ್ನು ಮರುಪಾವತಿಸಲು ಮಾರಾಟ ಮಾಡಿದ್ದರು.
2012ರಲ್ಲಿ ಸಮಸ್ತಿಪುರ ಜಿಲ್ಲೆಯಲ್ಲಿ ಪಾರ್ವತಿ ದೇವಿ ಎಂಬಾಕೆ ತನ್ನ 18 ತಿಂಗಳ ಮಗನನ್ನು 15,000 ರೂ.ಗಳ ಸಾಲ ತೀರಿಸಲು ಮಾರಾಟ ಮಾಡಿದ್ದ ಪ್ರಕರಣ ಬೆಳಕಿಗೆ ಬಂದಿತ್ತು. ಬಡತನ
ಇದನ್ನೂ ಓದಿ: ವಕ್ಫ್ ಭೂಮಿ ವಿವಾದ | ರೈತರಿಗೆ ನೀಡಿದ ನೋಟಿಸ್ ತಕ್ಷಣವೆ ವಾಪಸ್ – ಸಿಎಂ ಸಿದ್ದರಾಮಯ್ಯ
ವಕ್ಫ್ ಭೂಮಿ ವಿವಾದ | ರೈತರಿಗೆ ನೀಡಿದ ನೋಟಿಸ್ ತಕ್ಷಣವೆ ವಾಪಸ್ – ಸಿಎಂ ಸಿದ್ದರಾಮಯ್ಯ


