Homeಮುಖಪುಟವಿದ್ಯುತ್ ಖರೀದಿ ಹಗರಣ | ಜಗನ್ ಮೋಹನ್ ರೆಡ್ಡಿಗೆ ₹1,750 ಕೋಟಿ ಲಂಚದ ಭರವಸೆ ನೀಡಿದ್ದ...

ವಿದ್ಯುತ್ ಖರೀದಿ ಹಗರಣ | ಜಗನ್ ಮೋಹನ್ ರೆಡ್ಡಿಗೆ ₹1,750 ಕೋಟಿ ಲಂಚದ ಭರವಸೆ ನೀಡಿದ್ದ ಗೌತಮ್ ಅದಾನಿ : ಆರೋಪ

- Advertisement -
- Advertisement -

ಸೌರ ವಿದ್ಯುತ್ ಗುತ್ತಿಗೆಗೆ ಸಂಬಂಧಿಸಿದ ಶತಕೋಟಿ ಡಾಲರ್ ಲಂಚ ಹಾಗೂ ವಂಚನೆ ಪ್ರಕರಣದಲ್ಲಿ ಅದಾನಿ ಗ್ರೀನ್ ಎನರ್ಜಿ ಕಂಪನಿಯ ಅಧ್ಯಕ್ಷ ಗೌತಮ್ ಅದಾನಿ ಹಾಗೂ ಇತರರ ವಿರುದ್ದ ಯುಎಸ್‌ ಫೆಡರಲ್ ನ್ಯಾಯಾಲಯ ಗುರುವಾರ (ನ.21) ಬಂಧನ ವಾರೆಂಟ್ ಜಾರಿಗೊಳಿಸಿದೆ.

ಗೌತಮ್ ಅದಾನಿ, ಅವರ ಸೋದರಳಿಯ ಸಾಗರ್ ಅದಾನಿ ಸೇರಿದಂತೆ ಇತರ ಏಳು ಆರೋಪಿಗಳು 20 ವರ್ಷಗಳಲ್ಲಿ 2 ಶತಕೋಟಿ ಡಾಲರ್ ಲಾಭವನ್ನು ನಿರೀಕ್ಷಿಸುವ ಸೌರಶಕ್ತಿ ಪೂರೈಕೆ ಒಪ್ಪಂದಗಳನ್ನು ಪಡೆಯಲು ಭಾರತೀಯ ಸರ್ಕಾರಿ ಅಧಿಕಾರಿಗಳಿಗೆ ಸುಮಾರು 265 ಮಿಲಿಯನ್ ಡಾಲರ್ ಲಂಚ ನೀಡಲು ಒಪ್ಪಂದ ಮಾಡಿಕೊಂಡಿರುವ ಗಂಭೀರ ಆರೋಪವಿದೆ.

ಯುನೈಟೆಡ್ ಸ್ಟೇಟ್ಸ್ ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಕಮಿಷನ್ (ಯುಎಸ್ಇಸಿ) ದೂರಿಗೆ ಸಂಬಂಧಿಸಿದಂತೆ ತನಿಖೆ ನಡೆಸಿದ್ದ ಫೆಡರಲ್ ಪ್ಯಾಸಿಕ್ಯೂಟರ್, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಅದನ್ನು ಪರಿಗಣಿಸಿದ ನ್ಯಾಯಾಲಯ ಬಂಧನ ವಾರೆಂಟ್ ಹೊರಡಿಸಿದೆ.

ಯುಎಸ್ಇಸಿ ನೀಡಿದ್ದ ದೂರಿನಲ್ಲಿ, ಗೌತಮ್ ಅದಾನಿ ವೈಎಸ್‌ಆರ್‌ಸಿಪಿ ಮುಖ್ಯಸ್ಥ ಹಾಗೂ ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ವೈಎಸ್‌ ಜಗನ್ ಮೋಹನ್ ರೆಡ್ಡಿ ಅವರಿಗೆ 2021ರ ಆಗಸ್ಟ್‌ನಲ್ಲಿ ಅಂದಾಜು ರೂ.1750 ಕೋಟಿ (ಸುಮಾರು $228 ಮಿಲಿಯನ್) ಲಂಚ ನೀಡಿದ್ದಾರೆ ಎಂದು ಆರೋಪಿಸಿದ್ದಾಗಿ ವರದಿಯಾಗಿದೆ.

ಯುಎಸ್‌ ಅಟಾರ್ನಿ ಕಚೇರಿಯ ಪ್ರಕಾರ, 2021 ಮತ್ತು 2022 ರಲ್ಲಿ ಗೌತಮ್ ಅದಾನಿಯವರು ಆಂಧ್ರ ಪ್ರದೇಶದ ಸಿಎಂ ಮತ್ತು ಸರ್ಕಾರಿ ಅಧಿಕಾರಿಗಳನ್ನು ವೈಯಕ್ತಿಕವಾಗಿ ಭೇಟಿ ಮಾಡಿದ್ದರು. ಈ ವೇಳೆ ಸೋಲಾರ್ ಎನರ್ಜಿ ಕಾರ್ಪೊರೇಷನ್ ಆಫ್ ಇಂಡಿಯಾ (ಎಸ್‌ಇಸಿಐ) ಯೊಂದಿಗೆ ವಿದ್ಯುತ್ ಮಾರಾಟ ಒಪ್ಪಂದಗಳಿಗೆ ಸಹಿ ಹಾಕಲು ಲಂಚ ನೀಡಿದ್ದರು.

ಯುಎಸ್ಇಸಿ ದೂರು ಮತ್ತು ಪ್ಯಾಸಿಕ್ಯೂಟರ್ ದೋಷಾರೋಪಪಟ್ಟಿಯ ಪ್ರಕಾರ, ಬೆಲೆ ಹೆಚ್ಚಾಗಿದ್ದರಿಂದ ಅನೇಕ ರಾಜ್ಯ ಸರ್ಕಾರಗಳು ಎಸ್‌ಇಸಿಐನಿಂದ ವಿದ್ಯುತ್ ಖರೀದಿಸಲು ನಿರಾಕರಿಸಿದ್ದವು. ಆ ಸಮಯದಲ್ಲಿ ಗೌತಮ್ ಅದಾನಿ ಮತ್ತು ಸಾಗರ್ ಅದಾನಿ ಮಧ್ಯಪ್ರವೇಶಿಸಿದ್ದರು. ದಾಖಲೆಗಳ ಪ್ರಕಾರ ದೊಡ್ಡ ಮೊತ್ತದ ಲಂಚವನ್ನು ಪಾವತಿಸಿದ್ದರು ಅಥವಾ ನೀಡುವುದಾಗಿ ಭರವಸೆ ನೀಡಿದ್ದರು.

“ಅಗತ್ಯ ಸೌಲಭ್ಯದ ಕೊರತೆ ಹಿನ್ನೆಲೆ ಆಂಧ್ರ ಪ್ರದೇಶ ಸರ್ಕಾರ ಎಸ್‌ಇಸಿಐನಿಂದ ವಿದ್ಯುತ್ ಖರೀದಿಸಲು ಒಪ್ಪಂದ ಮಾಡಿಕೊಂಡಿರಲಿಲ್ಲ. ಹಾಗಾಗಿ, ಆಗಸ್ಟ್ 2021ರಲ್ಲಿ, ಗೌತಮ್ ಅದಾನಿ ಜಗನ್ ಮೋಹನ್ ರೆಡ್ಡಿಯವರನ್ನು ವೈಯಕ್ತಿಕವಾಗಿ ಭೇಟಿಯಾಗಿದ್ದರು” ಎಂದು ಯುಎಸ್ಇಸಿ ತನ್ನ ದೂರಿನಲ್ಲಿ (Case 1:24-cv-08080)ಆರೋಪಿಸಿದೆ ಮತ್ತು ಆರೋಪಿಗಳಾದ ಗೌತಮ್ ಅದಾನಿ ಮತ್ತು ಸಾಗರ್ ಅದಾನಿ ವಿರುದ್ಧ ಜ್ಯೂರಿ ವಿಚಾರಣೆಗೆ ಒತ್ತಾಯಿಸಿದೆ.

ಜಗನ್ ಮೋಹನ್ ರೆಡ್ಡಿಯವರನ್ನು ಗೌತಮ್ ಅದಾನಿ ಭೇಟಿಯಾದಾಗ 7,000 ಮೆಗಾ ವ್ಯಾಟ್ ಸಾಮರ್ಥ್ಯದ ವಿದ್ಯುತ್ ಖರೀದಿಗೆ ಸಂಬಂಧಿಸಿ ಎಸ್‌ಇಸಿಐನೊಂದಿಗೆ ಒಪ್ಪಂದ ಮಾಡಿಕೊಳ್ಳಲು ಆಂಧ್ರ ಪ್ರದೇಶದ ಸರ್ಕಾರಿ ಅಧಿಕಾರಿಗಳಿಗೆ ಲಂಚ ಪಾವತಿಸಿದ್ದಾರೆ ಅಥವಾ ಭರವಸೆ ನೀಡಿದ್ದಾರೆ” ಎಂದು ಯುಎಸ್ಇಸಿ ದೂರಿನಲ್ಲಿ ತಿಳಿಸಿದೆ.

ಅದಾನಿ ವಿರುದ್ದದ ದೋಷಾರೋಪ ಪಟ್ಟಿಯ ಪ್ರಕಾರ, ಆಂಧ್ರ ಪ್ರದೇಶ, ಒಡಿಶಾ, ಜಮ್ಮು ಮತ್ತು ಕಾಶ್ಮೀರ, ತಮಿಳುನಾಡು, ಛತ್ತೀಸ್‌ಗಢ ರಾಜ್ಯ ಸರ್ಕಾರಗಳಿಗೆ ನೀಡಲಾದ ಒಟ್ಟು ಲಂಚ ಸರಿಸುಮಾರು ರೂ.2029 ಕೋಟಿಗಳು (ಸುಮಾರು $265 ಮಿಲಿಯನ್), ಅದರಲ್ಲಿ ಸುಮಾರು 85 ಪ್ರತಿಶತ, ಅಂದರೆ ರೂ.1750 ಕೋಟಿಗಳು ($228 ಮಿಲಿಯನ್) ಆಂಧ್ರ ಪ್ರದೇಶಕ್ಕೆ ಪಾವತಿಸಲಾಗಿದೆ ಅಥವಾ ಪಾವತಿಸುವ ಭರವಸೆ ನೀಡಲಾಗಿದೆ

ಯುಎಸ್‌ಎಸ್‌ಇಸಿ ದೂರಿನ ಪ್ರಕಾರ, ಅದಾನಿ ಗ್ರೀನ್ ಎನರ್ಜಿ ಕಂಪನಿಯ ಕಾರ್ಯಕಾರಣಿಗಳು ಅಝೂರ್‌ನ ಕಾರ್ಯನಿರ್ವಾಹಕರಿಗೆ ಇನ್‌ಫ್ರಾ ಪ್ಯಾರಾಗ್ರಾಫ್‌ಗಳು 131 ರಿಂದ 135 ರಲ್ಲಿ ನೀಡಿದ ಹೇಳಿಕೆಗಳಿಂದ” ಈವಿಷಯ ಬಹಿರಂಗಗೊಂಡಿದೆ”. ಅದಾನಿ ಗ್ರೀನ್ ಆಂತರಿಕ ದಾಖಲೆಗಳಲ್ಲೂಇದನ್ನು ಉಲ್ಲೇಖಿಸಲಾಗಿದೆ.

ಗೌತಮ್ ಅದಾನಿ ಅವರು ಜಗನ್ ಮೋಹನ್ ರೆಡ್ಡಿಯವರನ್ನು ಭೇಟಿಯಾಗಿ ಲಂಚ ಪಾವತಿಸಿದ ಅಥವಾ ಪಾವತಿಸುವ ಭರವಸೆ ನೀಡಿದ ಬೆನ್ನಲ್ಲೇ, ಆಂಧ್ರ ಪ್ರದೇಶ ಸರ್ಕಾರ ಎಸ್‌ಇಸಿಐನೊಂದಿಗೆ ವಿದ್ಯುತ್ ಖರೀದಿ ಒಪ್ಪಂದ ಮಾಡಿಕೊಳ್ಳಲು ತಾತ್ವಿಕ ಒಪ್ಪಿಗೆ ನೀಡಿತ್ತು. ಅದಾನಿ ಗ್ರೀನ್ ಮತ್ತು ಅಝೂರೆ ನಡುವಿನ ಆಂತರಿಕ ಸಂವಹನಗಳು ಕೂಡ ಆಂಧ್ರ ಪ್ರದೇಶ ಎಸ್ಇಸಿಐನಿಂದ ವಿದ್ಯುತ್ ಖರೀದಿಸಲು ಒಪ್ಪಿಕೊಂಡಿರುವುದನ್ನು ಹೇಳಿವೆ ಎಂದು ವರದಿಯಾಗಿದೆ.

ಅದಾನಿ ಅವರು ಜಗನ್ ಮೋಹನ್ ರೆಡ್ಡಿಯನ್ನು ಭೇಟಿಯಾದ ಒಂದು ವಾರದ ನಂತರ, ” ಕಳೆದ ತಿಂಗಳು ನಡೆದ ಸಚಿವ ಸಂಪುಟ ಸಭೆಯಲ್ಲಿ ವಿದ್ಯುತ್ ಖರೀದಿಸುವ ಎಸ್ಇಸಿಐ ಪ್ರಸ್ತಾಪವನ್ನು ಒಪ್ಪಿಕೊಂಡು ಮೊದಲ ಹಂತದಲ್ಲಿ 7,000 ಮೆ.ವ್ಯಾ ವಿದ್ಯುತ್ ಖರೀದಿಸಲು ತೀರ್ಮಾನಿಸಲಾಗಿದೆ” ಎಂದು ಸರ್ಕಾರ ಸಾರ್ವಜನಿಕವಾಗಿ ಹೇಳಿತ್ತು. ‘ಇದನ್ನು ಬೇರೆ ರೀತಿಯಲ್ಲಿ ಹೇಳುವುದಾದರೆ, ಪಾವತಿಸಿದ ಅಥವಾ ಭರವಸೆ ನೀಡಿದ ಲಂಚವು ಕೆಲಸ ಮಾಡಿದೆ” ಎಂದರ್ಥ ಎಂದು ಯುಎಸ್‌ಎಸ್‌ಇಸಿ ದೂರಿನಲ್ಲಿ ಹೇಳಿದೆ.

ಅದಾನಿ ಗ್ರೀನ್‌ ಎನರ್ಜಿಯ ಆಂತರಿಕ ದಾಖಲೆಗಳಲ್ಲಿ ಈ ಲಂಚದ ಬಗ್ಗೆ ವಿವರಗಳನ್ನು ಉಲ್ಲೇಖಿಸಲಾಗಿದೆ ಎಂದು ಯುನೈಟೆಡ್ ಸ್ಟೇಟ್ಸ್‌ನ ದೋಷಾರೋಪಣೆ ಪಟ್ಟಿಯಲ್ಲಿ ಪದೇ ಪದೇ ಉಲ್ಲೇಖಿಸಲ್ಪಟ್ಟಿದೆ ಎಂದು ವರದಿಯಾಗಿದೆ.

ಆರೋಪ ಅಲ್ಲಗಳೆದ ವೈಎಸ್‌ಆರ್‌ಸಿಪಿ

ತಮ್ಮ ವಿರುದ್ದದ ಆರೋಪಗಳಿಗೆ ಪ್ರತಿಕ್ರಿಯಿಸಿರುವ ವೈಎಸ್‌ಆರ್‌ಸಿಪಿ, ಅದಾನಿ ಜೊತೆ ಯಾವುದೇ ನೇರ ಒಪ್ಪಂದ ಮಾಡಿಕೊಂಡಿಲ್ಲ ಎಂದು ಗುರುವಾರ (ನ.21) ಹೇಳಿದೆ.

“ಎಸ್‌ಇಸಿಐ ಭಾರತ ಸರ್ಕಾರದ ಉದ್ಯಮ ಎಂದು ನಮೂದಿಸುವುದು ಅವಶ್ಯಕ. ಆಂಧ್ರ ಪ್ರದೇಶ ವಿದ್ಯುತ್ ನಿಗಮ ಮತ್ತು ಅದಾನಿ ಸಮೂಹಕ್ಕೆ ಸೇರಿದ ಇತರ ಯಾವುದೇ ಸಂಸ್ಥೆಗಳ ನಡುವೆ ಯಾವುದೇ ನೇರ ಒಪ್ಪಂದಗಳು ನಡೆದಿಲ್ಲ. ಆದ್ದರಿಂದ, ದೋಷಾರೋಪ ಪಟ್ಟಿಯಲ್ಲಿ ರಾಜ್ಯ ಸರ್ಕಾರದ ಮೇಲೆ ಮಾಡಿದ ಆರೋಪಗಳು ಸುಳ್ಳಾಗಿವೆ” ಎಂದು ವೈಎಸ್‌ಆರ್‌ಸಿಪಿ ಹೇಳಿಕೆಯಲ್ಲಿ ತಿಳಿಸಿದೆ.

ಈ ಹಿಂದಿನ ಆಂಧ್ರ ಪ್ರದೇಶ ಸರ್ಕಾರ, ಎಸ್‌ಇಸಿಐಯಿಂದ 25 ವರ್ಷಗಳ ಅವಧಿಗೆ ಕಿಲೋ ವ್ಯಾಟ್‌ಗೆ 2.49 ರೂ.ನಂತೆ 7,000 ಮೆ.ವ್ಯಾ ವಿದ್ಯುತ್ ಖರೀದಿಗೆ ಒಪ್ಪಂದ ಮಾಡಿಕೊಂಡಿದೆ. ಈ ಪೈಕಿ 2024-25 ಆರ್ಥಿಕ
ವರ್ಷದಲ್ಲಿ 3,000 ಮೆ.ವ್ಯಾ, 2025-26 ಆರ್ಥಿಕ ವರ್ಷದಲ್ಲಿ 3,000 ಮೆ.ವ್ಯಾ ಮತ್ತು ಆರ್ಥಿಕ ವರ್ಷ 2026-27ರಲ್ಲಿ 1,000 ಮೆ.ವ್ಯಾ ಅನ್ನು ಐಎಸ್‌ಟಿಎಸ್ (ಇಂಟರ್ ಸ್ಟೇಟ್ ಟ್ರಾನ್ಸ್ಮಿಷನ್ ಸಿಸ್ಟಮ್) ಶುಲ್ಕಗಳನ್ನು ಮನ್ನಾ ಮಾಡುವ ಮೂಲಕ ಖರೀದಿಸಲಿದೆ ಎಂದು ವೈಎಸ್‌ಆರ್‌ಸಿಪಿ ಹೇಳಿದೆ.

ಈ ಅಗ್ಗದ ದರದ ವಿದ್ಯುತ್ ಖರೀದಿಯು ವಾರ್ಷಿಕವಾಗಿ 3,700 ಕೋಟಿ ರೂಪಾಯಿಗಳ ಉಳಿತಾಯದೊಂದಿಗೆ ರಾಜ್ಯಕ್ಕೆ ದೊಡ್ಡ ಲಾಭ ಮಾಡಿಕೊಡುತ್ತದೆ. ಈ ಒಪ್ಪಂದವು 25 ವರ್ಷಗಳ ಅವಧಿಯದ್ದು, ಆದ್ದರಿಂದ 25 ವರ್ಷಗಳಲ್ಲಿ ರಾಜ್ಯವು ಹೆಚ್ಚಿನ ಲಾಭ ಮಾಡಿಕೊಳ್ಳಬಹುದು ಎಂದಿದೆ.

ಇದನ್ನೂ ಓದಿ : ಲಂಚ, ವಂಚನೆ ಪ್ರಕರಣ : ಅದಾನಿ ವಿರುದ್ದ ಅಮೆರಿಕದಲ್ಲಿ ದೋಷಾರೋಪ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತ್ರಿಪುರಾದಲ್ಲಿ ಕೋಮು ಹಿಂಸಾಚಾರ : ಮಸೀದಿ, ಮನೆಗಳಿಗೆ ಹಾನಿ ; ನಿಷೇಧಾಜ್ಞೆ ಜಾರಿ

ಸ್ಥಳೀಯ ದೇವಾಲಯೊಂದಕ್ಕೆ ಚಂದಾ ಸಂಗ್ರಹಿಸುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಕನಿಷ್ಠ ಐದರಿಂದ ಆರು ಜನರು ಗಾಯಗೊಂಡು ಮನೆಗಳು, ಮರದ ಅಂಗಡಿ ಮತ್ತು ಮಸೀದಿಗೆ ಹಾನಿಯಾದ ನಂತರ, ಜನವರಿ 10ರ...

ಭದ್ರತಾ ಕಾರಣ ನೀಡಿ ಸ್ಮಾರ್ಟ್‌ಫೋನ್ ತಯಾರಕರು ಮೂಲ ಕೋಡ್ ನೀಡುವಂತೆ ಒತ್ತಾಯಿಸಲು ಕೇಂದ್ರದ ಪ್ರಸ್ತಾಪ

ನವದೆಹಲಿ: ಸ್ಮಾರ್ಟ್‌ಫೋನ್ ತಯಾರಕರು ಸರ್ಕಾರದೊಂದಿಗೆ ಮೂಲ ಕೋಡ್ ಹಂಚಿಕೊಳ್ಳುವುದು ಮತ್ತು ಭದ್ರತಾ ಕ್ರಮಗಳ ಭಾಗವಾಗಿ ಹಲವಾರು ಸಾಫ್ಟ್‌ವೇರ್ ಬದಲಾವಣೆಗಳನ್ನು ಮಾಡುವುದು ಕಡ್ಡಾಯಗೊಳಿಸಲು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರಸ್ತಾಪಿಸಿದೆ, ಇದು ಆಪಲ್ ಮತ್ತು...

ದಾಳಿ ನಡೆಸಿದರೆ ನಮ್ಮ ನೇರ ಗುರಿಯಾಗುತ್ತೀರಿ : ಅಮೆರಿಕ, ಇಸ್ರೇಲ್‌ಗೆ ಎಚ್ಚರಿಕೆ ನೀಡಿದ ಇರಾನ್

ಇರಾನ್‌ನಲ್ಲಿ ನಡೆಯುತ್ತಿರುವ ಆಡಳಿತ ವಿರೋಧಿ ದಂಗೆಯಲ್ಲಿ ಸಾವುಗಳು ಹೆಚ್ಚಾದರೆ ಅಮೆರಿಕ ಮಧ್ಯಪ್ರವೇಶಿಸಲಿದೆ ಎಂದಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಇರಾನ್‌ ತಿರುಗೇಟು ನೀಡಿದೆ. ಇರಾನ್‌ನ ಸಂಸತ್ತಿನ ಅಧ್ಯಕ್ಷ ಮೊಹಮ್ಮದ್ ಬಾಗರ್ ಖಲೀಬಾಫ್ "ಅಮೆರಿಕ ಇರಾನ್ ಮೇಲೆ...

ಕೇಂದ್ರ ಸರ್ಕಾರದ ಎಚ್ಜರಿಕೆ ನಂತರ 3,500 ಪೋಸ್ಟ್‌ಗಳ ನಿರ್ಬಂಧ, 600 ಖಾತೆಗಳನ್ನು ಅಳಿಸಿದ ಎಕ್ಸ್ ಪ್ಲಾಟ್ ಫಾರ್ಮ್

ಮಹಿಳೆಯರನ್ನು ಗುರಿಯಾಗಿಸಿಕೊಂಡು AI- ರಚಿತವಾದ ಅಶ್ಲೀಲ ವಿಡಿಯೋಗಳ ವಿಷಯವನ್ನು ಕೇಂದ್ರವು ಗಮನಕ್ಕೆ ತಂದ ಕಠಿಣ ಕಾನೂನು ಜಾರಿಗೊಳಿಸುವಿಕೆಗೆ ಪ್ರತಿಜ್ಞೆ ಮಾಡಿದ ನಂತರ X 3,500 ಪೋಸ್ಟ್‌ಗಳು ಮತ್ತು 600 ಖಾತೆಗಳನ್ನು ಅಳಿಸಿಹಾಕಿದೆ.   ಅಶ್ಲೀಲ ವಿಷಯಗಳ...

ಮಾನವ ತಲೆಬುರುಡೆ, ಹುಲಿಚರ್ಮದಂತಹ ಕಸ್ಟಮೈಸ್ ಚರ್ಮ ಸೇರಿದಂತೆ ಹಲವು ಅನುಮಾನಾಸ್ಪದ ವಸ್ತುಗಳ ಮಾರಾಟ: ಮಾಂತ್ರಿಕನ ಬಂಧನ

ಬೆಂಗಳೂರು ವಲಯ ಘಟಕದ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಉತ್ತರ ಬೆಂಗಳೂರಿನ ಭೂಪ್ಸಂದ್ರದ 39 ವರ್ಷದ ವ್ಯಕ್ತಿಯನ್ನು ವನ್ಯಜೀವಿ (ರಕ್ಷಣಾ) ಕಾಯ್ದೆ, 1972 ರ ಅಡಿಯಲ್ಲಿ ಬಂಧಿಸಿದೆ. "ಜನವರಿ 9 ರಂದು ನಡೆದ ಕಾರ್ಯಾಚರಣೆಯಲ್ಲಿ...

ದಲಿತ ಮಹಿಳೆಯನ್ನು ಕೊಂದು ಮಗಳ ಅಪಹರಣ : ಆರೋಪಿಯ ಬಂಧನ

ಉತ್ತರ ಪ್ರದೇಶದ ಮೀರತ್‌ನಲ್ಲಿ ದಲಿತ ಮಹಿಳೆಯನ್ನು ಕೊಂದು, ಆಕೆಯ ಮಗಳನ್ನು ಅಪಹರಿಸಿದ ಆರೋಪಿಯನ್ನು ಪೊಲೀಸರು ಶನಿವಾರ (ಜ.10) ಬಂಧಿಸಿದ್ದಾರೆ. ಬಂಧಿತನನ್ನು 22 ವರ್ಷದ ಪರಾಸ್ ಸೋಮ್ (ಪರಾಸ್ ಠಾಕೂರ್) ಎಂದು ಗುರುತಿಸಲಾಗಿದೆ. ರಜಪೂತ ಸಮುದಾಯದ...

‘ಮುಂಬೈ ಮಹಾರಾಷ್ಟ್ರ ನಗರವಲ್ಲ’: ಅಣ್ಣಾಮಲೈ ಹೇಳಿಕೆಗೆ ಶಿವಸೇನೆಯಿಂದ ತೀವ್ರ ಆಕ್ರೋಶ

ಮುಂಬೈ: ಐಪಿಎಸ್ ಅಧಿಕಾರಿಯಿಂದ ರಾಜಕಾರಣಿಯಾಗಿ ಬದಲಾದ ಕೆ.ಅಣ್ಣಾಮಲೈ ಅವರು "ಬಾಂಬೆ ಮಹಾರಾಷ್ಟ್ರ ನಗರವಲ್ಲ, ಅಂತರರಾಷ್ಟ್ರೀಯ ನಗರ" ಎಂದು ಹೇಳಿದ್ದು, ಇದು ಮುಂಬೈನಲ್ಲಿ ವಿವಾದ ಸೃಷ್ಟಿಸಿದೆ.  ಇದಕ್ಕೆ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ)...

ಮೂರನೇ ಅತ್ಯಾಚಾರ ಪ್ರಕರಣ ದಾಖಲು : ಉಚ್ಛಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಬಂಧನ

ಅತ್ಯಾಚಾರ ಆರೋಪ ಕೇಳಿ ಬಂದ ಬಳಿಕ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿರುವ ಕೇರಳದ ಪಾಲಕ್ಕಾಡ್‌ನ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಭಾನುವಾರ (ಜ.11) ಬಂಧಿಸಲಾಗಿದೆ. ಪಾಲಕ್ಕಾಡ್‌ನ ಕೆಪಿಎಂ ರೀಜೆನ್ಸಿ ಹೋಟೆಲ್‌ನಿಂದ ಬೆಳಗಿನ ಜಾವ 12.30ರ ಸುಮಾರಿಗೆ ಮಾಂಕೂಟತ್ತಿಲ್...

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...