Homeಮುಖಪುಟಆರೋಗ್ಯ ಸರಿಯಿಲ್ಲ ಎಂದಿದ್ದ ಪ್ರಜ್ಞಾ ಠಾಕೂರ್‌‌ - ಡ್ಯಾನ್ಸ್‌ ಮಾಡುವ ವಿಡಿಯೊ ವೈರಲ್‌!

ಆರೋಗ್ಯ ಸರಿಯಿಲ್ಲ ಎಂದಿದ್ದ ಪ್ರಜ್ಞಾ ಠಾಕೂರ್‌‌ – ಡ್ಯಾನ್ಸ್‌ ಮಾಡುವ ವಿಡಿಯೊ ವೈರಲ್‌!

ಅವರು 2008 ರ ಮಾಲೆಗಾಂವ್ ಭಯೋತ್ಪಾದಕ ಸ್ಫೋಟದ ಪ್ರಮುಖ ಆರೋಪಿಯಾಗಿದ್ದು, ಜಾಮೀನಿನ ಮೇಲೆ ಹೊರಗಿದ್ದಾರೆ.

- Advertisement -
- Advertisement -

ಮಾಲೆಗಾಂವ್ ಭಯೋತ್ಪಾದನಾ ಸ್ಪೋಟದ ಪ್ರಮುಖ ಆರೋಪಿ, ಸಂಸದೆ ಪ್ರಜ್ಞಾ ಠಾಕೂರ್‌ ಅವರು ಬ್ಯಾಸ್ಕೆಟ್‌ಬಾಲ್ ಆಡುವ ವಿಡಿಯೊವೊಂದು ಇತ್ತೀಚೆಗೆ ವೈರಲ್ ಆಗಿತ್ತು. ಇದೀಗ ಮತ್ತೆ ಮದುವೆ ಕಾರ್ಯಕ್ರಮವೊಂದರಲ್ಲಿ ಅವರು ಡ್ಯಾನ್ಸ್‌ ಮಾಡುವ ವಿಡಿಯೊವೊಂದು ವೈರಲ್‌ ಆಗಿದೆ. ಮಾಲೆಗಾಂವ್‌ ಸ್ಪೋಟ ಪ್ರಕರಣದಲ್ಲಿ ಅವರು, ಅನಾರೋಗ್ಯದ ಕಾರಣ ನೀಡಿ ನ್ಯಾಯಾಲಯಕ್ಕೆ ಹಾಜರಾಗುವುದರಿಂದ ರಿಯಾಯಿತಿ ನೀಡುವಂತೆ ಕೇಳಿಕೊಂಡಿದ್ದರು. ಇದೀಗ ಈ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.

ಇತ್ತೀಚಿಚೆಗೆ ವೈರಲ್‌ ಆದ ವಿಡಿಯೊದಲ್ಲಿ ಅವರು ಮದುವೆ ಸಂಭ್ರಮದಲ್ಲಿ ಭಾಗಹಿಸಿದ್ದು, ಅಲ್ಲಿ ಅವರು ಡ್ಯಾನ್ಸ್ ಮಾಡಿದ್ದು ಮಾತ್ರವಲ್ಲದೆ, ಇತರರನ್ನೂ ಸಂಭ್ರಮದಲ್ಲಿ ಸೇರಲು ಕೇಳಿಕೊಳ್ಳುತ್ತಾರೆ. ಸಂಸದೆ ತಮ್ಮ ಮದುವೆಯಲ್ಲಿ ಭಾಗವಹಿಸಿದ್ದನ್ನು ಸ್ವತಃ ಮದುಮಗಳ ತಂದೆ ಖುಷಿ ವ್ಯಕ್ತಪಡಿಸಿ ಮಾಧ್ಯಮಗಳಿಗೆ ಸ್ಪಷ್ಟಪಡಿಸಿದ್ದರು. ಈ ವಿಡಿಯೊ ಕುರಿತು ಕಾಂಗ್ರೆಸ್‌ ನಾಯಕ ನರೇಂದ್ರ ಸಲೂಜಾ ಅವರು ವ್ಯಂಗ್ಯವಾಡಿದ್ದರೆ.

ಇದನ್ನೂ ಓದಿ: ‘ಪ್ರಜ್ಞಾ ಠಾಕೂರ್‌ ವಿಚಾರದಲ್ಲಿ ಮೋದಿ ಮನಸು ಬದಲಾಯಿಸಿದ ಹಾಗಿದೆ’: ಕಾಂಗ್ರೆಸ್‌‌ ಆಕ್ರೋಶ

“ನಮ್ಮ ಭೋಪಾಲ್ ಸಂಸದೆ, ಸಹೋದರಿ ಪ್ರಜ್ಞಾ ಠಾಕೂರ್ ಅವರು ಬ್ಯಾಸ್ಕೆಟ್‌ಬಾಲ್ ಆಡುವುದನ್ನು, ಬೆಂಬಲವಿಲ್ಲದೆ ನಡೆಯುದನ್ನು ಅಥವಾ ಈ ರೀತಿ ಸಂತೋಷದಿಂದ ನೃತ್ಯ ಮಾಡುವುದನ್ನು ನೋಡಿದಾಗೆಲ್ಲಾ ಅದು ನಮಗೆ ಸಂತೋಷವನ್ನು ಕೊಡುತ್ತದೆ …?” ಎಂದು ಮಧ್ಯಪ್ರದೇಶದ ಕಾಂಗ್ರೆಸ್ ವಕ್ತಾರರೂ ಆಗಿರುವ ಸಲೂಜಾ ಅವರು ಟ್ವೀಟ್ ಮಾಡಿದ್ದಾರೆ.

ಜುಲೈ 1 ರಂದು ಕೂಡಾ ಸಲೂಜಾ ಅವರು ಪ್ರಜ್ಞಾ ಠಾಕೂರ್‌ ಬಾಸ್ಕೆಟ್‌ ಬಾಲ್ ಆಡುವ ವಿಡಿಯೊವನ್ನು ಹಂಚಿಕೊಂಡಿದ್ದರು. ಅಂದು ಟ್ವೀಟ್ ಮಾಡಿದ್ದ ಅವರು, “ಭೋಪಾಲ್ ಸಂಸದೆ ಪ್ರಜ್ಞಾ ಠಾಕೂರ್ ಅವರನ್ನು ಗಾಲಿಕುರ್ಚಿಯಲ್ಲಿ ಮಾತ್ರ ನೋಡಿದ್ದೆ. ಆದರೆ ಇಂದು, ಭೋಪಾಲ್ ಕ್ರೀಡಾಂಗಣದಲ್ಲಿ ಬ್ಯಾಸ್ಕೆಟ್‌ಬಾಲ್‌ ಆಡುವುದನ್ನು ನೋಡಿ ತುಂಬಾ ಸಂತೋಷವಾಗಿದೆ. ಗಾಯದಿಂದಾಗಿ ಅವರು ನಡೆಯಲು ಅಥವಾ ಸರಿಯಾಗಿ ನಿಲ್ಲಲು ಸಾಧ್ಯವಿಲ್ಲ ಎಂದು ಇಲ್ಲಿಯವರೆಗೆ ನಮಗೆ ತಿಳಿದಿತ್ತು …? ದೇವರು ಯಾವಾಗಲೂ ಅವರನ್ನು ಆರೋಗ್ಯವಾಗಿರಿಸಿಕೊಳ್ಳಲಿ … ” ಎಂದು ಟ್ವೀಟ್ ಮಾಡಿದ್ದರು.

ತಮ್ಮ ಪಕ್ಷ ಬಿಜೆಪಿಯನ್ನು ಆಗಾಗ್ಗೆ ಮುಜುಗರಕ್ಕೀಡು ಮಾಡುವಂತಹ ವಿವಾದಾತ್ಮಕ ಟೀಕೆಗಳಿಗೆ ಹೆಸರುವಾಸಿಯಾದ ಪ್ರಜ್ಞಾ ಠಾಕೂರ್ 2008 ರ ಮಾಲೆಗಾಂವ್ ಭಯೋತ್ಪಾದಕ ಸ್ಫೋಟದ ಪ್ರಮುಖ ಆರೋಪಿಯಾಗಿದ್ದಾರೆ. ಅವರು ಪ್ರಸ್ತುತ ಜಾಮೀನಿನ ಮೇಲೆ ಹೊರಗಿದ್ದು, 2017 ರಲ್ಲಿ ಅವರಿಗೆ ಜಾಮೀನು ನೀಡಲಾಗಿತ್ತು. ಜಾಮೀನು ಪಡೆಯುವ ಮೊದಲು ಅವರು ಒಂಬತ್ತು ವರ್ಷಗಳ ಕಾಲ ಜೈಲಿನಲ್ಲಿದ್ದರು.

ಮುಂಬೈಯಿಂದ 200 ಕಿ.ಮೀ ದೂರದಲ್ಲಿರುವ ಮಾಲೆಗಾಂವ್ ಎಂಬ ಪಟ್ಟಣದ ಮಸೀದಿಯ ಬಳಿ ಮೋಟಾರ್ ಸೈಕಲ್‌ನಲ್ಲಿ ಇಟ್ಟಿದ್ದ ಸ್ಫೋಟಕ ಸ್ಪೋಟಗೊಂಡು ಆರು ಜನರು ಸಾವನ್ನಪ್ಪಿದರು ಮತ್ತು 100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಈ ಪ್ರಕರಣದಲ್ಲಿ ಪ್ರಜ್ಙಾ ಠಾಕೂರ್‌ ಪ್ರಮುಖ ಆರೋಪಿಯಾಗಿದ್ದಾರೆ.

ಇದನ್ನೂ ಓದಿ: ಮಾಲೆಗಾಂವ್‌‌ ಸ್ಪೋಟ: 2 ನೇ ಬಾರಿಯೂ ವಿಚಾರಣೆಗೆ ತಪ್ಪಿಸಿಕೊಂಡ ಪ್ರಜ್ಞಾ ಸಿಂಗ್ ಠಾಕೂರ್‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...