Homeಕರ್ನಾಟಕ'ಹದ್ದಬಸ್ತಿನಲ್ಲಿ ಇರಿ' | ಮತ್ತೆ ಮುಸ್ಲಿಂ ದ್ವೇಷ ಭಾಷಣ ಮಾಡಿದ ಪ್ರತಾಪ್ ಸಿಂಹ

‘ಹದ್ದಬಸ್ತಿನಲ್ಲಿ ಇರಿ’ | ಮತ್ತೆ ಮುಸ್ಲಿಂ ದ್ವೇಷ ಭಾಷಣ ಮಾಡಿದ ಪ್ರತಾಪ್ ಸಿಂಹ

- Advertisement -
- Advertisement -

ಬಿಜೆಪಿ ಟಿಕೆಟ್ ನಿರಾಕರಿಸಿದ ನಂತರ ತೀವ್ರವಾಗಿ ಮುಸ್ಲಿಂ ದ್ವೇಷದ ಮಾತುಗಳನ್ನು ಆಡುತ್ತಾ ಪಕ್ಷದಲ್ಲಿ ಮುನ್ನಲೆಗೆ ಬರಲು ಪ್ರಯತ್ನಿಸುತ್ತಿರುವ ಮೈಸೂರಿನ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಮತ್ತೊಮ್ಮೆ ಮುಸ್ಲಿಂ ವಿರೋಧಿ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದು, “ಹಿಂದೂಗಳು ಕಲ್ಲುಗಳನ್ನು ಎತ್ತಿಕೊಂಡರೆ ಯಾವುದೇ ಮುಸಲ್ಮಾನರು ಉಳಿಯುವುದಿಲ್ಲ, ಆದ್ದರಿಂದ ಹದ್ದಬಸ್ತಿನಲ್ಲಿ ಇರಿ” ಎಂದು ಹೇಳಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ

ಈ ವರ್ಷ ಮೈಸೂರು ಸಮೀಪದ ಚಾಮುಂಡಿ ಬೆಟ್ಟದಲ್ಲಿ ನಡೆಯಲಿರುವ ಸಾಂಪ್ರದಾಯಿಕ ದಸರಾಕ್ಕೆ ಪರ್ಯಾಯವಾದ ಮಹಿಷ ದಸರಾ ಆಚರಣೆ ಕುರಿತು ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದಾರೆ.

ಇದನ್ನೂಓದಿ: ಉತ್ತರ ಪ್ರದೇಶ: ಶಿಕ್ಷಕನ ಹೊಡೆತಕ್ಕೆ ದೃಷ್ಟಿ ಕಳೆದುಕೊಂಡ 6ನೇ ತರಗತಿ ವಿದ್ಯಾರ್ಥಿ

ಪುರಾಣಗಳಲ್ಲಿ ರಾಕ್ಷಸನಾಗಿ ಚಿತ್ರಿಸಲಾಗಿರುವ ಮಹಿಷ ಮೇಲ್ಜಾತಿ ಆರ್ಯರಿಂದ ಕೊಲ್ಲಲ್ಪಟ್ಟ ಬೌದ್ಧ ದೊರೆ ಎಂದು ಪ್ರತಿಪಾದಿಸಿ ಜನಪರ ಚಳುವಳಿಗಳು 2015 ರಿಂದ ಮಹಿಷ ದಸರ ಆಚರಿಸಿಕೊಂಡು ಬರುತ್ತಿವೆ. ಈ ಮೂಲಕ ಮಹಿಷನ ಸಾಂಸ್ಕೃತಿಕ ಇತಿಹಾಸವನ್ನು ನೆನಪಿಸುವ ಆಚರಣೆಯನ್ನು ಚಳುವಳಿಗಳು ಮಾಡುತ್ತಿವೆ. ಇದನ್ನು ಸಂಸದ ಪ್ರತಾಪ್ ಸಿಂಹ ತಾನು ಸಂಸದನಾಗಿದ್ದಾಗ ವಿರೋಧಿಸಿದ್ದರು.

ಅಲ್ಲಿ ಮಾತನಾಡಿರುವ ಪ್ರತಾಪ್ ಸಿಂಹ, “ನಾನು ಮುಸಲ್ಮಾನರಿಗೆ ಸ್ಪಷ್ಟವಾಗಿ ಎಚ್ಚರಿಕೆ ನೀಡಲು ಬಯಸುತ್ತೇನೆ. ಮುಸ್ಲಿಂ ಸಮುದಾಯದ ಪುಂಡರು ಮತ್ತು ಗಲಭೆಕೋರರನ್ನು ಖಂಡಿಸುವ ಕೆಲಸವನ್ನು ಯಾವುದೇ ಮುಲ್ಲಾ, ಇಮಾಂ ಮಾಡುತ್ತಿಲ್ಲ. ಆದ್ದರಿಂದ ಇಡೀ ಮುಸ್ಲಿಂ ಸಮಾಜದ ಗುರಿಯಾಗಿ ಇಟ್ಟುಕೊಂಡೆ ಮಾತನಾಡುತ್ತಿದ್ದೇನೆ, ಮುಸಲ್ಮಾನರೆ, ಹಿಂದೂಗಳನ್ನು ನೀವು ಕಡಿಮೆ ಅಂದಾಜು ಮಾಡಿಕೊಳ್ಳಬೇಡಿ” ಎಂದು ಹೇಳಿದ್ದಾರೆ.

“ನ್ಯೂಕ್ಲಿಯರ್ ಬಾಂಬ್ ಮಾಡಿರುವ ಹಿಂದೂಗಳಿಗೆ ಪೆಟ್ರೋಲ್ ಬಾಂಬ್ ಮಾಡಲು ಬರುವುದಿಲ್ಲ ಎಂದು ತಿಳಿದುಕೊಳ್ಳಬೇಡಿ. ಬ್ಯಾಲೆಸ್ಟಿಕ್ ಮಿಸೈಲ್‌ಗಳನ್ನು ಮಾಡಿರುವ ಹಿಂದೂಗಳಿಗೆ ಕಲ್ಲಲ್ಲಿ ಬಿಸಾಕಲು ಬರುವುದಿಲ್ಲ ಎಂದುಕೊಳ್ಳಬೇಡಿ. ವಿಶ್ವದ ಸಾಫ್ಟ್‌ವೇರ್ ಉದ್ಯಮವನ್ನು ನಡೆಸುತ್ತಿರುವ ಹಿಂದೂಗಳಿಗೆ ನಿಮ್ಮ ಮೇಲೆ ಆಕ್ರಮಣ ಮಾಲಡು ಕೈಗೆ ಕಲ್ಲೆತ್ತಲು ಬರುವುದಿಲ್ಲ ಎಂದು ಭಾವಿಸಬೇಡಿ. ಚಂದ್ರನನ್ನು ನೀವು ಆರಾಧನೆ ಮಾಡುತ್ತೀರಿ. ಆದರೆ ಚಂದ್ರನ ಮೇಲೆ ನಾವು ನೌಕೆ ಇಳಿಸಿದ್ದೇವೆ… ನೀವು ಗುಜರಿಗಳು, ಟಾಂಗಾಗಳು ಮಾಡುವಂತಹ ಪೆಟ್ರೋಲ್ ಬಾಂಬ್ ತಯಾರು ಮಾಡಲು ಬರುವುದಿಲ್ಲ ಎಂದು ತಿಳಿಯಬೇಡಿ” ಎಂದು ಹೇಳಿದ್ದಾರೆ. ಹದ್ದಬಸ್ತಿನಲ್ಲಿ ಇರಿ

ಇದನ್ನೂಓದಿ:ಬಾಡಿಗೆದಾರ ಯುವತಿಯ ಮಲಗುವ ಕೋಣೆ, ವಾಶ್‌ರೂಮ್‌ನಲ್ಲಿ ರಹಸ್ಯ ಕ್ಯಾಮೆರಾ: ಆರೋಪಿ ಬಂಧನ

“ನ್ಯೂಕ್ಲಿಯರ್‌ ಬಾಂಬ್ ಮಾಡಿದ ನಮಗೆ ಗುಜಿರಿ-ಟಾಂಗಾಗಳು ಮಾಡುವ ಪೆಟ್ರೋಲ್ ಬಾಂಬ್ ಮಾಡಲು ನಮಗೂ ಬರುತ್ತದೆ. ಆದರೆ ನಾನು ಈ ದೇಶದ ಶಾಂತಿ ಮತ್ತು ಸುರಕ್ಷತೆಗೋಸ್ಕರ ಸುಮ್ಮನೆ ಇದ್ದೇವೆ. ನಮ್ಮ ಮೌನ, ತಾಳ್ಮೆ ಮತ್ತು ಸೌಹಾರ್ಧ ಭಾವನೆಯನ್ನು ಪಕ್ಕಲುತನ ಎಂದು ತಿಳಿದುಕೊಂಡರೆ, ಒಬ್ಬೊಬ್ಬ ಹಿಂದೂ ಕೂಡಾ ಒಂದೊಂದು ಕೈಯ್ಯಲ್ಲಿ ಕಲ್ಲನ್ನು ಇಟ್ಟುಕೊಂಡರೆ ನಿಮಗೆ ಉಳಿಗಾಲ ಇರಲ್ಲ. ಇದನ್ನು ಅರ್ಥ ಮಾಡಿಕೊಂಡು ಎಚ್ಚರಿಕೆಯಿಂದ, ಗೌರವಯುತವಾಗಿ ಹಾಗೂ ಹದ್ದಬಸ್ತಿನಲ್ಲಿ ಇರುವುದನ್ನು ಕಲಿತುಕೊಳ್ಳಬೇಕು” ಎಂದು ಹೇಳಿದ್ದಾರೆ.

“ಮುಸ್ಲಿಂ ಸಮುದಾಯದ ಪುಂಡರು ಮತ್ತು ಗಲಭೆಕೋರರನ್ನು ಖಂಡಿಸುವ ಕೆಲಸವನ್ನು ಧಾರ್ಮಿಕ ಮುಂಖಡರು ಮತ್ತು ಬುದ್ದಿಜೀವಿಗಳು ಮಾಡಿಲ್ಲವೆಂದರೆ, ಇಡೀ ಸಮಾಜ ಅವರು ಮಾಡುವ ಕೆಟ್ಟ ಹೆಸರನ್ನು ಪಡೆದುಕೊಳ್ಳಬೇಕಾಗುತ್ತದೆ. ಇದಕ್ಕೆ ಮೌನವಾಗಿ ನೀವು ಕೂಡಾ ಹೊಣೆಯಾಗಿರುತ್ತೀರಿ” ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.

ಮಹಿಷ ದಸರಾ ಆಚರಣೆಯನ್ನು ಟೀಕಿಸಿದ ಅವರು, ಈ ಹಬ್ಬವು “ತಾಯಿ ಚಾಮುಂಡಿ” ಯನ್ನು ಅಗೌರವಿಸುತ್ತದೆ ಮತ್ತು ಹಿಂದೂ ಸಮಾಜದಲ್ಲಿ ವಿಭಜನೆಗೆ ಕಾರಣವಾಗುತ್ತದೆ ಎಂದು ಹೇಳಿದ್ದಾರೆ. ಮಹಿಷನಲ್ಲಿ ನಂಬಿಕೆ ಇರುವವರು ಮನೆಯಲ್ಲಿ ಪೂಜೆ ಸಲ್ಲಿಸಬೇಕು ಎಂದು ಹೇಳಿದ ಅವರು, ಮಹಿಷ ದಸರಾ ಹೆಸರಿನಲ್ಲಿ ಒಡಕು ಸೃಷ್ಟಿಸಬೇಡಿ ಎಂದು ಮನವಿ ಮಾಡಿದ್ದಾರೆ. ಚಾಮುಂಡಿ ಬೆಟ್ಟದಲ್ಲಿ ಮಹಿಷ ದಸರಾ ಆಚರಣೆ ಮುಂದುವರಿದರೆ ಚಾಮುಂಡಿ ಭಕ್ತರು ಚಾಮುಂಡಿ ಚಲೋ ಹಮ್ಮಿಕೊಂಡು ಆಚರಣೆ ಸ್ಥಗಿತಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ವಿಡಿಯೊ ನೋಡಿ:

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಿಷಪ್ ಫ್ರಾಂಕೊ ಮುಲಕ್ಕಲ್ ಅತ್ಯಾಚಾರ ಪ್ರಕರಣ : ಒಂಬತ್ತು ವರ್ಷಗಳ ಬಳಿಕ ಮೌನ ಮುರಿದ ಸಂತ್ರಸ್ತೆ, ಕಾನೂನು ಹೋರಾಟ ಮುಂದುವರಿಸುವುದಾಗಿ ಹೇಳಿಕೆ

ಬಿಷಪ್ ಫ್ರಾಂಕೊ ಮುಲಕ್ಕಲ್ ವಿರುದ್ದದ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಕ್ರೈಸ್ತ ಸನ್ಯಾಸಿನಿ ಒಂಬತ್ತು ವರ್ಷಗಳ ನಂತರ ಮೊದಲ ಬಾರಿಗೆ ಸಾರ್ವಜನಿಕವಾಗಿ ಮಾತನಾಡಿದ್ದು, ಫ್ರಾಂಕೊ ಮುಲಕ್ಕಲ್ ಅವರನ್ನು ನ್ಯಾಯಾಲಯ ಖುಲಾಸೆಗೊಳಿಸಿದ್ದಕ್ಕೆ ನಾನು ದಂಗಾಗಿದ್ದೇನೆ. ನ್ಯಾಯಕ್ಕಾಗಿ...

‘ವೆನೆಜುವೆಲಾದ ಹಂಗಾಮಿ ಅಧ್ಯಕ್ಷ’ ಎಂದು ಘೋಷಿಸಿಕೊಂಡ ಡೊನಾಲ್ಡ್ ಟ್ರಂಪ್ 

ಸೋಮವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ರುತ್ ಸೋಶಿಯಲ್‌ನಲ್ಲಿ ತಮ್ಮದೇ ಆದ ವಿಕಿಪೀಡಿಯಾ ಪುಟದ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ, ಅದರಲ್ಲಿ "ವೆನೆಜುವೆಲಾದ ಹಂಗಾಮಿ ಅಧ್ಯಕ್ಷ" ಎಂಬ ಹುದ್ದೆಯನ್ನು ಹೊಂದಿರುವ ಅವರ ಚಿತ್ರವಿದೆ. ಪೋಸ್ಟ್‌ನಲ್ಲಿ ಟ್ರಂಪ್...

ಪೊಲೀಸ್ ತುರ್ತು ವಾಹನದ ಚಾಲಕ ಸೇರಿ ಐವರಿಂದ ಯುವತಿ ಮೇಲೆ ಅತ್ಯಾಚಾರ!

ಪೊಲೀಸ್ ತುರ್ತು ಸೇವೆ (112) ವಾಹನದ ಚಾಲಕ ಸೇರಿದಂತೆ ಐವರು ಪುರುಷರು 19 ವರ್ಷದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಛತ್ತೀಸ್‌ಗಢದ ಕೋರ್ಬಾ ಜಿಲ್ಲೆಯ ಬಂಕಿಮೊಂಗ್ರ ಪ್ರದೇಶದಲ್ಲಿ ನಡೆದಿದೆ. ಜನವರಿ...

ತ್ರಿಪುರಾದಲ್ಲಿ ಕೋಮು ಹಿಂಸಾಚಾರ : ಮಸೀದಿ, ಮನೆಗಳಿಗೆ ಹಾನಿ ; ನಿಷೇಧಾಜ್ಞೆ ಜಾರಿ

ಸ್ಥಳೀಯ ದೇವಾಲಯೊಂದಕ್ಕೆ ಚಂದಾ ಸಂಗ್ರಹಿಸುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಕನಿಷ್ಠ ಐದರಿಂದ ಆರು ಜನರು ಗಾಯಗೊಂಡು ಮನೆಗಳು, ಮರದ ಅಂಗಡಿ ಮತ್ತು ಮಸೀದಿಗೆ ಹಾನಿಯಾದ ನಂತರ, ಜನವರಿ 10ರ...

ಭದ್ರತಾ ಕಾರಣ ನೀಡಿ ಸ್ಮಾರ್ಟ್‌ಫೋನ್ ತಯಾರಕರು ಮೂಲ ಕೋಡ್ ನೀಡುವಂತೆ ಒತ್ತಾಯಿಸಲು ಕೇಂದ್ರದ ಪ್ರಸ್ತಾಪ

ನವದೆಹಲಿ: ಸ್ಮಾರ್ಟ್‌ಫೋನ್ ತಯಾರಕರು ಸರ್ಕಾರದೊಂದಿಗೆ ಮೂಲ ಕೋಡ್ ಹಂಚಿಕೊಳ್ಳುವುದು ಮತ್ತು ಭದ್ರತಾ ಕ್ರಮಗಳ ಭಾಗವಾಗಿ ಹಲವಾರು ಸಾಫ್ಟ್‌ವೇರ್ ಬದಲಾವಣೆಗಳನ್ನು ಮಾಡುವುದು ಕಡ್ಡಾಯಗೊಳಿಸಲು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರಸ್ತಾಪಿಸಿದೆ, ಇದು ಆಪಲ್ ಮತ್ತು...

ದಾಳಿ ನಡೆಸಿದರೆ ನಮ್ಮ ನೇರ ಗುರಿಯಾಗುತ್ತೀರಿ : ಅಮೆರಿಕ, ಇಸ್ರೇಲ್‌ಗೆ ಎಚ್ಚರಿಕೆ ನೀಡಿದ ಇರಾನ್

ಇರಾನ್‌ನಲ್ಲಿ ನಡೆಯುತ್ತಿರುವ ಆಡಳಿತ ವಿರೋಧಿ ದಂಗೆಯಲ್ಲಿ ಸಾವುಗಳು ಹೆಚ್ಚಾದರೆ ಅಮೆರಿಕ ಮಧ್ಯಪ್ರವೇಶಿಸಲಿದೆ ಎಂದಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಇರಾನ್‌ ತಿರುಗೇಟು ನೀಡಿದೆ. ಇರಾನ್‌ನ ಸಂಸತ್ತಿನ ಅಧ್ಯಕ್ಷ ಮೊಹಮ್ಮದ್ ಬಾಗರ್ ಖಲೀಬಾಫ್ "ಅಮೆರಿಕ ಇರಾನ್ ಮೇಲೆ...

ಕೇಂದ್ರ ಸರ್ಕಾರದ ಎಚ್ಜರಿಕೆ ನಂತರ 3,500 ಪೋಸ್ಟ್‌ಗಳ ನಿರ್ಬಂಧ, 600 ಖಾತೆಗಳನ್ನು ಅಳಿಸಿದ ಎಕ್ಸ್ ಪ್ಲಾಟ್ ಫಾರ್ಮ್

ಮಹಿಳೆಯರನ್ನು ಗುರಿಯಾಗಿಸಿಕೊಂಡು AI- ರಚಿತವಾದ ಅಶ್ಲೀಲ ವಿಡಿಯೋಗಳ ವಿಷಯವನ್ನು ಕೇಂದ್ರವು ಗಮನಕ್ಕೆ ತಂದ ಕಠಿಣ ಕಾನೂನು ಜಾರಿಗೊಳಿಸುವಿಕೆಗೆ ಪ್ರತಿಜ್ಞೆ ಮಾಡಿದ ನಂತರ X 3,500 ಪೋಸ್ಟ್‌ಗಳು ಮತ್ತು 600 ಖಾತೆಗಳನ್ನು ಅಳಿಸಿಹಾಕಿದೆ.   ಅಶ್ಲೀಲ ವಿಷಯಗಳ...

ಮಾನವ ತಲೆಬುರುಡೆ, ಹುಲಿಚರ್ಮದಂತಹ ಕಸ್ಟಮೈಸ್ ಚರ್ಮ ಸೇರಿದಂತೆ ಹಲವು ಅನುಮಾನಾಸ್ಪದ ವಸ್ತುಗಳ ಮಾರಾಟ: ಮಾಂತ್ರಿಕನ ಬಂಧನ

ಬೆಂಗಳೂರು ವಲಯ ಘಟಕದ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಉತ್ತರ ಬೆಂಗಳೂರಿನ ಭೂಪ್ಸಂದ್ರದ 39 ವರ್ಷದ ವ್ಯಕ್ತಿಯನ್ನು ವನ್ಯಜೀವಿ (ರಕ್ಷಣಾ) ಕಾಯ್ದೆ, 1972 ರ ಅಡಿಯಲ್ಲಿ ಬಂಧಿಸಿದೆ. "ಜನವರಿ 9 ರಂದು ನಡೆದ ಕಾರ್ಯಾಚರಣೆಯಲ್ಲಿ...

ದಲಿತ ಮಹಿಳೆಯನ್ನು ಕೊಂದು ಮಗಳ ಅಪಹರಣ : ಆರೋಪಿಯ ಬಂಧನ

ಉತ್ತರ ಪ್ರದೇಶದ ಮೀರತ್‌ನಲ್ಲಿ ದಲಿತ ಮಹಿಳೆಯನ್ನು ಕೊಂದು, ಆಕೆಯ ಮಗಳನ್ನು ಅಪಹರಿಸಿದ ಆರೋಪಿಯನ್ನು ಪೊಲೀಸರು ಶನಿವಾರ (ಜ.10) ಬಂಧಿಸಿದ್ದಾರೆ. ಬಂಧಿತನನ್ನು 22 ವರ್ಷದ ಪರಾಸ್ ಸೋಮ್ (ಪರಾಸ್ ಠಾಕೂರ್) ಎಂದು ಗುರುತಿಸಲಾಗಿದೆ. ರಜಪೂತ ಸಮುದಾಯದ...

‘ಮುಂಬೈ ಮಹಾರಾಷ್ಟ್ರ ನಗರವಲ್ಲ’: ಅಣ್ಣಾಮಲೈ ಹೇಳಿಕೆಗೆ ಶಿವಸೇನೆಯಿಂದ ತೀವ್ರ ಆಕ್ರೋಶ

ಮುಂಬೈ: ಐಪಿಎಸ್ ಅಧಿಕಾರಿಯಿಂದ ರಾಜಕಾರಣಿಯಾಗಿ ಬದಲಾದ ಕೆ.ಅಣ್ಣಾಮಲೈ ಅವರು "ಬಾಂಬೆ ಮಹಾರಾಷ್ಟ್ರ ನಗರವಲ್ಲ, ಅಂತರರಾಷ್ಟ್ರೀಯ ನಗರ" ಎಂದು ಹೇಳಿದ್ದು, ಇದು ಮುಂಬೈನಲ್ಲಿ ವಿವಾದ ಸೃಷ್ಟಿಸಿದೆ.  ಇದಕ್ಕೆ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ)...