ಬರೇಲಿ: ಬರೇಲಿ ಜಿಲ್ಲೆಯ ಬಹೇರಿ ತಹಸಿಲ್‌ನಲ್ಲಿರುವ ಜಾಮ್ ಸಾವಂತ್ ಗ್ರಾಮದಲ್ಲಿ ಅನಧಿಕೃತ ತಗಡಿನ ಶೆಡ್ ನಲ್ಲಿ ಪ್ರಾರ್ಥನೆ ಸಲ್ಲಿಸಿದ್ದಕ್ಕಾಗಿ ನಾಲ್ವರು ಮುಸ್ಲಿಮರನ್ನು ಬಂಧಿಸಲಾಗಿದೆ.
ಇವರು ಖಾಸಗಿ ಒಡೆತನದ ತಗಡಿನ ಶೆಡ್ ನಲ್ಲಿ ಪ್ರಾರ್ಥನೆ ಸಲ್ಲಿಸಿದ್ದು, ಇದನ್ನು ಅಧಿಕೃತ ಅನುಮತಿಯಿಲ್ಲದೆ ನಿರ್ಮಿಸಲಾಗಿದೆ ಎಂದು ವರದಿಯಾಗಿದೆ. ಶುಕ್ರವಾರದ ಸಭೆಯ ಜುಮ್ಮಾ ಪ್ರಾರ್ಥನೆಯ ಸಮಯದಲ್ಲಿ ನಡೆದ ಈ ಘಟನೆಯು ಗ್ರಾಮಸ್ಥರು ಡ್ರೋನ್ ಬಳಸಿ ಸಭೆಯನ್ನು ರೆಕಾರ್ಡ್ ಮಾಡಿದ ನಂತರ ವಿವಾದಕ್ಕೆ ಕಾರಣವಾಗಿದೆ.
ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಹಲವಾರು ತಗಡಿನ ಶೆಡ್ ನಲ್ಲಿ ಕೆಳಗೆ ಪ್ರಾರ್ಥನೆ ಸಲ್ಲಿಸುತ್ತಿರುವುದನ್ನು ತೋರಿಸಿದೆ. ಈ ದೃಶ್ಯಾವಳಿಗಳಿಂದ ಪ್ರೇರೇಪಿತವಾದ ಹಿಂದೂ ಸಂಘಟನೆಯು ದೂರನ್ನು ದಾಖಲಿಸಿತ್ತು.
ಹಿಂದೂ ಜಾಗರಣ್ ಮಂಚ್‌ನ ಯುವ ವಾಹಿನಿಯ ಜಿಲ್ಲಾಧ್ಯಕ್ಷ ಹಿಮಾಂಶು ಪಟೇಲ್ ಸಾಮಾಜಿಕ ಮಾಧ್ಯಮ ವೇದಿಕೆ X ನಲ್ಲಿ ದೂರು ದಾಖಲಿಸಿದರು. ಇದರ ಪರಿಣಾಮವಾಗಿ ದೂರು ಸ್ವೀಕರಿಸಿದ ಪೊಲೀಸರು ನಾಲ್ವರನ್ನು ಬಂಧಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ಜೊತೆ ಗುಪ್ತಚರ ಇಲಾಖೆಯೂ ಭಾಗಿಯಾಗಿತ್ತು. ಪೊಲೀಸರು ಬಿಎನ್‌ಎಸ್ ಕಾಯ್ದೆಯ ಸೆಕ್ಷನ್ 223ರ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆಯನ್ನು ಪ್ರಾರಂಭಿಸಿದ್ದಾರೆ.
ಖಾಸಗಿ ಆಸ್ತಿಯಲ್ಲಿ ನಿರ್ಮಿಸಿದ ತಗಡಿನ ಶೆಡ್ ಗೊತ್ತುಪಡಿಸಿದ ಮಸೀದಿಯಾಗಿರಲಿಲ್ಲ ಎಂದು ಪೊಲೀಸ್ ವರದಿಗಳು ಸೂಚಿಸಿವೆ. ಪೂರ್ವಾನುಮತಿ ಪಡೆಯದೆ ಸುಮಾರು 20-25 ವ್ಯಕ್ತಿಗಳು ಪ್ರಾರ್ಥನೆಗಾಗಿ ಅಲ್ಲಿ ಸೇರಿದ್ದರು ಎಂದು ವರದಿಯಾಗಿದೆ. ಪ್ರಕರಣದಲ್ಲಿ ಹೆಸರಿಸಲಾದ ಪ್ರಮುಖ ವ್ಯಕ್ತಿಗಳಲ್ಲಿ ಗ್ರಾಮದ ಮುಖ್ಯಸ್ಥ ಆರಿಫ್, ಮುಜಮ್ಮಿಲ್ (ಅಕ್ಬರ್ ಮಗ), ಕಬೀರ್ ಅಹ್ಮದ್, ಮೊಹಮ್ಮದ್ ಆರಿಫ್ (ಶೌಕತ್ ಅಲಿ ಮಗ), ಅಕೀಲ್ ಅಹ್ಮದ್ (ಸುಖೆ ಮಗ), ಮೊಹಮ್ಮದ್ ಶಾಹಿದ್ ಮತ್ತು ಛೋಟೆ ಸೇರಿದಂತೆ ಇತರರು ಸೇರಿದ್ದಾರೆ.
ಜಾಮ್ ಸಾವಂತ್ ಗ್ರಾಮದ ಖಾಸಗಿ ಸ್ಥಳದಲ್ಲಿ ಸಾಮುದಾಯಿಕ ಪ್ರಾರ್ಥನೆ ಸಲ್ಲಿಸುತ್ತಿರುವ ಬಗ್ಗೆ ದೂರು ಬಂದಿತ್ತು ಎಂದು ಬಹೇರಿಯ ವೃತ್ತ ಅಧಿಕಾರಿ (ಸಿಒ) ಹೇಳಿದ್ದಾರೆ.
ತನಿಖೆಯ ನಂತರ ಈ ಜಾಗವು ಖಾದಿರ್ ಅಹ್ಮದ್‌ಗೆ ಸೇರಿದ್ದು, ಅವರು ಗಡಿಗೋಡೆಯೊಂದಿಗೆ ತಗಡಿನ ಶೆಡ್ ನಿರ್ಮಿಸಿದ್ದರು ಎಂದು ತಿಳಿದುಬಂದಿದೆ. ಪೂರ್ವಾನುಮತಿ ಇಲ್ಲದೆ ಅಲ್ಲಿ ಜುಮ್ಮಾ ಪ್ರಾರ್ಥನೆಗಳನ್ನು ನಡೆಸಲಾಗುತ್ತಿತ್ತು ಎಂದು ಮತ್ತಷ್ಟು ದೃಢಪಡಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ವ್ಯಕ್ತಿಗಳನ್ನು ಬಂಧಿಸಲಾಗಿದೆ ಮತ್ತು ಹೆಚ್ಚಿನ ತನಿಖೆಗಳು ನಡೆಯುತ್ತಿವೆ ಎಂದು ಅವರು ತಿಳಿಸಿದ್ದಾರೆ.
ಜನರು ತಗಡಿನ ಶೆಡ್ಡಿನ ಕೆಳಗೆ ಕುಳಿತು ಪ್ರಾರ್ಥನೆ ಸಲ್ಲಿಸುತ್ತಿರುವುದನ್ನು ತೋರಿಸುವ ವೈರಲ್ ಡ್ರೋನ್ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಚರ್ಚೆಯನ್ನು ಹುಟ್ಟುಹಾಕಿದೆ. ಹಿಂದೂ ಸಂಘಟನೆಗಳು ಸಭೆಯು ಸ್ಥಳೀಯ ನಿಯಮಗಳನ್ನು ಉಲ್ಲಂಘಿಸಿದೆ ಎಂದು ವಾದಿಸುತ್ತಿವೆ. ಆದರೆ ಮುಸ್ಲಿಂ ಸಮುದಾಯದ ಸದಸ್ಯರು ಖಾಸಗಿ ಆಸ್ತಿಯ ಮೇಲೆ ಪ್ರಾರ್ಥನೆಗಳನ್ನು ನಡೆಸಲಾಗಿದೆ ಎಂದು ಹೇಳಿಕೊಂಡಿದ್ದಾರೆ.
ಈ ಘಟನೆಯು ಪ್ರದೇಶದಲ್ಲಿ ಉದ್ವಿಗ್ನತೆಯನ್ನು ಹೆಚ್ಚಿಸಿದೆ. ಪೊಲೀಸರು ಈ ವಿಷಯದ ಬಗ್ಗೆ ತನಿಖೆ ಮುಂದುವರಿಸುತ್ತಿರುವುದರಿಂದ ಶಾಂತವಾಗಿರಲು ಒತ್ತಾಯಿಸಿದ್ದಾರೆ.
45 ದಲಿತ ಕುಟುಂಬ ಮತ್ತು ಶೌಚಾಲಯದ ನಡುವೆ 10 ಅಡಿ ಎತ್ತರದ “ಅಸ್ಪೃಶ್ಯತಾ ಗೋಡೆ”



Wah now doing prayer in my house is also illegal crime,if this kind of things going on 1day come Standing with constitution is also crime
Save constitution
Save Bharath