Homeಮುಖಪುಟಬಾಂಗ್ಲಾ ಗಡಿಯಾಚೆಗೆ ತಳ್ಳಿದ್ದ ಗರ್ಭಿಣಿ ಮಹಿಳೆ, ಮಗನನ್ನು ವಾಪಸ್ ಕರೆ ತಂದ ಅಧಿಕಾರಿಗಳು

ಬಾಂಗ್ಲಾ ಗಡಿಯಾಚೆಗೆ ತಳ್ಳಿದ್ದ ಗರ್ಭಿಣಿ ಮಹಿಳೆ, ಮಗನನ್ನು ವಾಪಸ್ ಕರೆ ತಂದ ಅಧಿಕಾರಿಗಳು

- Advertisement -
- Advertisement -

ದಾಖಲೆರಹಿತ ವಲಸಿಗರೆಂದು ಆರೋಪಿಸಿ ಅಧಿಕಾರಿಗಳು ಬಾಂಗ್ಲಾದೇಶಕ್ಕೆ ‘ತಳ್ಳಿದ್ದ’ ಪಶ್ಚಿಮ ಬಂಗಾಳದ ಗರ್ಭಿಣಿ ಮಹಿಳೆ ಮತ್ತು ಅವರ ಎಂಟು ವರ್ಷದ ಮಗನನ್ನು ಶುಕ್ರವಾರ (ಡಿಸೆಂಬರ್ 5) ಭಾರತಕ್ಕೆ ಮರಳಿ ಕರೆತರಲಾಗಿದೆ.

ಸುನಾಲಿ ಖಾತೂನ್ ಎಂಬ ಮಹಿಳೆ ಮತ್ತು ಆಕೆಯ ಮಗ 8 ವರ್ಷ ಸಬೀರ್ ಮಹಾದೀಪುರ ಗಡಿ ಮೂಲಕ ಪಶ್ಚಿಮ ಬಂಗಾಳವನ್ನು ಪ್ರವೇಶಿಸಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಮಹಾದೀಪುರದಿಂದ ಸುಮಾರು 180 ಕಿ.ಮೀ ದೂರದಲ್ಲಿರುವ ಬಿರ್ಭೂಮ್‌ನಲ್ಲಿ ಮಹಿಳೆಯ ಮನೆಯಿದೆ. ತುಂಬು ಗರ್ಭಿಣಿಯಾದ್ದರಿಂದ ಆಕೆಗೆ ಮನೆಗೆ ಪ್ರಯಾಣಿಸಲು ಸಾಧ್ಯವೇ ಎಂದು ನಿರ್ಧರಿಸಲು ಮಾಲ್ಡಾದ ಆಸ್ಪತ್ರೆಗೆ ಕರೆದೊಯ್ಯಲಾಯಿಗಿದೆ ಎಂದು ವರದಿ ಹೇಳಿದೆ.

ಖಾತೂನ್ ಅವರ ಪತಿ ಡ್ಯಾನಿಶ್ ಎಸ್‌ಕೆ ಇನ್ನೂ ಬಾಂಗ್ಲಾದೇಶದಲ್ಲಿದ್ದಾರೆ.ಅವರ ಮರಳುವಿಕೆಯ ಬಗ್ಗೆ ಯಾವುದೇ ನಿರ್ಧಾರವಾಗಿಲ್ಲ.

ಮಾನವೀಯ ನೆಲೆಯಲ್ಲಿ ಸುನಾಲಿ ಖಾತೂನ್ ಮತ್ತು ಅವರ ಮಗನನ್ನು ಭಾರತಕ್ಕೆ ವಾಪಸ್ ಕರೆ ತರುತ್ತೇವೆ ಎಂದು ಕೇಂದ್ರ ಸರ್ಕಾರ ಬುಧವಾರ (ಡಿಸೆಂಬರ್ 4) ಸುಪ್ರೀಂ ಕೋರ್ಟ್‌ಗೆ ವಾಗ್ದಾನ ಮಾಡಿತ್ತು. ಆದರೆ, ಮಹಿಳೆ ಮತ್ತು ಆಕೆಯ ಬಾಂಗ್ಲಾದೇಶಿಗರು ಎಂಬ ನಮ್ಮ ಮೂಲವಾದ ಮತ್ತು ಅವರ ಮೇಲೆ ಕಣ್ಗಾವಲಿಡುವ ಹಕ್ಕು ನಮ್ಮಲ್ಲೇ ಉಳಿಸಿಕೊಂಡಿದ್ದೇವೆ ಎಂದು ಹೇಳಿತ್ತು.

ಇದಕ್ಕೂ ಎರಡು ದಿನ ಮೊದಲು ನಡೆದ ವಿಚಾರಣೆ ವೇಳೆ, ಸುನಾಲಿ ಖಾತೂನ್ ಅವರ ಗರ್ಭಾವಸ್ಥೆಯನ್ನು ಪರಿಗಣಿಸಿ, ಆಕೆ ಮತ್ತು ಮಗನನ್ನು ಭಾರತಕ್ಕೆ ವಾಪಸ್ ಕರೆತರಲು ಸಾಧ್ಯವೇ ಎಂದು ತಿಳಿಸಲು ಸುಪ್ರೀಂ ಕೋರ್ಟ್ ಸರ್ಕಾರವನ್ನು ಕೇಳಿತ್ತು.

ಗಡಿಯಾಚೆಗೆ ತಳ್ಳಲ್ಪಟ್ಟ ಬಳಿಕ ಅಕ್ರಮ ವಲಸಿಗರು ಎಂದು ಬಾಂಗ್ಲಾದೇಶ ಪೊಲೀಸರು ಖಾತೂನ್ ಮತ್ತು ಅವರ ಕುಟುಂಬಸ್ಥರು ಸೇರಿದಂತೆ 6 ಮಂದಿಯನ್ನು ಬಂಧಿಸಿದ್ದರು. ಅವರೆಲ್ಲರೂ ಸೋಮವಾರ ಸಂಜೆ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾಗಿದ್ದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೆಂಪು ಕೋಟೆ ಸ್ಫೋಟಕ್ಕೆ ಜಮಾತೆ-ಇ-ಇಸ್ಲಾಮ್ ಗುಂಪನ್ನು ಸಂಪರ್ಕಿಸುವ ಹೇಳಿಕೆ: ಬಿಜೆಪಿ ನಾಯಕನಿಗೆ ಲೀಗಲ್‌ ನೋಟಿಸ್

ಜಮಾತೆ-ಇ-ಇಸ್ಲಾಮಿ ಹಿಂದ್ (ಜೆಐಎಚ್) ಕೇರಳವು, ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್, ಮನೋರಮಾ ನ್ಯೂಸ್ ಸಂಪಾದಕ, ಕಾರ್ಯಕ್ರಮಕ್ಕೆ ಸಂಬಂಧಿಸಿದ ಸಂದರ್ಶಕರಿಗೆ ಕಾನೂನು ನೋಟಿಸ್ ಜಾರಿ ಮಾಡಿದೆ. ಸಂಸ್ಥೆಯನ್ನು ಕೆಂಪು ಕೋಟೆ ಬಾಂಬ್...

ಅತ್ಯಾಚಾರ ಆರೋಪ : ಶಾಸಕ ರಾಹುಲ್ ಮಾಂಕೂಟತ್ತಿಲ್ ಬಂಧನಕ್ಕೆ ಹೈಕೋರ್ಟ್ ತಡೆ

ಮಹಿಳೆ ಮೇಲೆ ಅತ್ಯಾಚಾರ ಎಸಗಿ ಗರ್ಭಪಾತ ಮಾಡಿಸಲು ಒತ್ತಾಯಿಸಿದ ಆರೋಪ ಪ್ರಕರಣದಲ್ಲಿ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಡಿಸೆಂಬರ್ 15ರವರೆಗೆ ಬಂಧಿಸದಂತೆ ಕೇರಳ ಹೈಕೋರ್ಟ್ ಶನಿವಾರ (ಡಿಸೆಂಬರ್ 6) ಪೊಲೀಸರಿಗೆ ನಿರ್ಬಂಧ ವಿಧಿಸಿದೆ. ನಿರೀಕ್ಷಣಾ...

ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಪಾದಯಾತ್ರೆ; ಸಿದ್ದರಾಮನಹುಂಡಿಯಲ್ಲಿ ಹೋರಾಟಗಾರರ ಬಂಧನ

ಪರಿಶಿಷ್ಟ ಜಾತಿ (ಎಸ್‌ಸಿ) ಸಮಗ್ರ ಒಳಮೀಸಲಾತಿ ಜಾರಿಗೆ ಸರ್ಕಾರ ವಿಳಂಬ ಮಾಡುತ್ತಿದೆ ಎಂದು ಆಗ್ರಹಿಸಿ, 'ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಹೋರಾಟ ಸಮಿತಿ'ಯು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ವಗ್ರಾಮವಾದ ಸಿದ್ದರಾಮನಹುಂಡಿಯಿಂದ ಮೈಸೂರಿನವರೆಗೆ...

ಇಂಡಿಗೋ ಏರ್‌ಲೈನ್ಸ್‌ ಕಾರ್ಯಾಚರಣೆ ಅಸ್ತವ್ಯಸ್ತ; ತನಿಖೆಗೆ ಆದೇಶಿಸಿದ ಕೇಂದ್ರ ಸರ್ಕಾರ

ಇಂಡಿಗೋದ ದೊಡ್ಡ ಪ್ರಮಾಣದ ವಿಮಾನ ರದ್ದತಿಯಿಂದ ಉಂಟಾದ ಬೃಹತ್ ಅಡಚಣೆಯ ಬಗ್ಗೆ ಕೇಂದ್ರ ಸರ್ಕಾರ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ಶುಕ್ರವಾರ ಘೋಷಿಸಿದೆ. ಸಾವಿರಾರು ಪ್ರಯಾಣಿಕರು ದೇಶಾದ್ಯಂತ...

‘ಜೈ ಶ್ರೀ ರಾಮ್’ ಹೇಳಲು ನಿರಾಕರಿಸಿದ ಮುಸ್ಲಿಂ ಚಾಲಕನಿಗೆ ಕಿರುಕುಳ; ಬಿಜೆಪಿ ಕಾರ್ಯಕರ್ತನ ಬಂಧನ

ಉತ್ತರ ಪ್ರದೇಶದ ಆಗ್ರಾದ 57 ವರ್ಷದ ಮುಸ್ಲಿಂ ಟ್ಯಾಕ್ಸಿ ಚಾಲಕನೊಬ್ಬ ಜೈ ಶ್ರೀರಾಮ್ ಎಂದು ಹೇಳಲು ನಿರಾಕರಿಸಿದ್ದಕ್ಕಾಗಿ ಕಿರುಕುಳ ನೀಡಿ ಹಲ್ಲೆ ನಡೆಸಿದ ಒಂದು ವಾರದ ನಂತರ, ಪ್ರಮುಖ ಆರೋಪಿ ರೋಹಿತ್ ಠಾಕೂರ್‌ನನ್ನು...

ಇಂಡಿಗೋ ವಿಮಾನ ಸೇವೆಯಲ್ಲಿ ವ್ಯತ್ಯಯ : ಪೈಲಟ್‌ಗಳಿಗೆ ವಾರದ ವಿಶ್ರಾಂತಿ ನಿಯಮ ಹಿಂಪಡೆದ ಡಿಜಿಸಿಎ

ಡಿಸೆಂಬರ್ 4 ಗುರುವಾರ ದೇಶದಾದ್ಯಂತ 1,000ಕ್ಕೂ ಹೆಚ್ಚು ಇಂಡಿಗೋ ವಿಮಾನಗಳ ಹಾರಾಟ ರದ್ದಾಗಿದ್ದು ಮತ್ತು ದೆಹಲಿಯಿಂದ ಎಲ್ಲಾ 235 ದೇಶೀಯ ನಿರ್ಗಮನಗಳು 24 ಗಂಟೆಗಳ ಕಾಲ ಸ್ಥಗಿತಗೊಂಡಿತ್ತು. ಪರಿಣಾಮ ಬೆಂಗಳೂರು ಸೇರಿದಂತೆ ದೇಶದ...

​ಚನ್ನರಾಯಪಟ್ಟಣ ರೈತರಿಗೆ ಅಂತಿಮ ವಿಜಯ; ​ಬೆಂಬಲಕ್ಕೆ ನಿಂತವರಿಗೆ ಧನ್ಯವಾದ ತಿಳಿಸಿದ ‘ಹೋರಾಟ ಸಮಿತಿ’

​ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳ ರೈತರ ಭೂ ಹೋರಾಟ ಕೊನೆಗೂ ಸುಖಾಂತ್ಯವಾಗಿದೆ. ಚನ್ನರಾಯಪಟ್ಟಣ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಜೊತೆಗೆ ರಾಜ್ಯದ ಹತ್ತಾರು ಜನಪರ ಸಂಘಟನೆಗಳು ನಡೆಸಿದ ಸುದೀರ್ಘ ಹೋರಾಟ...

ಸಚಿವ ಸಂಪುಟ ಸಭೆಯಲ್ಲಿ ಅಲೆಮಾರಿಗಳ ಬಗ್ಗೆ ತುಟಿ ಬಿಚ್ಚದ ಸರ್ಕಾರ; ‘ಬೆಳಗಾವಿ ಚಲೋ’ ಹೋರಾಟಕ್ಕೆ ಕರೆ

ಗುರುವಾರ (ಡಿ.4) ನಡೆದ ಸಚಿವ ಸಂಪುಟ ಸಭೆಯಲ್ಲಿ ಅಲೆಮಾರಿಗಳ ಮೀಸಲಾತಿ ಬಗ್ಗೆ ತುಟಿ ಬಿಚ್ಚದ ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತವಾಗಿದ್ದು, 'ಕರ್ನಾಟಕ ಅಸ್ಪೃಶ್ಯ ಅಲೆಮಾರಿ ಸಮುದಾಯಗಳ ಮಹಾ ಒಕ್ಕೂಟ' 'ಬೆಳಗಾವಿ ಚಲೋ'...

ಅಖಂಡ ಕರ್ನಾಟಕದ ಪ್ರದೇಶಗಳನ್ನು ಸಾಂಸ್ಕೃತಿಕವಾಗಿ ವಿಲೀನಗೊಳಿಸಲು ಇದು ಸಕಾಲ: ಡಾ.ಪುರುಷೋತ್ತಮ ಬಿಳಿಮಲೆ

ಕರ್ನಾಟಕ ಮತ್ತು ನೆರೆ ರಾಜ್ಯಗಳ ಅಚ್ಚ ಕನ್ನಡ ಪ್ರದೇಶಗಳ ನಡುವಿನ ಭೌತಿಕ ಗಡಿಗಳು ಇದ್ದಂತೆ ಇದ್ದರೂ ಸಾಂಸ್ಕೃತಿಕವಾಗಿ ಹೇರಲಾಗುತ್ತಿರುವ ಗಡಿಗಳನ್ನು ಅಪ್ರಸ್ತುತವಾಗಿಸುವುದು ಸಾಧ್ಯವಿದೆ. ಇಂತಹ ಪ್ರದೇಶಗಳೊಂದಿಗೆ ಕರ್ನಾಟಕದ ಭಾವನಾತ್ಮಕ ಸಂಬಂಧದ ವಿಸ್ತರಣೆಗೆ ಇದು...

ಅರುಂಧತಿ ರಾಯ್ ಅವರ ಪುಸ್ತಕದ ಮುಖಪುಟ ವಿರೋಧಿಸಿದ್ದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್

ಖ್ಯಾತ ಲೇಖಕಿ ಅರುಂಧತಿ ರಾಯ್ ಅವರ 'ಮದರ್ ಮೇರಿ ಕಮ್ಸ್ ಟು ಮಿ' ಪುಸ್ತಕದ ಮುಖಪುಟ ಚಿತ್ರದ ಪ್ರಸಾರದ ವಿರುದ್ಧ ಸಲ್ಲಿಸಲಾದ ಅರ್ಜಿಯನ್ನು ಸುಪ್ರಿಂ ಕೋರ್ಟ್‌ ಶುಕ್ರವಾರ ತಿರಸ್ಕರಿಸಿದೆ. ಏಕೆಂದರೆ, ಲೇಖಕರು ಧೂಮಪಾನವನ್ನು...