Homeಅಂತರಾಷ್ಟ್ರೀಯಅಧ್ಯಕ್ಷೀಯ ಚುನಾವಣೆ ಪ್ರಹಸನಕ್ಕೆ ತೆರೆ - ಇಂದು ಪ್ರಮಾಣವಚನ ಸ್ವೀಕರಿಸಲಿರುವ ಜೋ ಬೈಡೆನ್-ಕಮಲಾ ಹ್ಯಾರಿಸ್

ಅಧ್ಯಕ್ಷೀಯ ಚುನಾವಣೆ ಪ್ರಹಸನಕ್ಕೆ ತೆರೆ – ಇಂದು ಪ್ರಮಾಣವಚನ ಸ್ವೀಕರಿಸಲಿರುವ ಜೋ ಬೈಡೆನ್-ಕಮಲಾ ಹ್ಯಾರಿಸ್

ಮತ ಎಣಿಕೆಯಲ್ಲಿ ಅಕ್ರಮ ನಡೆದಿದೆ ಎಂದು ಇದುವರೆಗೂ ಆರೋಪಿಸುತ್ತಲೇ ಇದ್ದ ಡೊನಾಲ್ಡ್ ಟ್ರಂಪ್, ಈಗ ಅಧಿಕಾರ ಹಸ್ತಾಂತರಿಸಲು ಒಲ್ಲದ ಮನಸ್ಸಿನಿಂದ ಒಪ್ಪಿಕೊಂಡಿದ್ದಾರೆ. 

- Advertisement -
- Advertisement -

2020 ರಲ್ಲಿ ನಡೆದ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್‌ ಟ್ರಂಪ್ ಅವರನ್ನು ಹಿಂದಿಕ್ಕಿ ಜೋ ಬೈಡೆನ್ ಅಧ್ಯಕ್ಷರಾಗಿ ಮತ್ತು ಕಮಲಾ ಹ್ಯಾರಿಸ್ ಉಪಾಧ್ಯಕ್ಷರಾಗಿ ಚುನಾಯಿತರಾಗಿದ್ದರು. ಇಂದು ರಾತ್ರಿ 10.30 ರ ನಂತರ (ಅಮೆರಿಕದಲ್ಲಿ 12 ಗಂಟೆ) ಇವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಡೆಮಾಕ್ರಟ್ ಪಕ್ಷದ ಟ್ರಂಪ್ ರಿಪಬ್ಲಿಕನ್ ಪಕ್ಷದ ಬೈಡೆನ್ ಎದುರು ದೊಡ್ಡ ಸೋಲನ್ನನುಭವಿಸಿದರು. ಇದನ್ನು ಒಪ್ಪಿಕೊಳ್ಳದ ಟ್ರಂಪ್ ಮಾಡಿದ ಕೆಲಸಗಳು ಅಮೆರಿಕದ ಇತಿಹಾಸದಲ್ಲಿ ಒಂದು ಕಪ್ಪು ಚುಕ್ಕೆಯಾಗಿ ಉಳಿಯಲಿದೆ.

ಇದನ್ನೂ ಓದಿ- ಅಮೆರಿಕದ 46 ನೇ ಅಧ್ಯಕ್ಷರಾಗಿ ಜೋ ಬಿಡೆನ್ – ಯಾರಿವರು? ; ಸಂಕ್ಷಿಪ್ತ ಪರಿಚಯ

ಪ್ರಜಾಪ್ರಭುತ್ವದ ಅತಿದೊಡ್ಡ ರಾಷ್ಟ್ರ ಅಮೆರಿಕ ಚುನಾವಣೆಯು, ಜಗತ್ತು ಇದುವರೆಗೂ ಕಂಡು-ಕೇಳರಿಯದ ಕೆಲವು ಘಟನೆಗಳಿಗೆ ಸಾಕ್ಷಿಯಾಯಿತು. ಅಮೆರಿಕ ಅಧ್ಯಕ್ಷರ ಸ್ಥಾನಕ್ಕೆ ಚುನಾವಣೆ ನಡೆದು, ಮತ ಎಣಿಕೆಯಿಂದ ಆರಂಭವಾದ ಟ್ರಂಪ್ ಪ್ರಲಾಪ ಜಾಗತಿಕವಾಗಿ ಅಮೆರಿಕವನ್ನು ಮುಜುಗರಕ್ಕೀಡು ಮಾಡಿತ್ತು.

ಮತ ಎಣಿಕೆಯಲ್ಲಿ ಅಕ್ರಮ ನಡೆದಿದೆ ಎಂದು ಇದುವರೆಗೂ ಆರೋಪಿಸುತ್ತಲೇ ಇದ್ದ ಡೊನಾಲ್ಡ್ ಟ್ರಂಪ್, ಈಗ ಅಧಿಕಾರ ಹಸ್ತಾಂತರಿಸಲು ಒಲ್ಲದ ಮನಸ್ಸಿನಿಂದ ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ- ಭಾರತ ಮೂಲದ ಕಮಲಾ ಹ್ಯಾರಿಸ್; ಅಮೆರಿಕಾದ ಮೊದಲ ಮಹಿಳಾ ಉಪಾಧ್ಯಕ್ಷೆಯಾದ ಕಥೆ!

ಚುನಾವಣೆ ಮತ್ತು ಮತ ಎಣಿಕೆಯಲ್ಲಿ ಅಕ್ರಮ ನಡೆದಿದೆ ಎಂದು ಮತ ಎಣಿಕೆಯ ದಿನದಿಂದ ಟ್ರಂಪ್ ಆರೋಪಿಸುತ್ತಲೇ ಇದ್ದಾರೆ. ಹಾಗಾಗಿ ಮರು ಎಣಿಕೆಗೆ ಒತ್ತಾಯಿಸುತ್ತಿದ್ದರಲ್ಲದೇ, ಚುನಾವಣೆಯನ್ನೆ ರದ್ದುಗಿಳಿಸಬೇಕು ಎಂದು ಹೇಳುತ್ತಿದ್ದರು. ಅಷ್ಟೇ ಅಲ್ಲದೇ ಇದರ ಕುರಿತಾಗಿ ಹಲವು ವಿವಾದಾತ್ಮಕ ಟ್ವೀಟ್‌ಗಳನ್ನು ಮಾಡಿದ್ದರಿಂದ, ಅದನ್ನು ಡಿಲೀಟ್ ಮಾಡುತ್ತಿದ್ದ ಟ್ವಿಟರ್ ಕಂಪನಿ, ಕೊನೆಗೆ ಟ್ರಂಪ್ ಅವರ ಖಾತೆಯನ್ನು ಬ್ಯಾನ್ ಕೂಡ ಮಾಡಿತ್ತು.

ಇತ್ತೀಚೆಗೆ ಅಮೆರಿಕದ ಕ್ಯಾಪಿಟಲ್ ಮೇಲೆ ಟ್ರಂಪ್  ಬೆಂಬಲಿಗರು ಮಾಡಿದ ದಾಳಿ ಇಡೀ ಜಗತ್ತನ್ನೇ ಬೆಚ್ಚಿಬೀಳಿಸಿತ್ತು. ಇದು ಪ್ರಜಾಪ್ರಭುತ್ವದ ಮೇಲೆ ನಡೆದ ಅತಿದೊಡ್ಡ ದಾಳಿ ಎಂದೂ ಬಣ್ಣಿಸಲಾಗಿತ್ತು. ಇದರ ಬೆನ್ನಲ್ಲೇ ಅಧಿಕಾರ ಹಸ್ತಾಂತರಿಸಲು ಹಿಂದೇಟು ಹಾಕುತ್ತಿದ್ದ ಟ್ರಂಪ್ ವಿರುದ್ಧ ಅಲ್ಲಿನ ಸಂಸತ್ ಎರಡು ಬಾರಿ ದೋಷಾರೋಪಣೆ (ಮಹಾಭಿಯೋಗ) ಸಲ್ಲಿಸಿತ್ತು. ಇದು ಅಮೆರಿಕದ ಇತಿಹಾಸದಲ್ಲೇ ಮೊದಲು.

ಇದನ್ನೂ ಓದಿ- ಜೋ ಬೈಡೆನ್‌ ಅವರಂತಹ ಬುದ್ಧಿವಂತ, ಪ್ರಬುದ್ಧ ನಾಯಕ ಜಗತ್ತಿಗೆ ಅವಶ್ಯಕ: ಸೋನಿಯಾ ಗಾಂಧಿ

ಇಂತಹ ಅಹಿತಕರ ಘಟನೆಗಳಿಗೆ ಸಾಕ್ಷಿಯಾದ ಅಮೆರಿಕ ಚುನಾವಣೆ ಮತ್ತಷ್ಟು ಐತಿಹಾಸಿಕ ತಿರುವುಗಳಿಗೂ ಕಾರಣವಾಗಿದೆ. ಇಡೀ ಅಮೆರಿಕದ ಇತಿಹಾಸದಲ್ಲೇ ಒಬ್ಬ ಮಹಿಳೆ ಉಪಾಧ್ಯಕ್ಷೆಯಾಗಿ ನೇಮಕವಾಗಿ ಶ್ವೇತ ಭವನದ ಮೆಟ್ಟಿಲು ಹತ್ತುತ್ತಿರುವುದು ಇದೇ ಮೊದಲು. ಇನ್ನೂ ವಿಶೇ‍ವೆಂದರೆ ಈಕೆ ಭಾರತೀಯ ಮೂಲದವರು ಎನ್ನುವುದು.

ಹೀಗೆ ಹತ್ತಾರು ಏಳು-ಬೀಳುಗಳನ್ನು ದಾಟಿದ ಅಧ್ಯಕ್ಷೀಯ ಚುನಾವಣೆಯ ಪ್ರಹಸನ ಇಂದು ತಾರ್ಕಿಕ ಅಂತ್ಯಕ್ಕೆ ಬಂದಿದೆ. ಜೋ ಬೈಡೆನ್ ಅಮೆರಿಕದ 46 ನೇ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿಲಿದ್ದಾರೆ. ಈ ಮೂಲಕ ಅಧ್ಯಕ್ಷ ಚುನಾವಣೆಯ ನಾಟಕಕ್ಕೆ ತೆರೆ ಎಳೆದಿದ್ದಾರೆ.


ಇದನ್ನೂ ಓದಿ- ಜೋ ಬೈಡೆನ್ ಗೆಲುವು; ಭಾರತ-ಅಮೆರಿಕಾದ ಬಾಂಧವ್ಯ ಇನ್ನಷ್ಟು ಉತ್ತಮಗೊಳ್ಳಲಿ- ಮೋದಿ ಟ್ವೀಟ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...