ಆಲ್ಟ್ ನ್ಯೂಸ್ ಫ್ಯಾಕ್ಟ್‌ಚೆಕ್ ಸುದ್ದಿ ಸಂಸ್ಥೆಯ ಸಹ-ಸಂಸ್ಥಾಪಕ ಮೊಹಮ್ಮದ್ ಝುಬೈರ್ ವಿರುದ್ದ ‘ದೇಶದ್ರೋಹ ಸಮಾನ’ ಪ್ರಕರಣ ದಾಖಲಿಸಿರುವುದನ್ನು ಪ್ರೆಸ್ ಕ್ಲಬ್ ಆಫ್ ಇಂಡಿಯಾ (ಪಿಸಿಐ) ಸೇರಿದಂತೆ ಪತ್ರಿಕಾ ಸಂಸ್ಥೆಗಳು ಖಂಡಿಸಿವೆ.
ಈ ಕುರಿತು ಎಕ್ಸ್‌ನಲ್ಲಿ ಬರೆದುಕೊಂಡಿರುವ ಪಿಸಿಐ,”ಅಲಹಾಬಾದ್ ಹೈಕೋರ್ಟ್‌ಗೆ ಉತ್ತರ ಪ್ರದೇಶ ಪೊಲೀಸರು ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಆಲ್ಟ್ ನ್ಯೂಸ್ ಸಹ-ಸಂಸ್ಥಾಪಕ ಮೊಹಮ್ಮದ್ ಝುಬೈರ್ ಅವರು ‘ಭಾರತದ ಸಾರ್ವಭೌಮತೆ ಮತ್ತು ಏಕತೆಗೆ ಅಪಾಯವನ್ನುಂಟುಮಾಡುತ್ತಿದ್ದಾರೆ’ ಎಂದು ಆರೋಪಿಸಿರುವುದು ಖಂಡನೀಯ ಎಂದಿದೆ.
“ಝುಬೈರ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಕಾಯ್ದೆಯ ಸೆಕ್ಷನ್ 152ರ ಅಡಿ ಎಫ್‌ಐಆರ್ ದಾಖಲಿಸಲಾಗಿದೆ. ಈ ಸೆಕ್ಷನ್ ಸ್ವತಂತ್ರ ಚಿಂತಕರು ಮತ್ತು ಮಾಧ್ಯಮಗಳನ್ನು ಮೌನಗೊಳಿಸುವ ಸಾಮರ್ಥ್ಯ ಹೊಂದಿರುವುದರಿಂದ ಎಲ್ಲಾ ವಿವೇಕಯುತ ಮನಸ್ಸುಗಳು ಇದನ್ನು ವಿರೋಧಿಸುತ್ತಿವೆ. ಟೀಕಾಕಾರ ವಿರುದ್ಧವೂ ಈ ಸೆಕ್ಸನ್ ವಿಧಿಸಬಹುದು” ಎಂದು ಹೇಳಿದೆ.
ದೇಶದ್ರೋಹದ ಕಾನೂನನ್ನು ದುರುಪಯೋಗಪಡಿಸಿಕೊಂಡ ಹಲವಾರು ಪ್ರಕರಣಗಳನ್ನು ನಾವು ಈ ಹಿಂದೆ ನೋಡಿದ್ದೇವೆ. ಬಿಎನ್ಎಸ್ ಸೆಕ್ಷನ್ 152 ಕೂಡ ಅದೇ, ಆದರೆ ಹೊಸ ಅವತಾರದಲ್ಲಿದೆ. ಝುಬೈರ್ ವಿರುದ್ದ ದಾಖಲಾಗಿರುವ ಎಫ್‌ಐಆರ್ ಹಿಂಪಡೆಯುವಂತೆ ಒತ್ತಾಯಿಸುತ್ತೇವೆ ಎಂದು ಪಿಸಿಐ ತಿಳಿಸಿದೆ.
The Press Club of India condemns the Uttar Pradesh Police filing an affidavit to the Allahabad High Court, in which it has accused Alt News co-founder Mohammed Zubair of "endangering the sovereignty and unity of India".
An FIR under BNS 152 was filed against him. All sane minds…
— Press Club of India (@PCITweets) November 28, 2024
ಡಿಜಿಟಲ್ ಸುದ್ದಿ ಸಂಸ್ಥೆಗಳ ಸಂಘವಾದ DIGIPUB ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದು, “ಝಬೈರ್ ಗೆ ಕಿರುಕುಳ ನೀಡಲಾಗುತ್ತಿದೆ. ಝಬೈರ್ ವಿರುದ್ಧದ ಆರೋಪಗಳು ಆಧಾರ ರಹಿತವಾಗಿವೆ ಮತ್ತು ಇದು ತನಿಖಾ ಸಂಸ್ಥೆಗಳ ಸೇಡಿನ ಮತ್ತು ವಿವೇಚನಾರಹಿತ ಕ್ರಮವಾಗಿದೆ” ಎಂದಿದೆ.
DIGIPUB’s Statement Condemning Police Action Against Fact Checker Mohammad Zubair pic.twitter.com/IiFchs1h1H
— DIGIPUB News India Foundation (@DigipubIndia) November 28, 2024
ಕೋಮುದ್ವೇಷದ ಭಾಷಣ ಮಾಡುವ ಮೂಲಕವೇ ಕುಖ್ಯಾತಿಯನ್ನು ಪಡೆದಿರುವ ಯತಿ ನರಸಿಂಗಾನಂದನ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಹಾಕಿದ್ದಕ್ಕೆ ಝುಬೈರ್ ವಿರುದ್ದ ಉತ್ತರ ಪ್ರದೇಶ ಪೊಲೀಸರು ಬಿಎನ್‌ಎಸ್ ಸೆಕ್ಷನ್ 152ರ ಅಡಿ ಎಫ್‌ಐಆರ್ ದಾಖಲಿಸಿದ್ದಾರೆ. ಇದು ದೇಶದ್ರೋಹಕ್ಕೆ ಸಮನಾದ ಪ್ರಕರಣವಾಗಿದೆ.
ಇದನ್ನೂ ಓದಿ : ದ್ವೇಷ ಭಾಷಣ ಮಾಡುವ ದುಷ್ಕರ್ಮಿಯ ಬಗ್ಗೆ ಟ್ವೀಟ್ | ಖ್ಯಾತ ಫ್ಯಾಕ್ಟ್‌ಚೆಕ್ಕರ್ ಮೊಹಮ್ಮದ್ ಜುಬೇರ್ ವಿರುದ್ಧ ‘ದೇಶದ್ರೋಹ ಸಮಾನ’ ಪ್ರಕರಣ


