ಗರ್ಭಿಣಿ ಪ್ರೇಯಸಿ ಗರ್ಭಪಾತಕ್ಕೆ ಒಪ್ಪದ ಕಾರಣಕ್ಕೆ ಆಕೆಯ ಪ್ರೇಮಿ ಮತ್ತು ಅವನ ಇಬ್ಬರು ಸಹಾಯಕರು ಕೊಲೆ ಮಾಡಿ ಹೂತು ಹಾಕಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಹದಿಹರೆಯದ ಯುವತಿಯು ತಾನು ಗರ್ಭಿಣಿಯಾಗಿದ್ದು, ಹಾಗಾಗಿ ತನ್ನನ್ನು ಮದುವೆಯಾಗಬೇಕು ಎಂದು ಬಯಸಿದ್ದಕ್ಕೆ ದುರ್ಷರ್ಮಿ ಈ ಕೃತ್ಯ ಎಸಗಿದ್ದಾನೆ ಎಂದು ವರದಿಯಾಗಿದೆ. ಮದುವೆಗೆ ಒತ್ತಡ
ಕೊಲೆಯಾದ ಯುವತಿಯನ್ನು 19 ವರ್ಷದ ಸೋನಿಯಾ ಎಂದು ಗುರುತಿಸಲಾಗಿದ್ದು ಪಶ್ಚಿಮ ದೆಹಲಿಯ ನಂಗ್ಲೋಯ್ ನಿವಾಸಿಯಾಗಿದ್ದರು. ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿದ್ದ ಅವರು, ಸುಮಾರು 6,000 ಕ್ಕೂ ಹೆಚ್ಚು ಫಾಲೋವರ್‌ಗಳನ್ನು ಹೊಂದಿದ್ದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಯುವತಿಯು ಸಾಮಾಜಿಕ ಮಾಧ್ಯಮದಲ್ಲಿ ತನ್ನ ಮತ್ತು ತನ್ನ ಪ್ರೇಮಿ ಸಂಜು ಅಲಿಯಾಸ್ ಸಲೀಮ್‌ನ ಅನೇಕ ಫೋಟೋಗಳು ಮತ್ತು ವೀಡಿಯೊಗಳನ್ನು ಪೋಸ್ಟ್ ಮಾಡಿದ್ದರು. ಆರೋಪಿ ಸಂಜು ಕೂಡಾ ಆಕೆಯ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿಯೂ ಪೋಸ್ಟ್ ಮಾಡಿದ್ದ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಸೋನಿಯಾ ಅವರ ಕುಟುಂಬ ಸದಸ್ಯರಿಗೆ ಯುವತಿಯು ಹೊಸ ಸ್ನೇಹಿತನ ಜೊತೆಗೆ ಸ್ನೇಹ ಬೆಳೆಸಿರುವುದು ತಿಳಿದಿತ್ತಾದರೂ, ಅವರು ಯಾರೊಂದಿಗೆ ಮಾತನಾಡುತ್ತಿದ್ದಾರೆ ಎಂದು ತಿಳಿದಿರಲಿಲ್ಲ. ಮದುವೆಗೆ ಒತ್ತಡ
ಸೋನಿಯಾ ಏಳು ತಿಂಗಳ ಗರ್ಭಿಣಿಯಾಗಿದ್ದು, ಸಂಜುಗೆ ತನ್ನನ್ನು ಮದುವೆಯಾಗಲು ಒತ್ತಾಯಿಸುತ್ತಿದ್ದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಆರೋಪಿ ಸಂಜು ಮದುವೆ ಸಿದ್ದರಿಲ್ಲದ ಕಾರಣ, ಮಗುವನ್ನು ಗರ್ಭಪಾತ ಮಾಡಬೇಕೆಂದು ಬಯಸಿದ್ದನು. ಈ ವಿಷಯವಾಗಿ ಪ್ರೇಮಿಗಳಿಬ್ಬರು ಆಗಾಗ್ಗೆ ಜಗಳವಾಡುತ್ತಿದ್ದರು ಎಂದು ವರದಿಯಾಗಿದೆ.
ಅದಾಗ್ಯೂ, ಸೋಮವಾರ ಯುವತಿಯು ಸಂಜು ಅವರ ಮನೆಗೆ ಕೆಲವು ವಸ್ತುಗಳನ್ನು ತೆಗೆದುಕೊಂಡು ಭೇಟಿಯಾಗಲು ಹೋಗಿದ್ದರು. ಈ ವೇಳೆ ಸಂಜು ಮತ್ತು ಆತನ ಇಬ್ಬರು ಸಹಾಯಕರು ಸೋನಿಯಾ ಅವರನ್ನು ಹರಿಯಾಣದ ರೋಹ್ಟಕ್‌ಗೆ ಕರೆದೊಯ್ದಿದ್ದಾರೆ.
ಅಲ್ಲಿ ಅವರು ಯುವತಿಯನ್ನು ಕೊಂದು, ಶವವನ್ನು ನಾಲ್ಕು ಅಡಿಯ ಗುಂಡಿ ತೋಡಿ ಹೂಳಿದ್ದಾರೆ. ದೆಹಲಿ ಪೊಲೀಸರು ಅಕ್ಟೋಬರ್ 23 ರಂದು ದೂರು ಸ್ವೀಕರಿಸಿದ್ದು, ಆರೋಪಿಯನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಆತ ತಪ್ಪೊಪ್ಪಿಕೊಂಡಿದ್ದಾನೆ.
ಆರೋಪಿಯು ಕೊಲೆಗೆ ಪೂರ್ವಯೋಜಿತವಾಗಿ ತನ್ನ ಸ್ನೇಹಿತರಾದ ರಿತಿಕ್ ಮತ್ತು ಪಂಕಜ್ ಅವರನ್ನು ಅಪರಾಧದಲ್ಲಿ ತೊಡಗಿಸಿಕೊಂಡಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಅವರು ಕೃತ್ಯಕ್ಕಾಗಿ ಕರ್ವಾ ಚೌತ್ ದಿನವನ್ನು ಆಯ್ಕೆ ಮಾಡಿದ್ದು, ಸಂದರ್ಭಕ್ಕಾಗಿ ಕಾರನ್ನು ಬಾಡಿಗೆಗೆ ಪಡೆದಿದ್ದರು.
ಆ ರಾತ್ರಿ, ಸೋನಿಯಾ ತನ್ನ ಸಾಮಾನುಗಳೊಂದಿಗೆ ಮನೆಯಿಂದ ಹೊರಟು ನಂಗ್ಲೋಯ್ ಪ್ರದೇಶದಲ್ಲಿ ಆರೋಪಿಯನ್ನು ಭೇಟಿಯಾಗಿದ್ದರು. ನಂತರ ಅವನು ಯುವತಿಯನ್ನು ನೇರವಾಗಿ ರೋಹ್ಟಕ್‌ಗೆ ಕರೆದೊಯ್ದನು, ಅಲ್ಲಿ ಕತ್ತು ಹಿಸುಕಿ ಸಾಯಿಸಿದ್ದಾರೆ. ನಂತರ ಆ ರಾತ್ರಿ ದೆಹಲಿಗೆ ಹಿಂದಿರುಗುವಾಗ ರೋಹ್ಟಕ್‌ನ ಕಾಡುಗಳಲ್ಲಿ ಯುವತಿಯ ದೇಹವನ್ನು ಹೂತುಹಾಕಿದ್ದಾನೆ.
ಘಟನೆಯಲ್ಲಿ ಸಂಜು ಮತ್ತು ಆತನ ಒಬ್ಬ ಸಹಾಯಕನನ್ನು ಬಂಧಿಸಲಾಗಿದ್ದು, ಮತ್ತೊಬ್ಬ ಪರಾರಿಯಾಗಿದ್ದಾನೆ. ಆತನನ್ನು ಪತ್ತೆ ಹಚ್ಚುವ ಪ್ರಯತ್ನ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಅದಾನಿ ಜೊತೆಗಿನ 736 ಮಿಲಿಯನ್ ಡಾಲರ್ ವಿದ್ಯುತ್ ಒಪ್ಪಂದ ರದ್ದುಗೊಳಿಸಿದ ಕೀನ್ಯಾ ಕೋರ್ಟ್ : ವರದಿ
ಅದಾನಿ ಜೊತೆಗಿನ 736 ಮಿಲಿಯನ್ ಡಾಲರ್ ವಿದ್ಯುತ್ ಒಪ್ಪಂದ ರದ್ದುಗೊಳಿಸಿದ ಕೀನ್ಯಾ ಕೋರ್ಟ್ : ವರದಿ


