ಬೆಲೆ ಏರಿಕೆಯ ಸಮಸ್ಯೆಗೆ ಮೂಲ ಕಾರಣೀಕರ್ತರ ಬಗ್ಗೆ ಬಿಜೆಪಿ ಪ್ರತಿಭಟಿಸುವುದಾದರೆ ನಾವೂ ಬೆಂಬಲಿಸುತ್ತೇವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ಬುಧವಾರ ಹೇಳಿದ್ದು, ದೇಶದ ಎಲ್ಲಾ ಬೆಲೆಗಳ ಏರಿಕೆಯ ಹಿಂದೆ ಮೋದಿಯವರ ಆರ್ಥಿಕ ಅನೀತಿಗಳ ಮಾಸ್ಟರ್ ಸ್ಟ್ರೋಕ್‌ಗಳ ಕಾರಣವಿದೆ ಎಂದು ಅವರು ಹೇಳಿದ್ದಾರೆ.
“ಪಾಪ್ ಕಾರ್ನ್ ಮೇಲೂ GST ಹೇರಿದಾಗ, ಮಕ್ಕಳ ಪುಸ್ತಕ, ಪೆನ್ಸಿಲ್ ಗಳಲ್ಲೂ ತೆರಿಗೆ ಲೂಟಿ ಮಾಡಿದಾಗ, 43,500 ಕೋಟಿ ಕನಿಷ್ಠ ಠೇವಣಿ ದಂಡವನ್ನು ವಸೂಲಿ ಮಾಡಿದಾಗ, ಜೀವ ವಿಮೆಗೂ 18% ಜಿಎಸ್ಟಿ ಲೂಟಿ ಮಾಡಿದಾಗ, GST ಕಾರಣಕ್ಕಾಗಿ ಸಣ್ಣ ಉದ್ದಿಮೆಗಳು ಬಾಗಿಲು ಮುಚ್ಚಿದಾಗ, ಉದ್ಯೋಗ ಕಡಿತವಾದಾಗ,
ಭಾರತೀಯರ ಖರೀದಿ ಸಾಮರ್ಥ್ಯ ಕುಸಿದು, ಬದುಕು ಬರ್ಬರವಾದಾಗ ಬಿಜೆಪಿ ಸ್ನೇಹಿತರಿಗೆ ಜನಾಕ್ರೋಶ ಕಾಣಲಿಲ್ಲವೇ?” ಎಂದು ಅವರು ಪ್ರಶ್ನಿಸಿದ್ದಾರೆ.
“ಬಿಜೆಪಿ ನಾಯಕರಿಗೆ ನಿಜಕ್ಕೂ ಜನರ ಬಗ್ಗೆ ಕಾಳಜಿ ಇದ್ದರೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ಪನೀರ್, ಮೊಸರು ಸೇರಿದಂತೆ ಎಲ್ಲಾ ಆಹಾರ ಪದಾರ್ಥಗಳ ಮೇಲಿನ GST ತೆರವು ಮಾಡಿಸಲಿ. ಪೆಟ್ರೋಲ್, ಡೀಸೆಲ್ ಮೇಲಿನ ದರ ಇಳಿಸಿ ಕಚ್ಚಾ ತೈಲದ ಬೆಲೆ ಇಳಿಕೆಯ ಲಾಭವನ್ನು ಜನರಿಗೆ ವರ್ಗಾಯಿಸುವಂತೆ ಆಗ್ರಹಿಸಲಿ. ಎಟಿಎಂ ಶುಲ್ಕ, ಕನಿಷ್ಠ ಠೇವಣಿ ದಂಡಗಳನ್ನು ತೆರವು ಮಾಡಿಸಲಿ.” ಎಂದು ಅವರು ಹೇಳಿದ್ದಾರೆ.
“ಬಿಜೆಪಿಯವರು ಜನಾಕ್ರೋಶ ಪ್ರತಿಭಟನೆ ಮಾಡುವ ಮುನ್ನ ತಮ್ಮ ಆರೆಸ್ಸೆಸ್ ಆಕ್ರೋಶದ ಬಗ್ಗೆ ಮಾತನಾಡಲಿ. ದೇಶದಲ್ಲಿನ ಆದಾಯ ಅಸಮಾನತೆ, ನಿರುದ್ಯೋಗ, ಬಡತನ, ದೂರದೃಷ್ಟಿ ಇಲ್ಲದ ಕೇಂದ್ರ ಸರ್ಕಾರದ ನೀತಿಗಳನ್ನು ಆರೆಸ್ಸೆಸ್ ಕಟುವಾಗಿ ಟೀಕಿಸಿತ್ತು. ಈ ಬಗ್ಗೆ ರಾಜ್ಯ ಬಿಜೆಪಿ ನಾಯಕರಿಗೆ ಅರಿವಿದೆಯೇ?” ಎಂದು ಅವರು ಹೇಳಿದ್ದಾರೆ.
ಬೆಲೆ ಏರಿಕೆ ಬಗ್ಗೆ ಮೋದಿ ಸರ್ಕಾರದ ವಿರುದ್ಧ 2022ರಲ್ಲಿ ಆರೆಸ್ಸೆಸ್ ನೀಡಿದ್ದ ಹೇಳಿಕೆಯ ವರದಿಯ ಚಿತ್ರವನ್ನು ಟ್ವೀಟ್ ಮಾಡಿರುವ ಪ್ರಿಯಾಂಕ್ ಖರ್ಗೆ, ಬಿಜೆಪಿಗೆ ಈ ಬಗ್ಗೆ ಅರಿವಿಲ್ಲ ಎಂದಾದರೆ ಕೇಶವಕೃಪಾಕ್ಕೆ ತೆರಳಿ “ಆರೆಸ್ಸೆಸ್ಸ್ ಆಕ್ರೋಶ”ದ ಬಗ್ಗೆ ತಿಳಿದುಕೊಂಡು ರಾಜ್ಯದ ಜನತೆಗೆ ಉತ್ತರಿಸುವ ದಮ್ಮು ತಾಕತ್ತು ಪ್ರದರ್ಶಿಸಲಿ ಎಂದು ಹೇಳಿದ್ದಾರೆ. ಬೆಲೆ ಏರಿಕೆಯ


