ದೇಶದ ಮಸೀದಿಗಳು ಅಪಾಯದಲ್ಲಿದ್ದು, ವಕ್ಫ್ ಮಂಡಳಿಯನ್ನು ಕಿತ್ತುಕೊಳ್ಳುವ ಪ್ರಯತ್ನ ನಡೆಯುತ್ತಿದೆ ಎಐಎಂಐಎಂ ಮುಖ್ಯಸ್ಥ ಮತ್ತು ಸಂಸದ ಅಸಾದುದ್ದೀನ್ ಓವೈಸಿ ಎಂದು ಲೋಕಸಭೆಯಲ್ಲಿ ನಡೆಯುತ್ತಿರುವ ಸಂವಿಧಾನ ಕುರಿತ ಚರ್ಚೆಯ ಸಂದರ್ಭದಲ್ಲಿ ಶನಿವಾರ ಹೇಳಿದರು. ಪ್ರಧಾನಿಗೆ ಸಂವಿಧಾನದ
ಸದನದಲ್ಲಿ ಮಾತನಾಡಿದ ಅವರು, “ಮುಸ್ಲಿಮರನ್ನು ದುರ್ಬಲಗೊಳಿಸಲಾಗುತ್ತಿದ್ದು, ಅವರನ್ನು ಚುನಾವಣೆಗೆ ಸ್ಪರ್ಧಿಸದಂತೆ ತಡೆಯಲಾಗುತ್ತಿದೆ. ಮುಸ್ಲಿಮರು ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ. ಸಾಚಾರ್ ಸಮಿತಿ ವರದಿಯ ಆಧಾರದ ಮೇಲೆ ಡಿಲಿಮಿಟೇಶನ್ ಜಾರಿಯಾಗುತ್ತಿಲ್ಲ” ಎಂದು ತಿಳಿಸಿದರು.
ಸದನದಲ್ಲಿ ಮಾತನಾಡುತ್ತಾ, ವಕ್ಫ್ ಆಸ್ತಿ ಕಿತ್ತುಕೊಳ್ಳುವುದು ಸರ್ಕಾರದ ಉದ್ದೇಶವಾಗಿದ್ದು, ಅವರು ತಮ್ಮ ಶಕ್ತಿಯ ಆಧಾರದ ಮೇಲೆ ಅದನ್ನು ಕಿತ್ತುಕೊಳ್ಳಲು ಬಯಸುತ್ತಾರೆ ಎಂದು ಓವೈಸಿ ಹೇಳಿದರು. ಉರ್ದು ನಾಶವಾಗುತ್ತಿದೆ ಎಂದು ಹೇಳಿದ ಅವರು, ಮುಸ್ಲಿಂ ಸಂಸ್ಕೃತಿ ನಾಶವಾಗುತ್ತಿದ್ದು, ಸಂವಿಧಾನವೇ ಸತ್ಯ ಎಂದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಸಂವಿಧಾನದ 26 ನೇ ವಿಧಿಯು ಧಾರ್ಮಿಕ ಮತ್ತು ದತ್ತಿ ಉದ್ದೇಶಗಳಿಗಾಗಿ ಸಂಸ್ಥೆಗಳನ್ನು ಸ್ಥಾಪಿಸುವ ಮತ್ತು ನಿರ್ವಹಿಸುವ ಹಕ್ಕನ್ನು ನೀಡುತ್ತದೆ. ಆದರೆ ವಕ್ಫ್‌ಗೂ ಸಂವಿಧಾನಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಪ್ರಧಾನಿ ಹೇಳುತ್ತಾರೆ. ಪ್ರಧಾನಿಗೆ ಪಾಠ ಮಾಡುವವರು ಯಾರು? ಸಂವಿಧಾನದ 26 ನೇ ವಿಧಿಯನ್ನು ಅವರಿಗೆ ಕಲಿಸಬೇಕು ಎಂದು ಅವರು ಹೇಳಿದರು.
ಲೋಕಸಭೆ ಮತ್ತು ವಿಧಾನಸಭಾ ಕ್ಷೇತ್ರಗಳ ವಿಂಗಡಣೆಯನ್ನು ಮುಸ್ಲಿಂ ಜನರು ಗೆಲ್ಲಲು ಸಾಧ್ಯವಾಗದ ರೀತಿಯಲ್ಲಿ ಮಾಡಲಾಗಿದೆ ಎಂದು ಓವೈಸಿ ಪ್ರತಿಪಾದಿಸಿದ್ದಾರೆ. “2007 ರಲ್ಲಿ, ಸಾಚಾರ್ ಸಮಿತಿಯು ಹೊಸದಾಗಿ ಡಿಲಿಮಿಟೇಶನ್ ಕೇಳಿತ್ತು. ಹೊಸ ಜನಗಣತಿ ನಡೆಸಿದಾಗ ಸಾಚಾರ್ ಸಮಿತಿ ಶಿಫಾರಸುಗಳನ್ನು ಜಾರಿಗೆ ತರಲಾಗುವುದು ಎಂದು ನಾನು ಭಾವಿಸುವುದಿಲ್ಲ. ಮುಸ್ಲಿಮರಿಗೆ 15 ಮತ್ತು 16ನೇ ವಿಧಿಯಲ್ಲಿ ಮೀಸಲಾತಿ ಸಿಗಲಿಲ್ಲ. ಸಂವಿಧಾನದಲ್ಲಿ 25, 26, 29, 13, 14 ಮತ್ತು 21 ನೇ ವಿಧಿಗಳನ್ನು ಉಲ್ಲೇಖಿಸಿ, ಅದನ್ನು ಸರಿಯಾಗಿ ಪಾಲಿಸಲಾಗುತ್ತಿಲ್ಲ” ಎಂದರು.
“ಹಲವು ರಾಜ್ಯಗಳಲ್ಲಿ ಅದನ್ನು ತಿನ್ನಬಾರದು, ಇದನ್ನು ತಿನ್ನಬಾರದು ಎಂಬ ಕಾನೂನು ಮಾಡಲಾಗಿದೆ. ಹರಿಯಾಣ ಮತ್ತು ರಾಜಸ್ಥಾನದಲ್ಲಿ ಗೋರಕ್ಷಕರಿಗೆ ಪೊಲೀಸ್ ಅಧಿಕಾರವನ್ನು ನೀಡಲಾಯಿತು. ಅವರು ಗುಂಪು ಹತ್ಯೆಯಲ್ಲಿ ಮಾಡುವ ಮೂಲಕ ಅದನ್ನು ದುರುಪಯೋಗಪಡಿಸಿಕೊಂಡರು” ಎಂದು ಅವರು ಹೇಳಿದರು. ಪ್ರಧಾನಿಗೆ ಸಂವಿಧಾನದ
ಉದಾಹರಣೆಯೊಂದನ್ನು ನೀಡಿದ ಅವರು, ಸಬೀರ್ ಮಲಿಕ್ ಎಂಬವರು ದನದ ಮಾಂಸ ತಿಂದ ಕಾರಣಕ್ಕೆ ಹೊಡೆದು ಸಾಯಿಸಿದ್ದರು, ಆದರೆ ನಂತರ ತಿಳಿದದ್ದೇನೆಂದರೆ, ಅಂತಹದ್ದೇನೂ ನಡೆದಿಲ್ಲ ಎಂದು. ಜುನೈದ್ ಮತ್ತು ನಫೀರ್ ಕೂಡ ಸಜೀವ ದಹನವಾಗಿದ್ದರು. ಧಾರ್ಮಿಕ ಮತಾಂತರದ ಕಾನೂನನ್ನು ಪರಿಚಯಿಸಲಾಯಿತು. ನನ್ನ ಧರ್ಮವನ್ನು ಬದಲಾಯಿಸಲು ನಾನು ಸರ್ಕಾರವನ್ನು ಕೇಳಬೇಕೇ? ಎಂದು ಅವರು ಕೇಳಿದರು.
ಒಂದು ವೇಳೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬದುಕಿದ್ದರೆ, ಧರ್ಮ ಬದಲಾಯಿಸಲು ಸರ್ಕಾರದ ಅನುಮತಿ ಪಡೆಯಿರಿ ಎಂದು ಅವರಿಗೂ ಹೇಳುತ್ತಿದ್ದರು ಎಂದು ಓವೈಸಿ ಹೇಳಿದರು. “ನಮ್ಮದು ಸಾಂಸ್ಕೃತಿಕ ರಾಷ್ಟ್ರೀಯತೆ ಎಂದು ಬಿಜೆಪಿ ಹೇಳುತ್ತದೆ, ಆದರೆ ಅವರದ್ದು ಸಾಂಸ್ಕೃತಿಕ ರಾಷ್ಟ್ರೀಯತೆ ಅಲ್ಲ. ಅದರ ರಾಷ್ಟ್ರೀಯತೆ ಹಿಂದುತ್ವದ್ದಾಗಿದ್ದು, ಅದು ಭಾರತದ ರಾಷ್ಟ್ರೀಯತೆಯ ಸಂಪೂರ್ಣ ವಿರೋಧಿಯಾಗಿದೆ. ಸಂವಿಧಾನ ಅಲ್ಪಸಂಖ್ಯಾತರು, ದಲಿತರಿಗೆ ಹಲವು ಹಕ್ಕುಗಳನ್ನು ನೀಡಿದ್ದರೂ ಅದು ಸಿಗುತ್ತಿಲ್ಲ” ಎಂದು ಓವೈಸಿ ಹೇಳಿದರು.
ಇದನ್ನೂ ಓದಿ: ದೆಹಲಿ ಚಲೋ | ಪ್ರತಿಭಟನಾನಿರತ ರೈತರ ಮೇಲೆ ಮತ್ತೊಮ್ಮೆ ಅಶ್ರುವಾಯು, ಜಲಫಿರಂಗಿ ಪ್ರಯೋಗಿಸಿದ ಪೊಲೀಸರು
ದೆಹಲಿ ಚಲೋ | ಪ್ರತಿಭಟನಾನಿರತ ರೈತರ ಮೇಲೆ ಮತ್ತೊಮ್ಮೆ ಅಶ್ರುವಾಯು, ಜಲಫಿರಂಗಿ ಪ್ರಯೋಗಿಸಿದ ಪೊಲೀಸರು


