ಬಾಂಗ್ಲಾದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಜೈಲಿಗೆ ಹೋಗಿದ್ದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ ಬೆನ್ನಲ್ಲೇ, ಇದರ ಕುರಿತು ವಿವರಗಳನ್ನು ನೀಡಬೇಕು ಎಂದು ಮಾಹಿತಿ ಹಕ್ಕು ಕಾಯ್ದೆಯಡಿ ಮನವಿ ಸಲ್ಲಿಸಲಾಗಿದೆ. ಮೋದಿಯವರ ಈ ಹೇಳಿಕೆ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ನಗೆಪಾಟಲಿಗೀಡಾಗಿತ್ತು. ಜೊತೆಗೆ ಕಟು ವಿಮರ್ಶೆಗೆ ಒಳಗಾಗಿತ್ತು.
ಬಾಂಗ್ಲಾದೇಶದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆರಳಿದ ನರೇಂದ್ರ ಮೋದಿ, “ಬಾಂಗ್ಲಾದೇಶ ವಿಮೋಚನೆಯ ಸಂದರ್ಭದ ಸ್ವಾತಂತ್ರ್ಯ ಹೋರಾಟದಲ್ಲಿ ನಾನು ಭಾಗವಹಿಸಿದ್ದೆ. ಬಾಂಗ್ಲಾದೇಶದ ಸ್ವಾತಂತ್ರ್ಯ ಸಂಗ್ರಾಮವು ನನ್ನ ಜೀವನದ ಪ್ರಯಾಣದಲ್ಲಿ ಒಂದು ಮಹತ್ವದ ಕ್ಷಣವಾಗಿತ್ತು. ನನ್ನ ಸಹೋದ್ಯೋಗಿಗಳು ಮತ್ತು ನಾನು ಭಾರತದಲ್ಲಿ ಸತ್ಯಾಗ್ರಹ ಮಾಡಿದ್ದೆವು. ಬಾಂಗ್ಲಾದೇಶದ ಸ್ವಾತಂತ್ರ್ಯ ಹೋರಾಟಕ್ಕಾಗಿ ಸತ್ಯಾಗ್ರಹದ ಸಮಯದಲ್ಲಿ ಜೈಲಿಗೆ ಹೋಗಲು ನನಗೆ ಅವಕಾಶ ಸಿಕ್ಕಿತು” ಎಂದು ಹೇಳಿದ್ದರು.
ಇದರ ಬೆನ್ನಲ್ಲೇ ಟ್ವಿಟರ್‌ನಲ್ಲಿ #lielikemodi ಎಂಬ ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ಆಗಿತ್ತು. ಈ ವರದಿ ಬರೆಯುವ ವೇಳೆಗೆ 2 ಲಕ್ಷಕ್ಕೂ ಹೆಚ್ಚು ಜನ ಈ ಹ್ಯಾಶ್‌ಟ್ಯಾಗ್ ಬಳಸಿ ಮೋದಿಯ ಕಾಲೆಳೆದಿದ್ದರು.
ಈಗ ಮೋದಿ ಹೇಳಿಕೆಯ ಕುರಿತು ಆರ್‌ಟಿಐ ಅಡಿಯಲ್ಲಿ ಮಾಹಿತಿಯನ್ನು ಕೋರಲಾಗಿದೆ.

ಇದನ್ನೂ ಓದಿ: #LieLikeModi ಟ್ವಿಟರ್ ಟ್ರೆಂಡಿಂಗ್: ನಕ್ಕು ಹೊಟ್ಟೆ ಹುಣ್ಣಾದರೆ ನಾವು ಜವಾಬ್ದಾರರಲ್ಲ
ಅಲಹಾಬಾದ್ ಹೈಕೋರ್ಟಿನ ವಕೀಲರಾದ ಕೃಷ್ಣ ಮೋಹನ್ ಪಾಂಡೆ ಎಂಬುವವರು ಈ ಕೆಳಗಿನ ಮಾಹಿತಿಗಳನ್ನು ಕೋರಿದ್ದಾರೆ. “ಪ್ರಧಾನಿ ಮೋದಿಯವರು ಬಾಂಗ್ಲಾದೇಶದ ಭೇಟಿಯ ಸಂದರ್ಭದಲ್ಲಿ ನೀಡಿದ ಹೇಳಿಕೆಯ ಬಗ್ಗೆ ಕೆಲವು ಮಾಹಿತಿಗಳನ್ನು ನೀಡಬೇಕು” ಎಂದು ಅರ್ಜಿ ಸಲ್ಲಿಸಿದ್ದಾರೆ.
- ಬಾಂಗ್ಲಾದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡುವಾಗ ಯಾವ ಕಾನೂನಿನ ಅಡಿಯಲ್ಲಿ ಪ್ರಧಾನಿಯವರನ್ನು ಬಂಧಿಸಲಾಗಿತ್ತು. ಅದರ ಎಫ್‌ಐಆರ್ ನಕಲನ್ನು ಒದಗಿಸಿ.
- ಪ್ರಧಾನಿ ನರೇಂದ್ರ ಮೋದಿಯವರನ್ನು ಬಂಧಿಸಿ ಭಾರತದ ಯಾವ ಜೈಲಿನಲ್ಲಿಡಲಾಗಿತ್ತು?
- ಪ್ರಧಾನಿ ಮೋದಿಯವರು ಎಷ್ಟುದಿನ ಜೈಲಿನಲ್ಲಿದ್ದರು?
ಈ ಮೆಲಿನ ಪ್ರಶ್ನೆಗಳಿಗೆ ಉತ್ತರ ನೀಡುವಂತೆ ವಕೀಲರು ಮಾಹಿತಿ ಹಕ್ಕಿನಡಿ ಮನವಿ ಸಲ್ಲಿಸಿದ್ದಾರೆ.
ಇದೇ ರೀತಿ ಕಾಂಗ್ರೆಸ್‌ನ ವಕ್ತಾರರಾದ ಸರಳ್ ಪಟೇಲ್ ಪ್ರಧಾನಮಂತ್ರಿ ಕಛೇರಿಯಿಂದಲೇ ಮಾಹಿತಿ ಕೋರಿದ್ದಾರೆ.
Have filed an RTI with PMO seeking more details of the claims made by #PMModi during his visit to #Bangladesh today.
I am very curious to know, under which Indian law was he arrested and which jail was he lodged at during his arrest, aren't you? ??#LieLikeModi pic.twitter.com/uvTMRjccq7
— Saral Patel (@SaralPatel) March 26, 2021
- ಪ್ರಧಾನಿ ಮೋದಿಯವರು ಹೇಳಿರುವಂತೆ, ಅವರ ಬಂಧನದ ವಿವರಗಳು ಮತ್ತು ನಿರ್ದಿಷ್ಟ ದಿನಾಂಕದ ಮಾಹಿತಿ ಒದಗಿಸಿ.
- ಬಾಂಗ್ಲಾದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡುವಾಗ ಯಾವ ಕಾನೂನಿನ ಅಡಿಯಲ್ಲಿ ಪ್ರಧಾನಿಯವರನ್ನು ಬಂಧಿಸಲಾಗಿತ್ತು. ಅದರ ಎಫ್‌ಐಆರ್ ನಕಲನ್ನು ಒದಗಿಸಿ. ಮತ್ತು ಇದನ್ನು ಬೆಂಬಲಿಸುವ ಇತರೆ ದಾಖಲೆಗಳನ್ನು ಒದಗಿಸಿ.
- ಪ್ರಧಾನಿ ನರೇಂದ್ರ ಮೋದಿಯವರನ್ನು ಬಂಧಿಸಿ ಭಾರತದ ಯಾವ ಜೈಲಿನಲ್ಲಿಡಲಾಗಿತ್ತು?
- ಪ್ರಧಾನಿಯವರ ಹೇಳಿಕೆಗೆ ಸಂಬಂಧಿಸಿದ ಎಲ್ಲಾ ದಾಖಲೆ ಮತ್ತು ಕಡತಗಳನ್ನು ಒದಗಿಸಿ.
ಎಂದು ಪ್ರಧಾನಮಂತ್ರಿ ಕಛೇರಿಯಲ್ಲಿ ಮನವಿ ಸಲ್ಲಿಸಿದ್ದಾರೆ.
ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ: ಮಹಾನಾಯಕ ಪದ ಬಳಕೆಗೆ ಪ್ರಜ್ಞಾವಂತರ ವಿರೋಧ


